Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಆ ನಿನ್ನ ಕಣ್ಣಿರೇ ತೊರೆಯಾಗಿ..,
ನನ್ನನೇ ಕರೆದಿರಲು ನಾ ಹೇಗೆ
ಬರದಿರಲಿ ನೀ ಹೇಳು....!!
ಕಣ್ಣಿರಾಗಿ ನಾ ಬರಲು
ನಿನ್ನ ಕೈ ಕೆನ್ನೆಗಳ ಮುದ್ದಿಸಲೆಂದು
ಆದರೆ..,
ಆ ಕರವು ನನ್ನೂರಸಿ
ಕಳುಹಿಸಿತೆ ಅರಸಿ...
ನಾ ಮರೆಯಲ್ಲೇ ಮಣ್ಣದೇ,
ನೀ ಎಡವಿ ಬೀಳಲು ನಾನಾಗ ಮಿದುವಾದೆ...
ನನ್ನವಳ ನಾ ಸೇರಿ
ಕೈಗಂಟಿ ನಗಲು...,
ಮಳೆಯ ಭೋರ್ಗರೆತದಲಿ
ಮನವ ಮುರಿಯಿತೆ ಮುಗಿಲು...
ನಾ ಹೇಗೋ ಹೂವಾದೆ...,
ನೀ ಹೇಗೆ ನನ್ನ ಮುಡಿದೆ
ನಿನ್ನ ಮುಡಿ ಏರಿದ ಮತ್ತಿನಲಿ ನಾ ಮೆರೆದೆ
ಆದರೆ...
ಮುಡಿದ ಮರುಘಳಿಗೆ ನಾ ಸಿಕ್ಕಿ ಮಳೆಗೆ...
ನಾ ನಿನ್ನಿಂದ ಮರೆಯಾದೆ.....
ಹಿಗೇಕೆ ಮನವೇ ..,
ನೀ ನನ್ನ ಮರೆತೋದೆ...
- sanjay
10 Nov 2019, 01:56 pm
ಇಂದೇಕೊ ಈ ಜೀವನ
ಬೇಸರವಾಗಿದೆ ಅಪ್ಪ
ಎಲ್ಲಾ ಇದ್ದರೂ ಒಬ್ಬಂಟಿಯಂತೆ
ಈ ಜೀವನ ಸಾಗುತಿದೆ ಅಪ್ಪ
ನಾನು ಒಂಟಿಯಾಗಿ ಸಾಗಿದರೆ
ನನ್ನಿಂದ ಬರುವವರು ಯಾರಿಲ್ಲ ಅಪ್ಪ
ನನಗೆ ಎಷ್ಟೆ ಕಷ್ಟ ಬಂದರೂ ನನ್ನಿಂದೆ
ನೀ ಇರುವೆ ಎಂದುಕೊಂಡೆ ಅಪ್ಪ
ಆದರೆ ಈ ಬಡಪಾಯಿ ಜೀವನ
ನೀನು ಬಿಟ್ಟೊದೆಯಾ ಅಪ್ಪ
ನನಗೆ ಈಗ ಅರಿವಾಗಿದೆ
ಈ ಜೀವಕ್ಕೆ ಬೆಲೆ ಇಲ್ಲ ಎಂದು
ಅಪ್ಪ.......
I miss you Appa
- mani_s_bhovi
10 Nov 2019, 11:50 am
ನಿನ್ನ ಹೃದಯ ರಾಗಕ್ಕೆ
ನನ್ನ ಹೃದಯ ಮಿಡಿದಿದೆ
ಎದೆಯ ಗುಡಿಯು ಕಾದಿದೆ
ನಿನ್ನ ಅಮರ ಪ್ರೀತಿಗೆ
ಹೃದಯ ಮೆಚ್ಚಿದವರು ವಿದಾಯ
ಹೇಳಿ ದೂರ ಹೋದಾಗ
ದೃಷ್ಟಿ ಅವರನ್ನೇ ಹಿಂಬಾಲಿಸುತ್ತದೆ
ನೋವು ಅನಿವಾರ್ಯ- ಯಾರು ಏನು
ಬೇಕಾದರೂ ಅನಲಿ ಎದೆಯೊಳಗಿನ
ಆಗಲಿಕೆಯ ದುಃಖ ಇದ್ದೇ ಇರುತ್ತದೆ
ಇಂತಿ ನಿಮ್ಮ ಪ್ರೀತಿಯ ಬಿಂದು
- bindhu
09 Nov 2019, 08:55 pm
ಓ ನನ್ನ ಜೀವೆ
ನನ್ನ ಮನದಾಳದ ಹೂವೆ
ನನ್ನ ಪ್ರಾಣಕ್ಕೆ ಪ್ರಾಣ ಕೊಡುವೆ ಮನವೆ
ನನ್ನ ಜೀವದ ಗೆಳತಿ ನೀನೆ
ನನ್ನ ಪಾಲಿನ ಉಸಿರು ನೀನೆ
ನನ್ನ ಗೆಳೆತನದ ಬಿಂದು ನೀನೆ
ನನ್ನ ಪಾಲಿನಲ್ಲಿ ಅರ್ಧ ನೀನೆ
ನನ್ನ ಜೀವದ ಗೆಳತಿ ಪಲ್ಲವಿ ನೀನೆ
- bindhu
09 Nov 2019, 07:56 am
ನವಮಾಸ ಹೊತ್ತು ಹೆತ್ತು ಎದೆಯ ರಕ್ತ ಬಸಿದು ತುತ್ತಿಟ್ಟು ತಿನಿಸಿ ಅಂಬೆಗಾಲಿಟ್ಟು ಆಡುವಾಗ ಮುಂಬಾಗಿಲಿಗೆ ತಂದು ಹುಣ್ಣಿಮೆ ಚಂದ್ರನ ತೋರಿಸಿ ಕಣ್ಣಿಗೆ ಕಾಮರಕ್ಷೆಯಾಗಿ ಬೆನ್ನಿಗೆ ಭೀಮರಕ್ಷೆಯಾಗಿ ಬೆಳೆಸಿ ಜೋಪಾನ ಮಾಡಿದವಳು ನನ್ನ ಹೊತ್ತವಳು ನನ್ನ ಹೆತ್ತವಳು .
ಅಭಿಷೇಕ್ ಹೆಚ್ ಆರ್ .
- Ramesh Hadimani
08 Nov 2019, 11:36 pm
ಬೆಳದಿಂಗಳ ಆಗಸದಿ
ಚಂದಿರನ ನೋಡ..
ಅತ್ತಿಂದಿತ್ತ ಓಡಾಡುತಿವೆ
ಹರಿದಾಡುವ ಮೋಡ...
- krishna Billadi melbailu
07 Nov 2019, 03:59 am
ಅಂಗಳದಲ್ಲಿ ಕುಳಿತಿದ್ದೆ
ಪ್ರಶಾಂತವಾದ ಬೆಳದಿಂಗಳು..
ಒಮ್ಮೆ ಅದನ್ನು ನೋಡಿ ನಸುನಕ್ಕೆ.
ಅಲ್ಲೇ ಹೊಳೆದಂತೆ ಬಾಸವಾಯಿತು
ನನ್ನಾಕೆಯ ಮಿನುಗುವ ಆ ಕಂಗಳು...
- krishna Billadi melbailu
07 Nov 2019, 03:51 am
ಉಪ್ಪು,ಹುಳಿ,ಖಾರ
ಜೊತೆಗೆ ಒಂದಿಷ್ಟು ಸಾಂಬಾರ..
ಅಪ್ಪ, ಅಮ್ಮ, ಅಣ್ಣ, ತಂಗಿ
ಕೂಡಿ ಬಾಳಿದರೆ ಸಂಸಾರ.....
ಕೃಷ್ಣ ಬಿಲ್ಲಾಡಿ ಮೇಲ್ ಬೈಲು..
- krishna Billadi melbailu
07 Nov 2019, 03:33 am
ಮೂರುದಿನದ ಪ್ರೀತಿಪ್ರೇಮನ
ಮಾಡಿ ಹಾಳುಮಾಡಿಕೊಳ್ಳ ಬೇಡಿ
ನಿಮ್ಮ ಜೀವನ,
ನೋಯಿಸಬೇಡಿ ತಂದೆ ತಾಯಿಯ ಮನಸನ್ನ,
ನೆರವೇರಿಸಿ ಅವರ ಕನಸನ್ನ,
ಸಾಧಿಸಿ ನಿಮ್ಮ ಗುರಿಯನ್ನ,
ಸುಖಕರವಾಗಿ ಸಾಗಿದರೆ ನಿಮ್ಮಮುಂದಿನ ಜೀವನ
ತಂದೆ ತಾಯಿಯ ಜನ್ಮ ಪಾವನ.
:- ವೀಣಾ ಲಿಂಗಣ್ಣ
( ರಾಯಚೂರು )
- Veena
03 Nov 2019, 12:28 pm
ಸಂಭ್ರಮಾ, ಸಂಖೇತ //ಪ//
ಸಂಕ್ರಮಣ ಸ್ವಾಗತ.....
ಸುಗ್ಗೀಯ ತೇರೊಳಗಾ..
ಆ.. ಭಾನುತೇಜಾ ಕುಂತಾನಾ.
ಹರುಷದ ಹೋಳಿಗೆ ತಂದಾನ.
ನಾವೆಲ್ಲಾ ಸೇರಿ ಹಂಚೋಣ.
ಎಳ್ಳು, ಬೆಲ್ಲ ಹಂಚುತ್ತಾ,
ಸಂಜೆಗೆ ಕಬ್ಬು ಹೀರುತ್ತಾ
ಸಜ್ಜೆ ರೊಟ್ಟಿಯ ಸವಿಯುತ್ತಾ
ಗೆಳೆಯಾ ಗೆಳತೀರೆಲ್ಲಾ ಕೂಡಿ
ಪದ ಕಟ್ಟೀ, ಹಾಡ ಹಾಡಿ,
ನಲಿದೇವು ನಾವು ಸಂಕ್ರಮಣಕ.
ಹೊಲದೊಳಗ, ಭೂ ತಾಯಿ ನಕ್ಕಾಳ.
ಊರ, ಕಷ್ಟ ಮರೆಸಾಳ.
ಹಿರಿಯರು, ಬಾಯ್ತುಂಬ ನಕ್ಕಾರ.
ಎಷ್ಟು ಚಂದ ಕಾಣಸ್ತಾದ, ಊರ ಕೇರಿ ನೋಡ
ಸಂಕ್ರಮಣ ಅಂದ್ರ ಹೀಂಗಾ ನೋಡ ಅಂದಾರ.
ಸಂಕ್ರಮಣ ಅಂದ್ರಾ, ಸುಗ್ಗೀ..
ಸುಗ್ಗೀ, ಅಂದ್ರ ಸಂಕ್ರಮಣ.
ಪವನ ಕುಮಾರ ಕೆ ವಿ ಬಳ್ಳಾರಿ
- PavanKumarKV
02 Nov 2019, 07:57 pm