ಕನ್ನಡ ಕಣ್ಮಣಿ ಪ್ರೀತಿ ಮುದ್ದಿನ ಮನಿ ನನ್ನ ತಂಗಿ ?
ಅಕ್ಕರೆಯಲ್ಲಿ ಸಾಟಿ ಇಲ್ಲ ಪ್ರೀತಿಯಲ್ಲಿ ನನ್ನ ತಂಗಿಯಷ್ಟು ಬಂದು ಇಲ್ಲ
ಕಾಳಜಿ ತೋರುವಲ್ಲಿ ನಿನ್ನ ಹಾಗೆ ಯಾರು ಇಲ್ಲ ??
ಕೊನೆವರೆಗೂ ಕಾಪಾಡಿಕೊಳ್ಳುವೆ ನನ್ನ ಮುದ್ದಿನ ತಂಗಿಯನ್ನು ?
ಮಮತೆಯ ಮಾತಿನಲ್ಲಿ ಪ್ರೀತಿ ಹಂಚುವ ಸಂಬಂಧದಲ್ಲಿ ನನ್ನ ತಂಗಿಯ ಮೇಲುಗೈ
ಈ ಸಂಬಂಧ ಕಲ್ಪಿಸಿಕೊಟ್ಟ ನನ್ನ ತಂಗಿಗೆ ಹುಟ್ಟು ಹಬ್ಬದ ಶುಭಾಶಯಗಳು ನಿನ್ನ ಜೀವನದಲ್ಲಿ ಯಾವಾಗಲೂ ಸುಖ ಶಾಂತಿ ನೆಮ್ಮದಿ ಇರಲಿ ಎಂದು ನಾ ಆಶಿಸುತ್ತೇನೆ ಒಳ್ಳೆಯ ಜ್ಞಾನ ಉಳ್ಳ ನನ್ನ ತಂಗಿ ಉನ್ನತಕ್ಕೆ ಬೆಳೆಯಲಿ,??
ಅಂತರರಾಷ್ಟ್ರೀಯ ಪರ್ಪಲ್ ಫಸ್ಟ್ ಗೋವಾದಲ್ಲಿ,
ನಾವು ಕಳೆದ ಸಮಯವನ್ನು ವರ್ಣಿಸಲಾಗದು ಪದಗಳಲ್ಲಿ.
ತಂತ್ರಜ್ಞಾನದ ಪಕ್ಷಿ ನೋಟ ಅಡಗಿತ್ತು ನಾವು ಸ್ಪರ್ಶಿಸಿದ ಅಪ್ಸೇಸೇಬಲ್ ಡಿವೈಸ್ಗಳಲ್ಲಿ,
ನಮ್ಮ ಸ್ವಾಭಿಮಾನದ ಕಣ್ಣಾಗಬಲ್ಲ ಸಾವಿ ರಾರು ವಸ್ತುಗಳು ಮಿಂಚುತ್ತಿದ್ದವು ಕೈಗೆತಕದ ರೇಟಿನಲ್ಲಿ.
ಪರ್ಪಲ್ ಬಣ್ಣದ ಬ್ಯಾನರ್ಗಳ ಹಂದರಗಳಲ್ಲಿ,
ಪ್ರಾಯೋಗಿಕ ಪ್ರದರ್ಶನದ ಮಾಹಿತಿಯ ಚಿತ್ತಾರ ಚಿಮ್ಮುತ್ತಿತ್ತು ಅನುಭವಸ್ಥರ ಮಾತುಗಳಲ್ಲಿ.
ಆರ್. ಪಿ. ಡಬ್ಲ್ಯೂ. ಡಿ. ಕಾಯಿದೆ ಕಲ್ಪಿಸಿದೆ ಸರ್ವರಿಗೂ ಸಮಾನ ಶಿಕ್ಷಣ,
ಅದರಂತೆ ವಿವಿಧ ತಂತ್ರಗಳ ಅಳವಡಿಸಿ ನಾವು ಬೋಧಿಸಿ ಮಾಡಬೇಕಿದೆ ಮಕ್ಕಳ ಭವಿಷ್ಯ ನಿರ್ಮಾಣ.
ಹಲವು ಹಂತದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳಾದವು ತಜ್ಞರು ಮಂಡಿಸಿದ ವಿಷಯಗಳು,
ಸುಗಮ್ಯತೆ ಸೃಷ್ಟಿಸುವ ಮನಗಳಿಗೆ ಮುನ್ನುಡಿಯಾದವು ಅಲ್ಲಿ ಕೇಳಿದ ಉಪನ್ಯಾಸಗಳು.
ವೀಕ್ಷಕರ ಆಹ್ವಾನಿಸುತ್ತಿದ್ದವು ಮನರಂಜಿಸುವ ಸಾಂಸ್ಕೃತಿಕ ಚಟುವಟಿಕೆಗಳು,
ಸ್ವಯಂ ಸಂತಸ ಪಡೆಯಲು ಸಿದ್ಧವಾಗಿದ್ದವು ವಿಭಿನ್ನ ಕ್ರೀಡೆಗಳು.
ತನ್ನ ತಂದೆ =ತಾಯಿಗೆ ಮಗಳಾದವಳು
ಗಂಡನಿಗೆ ಹೆಂಡತಿಯಾಗಿ ಬಂದವಳು
ಅವಳು ಮಗ =ಮಳಿಗೆ ಜನ್ಮ ನೀಡಿದವಳು
ಅತ್ತೆಗೆ ಮಗಳಾದವಳು
ಮಾವನಿಗೆ ಸೊಸೆಯಾದವಳು
ಮಕ್ಕಳಿಗೆ ಪ್ರಪಂಚವಾದಗಳು
ಪ್ರೀತಿಯಲ್ಲಿ ಸೌಕಾತಿಯಾದವಳು
ಬಡತನದಲ್ಲಿಯೇ ಹೆಚ್ಚು ಪ್ರೀತಿ ತೋರಿಸಿದಳು
ತನ್ನ ನೋವು ಗಳಿಲ್ಲ ಮುಚ್ಚಿಟ್ಟ ಶ್ರೀಮಂತೇ
ತನಗಾಗಿ ಏನನ್ನು ಬಯಸದವಳು
ಮನೆಯಲ್ಲಿ ತನ್ನ ಮುಖ್ಯ ಪಾತ್ರ ವಹಿಸಿದವಳು
ತನ್ನ ಆಸೆ ಬಯಕೆಗಳನ್ನು ಬದಿಗಿಟ್ಟವಳು
ಹಗಲು ರಾತ್ರಿ ಎನ್ನದೆ ಮನೆಯಲ್ಲಿಯೇ ದುಡಿದವಳು
ತನ್ನ ಜೀವನವನ್ನು ಬಿಟ್ಟು ತನ್ನವರಿಗಾಗಿ ಮುಡುಪಾಗಿಟ್ಟವಳು
ಅವಳೇ ನನ್ನವ್ವ
ಹಾದು ಹೋದ ಕಣ್ಣುಗಳು
ಆಡಿ ಹೋದ ಮೌನ ಮಾತು
ಕಿವಿಗಳು ಶ್ರವಿಸದಿರಬಹುದು
ಭಾವನೆಗಳಿಂದ ಭಾರವಾದ
ಬಡ ಹೃದಯದ ಗತಿಯೇನು?
ನನ್ನದೂ ಒಂದು ಬದುಕು,
ಜನರಲೆಯುವ ಅಳತೆ ಕೋಲಿನ
ಬಳಕೆಗಷ್ಟೇ ಉಪಯೋಗಕಿರುವವನು
ಅನ್ನುವವರು ಅನ್ನಲಿ ಎನ್ನಬಹುದಿತ್ತು
ಕಣ್ಣುಗಳು ಸುಮ್ಮನಿರಬೇಕೇ
ಸಾತು ನೀಡುವ ಪ್ರಿಯ ಮಿತ್ರ
ಕತ್ತಲ ಇರುಳಿನ ಆಣೆ,
ಚಿಮ್ಮುವ ಕಣ್ಣ ಧಾರೆಯ ರಭಸಕೆ
ಗಲ್ಲದಿ ತಟಸ್ಥವಾದ ಮೊರೆ
ಎಲ್ಲಿ ನಿಯಂತ್ರಣ ತಪ್ಪುವುದೋ
ಎನ್ನುವ ಭಯ ಎನಗೆ!
ಮನದಲೇ ಸುಕ್ಕುಹಿಡಿದ
ಭಾವನೆಗಳ ರಾಶಿಗೆಲ್ಲಿದೆ ಬೆಲೆ?
ಬಳಿ ಸುಳಿವ ಸಾವಿರ
ಆಲೋಚನಾ ಬಳ್ಳಿಗಳ ತೋಟಕೆ
ನೀರ ಹುಯ್ದು ಹಾಯುವ ಗಾಳಿ ನಾನು,
ಹಿಡಿಯಲೆತ್ನಿಸಿ ಸೋತೂ ಸೋಲದೆ
ಉದುರುವ ಬಣ್ಣದ ಎಲೆಯನು
ಕುಳಿತು ಕಾಯುತಿರುವೆನು ಇನ್ನೂ
ಬಣ್ಣ ಬಣ್ಣಗಳ ಚಿಟ್ಟೆಗಳೆ
ಪುಷ್ಪಗಳ ಮಕರಂದ
ಹೀರಲು ಹೊರಟಿಹೆಯಾ
ಸದ್ದನು ಮಾಡದೆ ಸುಗ್ಗಿಯ ಮಾಡುತ
ನಡೆದಿದೆ ನಿನ್ನಯ ಝoಕಾರ.
ಹಾರುತ ತೇಲುತ ರಾಗವ ಹೇಳುತ
ತನ್ಮಯಳಾದೆ ಈ ದಿನ ಸುದಿನ
ಮಕ್ಕಳು ನಿನ್ನ ಹಿಂಬಾಲಿಸುತ
ಹಿಡಿಯಲು ಹೊರಟವು ಮುಂದಾಗಿ
ನಿನ್ನಯ ಅಂದವು ಸೊಬಗಿನ ಚಂದವು.
ಕಣ್ಮನ ಸೆಳೆದವು ಕಿವಿ ಗಿಂಪನ್ನು ತಂದವು.