ಮಾಯಾ ನಗರಿಯ ಮಾಯದ
ಬಲೆಗೆ ಜೆಡರ ಹುಳುವಿನಂತೆ
ಸೊತು ಬಿದ್ದೆ ಆದರೆ ಆ ಮಾಯಾ
ಬಲೆಯ ಸಂಚ್ಚು ತಿಳಿಯದಾದೆ.....
ಪಾಪಿ ಹೃದಯ ಬಲೆಯಲ್ಲಿಯೆ ಸಿಕ್ಕಿ
ಯೋಚಿಸತೊಡಗಿತ್ತು ಕ್ಷಣಕಾಲದಲ್ಲೇ
ಗೋರವಾಯಿತು ಇದು ಮಾಯಾದ
ಹೇಸರಿನ ಪ್ರೇಮದ ಬಲೆಯಾಗಿತ್ತು....
ಆ ಮಾಯಾನಗರಿಯ ರಾಣಿಯ ಜೊತೆ
ಮಾತನಾಡ ತೊಡಗಿದೆ ಹಾಗೆಯೆ ಏಕಾಂತ
ದಲ್ಲಿರುವಾಗ ನಾಮ್ಮಿಬ್ಬರ ಮಾತಿನ ನಡುವೆ
ಸಾಕೇದ್ದೇಳು ಸೊಮಾರಿನನ್ ಮಗನೆ ಆನ್ನೊ
ಸುಪ್ರಭಾತ ಕೇಳತೋಡಗಿತು...
ಈ ಸೂಂದರವಾದ ಸಮಯದಲ್ಲಿ
ಯಾರದು ಈ ಸುಪ್ರಭಾತ ಏಂದು ಕಣ್ತೆರೆದು
ನೋಡಿದರೆ ಭಾಸ್ಕರನ ಹಾಗೆ ಕೆಂಪೆರುತ್ತ
ಕೈಯಲ್ಲಿ ಪೋರಕೆಏಂಬ ಆಯುಧ ಹಿಡಿದಿತ್ತು
ಆ ಕ್ಷಣವೆ ಕಕ್ಕಬಿಕ್ಕಿಯಾಗಿ ಪಲಾಯನ ಮಾಡಿದೆ.......ವಿನೋದ್ ರಾಥೋಡ್
ಯಾರೋ ಅನ್ನಿಸಿದ್ದು ಇವ್ನೆ ಅಂತ.
ನೀನು?
ನಾನು ಅನ್ಕೊಂಡಿದ್ದು ಇವ್ನೆ ಅಂತ.
ಇವಾಗ ಏನ್
ಅನ್ಕೊಂಡಿದೀಯೋ?
ಇವ್ನೆ. ಇವ್ನಲ್ಲ.ಇವ್ನೆ ಇವ್ನಲ್ಲ ಎರಡೂ ಇವ್ನೆ. ಇವ್ನೆ, ಇವ್ನಲ್ಲ ಎರಡೂ ಇವ್ನಲ್ಲ. .
ಮುಂದೆ ಏನ್ ಅನ್ಕೋತಿಯೋ?
ನಿಂಗೇಕೆ? ನಂಗೇಕೆ?.............
ನಮ್ಮೂರಿನ ಗುಡಿಯಲ್ಲಿರೋ ಅವ್ನು
ಯಾಕೋ ದೇವ್ರು ಅನ್ನುಸ್ತಿಲ್ಲ ನನ್ಗೆ.
ಇನ್ಯಾರು ಅನ್ಸ್ತಾವ್ರೆ?
ಕಾಗದದ ಮೇಲೆ ನಾನು ಬಿಡಿಸಿದ ಇವ್ನು
ನನ್ಗೆ ದೇವ್ರು ಅನ್ನಿಸ್ತಿದೆ.
ಏನಿವಾಗ?
ಮುಟ್ಟಲಿಲ್ಲ ಮುದ್ದಾಡಲಿಲ್ಲ ಒಂದಿನನೂ ಅವ್ನನ್ನು.
ಮುಟ್ಬೇಕಿತ್ತು, ಮುದ್ದಿಸಬೇಕ್ಕಿತ್ತು?
ಹೆದ್ರುಸ್ತಿದ್ನಲ್ಲಪ್ಪ ಬೆಂಕಿ ಹಿಡ್ಕೊಂಡು
ಯಾರು?
ಅಂಗಿಬಿಚ್ಕೊಂಡು, ದಾರಾಸುತ್ಕೊಂಡು
ನಿಂತಿದ್ನಲ್ಲ ಅವನು ನಮ್ಮಿಬ್ಬರ ಮಧ್ಯೆ..
ಹೌದಲ್ವಾ !ಮತ್ತೆ ಇವನು?
ಮುಟ್ಟುತಿನಿ, ಮುದ್ದಾಡ್ತಿನಿ
ನಾನು?
ನನ್ನ ಕೇಳೋ ಅವಶ್ಯಕತೆನೇ ಇಲ್ಲಾ.
ಯಾರ್ಬೇಕಾದ್ರು ,ಯಾವಾಗಬೇಕಾದ್ರು
ಆಮೇಲೆ?
ಬೆಂಕಿ ಹಿಡ್ಕೊಂಡಿರೋ ಧ್ವನಿ ಇಲ್ಲ
ನಮ್ಮಿಬ್ಬರ ಮಧ್ಯೆ.
ಮತ್ತೇನಿದೆ?
ಗಾಳಿ ಇದೆ...
ಏನು?
ಗಾಳಿ ಇದೆ. ಗಾಳಿ ಇಲ್ಲ. ಗಾಳಿ ಇದೆ ಇಲ್ಲ ಎರಡೂ ಇದೆ ಗಾಳಿ ಇದೆ ಇಲ್ಲ ಎರಡೂ ಇಲ್ಲ........
ಒಬ್ಬರ ಮುಂದೆ ಮತ್ತೊಬ್ಬರನ್ನ ಹೊಗಳಿ
ಮತ್ತೊಬ್ಬರ ಮುಂದೆ ಇನ್ನೊಬ್ಬರನ್ನ ತೆಗಳಿ ಇನ್ನೊಬ್ಬರ ಮುಂದೆ ಮಗದೊಬ್ಬರನ್ನ ಸಿಕ್ಕಿಸಿ
ಮಗೊದೊಬ್ಬರ ಮುಂದೆ ಸಿಕ್ಕರೊಬ್ಬರನ್ನ ಹಿಕ್ಕಿಸಿ,
ಗೆದ್ದೇವೆಂದು ಭ್ರಮೆಯ ತಮ್ಮ ಮುಖವನ್ನೇ ಕ್ಲಿಕ್ಕಿಸಿ,
ಬಾಗುವಾತನ ಮುಂದೆ ಬಿಗಿದಿವೆಂದು ಬಗ್ಗು-ಬಡಿ ಯುವವನೆ ಪ್ರಸ್ತುತ ಕಲಿಯುಗದ "ಅನುಭವಸ್ತ"
ಸಂಜೆ ತಂಗಾಳಿ
ನನ್ನ ನೋಡಿ
ಮುಸಿ ಮುಸಿ ನಕ್ಕು
ಕೆನ್ನೆ ಹಿಂಡಿ
ಕೈಯ ಹಿಡಿದು
ಕಿವಿಯಲೇನೊ
ಪಿಸುಗುಟ್ಟಿದಂತಿದೆ
ನೀನೇನಾದರೂ
ಹೇಳಿ ಕಳುಹಿಸಿರುವೆಯಾ?
ಬಲು ತುಂಟ ಅವನು
ಅತ್ತ ಇತ್ತ ಸುಳಿದು
ನಿನ್ನ ಹೆಸರ ಕರೆದು
ನಾಚಿಕೆಯಲಿ ಮೂಡಿದ
ತುಟಿಯಂಚಲೊಂದು
ಕಿರುನಗೆಯ ಕಂಡು
ಹಕ್ಕಿಗಳ ಕಳುಹಿಸಿರುವ
ಸಂಜೆಗೆಂಪ ತರಲೆಂದು
ನನ್ನ ಕೆನ್ನೆಗೆಂದು
ಕಾಡಿ ಬೇಡಿದರು
ಕಾಡಿಸುತಿರುವ ಹೇಳದೆ
ಅವನು ಕದ್ದು ತಂದ
ನಿನ್ನೊಡನೆ ನಾನಿರದ
ಘಳಿಗೆಯಲಿ ನೀನು
ನಿಟ್ಟುಸಿರಿನೊಳಗೆ ಅವಿತಿಟ್ಟು
ಅವನ ಕಿವಿಯೊಳಗೆ
ತೇಲಿಬಿಟ್ಟ ನಿನ್ನೊಲವಿನ
ಚೆಚ್ಚಗಿನ ಪ್ರೇಮಸಂದೇಶವನು