Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ತ್ರೀ ಸ್ವಾಭಿಮಾನ

ಒಡಲಾಳದ ಬೇಗುದಿ
ಕಂಡೆ ಮಡುಗಟ್ಟಿರುವುದ
ಮಾನಿನಿಯ ವದನದಲಿ

ಕಲ್ಪಗಳ ದೌರ್ಜನ್ಯವನು
ಮನ್ನಿಸುತ ಮನದಲ್ಲಿ
ಮನ್ವಂತರಗಳ ಮರ್ದನವ
ಸಹಿಸುತ್ತ ತನುವಲ್ಲಿ

ಪ್ರತಿ ಯುಗದಿ ಕೂಗಿಹಳು
ಕೊನೆಯೆಲ್ಲಿ ಇದಕೆಂದು
ಪ್ರತಿ ದಿನವು ಹೋರಾಡಿ
ತನ್ನಭಿಮಾನ ಹೆಚ್ಚೆಂದು

ಈ ಸ್ವಾರ್ಥಿ ಸಮಾಜಕೆ
ಅರಿವಾಗುವುದು ಎಂತು
ಅಕ್ಕ ತಂಗಿಯರಿರಲಿ ಪರಸ್ತ್ರೀ ಇರಲಿ
ಸ್ತ್ರೀಯಭಿಮಾನವದೆ ಒಂದೆಂದು?

- ಜೈಮಿನಿ

21 Oct 2019, 05:38 pm

ಗುಡಿಸಲ ಬದುಕು

ಕೋಟಿ ದೀಪಗಳ ಮಧ್ಯೆ
ಮುಂಬತ್ತಿ ಮನಸೋಲಿಸಿತು
ಮೌನವಾಗಿ ಕರಗುತ ಬಡತನದಲ್ಲೂ
ಸಿರಿವಂತಿಕೆ ಮೆರೆಯುತ.

ಮೊರೆ ಇಟ್ಟಿತು ಮೂಕ
ಜೀವಿಗಳ ಮನ ತಂಗಾಳಿಯ
ರಭಸ ನಿಧಾನ.

ಹಬೆಯಾಡುವ ಗಂಜಿ ಪಕ್ಕದಲ್ಲೇ
ಪುಟ್ನಂಜಿ ಕುಯ್ಯುತಿಹಳು ಈರುಳ್ಳಿ
ಕತ್ತಲಲ್ಲಿ ಅಂಜಿ.

ಮೃಷ್ಟಾನ್ನದ ರುಚಿಯು ಗಂಜಿ ಪಡೆದೀತೆ
ಗಂಜಿಯ ಸವಿ ಮೃಷ್ಟಾನ್ನಕ್ಕೆ ಬಂದೀತೆ ತಿಳಿಯದಾಗಿದೆ ಇಂದು ಹಸಿವೆ ಮುಂಜಾನೆಯಿಂದ ತಡೆದು.

- ಚುಕ್ಕಿ

20 Oct 2019, 07:31 am

ನಿನ್ನುಸಿರ ಸದ್ದನ್ನು

ನಿನ್ನುಸಿರ ಸದ್ದನ್ನು ನಿಶಬ್ದದಲ್ಲಿ
ಕಟ್ಟಿಹಾಕುತಿರುವೆ ನಿಂದಿಸಬೇಡ
ನನ್ನುಸಿರು ಹೂವಾಗಿಹುದು ನಿನ್ನ
ಪ್ರೀತಿ ಘಮದಲ್ಲಿ.

ನಿನ್ನೆದುರು ಬಾರದೆ ನಾ ಕದ್ದ
ನಿನ್ನ ಏಕಾಂತಕೆ ಹೆಸರೊಂದ
ಇಟ್ಟಿರುವೆ ವಿರಹವೆಂದು ಹಾಗೆ
ಸುಮ್ಮನೆ,
ಕೋಪಿಸಿಕ್ಕೊಳ್ಳಬೇಡ ಅದಕೂ
ಉತ್ತರವಿದೆ ಒಲವ ದಾರಿಯಲಿ
ನಡೆದ ಪಾದಕೆ ನಿನ್ನ ನೆನಪಿನ
ಗುರುತು ಇನ್ನು ಅಂಟಿದೆ.

ನನ್ನೆಡೆಗೆ ನೀ ನೋಡಿ ನಕ್ಕಾಗ ನಾಚಿ
ನಾನೋಡಿ ಬಂದಿರುವೆ, ಕಾಲ್ಗೆಜ್ಜೆಗಿನಿತು
ಆಸೆ ಹೆಚ್ಚಂತೆ ನನ್ನಿಂದ ದೂರಾಗಿ ನೀ
ಬರುವ ಹಾದಿಗೆ ಕಾದು ಕುಳಿತಿದೆ.

ಒಲವ ಮಾಲೆ ಕಟ್ಟಿ ನಾ ಮುಡಿಯುವ
ಮುನ್ನ ತಿಳಿ ಸಂಜೆಗೆಂಪಾಗ ನನ್ನ ಆವರಿಸು, ಅಪೂರ್ಣವಾದ ಹೆಸರಿಗೆ ಪರಿಪೂರ್ಣವಾದ
ನಿನ್ನೆಸರನೊಮ್ಮೆ ಸೇರಿಸು
ಮಡದಿಯಾಗುವೆ ನಿನ್ನ ಕನಸು ಕದ್ದ
ಚೆಲುವೆಯರ ಸವತಿಯಾಗುವೆ.

- ಚುಕ್ಕಿ

20 Oct 2019, 07:30 am

ಕಾವ್ಯ

ಅವಳ ಮಿಡಿತ
ನನ್ನ ಹೃದಯ ಬಡಿತ
ಅವಳ ತುಡಿತ
ನನ್ನ ಮನಸಿನ ತಕಧಿಮಿತ

- ಸಿದ್ದಾರಾಮ ಧುತ್ತರಗೆ

19 Oct 2019, 05:06 pm

ಆರಾಮಾಗಿದೆ ಈ ಕ್ಷಣ

ನಡೆದುಕೊಂಡು ಬಂದ ದಾರಿ,
ತಣ್ಣನೆಯ ಗಾಳಿ ಬೀರಿ,
ಆರಾಮಾಗಿದೆ ಈ ಕ್ಷಣ,
ಕಂಡ ಕನಸುಗಳೇನ್ನಲ್ಲ ಮಾರಿ...

-ಅಫ್ಝಲ್ ಖಾನ್

- Afzi Video's

18 Oct 2019, 12:02 am

ಅಸಾಧ್ಯ

ಎಲ್ಲಾರೂ ಕವಿಗಳೆ
ಅವರವರ ಬದುಕೆಂಬ ಪುಸ್ತಕದಲಿ..
ಒಂದೆರಡು ನಗೆ ಬರಹಗಳು
ಬರೆದಷ್ಟು ಮುಗಿಯದ ನೋವಿನ ಕಥೆಗಳು..
ಆ ಅನಂತ ಪುಟದ ಕಾದಂಬರಿಯ
ಆರಂಭ ಸೀಸದ ಕಡ್ಡಿಯಿಂದಾಗಿದ್ದರೆ
ಎಲ್ಲಾ ಕಹಿ ಅನುಭವಗಳನ್ನು ಅಳಿಸಿ
ಸಂತಸವೆಂಬ ಜಾತ್ರೆಯ ಸೊಗಸನ್ನು ವರ್ಣಿಸುತ್ತಿದ್ದೆ...
ಏನು ಮಾಡಲಿ ಲೇಖನಿಯಿಂದಾದ
ತಪ್ಪನ್ನು ಅಳಿಸಲು ಸಾಧ್ಯವೇ...????
#S³

- Sachin Acharya Sachin Acharya

17 Oct 2019, 11:50 am

ಗೂಗಲ್ಲು

ಗಲ್ಲಿ ಗಲ್ಲಿಯಲ್ಲಿ ಗೂಗಲ್ಲಿನಾ ಗುಂಗು
ಕಿವಿಯೆಲ್ಲ ಮನವೆಲ್ಲ ಗೂ ಎಂದು ಗಲ್ಲೆಂದು

ಕೇಳಲೂ ಎಲ್ಲರ, ಇದೆಯೇ ಗೂಗೆಗೂ ಹಲ್ಲೆಂದು
ಓಡುವರು ಎಲ್ಲರೂ ಗೂಗಲ್ಲು ಎಲ್ಲೆಂದು

ಗರತಿ ಗಂಗವ್ವಳಾ ಪೂಜಾಗೂ ಗೂಗಲ್ಲು
ಗವಿಸಿದ್ದ ವಚನವಾ ಓದಲೂ ಗೂಗಲ್ಲು

ಗದ್ದುಗೆಯ ಸ್ವಾಮಿಗಳ ಕೈಯಲ್ಲು ಗೂಗಲ್ಲು
ಗಲ್ಲಿಗೇರುತಿಹ ಖೈದಿಯಾ ಕೈಯಲ್ಲಿ ಗೂಗಲ್ಲು

ಗಾಂಪನೂ ನೋಡುತಿಹ ದಿನವಿಡಿಯು ಗೂಗಲ್ಲು
ಗಾವಿಲನ ಕೆಲಸವೂ ಸಾಗದು ಇಲ್ಲದಿರೆ ಗೂಗಲ್ಲು

ಕೆಳಿರೀ ಪೋರನನು ಬ್ರಹ್ಮ ಜ್ಞಾನವದು ಏನೆಂದು
ಮೌನದಲಿ ತೋರುವನು ಜಾಲವದು ಗೂಗಲ್ಲು

ಗುರುಗಳಿಗೆ ಪಠಿಸಲೂ ಬೇಕದುವೆ ಗೂಗಲ್ಲು
ಶಿಷ್ಯರಿಗೆ ಗುಣಿಸಲೂ ಬೇಕಲವೇ ಗೂಗಲ್ಲು

ಸುದ್ದಿ ಸಮಾಚಾರ ತಿಳಿಯುವುದಕು ಗೂಗಲ್ಲು
ವ್ಯಾಪಾರ ವ್ಯವಹಾರ ಎಲ್ಲದಕು ಗೂಗಲ್ಲು

ಸಂದೇಹ ನನಗೊಂದು -
ಬರುವುದೇ ಮುಂದೊಂದು ದಿನವೊಂದು
ಇಲ್ಲದಿರೆ ಗೂಗಲ್ಲು ಆಗುವುದೆ ಜೀವನವೆ ಗಲ್ಲು??

- ಜೈಮಿನಿ

12 Oct 2019, 01:08 am

ದಶಾವತಾರ

ಪೂರ್ವ ಕರ್ಮ ಕಳೆಯಲೆಂದು
ಕಂದನಾಗಿ ಇಳೆಗೆ ಬಂದೆ

ಜ್ಞಾನವನ್ನು ಕೂಡಲೆಂದು
ವಿದ್ಯಾರ್ಥಿಯಾಗಿ ಶಾಲೆಗೋದೆ

ಎರಡು ಕಾಸು ಗಳಿಸಲೆಂದು
ಆಧಿಕಾರಿಯಾಗಿ ಮೆರೆದೆ

ಹೂವ ಮನದಿ ಪ್ರೀತಿಮಾಡಿ
ಕನ್ಯೆ ವರಿಸಿ ಗೃಹಸ್ಥನಾದೆ

ಮನೆಯ ಕಟ್ಟಿ ಕಾರು ಓಡ್ಸಿ
ಎಲ್ಲ ಗೆದ್ದೆ ಎಂದುಕೊಂಡೆ

ಮಕ್ಳಿಗೆಲ್ಲ ಮದುವೆ ಮಾಡಿ
ತಂದೆಯಿಂದ ಮಾವನಾದೆ

ಕೆಲಸದಿಂದ ನಿವೃತ್ತಿಯಾಗೆ
ಪೌತ್ರ ರೊಡನೆ ಆಡುತಿರುವೆ

ತನುವು ಮನವು ಮಾಗಿ ಹೋಗಿ
ದೈವ ಭಕ್ತಿ ಹೆಚ್ಚು ಆಗಿ
ತೀರ್ಥ ಯಾತ್ರೆ ಮಾಡ ಹೊರಟೆ

ಬೆನ್ನು ಬಾಗಿ ಕಣ್ಣು ಹೋಗಿ
ಕೈಯು ಕಾಲು ಆಡದಾಗಿ
ಮನದಿ ದೈವ ನೆನೆಯುತಿರುವೆ

ಪ್ರಾಣ ದೇಹ ಬಿಡುತಲಿರಲು
ಇಳೆಯ ಮಾಯೆ ಬಿಡದು ಆಗಿ
ಮತ್ತೆ ಗರ್ಭವರಸಿ ಹೊರಟೆ!!

- ಜೈಮಿನಿ

10 Oct 2019, 11:04 am

ಮರಗಳ-ಮರುಗು

ಬ್ಯಾಸಗಿ ದಿವಸಕ ಬೇವಿನ ಮರ ತಂಪ ಅಂತಿದ್ರಿ.
ಅರಳಿ-ಕಟ್ಟೆಯ ಮೇಲೆ ಊರಾ ನ್ಯಾಯ ಹೇಳ್ತಿದ್ರಿ..
ಊರ ಮುಂದಿನ ಬಸವಣ್ಣಗ ಬಿಲ್ಪತ್ರಿಯ ಎರಸ್ತಿದ್ರಿ.
ಇಗ್ಯಾಕೆ ಇಷ್ಟು ಬದಲಾಗಿರೀ, ತಿಳಿವಲ್ತು ನಿಮ್ಮ ಆಟ!!

ಬನ್ನಿ ತಗೊಂಡು ಬಂಗಾರದಂಗ ಇರೋಣ ಅನ್ನೋಕೆ ಅಸ್ಟೆನಾ ನಾವು?
ಚಪ್ಪರಿಸಿ ನಾ ಬಿಟ್ಟ ಹಣ್ಣು ತಿನ್ನೋಕೆ ಅಷ್ಟೇನಾ ನಾವು
ರಣ-ಬಿಸಿನಲಿ ನಿಮಗೆ ನೆರಳು ಕೊಟ್ಟಿಲ್ಲೇನು ನಾವು?
ತಿಂದ ಮನೆಗೆ ಜಂತಿ ಎಣಿಸೋರು ನೀವಲ್ಲದೆ ಮತ್ತೆಲ್ಲಿದಿರಾ?

ನಿಮ್ಮ ಆಡು-ಕುರಿ ತಿನ್ನಸಲಿಕ್ಕೆ ನಾವೇನು ಅಂದವರಲ್ಲ!
ನಿಮ್ಮ ಕೂರಿಗೆ-ಕುಂಟೆಗೆ ನಾವೇನು ತಂಟೆ ತಗದವರಲ್ಲ.!!
ಅಷ್ಟೇ ಯಾಕೆ ನಮ್ಮನ್ನ ಕತ್ತರಸಿ ಜಂತಿ ಮಾಡಿಕೊಂಡಗಲೂ ಪಿಟಕ್ ಅಂದವರಲ್ಲ!!!
ಇಷ್ಟಿದ್ದರು ಅದು ಎಷ್ಟರ ಐತಿ ನಿಮ್ಮ ದಬ್ಬಾಳಿಕೆಯ ದೌಲತ್ತು??

ಲಕ್ಷ್ಯ ಕೊಟ್ಟ ಕೇಳ್ರಿ ಇನ್ನ ನಮ್ಮಿಂದ ಆಗಲ್ಲ..
ಅನಾಮತ ಎಂಥ ಪಾಪ ಅಂದ್ರ ಐತಿ ಇಲ್ಲ ಅದಕ?
ನಮಗ ತಲೆ ಕೇಟ್ರಾ ಸುಟ್ಟು ಬುದಿನಾ ಆಗ್ತಿರೀ!!
ಈಗಲಾದರೂ ಕೈ ಮುಗಿತಿವಿ ನಮ್ಮನ್ನ ಉಳಿಸಿ-ಬೆಳೆಸಿ.
ಸುಗ್ಗಿ..

- ಆರ್ ಎಸ್ ಸುಗ್ಗಿ.

09 Oct 2019, 01:58 pm

ಹಸಿರಿನ ಉಸಿರಲಿ -ಪುನಾ

ಹಸಿರಿನ ಉಸಿರಲಿ, 

ತಂಪನೆ ತವರಲ್ಲಿ.. 

ಬೆಳಗಲು ಬಾಳು ಹಸಿರೋತ್ಸವದಲಿ.. 

ಕಡಿಯದಿರಿ ಮರಗಿಡಗಳ.. 

ಇಲ್ಲವಾದರೇ...

ದಿನಗಳುರುಳುರುಳಿ ಕಳೆದುಕೊಳ್ಳುವೆವು ತಂಪನೆ ಉಸಿರ ಸವಿರುಚಿ..! 

ಕಾಣದ ಮೋಡದ ಕೆಳಗೆ, ಬಾರದ ಮಳೆಯ ನೆಲೆಗೆ ಬೇಸತ್ತು ಸಾಯುವೆವು ಮುಂದೊಂದು ದಿನ..!!!

- PunitNarayan

09 Oct 2019, 12:03 am