Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಲವಿನ ದಿಬ್ಬಣದ ಹಾದಿಯಲಿ

ಒಲವಿನ ದಿಬ್ಬಣದ ಹಾದಿಯಲಿ
ಮಂಜಿನ ಹನಿಗಳು ಹೊಳೆದಿರಲಿ
ಹೊಂಗಿರಣದ ಸಿರಿಯ ಬೆಳಕಿರಲಿ
ಹೊಂಬಾಳೆಯು ಶಿರವನು ಬಾಗಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ತುಂತುರು ಮಳೆಯು ಮುತ್ತಿಡಲಿ
ಚಿಗುರೆಲೆಯು‌ ಚಪ್ಪರವ ಹಾಕಿರಲಿ
ಹೂ ಗಂಧದ ಗಾಳಿಯು ಬೀಸಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ಕಾಮನ ಬಿಲ್ಲದು ಬಾಗಿರಲಿ
ಕೋಗಿಲೆಗಳು ಪದವನು ಹಾಡಿರಲಿ
ಜಂಭದ ಕೋಳಿಯು ಕುಣಿದಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ಹೂವಿನ ಹಾಸಿಗೆಯು ಹಾಸಿರಲಿ
ಭೃಮರದ ವಾಧ್ಯವು ಮೊಳಗಿರಲಿ
ಜೇನಿನ ಹೊಳೆಯು ಹರಿದಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ರತ್ನದ ಕಂಬಗಳ ಸಾಲಿರಲಿ
ಸಕ್ಕರೆಯ ರಂಗೋಲಿ ಬಿಡಿಸಿರಲಿ
ಮುತ್ತಿನ ತೋರಣವು ಕಟ್ಟಿರಲಿ!!

ಒಲವಿನ ದಿಬ್ಬಣದ ಹಾದಿಯಲಿ
ಚೆಲುವದು ಮೈ ಮನ ತುಂಬಿರಲಿ
ಸಡಗರ ಸಂಭ್ರಮವು ನೆರೆದಿರಲಿ
ಉಲ್ಲಾಸದ ಉಡುಗೊರೆ ಜೊತೆಗಿರಲಿ!!

- ಪಿ.ಜಿ.ಜ್ಯೋತಿ

01 Dec 2019, 11:39 am

ನಿನ್ನಂತೆಯೇ.. ಮುಗಿಯದು ನಿಲ್ಲದು..

ಇರುವೆಯೊಂದು ತನ್ನ ಗೂಡು
ಇರುವುದೆಂದೋ
ಇಲ್ಲವೆಂದೋ
ನಿಲ್ಲದೆ ಮಣ್ಣ ಅಗೆದು
ಮಣ್ಣಿನ ರಾಶಿ ಸುರಿಸುತಿದೆ....

ನನ್ನೇ ನೋಡದ ನಾನು
ಕಾಣದ ನಿನ್ನ ಪ್ರೀತಿಗೆ
ಕೈ ಚಾಚುತಿರುವೆ....
ನನ್ನೇ ನೋಡುವ ನೀನು
ಹಿಡಿಯಲಾಗದ ಪ್ರೀತಿಯ
ಹಾಗೆಯೇ ಏಕೆ ಇಟ್ಟುಕೊಂಡಿರುವೆ....

ಮರದ ಮೇಲಿನ ಪಕ್ಷಿಗಳ ಸರಸ
ನಿಸರ್ಗದ ಜೊತೆ ಜೊತೆ ನಿಲ್ಲದೆ
ಸಾಗುತಿದೆ.....
ನನ್ನ ವಯಸ್ಸೂ ಕೂಡ
ಮನೆಬಿಟ್ಟು ಹೊರಗೆ ಬಾ
ಬಯಲು ಎಂದೂ ನಿಲ್ಲದು
ನೀನೂ ಕೂಡ..........

ನಿನ್ನ ಹಿಂದಿರುವ ಜಡೆಯ
ಮುಂದಿರುವೆ ನಾನು.....
ಆ ಜಡೆಯ ಮೌನಕ್ಕೆ
ನಿನ್ನ ಕಣ್ಣಿನ ಮಾತಿನ ಭಯಕ್ಕೆ
ಹಿಡಿದು ನಿಲ್ಲಿಸಕ್ಕಾಗದ ಪ್ರೀತಿಗೆ...

ಮಕ್ಕಳಂತೆ ಹಠ ಮಾಡು
ಮುದ್ದಿಸುತೀನಿ ಕಲಿತವಳಾಗಬೇಡ..
ಇಲ್ಲವಾದರೆ ಈ ದಡ್ಡನ
ಬೆರಳಿಡಿದು ತಿದ್ದಿಸಿ ಕಲಿಸು ಅಮ್ಮನಂತೆ..
ಸುಮ್ಮನಿರಬೇಡ...
ಸುಮ್ಮನಿರಲಾಗುವುದಿಲ್ಲ....

ಹಳೆಯ ನೆನಪು ಬದಲಾಗಿದೆ
ಅದಿತ್ತೇ ಅನ್ನೋಥರ....
ಇದ್ದಿದ್ದರೆ ಅದುನ್ನೇ ಹಿಡಿದಿರುತಿರಲಿಲ್ಲವೇ.?
ನಿನ್ನ ನಗು ಅಳು ಮಾತು ಮೌನ
ಕಲಿಸುತಿದೆ....
ಇನ್ನೂ ಜಾಸ್ತಿ ಉಂಟಾಗುತಿದೆ....

ಯಾವಾಗ ಇದೆಲ್ಲ ಹೇಳು ಅಂತ
ಯಾವಾಗ ಇದುಕ್ಕೆ ಕೊನೆ ಅಂತ
ಕೇಳ್ಬೇಡ...
ನಾ ಹೇಳೋಕಾಗಲ್ಲ
ಹಗಲು ರಾತ್ರಿಗೆ ಕೊನೆ ಮೊದಲು
ಯಾವುದು ಅಂತ....
ಪ್ರೀತಿ ಹಗಲು ರಾತ್ರಿ.

ನದಿಗಳಿಂದ ನೀರು
ಅಣೆಕಟ್ಟು ಸೇರಿದೆ.. ತುಂಬುತಿದೆ..
ಬಾಗಿಲು ತೆರೆಯದಿದ್ದರೆ ಹೇಗೆ...
ಹೊಡೆದು ಹೋಗಿ ಬೆಳೆ ಕೊಚ್ಚಿ ಹೋಗುವುದು.
ಒಂದೊಂದೇ ಬಾಗಿಲ ತೆರೆದಿಬಿಡು...

ನನ್ನ ಪದ ನಿನ್ನಂತೆಯೇ...
ಮುಗಿಯದೂ ನಿಲ್ಲದೂ........

-ಪ್ರವೀಣಾ ಸಿಂಗೋನಹಳ್ಳಿ












mund

- praveens singonahalli

30 Nov 2019, 04:14 pm

ಪ್ರೀತಿ ಗೂಡು

ಪುಟ್ಟ ಹಕ್ಕಿಯೊಂದು
ಎಣೆದ ದೊಡ್ಡ ಗೂಡು ಕಟ್ಟಲು
ಹೆಜ್ಜೆ ಗುರುತಿಲ್ಲದ ಸೂಕ್ತ
ಜಾಗವ ಹುಡುಕಿದೆ.

ಬಿರಿಬಿಟ್ಟ ಮಣ್ಣು ತಗ್ಗು ದಿಬ್ಬ
ನೀರಿಲ್ಲದ ಕೆರೆ ಹೇಗಾದೀತು ಎಂದು
ಕೊಂಬೆ ಕಡಿದ ಎಳೆಯ ಮರದ
ಮೇಲೆ ಬಂದು ಕುಳಿತಿದೆ.

ಕುಳಿತ ಹಕ್ಕಿಯ ಕಾಲಿನಿಂದ
ಅದರ ಬಯಕೆ ಅರಿತ
ಎಳೆಯ ಮರ ಕಣ್ಣೀರು ಸುರಿಸಿದೆ
ತನ್ನನೋವಿನೊಂದಿಗೆ.
ಕಣ್ಣೀರು ಯಾರದೆಂದು ಗೊತ್ತಾಗದಂಗೆ.

ಕೀಳೋ ಕೈಗೆ ಎಟುಕದ
ಕಟುಕ ಹತ್ತಕ್ಕಾಗದ
ನೀರ ಮಧ್ಯೆ ಸೊಂಪಾಗಿ ಬೆಳೆದ
ಹಸಿರ ಮುಳ್ಳಿನ ಮರದ ಅಂಚಿನಲ್ಲಿ
ಪ್ರೀತಿ ಗೂಡು ಕಟ್ಟೋ ಬಯಕೆ
ಹಕ್ಕಿಯಲ್ಲಿ ಮೂಡಿದೆ.

ದುರಾಸೆ ಮನುಜನ ಅವಾಂತರ
ದಡವಿಲ್ಲದಂತೆ ಮಾಡಿದೆ
ಮಾತುಬಿಟ್ಟು ಬೆಟ್ಟ ಸೇರಿವೆ
ಪುಟ್ಟ ಹಕ್ಕಿಯ ಕೆಲಸಕ್ಕೂ ಭಂಗ ತಂದಿದೆ.

ತಾಯಿ ಮಗುವ ಅನಾಥಾಶ್ರಮಕ್ಕೆ ಬಿಟ್ಟಾಗೇ
ಕೊಂಬೆ ಕಡಿದ ಎಳೆ ತಾಯಿಯ ಮರ
ತಂಗಾಳಿಯ ಪತ್ರ ಕಳಿಸಿ ಬೆಟ್ಟಕ್ಕೆ
ಮರ ತನ್ನ ಉಸಿರ ಬಿಟ್ಟಿದೆ.

ಮುಗಿಲಿಗೆ ತಲುಪಿ ತಂಗಾಳಿಯ ಪತ್ರ
ಮೋಡದ ಗಾಳಿಪಟವಾಗಿದೆ ಮುಗಿಲ
ಕೈ ಜಾರಿ ಊರ ಮೇಲೆ ಬಿದ್ದಿದೆ
ಕೆರೆ ತೊರೆಯಲ್ಲಿ ಹರಿದಿದೆ
ಗಾಳಿಪಟ ಕಾಣದಾಗಿದೆ.
ಕಡಿದ ಕೊಂಬೆಯ ಗುರುತು ವಾಸಿಯಾಗಿದೆ
ಹಾರದ ಮರೆತ ಕುಳಿತ ಹಕ್ಕಿ ಹಾರಿದೆ
ಹಕ್ಕಿ ಹಾರಾಡುತಿದೆ..........

-ಪ್ರವೀಣಾ ಸಿಂಗೋನಹಳ್ಳಿ.

- praveens singonahalli

30 Nov 2019, 02:05 pm

ಮನದಂಗಳದಲ್ಲಿ

ಮನದಂಗಳದಲ್ಲಿ
ಮೋಹದ ಮಳೆ ಸುರಿದೆ ನೀ...
ಮನ ತಂಪಾಗಿ
ಒಲವು ಚಿಗುರುವ ಮುನ್ನ
ನೀ ಆವಿಯಾಗಿ
ಘನ ಮೋಡವಾಗಿ
ಮರಳಿ ಆಗಸವ ಸೇರಿ
ಇನ್ನೆಂದೂ ಕರಗಿ ಸುರಿದು
ಈ ನನ್ನ ಮನದಂಗಳವ
ಸೇರಿ ತಂಪೆರೆಯದಾದೆ ನೀ...

- ಪಿ.ಜಿ.ಜ್ಯೋತಿ

29 Nov 2019, 08:17 pm

ನಿನಗಾಗಿ ಕಾಯುವೆ

ಮಗುವಿನಂತೆ ಮುದ್ದು ಮನಸ್ಸು ಕಂಡು
ಮಗ್ಧ ಮಂತ್ರನಾದೆ ನಾನು
ಕಂಡದ್ದೆಲ್ಲಾ ಬಯಸಿ ಕೇಳುವ
ಮುದ್ದು ಪ್ರೇಮಿನಾಗುವೆ ನಾನು...

ತಿಳಿಯಬಹುದೇ ಸುಲಭದಲ್ಲಿ
ಚಂಚಲಗೊಳ ಗೊಂಡ ಮುದ್ದು ಮನಸ್ಸು
ಅಂಧಕಾರವೆಂಬ ಸಮುದ್ರದಲ್ಲಿ ಮುಳುಗಿ
ಪ್ರೀತಿಯಲ್ಲಿ ಸೋತು ನಿಂತ್ತಿದೆ ನನ್ನ ಮನ....

ಹೂವಿನಂತೆ ಸೂಕ್ಷ್ಮ ಮನಸ್ಸು
ನಿನ್ನ ಆ ನೋಟ ನನ್ನ ಬಾಳಿಗೆ ಸ್ವೂರ್ತಿ
ಹತ್ತಿಯಂತೆ ಹಗುರ ನೋಡಿ
ನಿನ್ನ ಆ ತುಂಟನಗೆ ನನ್ನ ನಗುವಿಗೆ ಕಾರಣ....

ಹೇ ಗೆಳೆಯ ಎಲ್ಲಿ ಇರುವೆ
ನೀ ಬೇಗ ಬಂದು ಸೇರಿಕೋ ನನ್ನ ಮನ
ನೀ ಬರುವ ಆ ದಾರಿಯನ್ನೇ ನಾ ಕಾಯುವೆ
ನಿನಗಾಗಿ ಕಾಯುತ್ತಿದೆ ಈ ಜೀವವೆಂದು ನೀ ಮರಿಯಬೇಡ......

- Ajay

29 Nov 2019, 06:22 pm

ಕನಸು...

ಕಣ್ಣಾರೆ ಕಂಡ ಕನಸೊಂದು
ನಸು ನಕ್ಕಿ ನುಡಿಯಿತೊಂದು
ನುಡಿಯ.....
ಕಂಡ ಕನಸೊಳಗೆ ನಾ ಉಳಿದ್ದಿದ್ದರೆ
ಬಲುಚೆಂದ ಎಂದು ಮನಸೊಂದು
ನುಡಿದಿತ್ತು ಆಗ........

ನೋಡಿದ ಕಣ್ಣೊಂದು ಸನ್ನೆಯಲ್ಲೆ
ಬಿಡಿಸಿಟ್ಟಿತು ಅದರಂದವ.......
ಆದರೊಳಗೆ ನಾನೋಂದು ಜೀವಂತ
ಬೊಂಬೆ ಎಂದೆನಿಸಿತು ಆಗ........

ನಿಜವ ಅರಿತ ಮನವೊಂದು ನುಡಿಯಿತು
ಆಗ ಕನಸೋಳಗೊಂದು ಕನಸ ಹುಡುಕಿದರೆ
ನೀ ನಿನ್ನನ್ನೆ ಮರೆತಿಯೆ ಆಗ.........

- ರಾಗಸಿರಿ....

29 Nov 2019, 12:19 pm

ಲಕ್ಷದೀಪೋತ್ಸವ.

ಆಗ ರಾತ್ರಿಯ ಕತ್ತಲು
ಅರಿವಿಲ್ಲದೆ ಅದರಲ್ಲಿದ್ದವನಿಗೆ
ಬಯಸಿರದ ಕರೆಯೊಂದು
ಸುತ್ತ ಕವಿದ ಕಗ್ಗತ್ತಲಿದ್ದವರಿಂದ
ಪಯಣ ಲಕ್ಷ ದೀಪೋತ್ಸವದ ಕಡೆಗೆ.

ಮೇಲೊಂದು ಅದರಮೇಲೊಂದು
ಉಣ್ಣೆ ಬಟ್ಟೆ ತೊಟ್ಟು
ಬಿಗಿಯಾಗಿ ಮುಂದಿನವನ ಹಿಡಿದು
ಕುಳಿತೆ ಮೋಟಾರ್ ಗಾಡಿಯ ಮೇಲೆ
ಕೊರೆಯುವ ಚಳಿಗೆ
ಕಪ್ಪುಕತ್ತಲೆಗೆ ಕಾಣದ ಕಳ್ಳನಾಗಿ.

ಮಣ್ಣಿನ ಕಾಲುದಾರಿ
ಸಣ್ಣ ಜಲ್ಲಿಕಲ್ಲು ಬರಿ ತೇಪೆಗಳ
ಡಾಂಬರು ರಸ್ತೆಯಲ್ಲಿ
ತನ್ನ ಚಕ್ರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ
ನೆಲವ ತೋರಿಸುತಾ ಮೋಟಾರ್ ಗಾಡಿಯ
ಬೆಳಕು ದಾರಿಯುದ್ದಕ್ಕೂ
ಹೋರಾಟ ನಡೆಸಿತು ರಾತ್ರಿಕತ್ತಲಿನೊಂದಿಗೆ.

ಗುಂಡಿ ಗೋಪುರಗಳಿಂದ ಮುಕ್ತ ಹೆದ್ದಾರಿ
ನುಂಗಿದೆ ಧಡೂತಿವಾಹನಗಳ ತೀವ್ರ ಬೆಳಕು
ನಮ್ಮ ಸಣ್ಣ ಮೋಟಾರ್ ಗಾಡಿಯ ಬೆಳಕ
ಭಯದಲ್ಲೇ, ಅಂಚಿನಲ್ಲೆ ಸಾಗಿದೆವು
ರಸ್ತೆಯ ಬಿಳಿಪಟ್ಟೆಯ ಎಡಭಾಗದಲ್ಲಿ.

ಕಣ್ಣುಗಳು ಹುಡುಕುತ್ತಿದ್ದ
ಲಕ್ಷ ದೀಪಗಳನ್ನು
ತರ ತರಹದ ಜನರ ನೋಟಗಳು
ಒಂದಷ್ಟು ದೀಪಗಳ ಬೆಳಕಿಗೆ
ಎಳೆತಂದು ತೋರಿಸಿದವು.

ಲಕ್ಷದೀಪಗಳ ಬೆಳಕು
ನೋಡಬಂದವನಿಗೆ, ಹಲವಾರು
ಜನರನ್ನು ತೋರಿಸಿತ್ತು
ಆ ಲಕ್ಷದೀಪಗಳಿಂದ
ಹೊರಹೊಮ್ಮುತ್ತಿದ್ದುದು.

ಬತ್ತಿ ಮುಂದಕ್ಕೆ ತಳ್ಳಿ, ಕರಿಕಿಟ್ಟ
ಉದುರುಸಿ, ಎಣ್ಣೆ ಸುರಿದು
ದೀಪದಿಂದ ದೀಪ ಹಚ್ಚುತಿದ್ದರು
ಹಚ್ಚಿದ ದೀಪ ಯಾವುದೆಂದು
ದೀಪಕ್ಕೂ ತಿಳಿಯದ ಹಾಗೆ.

ತಂದ ಮಣ್ಣಿನ ಬಟ್ಟಲು ನನ್ನದು
ಸುರಿದ ಎಣ್ಣೆ ನನ್ನದು
ಒಸೆದ ಬತ್ತಿ ನನ್ನದು
ಗೀರಿದ ಬೆಂಕಿ ಕಿಡಿ ನನ್ನದು
ನೋಡುತಿದ್ದ ನೋಟ ನನ್ನದು
ಅದು ದೀಪ.
ದೀಪದ ಬೆಳಕು ಎಲ್ಲಾರದೂ
ನಿನ್ನದು ನನ್ನದು ಯಾವದೂ ಅಲ್ಲಾ
ಅದು ಅದರದು ಅಲ್ಲಾ
ಅದು ದೀಪನೂ ಅಲ್ಲಾ .....

ಹಲವಾರು ಜನ ಬಂದಿದ್ದರು
ನೋಡುವವರು
ನೋಡದವರೂ
ನೋಡಿದರೂ ನೋಡಲಾಗದವರೂ
ನೋಡದವರು ನೋಡಿದರೂ
ಇವರನ್ನೆಲ್ಲಾ ನೋಡುತಿದ್ದ ನನ್ನಂಥವರು
ನಿನ್ನನು ನಿನ್ನ ಹಾಗೆ (ದೀಪವನ್ನು ದೀಪದ ಹಾಗೆ )
ನೋಡಿದವರ
ನಾನು ನೋಡಲಿಲ್ಲ...
ನೀನು ನೋಡಲಿಲ್ಲ....ಲಕ್ಷ ದೀಪದ ಬೆಳಕಿನೊಳಗೆ.

-ಪ್ರವೀಣಾ ಸಿಂಗೋನಹಳ್ಳಿ.

- praveens singonahalli

29 Nov 2019, 01:25 am

...ಆಗುತಿತ್ತು ಹಿಡಿದು ನಿಲ್ಲಿಸಕಾಗದಂತೆ ಬದಲಾಗುತಿತ್ತು...

ಇದು
ಅಶ್ವಥ್ ವೃಕ್ಷ ಪ್ರದಕ್ಷಿಣೆ ಮಾಡು
ಏನಾದರೂ ಪ್ರಾಪ್ತಿಯಾದೀತು..
ಇದು
ಬೋಧಿವೃಕ್ಷ ಅದರಡಿ ಕುಳಿತು ಧ್ಯಾನಮಾಡು
ಏನಾದರು ಉದಯವಾದೀತು...
ಇದು
ಅರಳಿಮರ ಎರಡು ಕಡ್ಡಿ ಸೊಪ್ಪು ಕಡಿದು
ಆಡಿಗೆ ಕಟ್ಟು ಚೆನ್ನಾಗಿ ತಿಂದೀತು...
ಯಾರ ಧ್ವನಿಗೂ ಪ್ರತಿಕ್ರಯಿಸದೆ
ಮರ ಬೆಳೆದೀತು.....
ಆಗುತಿತ್ತು
ಅದು ತಾನು ತಾನಲ್ಲದಂತೆ
ಅದುನ್ನ
ಹಿಡಿದು ನಿಲ್ಲಿಸಕಾಗದಂತೆ
ಅದು
ಬದಲ್ಲಾಗುತಿತ್ತು...........

-ಪ್ರವೀಣಸಿಂಗೋನಹಳ್ಳಿ.

- praveens singonahalli

26 Nov 2019, 06:52 pm

ಸುಮ್ಮನಿದ್ದು ಬಿಡಿ..

ಸುಮ್ಮನಿದ್ದು ಬಿಡಿ

ಮನಬಿಚ್ಚಿ ಮಾತಾಡಿ
ಹೃದಯದಿಂದ ನಗಾಡಿ
ಮನದೊಳಗೇ ಅಳುತ್ತಿರಿ
ನಗೆಹೂ ಬಾಡದಿರಲಿ
ಕಾಯಲು ದೇವನಿಹನು
ಚಿಂತೆ ಅವನಿಗೆ ಬಿಟ್ಟುಬಿಡಿ
ಕಾಯುತ್ತಾ ಸುಮ್ಮನಿದ್ದುಬಿಡಿ.
@ಪ್ರೇಮ್@
25.11.2019

- PremUdayKumar

25 Nov 2019, 06:30 pm

ಪ್ರೀತಿ

ಕಾರಣವಿಲ್ಲದೆ
ಹುಟ್ಟುವುದು ಪ್ರೀತಿ
ಪ್ರೇಮಿಗಳನ್ನು ಉತ್ತೇಜಿಸಿ
ಮನದ ಹಣತಿಯನ್ನ ಅನುಸರಿಸಿ
ಅರಿಯದೆ ಪರಿಸರದ ಸ್ಥಿತಿಗತಿ
ನೂರಾರು ಕನಸುಗಳು ಚಿಗುರೊಡೆದು
ಗರಿಗೆದರಿ ಹವಣಿಸಿ
ಮನದ ತೊಳಲಾಟದ ಭಾವವ
ತೋರ್ಪಡಿಸಿ
ಪ್ರೀತಿಯ ಅಪೇಕ್ಷಿಸಿ

- HarishKumarm

24 Nov 2019, 10:59 pm