Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜನ್ಮದಾತೆ

ಓ ನನ್ನ ಜನ್ಮದಾತೆ
ನೀ ನನ್ನ ಸ್ಫೂರ್ತಿದಾತೆ
ಎನ್ನ ಬದುಕಿನ ಪುಸ್ತಕ ತೆರೆದೆ ನೀನು
ಆ ಪುಸ್ತಕದಿ ಪ್ರತಿ ಪುಟದಲ್ಲಿರುವೆ ನೀನು
ನೀ ಹಸಿದು ಎನ್ನ ಹಸಿವು ನೀಗಿಸಿದೆ
ನೀ ದುಡಿದು ಎನ್ನ ಗುರಿ ಮುಟ್ಟಿಸಿದೆ
ನನ್ನ ಬದುಕಿನ ಮೊದಲ ಗುರುವಾದೆ
ಈ ಬದುಕಿನ ನಂದಾ ದೀಪವಾದೆ
ಓ ನನ್ನ ಜನ್ಮದಾತೆ
ನೀ ನನ್ನ ಸ್ಫೂರ್ತಿದಾತೆ
ನನ್ನ ನಗುವಿನಲಿ ನಿನ್ನ ನೋವ ಮರೆತೆ
ನಿನ್ನ ನಗುವಿನಲಿ ನಾ ಜಗವನೇ ಮರೆತೆ
ಸಾವಿನ ಮನೆಯ ಬಾಗಿಲು ಬಡಿದೆ ನನ್ನಿಂದ ನೀ
ತಿರುಗಿ ಬಂದೆ ನನ್ನ ಅಳು ಕೆಳಲೇಂದು ನೀ
ನನ್ನ ಅಂತರಾಳದಲ್ಲಿ ಶಾಶ್ವತವಾಗುವೆ ನಾ ಕಾಲವಾದರೂ
ನಿನ್ನ ಋಣ ತಿರಿಸಲಾಗದು ಏಳೇಳು ಜನ್ಮ ಕಳೆದರೂ
ಆರೈಸುವೆ ನಿನ್ನ ಪುಟ್ಟ ಮಗುವಂತೆ
ಕೊನೆ ಕ್ಷಣದವರಿಗೂ ಕಾಯುವೆ ಕಣ್ಣರೆಪ್ಪೆಯಂತೆ
ಓ ನನ್ನ ಜನ್ಮದಾತೆ
ನೀ ನನ್ನ ಸ್ಫೂರ್ತಿದಾತೆ
ರಾಮ್

- ರಾಮ್

27 Oct 2019, 12:09 pm

ದೀಪಾವಳಿ

ನೀ ಹಚ್ಚು ಹಣತೆಯ
ಬಾಳಿನ ಸುಖ ದುಃಖ ದಡೆಗೆ
ಬಾಳೆಲ್ಲ ಬೆಳಕಾಗಲಿ ನೀ ಹಚ್ಚಿದ
ಆ ದೀಪದಿಂದ
ಮನದ ಭಾವನೆಯ ಮೂಲೆಯಲ್ಲಿ ಇರುವ
ಆ ಮನಸ್ಸಿಗೆ ಹಚ್ಚು ಆ ದೀಪ ನೀ
ಕನಸಿನ ಬದುಕಿನ ರಂಗೋಲಿಯ
ನಡುವಲ್ಲಿ ಒಂದಾಗಲಿ ಆ ದೀಪ
ನೀ ಹಚ್ಚುವ ಆ ದೀಪ ಮನದ
ಪುಟದಲ್ಲಿ ಒಂದಾಗಲಿ
ಬಾಳಿನ ಜೊತೆಯಲ್ಲಿ ಜೀವನದ
ಎಲ್ಲೆಯಲ್ಲಿಯೂ ಒಂದಾಗಲಿ


ಅನಿತಾ ಹರೀಶ್ ಭಂಡಾರಿ ಕುತ್ಪಾಡಿ ✍️✍️✍️

- An

26 Oct 2019, 05:56 pm

ತಂದೆ ಮಗಳು - ವಾರ್ಧಕ ಷಟ್ಪದಿ

ಮಳೆಬಂದು ಮನದುಂಬಿ ನನ್ನಾಸೆಗೆ ವರವಾಗಿ
ನಿನ್ನೋಡಲ ಕುಡಿಯೊಡೆದು ತುಂಬಿರಲು ನವಮಾಸ
ನವಮಿಯಲಿ ಬಂದಿಹಳು ಲಕುಮಿಯೂ ಬೆಳಗುತ್ತ ಜಗವೆಲ್ಲ ಮನೆದೀಪ

ಅಂಬೆಯಾ ಗಾಲಿಕ್ಕಿ ಓಡಲದು ಕಂಡೆನೂ
ಅವಳಲ್ಲಿ ಶೃಂಗೇರಿ ಶಾರದಾ ದೇವಿಯನು
ಆ ಮೊದಲ ಮಾತನೂ ನಾಕೇಳೆ ಹರುಷದಲಿ ಮೂಕನದು ಆದೆನೂ

ಲಕುಮಿಯಾ ಶಾಲೆಗೇ ಬಿಡಲದುವೆ ಆಯಿತೂ
ಮನಕದುವೆ ಅಂಜಿಕೇ ತಿಲಿಯದೆಲೆ ಏನನೂ
ಮೊಗ್ಗದುವೆ ಅರಳಲೂ ಮನಕೆಆ ತಂಕವೊ ಜೊತೆಯಲಿಯೆ ಹರುಷವೂ

ಮದುವೆಯೂ ನಿಷ್ಚಯವು ಆಗಲೂ ಅನಿಸಿತೂ
ಇನ್ನೇನು ನೀನೆಂದು ಕೆಲದಿನದ ಅತಿಥಿಯೂ
ಮದುವೆಯಾ ದಿಬ್ಬಣವು ಹೊರಡಲೂ ಹೃದಯದೀ ಹೂವನ್ನು ಕಿತ್ತಂತೇ

ವರುಷಗಳು ಉರುಳಿತೂ ಮಗಳಲ್ಲಿ ಚಿಗುರಿತೂ
ಕುಡಿಯದುವೆ ನನಮೊಗ ದಿ ಹರುಷವನು ತಂದಿತೂ
ಲಕುಮಿಯೂ ಬಂದಿಹಳು ನವಮಿಗೇ ತಂದಿಹಳು ಮರುಕಳಿಸಿ ನೆನಪೆನಗೆ

- ಜೈಮಿನಿ

26 Oct 2019, 07:32 am

ಮೌನದ ಗೊಂಬೆ

ಒಬ್ಬರದ್ದು ಬಾಣಗಳಂತ್ತಹ ಮಾತು
ಇನೋಬ್ಬರದ್ದು ಸಹನೆಯ ಮಾತು
ಕೇಲಶರದ್ದು ಮಮತೆಯ ಮಾತು
ಇವರದ್ದು ಕರುಣೆಯ ಮಾತು......

ನಾವು ನಾಮ್ಮವರು ಎಂಬುವುದರ
ಮಲಕ ಎಲ್ಲರು ಒಂದೇ ಎಂದು
ಆದಿಕಾರ ನಡೆಸಿದವರ ಪಾಲಿಗೆ ಕೆಂಡಾವ
ಉಣಬಡಿಸಿದ ಇವರದ್ದು ಏಕತೆಯ ಮಾತು

ಹರಿಯುವ ನದಿಯಂತೆ ನಿಷ್ಕಲ್ಮಶ
ವಾಗಿ ಹರಿಜನ ಎಂಬುವರನ್ನು ದೇವರು
ಎಂದು ಪೂಜೆಗೊಳಪಡಿಸಿ ಸಮಾನತೆ
ನೀಡಿದವರದ್ದು ವಾತ್ಸಲ್ಯದ ಮಾತು.....

ಬೃಹತ್ ಬಂಡೆಯಲ್ಲಿ ಸಂವಿಧಾನ ಎಂಬ
ಬೃಹತ್ತಾದ ಮುರ್ತಿಯನ್ನು ಸ್ಥಾಪಿಸಿ
ಎಕತ ಮನೋಭಾವವನ್ನು ಬೆಳೆಸಿದ ಈ
ಗೊಂಬೆಯು ಇನ್ನಿತರರ ದ್ವೇಷಕ್ಕೆ ಕನ್ನಡಿ
ಯಾಯಿತು ಗಜಾನನ

ಇಗ ಹೇಳು ಗಜಾನನ ಆ ಗೊಂಬೆಯದ್ದು
ಏಂಥಹಃ ಮೌನ ಆ ಮೌನ ಆಳಿಸಲು
ಆವರೀಗವರೆಸಾಟಿ ಆದ್ದಕ್ಕೆ ಆವರನ್ನ
ಸಹನೇಯ ಶಿಲ್ಪಿ ಎಂಬ ನಾಮವುಂಟು.....
ರಾಥೋಡ್......

- Vinod Naik Vinod Naik

23 Oct 2019, 08:07 am

ನವಿಲು ಗರಿ ಕಳಚಿ ಬಿದ್ದಿದೆ ಬಾ ಗೆಳತಿ

ನವಿಲು ಗರಿ ಕಳಚಿ ಬಿದ್ದಿದೆ
ಗಾಳಿಗೆ ಗರಿಯು ಅ ಕಡೆ
ಈ ಕಡೆ ಹಾರುತ್ತಿದೆ.
ಬಾ ಗೆಳತಿ ನವಿಲು ಗರಿ
ಬಿದ್ದಿದೆ...
ಕನಸೂ ಅರಳುತ್ತಿದೆ.
ಮನಸ್ಸು ನಲಿಯುತ್ತಿದೆ.
ಬಾ ಗೆಳತಿ ನವಿಲು ಗರಿ
ಕರೆಯುತ್ತಿದೆ.
ನವಿಲು ಗರಿಯ ಬಣ್ಣ
ಬದುಕು ಕಟ್ಟು ಆಸೆ
ಮೂಡಿಸುತ್ತದೆ. ಬಂದು
ಬಿಡು ಸೊಗಸಾದ ಕನಸು
ಕಾಣೋಣ...
ನವಿಲು ಗರಿ ಕಳಚಿ ಬಿದ್ದಿದೆ
ಬಾ ಗೆಳತಿ...ಬಾ..

- Veerabhadra Puranikamatha

22 Oct 2019, 11:16 pm

ಕನಸಲ್ಲಿ ಬಂದವಳು ಯಾರವಳು..

ಕನಸಲ್ಲಿ ಬರುವ ಬೆಡಗಿನ ವಯ್ಯರಿಗೆ ಮುತ್ತು ಕೊಟ್ಟೆ ಕೇಳದೆ ಕನಸಲ್ಲಿ!!....
ಕನಸಲ್ಲಿ ಬರುವ ಬೆಡಗಿನ ವಯ್ಯರಿ ನನ್ನ ನಿದ್ದೆಯ ಕದ್ದೋಯ್ದಲು ಕಾಣದೂರಿಗೆ ಪ್ರೀತಿಯ ಬಲೆಯಲ್ಲಿ!!....
ಹಗಲಲ್ಲಿ ಅವಳೆ ಜೊತೆ ಇದ್ದರು ಮಾತನಾಡದೆ ಮೂಕಾದೆ ಎದುರಲ್ಲಿ ಯಾಕೋ ಕಾಣೆ!!...
ದಿನವೇಲ್ಲಾ ಅವಳೆ ನನ್ನ ಜೊತೆ ಇದ್ದರು ನನ್ನನ್ನೆ ಮರೆತು ಅವಳಾಗಿರುವೆ ನಾ ಕಾಣೆ!!...
ಅಲ್ಲ ಮುಖ ಪರಿಚಯವಿಲ್ಲದ ತರುಣೀಗೆ ಇಷ್ಟೊಂದು ಹುಡುಕಾಟನ, ಹೇಗಿರುವಳೋ, ಆ ನನ್ನ ಕನಸಲ್ಲಿ ಬರುವ ಶ್ರೀ ಗಂಧದ ಗೊಂಬೆ!!... ಯಾರವಳು???

- Veerabhadra Puranikamatha

22 Oct 2019, 11:10 pm

ಭಾವನೆಗಳು

ಈ ಮಳೆಯಲ್ಲಿ ನೆನೆದವರೆಷ್ಟೋ..
ಹನಿಗಳು ದಕ್ಕಿಸಿಕೊಂಡವರೆಷ್ಟೋ..
ಕಳೆದ ಮಳೆಗೆ
ನೆನೆದಿದ್ದ ಪ್ರೇಮಿ ನಾನು..⚘
ಈ ಮಳೆಗೂ ಮೈಯೊಡ್ಡಿದ್ದೆನೆ
ಈ ನಡುವೆ
ನನ್ನ ಕಣ್ಣೀರು ಸಂಗಮಿಸಿದ್ದು
ಯಾರಿಗೂ ತಿಳಿಯದಂತೆ...!!

- Veerabhadra Puranikamatha

22 Oct 2019, 11:09 pm

ತಂದೆ - ಮಗಳು

ಮಳೆಯದು ಬಂದಿತು
ಮನವದು ಮಿಂದಿತು
ಹೊಸದದು ಸೃಷ್ಟಿಯು ಶುರುವಾಯ್ತು
ನಿನ್ನಯ ಒಡಲೊಳು
ಗರ್ಭವು ಚಿಗುರಿತು
ನನ್ನಯ ಆಸೆಗೆ ವರವಾಯ್ತು

ನವಮಿಗೆ ಬಂದಳು
ಹರುಷವ ತಂದಳು
ಕುವರಿಯು ನನ್ನಯ ಮನೆಬೆಳಗಿ
ಎಲ್ಲರ ಮನದಲು
ದೀಪವ ಬೆಳಗುತ
ತಂದಳು ಲಕುಮಿಯು ಭಾಗ್ಯವನು

ಅಂಬೆಯ ಗಾಲನು
ಇಕ್ಕುತ ಓಡಲು
ಕಂಡೆನು ಶಾರದೆ ದೇವಿಯನೂ
ಮೊದಲನೆ ಮಾತನು
ಆಡಲು ನೀನದು
ಮೂಕನು ಆದೆನು ಹರುಷದಲಿ

ಮಗಳನು ಶಾಲೆಗೆ
ಬಿಡಲದು ಆಯಿತು
ಮನಕದು ಅಂಜಿಕೆ ತಿಳಿಯದೆಯೇ
ಮೊಗ್ಗದು ಅರಳಲು
ಮನಕಾ ತಂಕವು
ಹರುಷವು ಆಯಿತು ಜೊತೆಯಲಿಯೇ

ಮದುವೆಯು ನಿಶ್ಚಯ
ವಾಗಲು ಅನಿಸಿತು
ಕೆಲದಿನ ದತಿಥಿಯು ನೀನೆಂದೂ
ಮದುವೆಯ ದಿಬ್ಬಣ
ಹೊರಡಲು ಅನಿಸಿತು
ಹೃದಯದಿ ಹೂವನು ಕಿತ್ತಂತೇ

ವರುಷಗ ಗಳುರುಳಿತು
ಮಗಳಲಿ ಚಿಗುರಿತು
ಕುಡಿಯದು ತಂದೂ ನಗುವೆನಗೇ
ಲಕುಮಿಯು ಬಂದಳು
ನವಮಿಗೆ ತಂದಳು
ನೆನಪದು ನಿನ್ನಯ ಮತ್ತೆನಗೇ!!!

- ಜೈಮಿನಿ

21 Oct 2019, 09:40 pm

ಸ್ತ್ರೀ ಸ್ವಾಭಿಮಾನ

ಒಡಲಾಳದ ಬೇಗುದಿ
ಕಂಡೆ ಮಡುಗಟ್ಟಿರುವುದ
ಮಾನಿನಿಯ ವದನದಲಿ

ಕಲ್ಪಗಳ ದೌರ್ಜನ್ಯವನು
ಮನ್ನಿಸುತ ಮನದಲ್ಲಿ
ಮನ್ವಂತರಗಳ ಮರ್ದನವ
ಸಹಿಸುತ್ತ ತನುವಲ್ಲಿ

ಪ್ರತಿ ಯುಗದಿ ಕೂಗಿಹಳು
ಕೊನೆಯೆಲ್ಲಿ ಇದಕೆಂದು
ಪ್ರತಿ ದಿನವು ಹೋರಾಡಿ
ತನ್ನಭಿಮಾನ ಹೆಚ್ಚೆಂದು

ಈ ಸ್ವಾರ್ಥಿ ಸಮಾಜಕೆ
ಅರಿವಾಗುವುದು ಎಂತು
ಅಕ್ಕ ತಂಗಿಯರಿರಲಿ ಪರಸ್ತ್ರೀ ಇರಲಿ
ಸ್ತ್ರೀಯಭಿಮಾನವದೆ ಒಂದೆಂದು?

- ಜೈಮಿನಿ

21 Oct 2019, 05:38 pm

ಗುಡಿಸಲ ಬದುಕು

ಕೋಟಿ ದೀಪಗಳ ಮಧ್ಯೆ
ಮುಂಬತ್ತಿ ಮನಸೋಲಿಸಿತು
ಮೌನವಾಗಿ ಕರಗುತ ಬಡತನದಲ್ಲೂ
ಸಿರಿವಂತಿಕೆ ಮೆರೆಯುತ.

ಮೊರೆ ಇಟ್ಟಿತು ಮೂಕ
ಜೀವಿಗಳ ಮನ ತಂಗಾಳಿಯ
ರಭಸ ನಿಧಾನ.

ಹಬೆಯಾಡುವ ಗಂಜಿ ಪಕ್ಕದಲ್ಲೇ
ಪುಟ್ನಂಜಿ ಕುಯ್ಯುತಿಹಳು ಈರುಳ್ಳಿ
ಕತ್ತಲಲ್ಲಿ ಅಂಜಿ.

ಮೃಷ್ಟಾನ್ನದ ರುಚಿಯು ಗಂಜಿ ಪಡೆದೀತೆ
ಗಂಜಿಯ ಸವಿ ಮೃಷ್ಟಾನ್ನಕ್ಕೆ ಬಂದೀತೆ ತಿಳಿಯದಾಗಿದೆ ಇಂದು ಹಸಿವೆ ಮುಂಜಾನೆಯಿಂದ ತಡೆದು.

- ಚುಕ್ಕಿ

20 Oct 2019, 07:31 am