Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಆಗಾಗ ಅರಳುವ
ತುಟಿಯಂಚಿನ ಈ ನಗು
ಬಾಡಿ ಹೋಗುವ ಮುನ್ನ
ನೀ ಬಂದು
ನೀರ ಹನಿಸಿ ಹೋಗು,
ಚಿಗುರುವ ನವಿರಾದ
ಕನಸುಗಳು
ಚಿವುಟಿ ಹೋಗದಂತೆ
ಜೋಪಾನವಾಗಿ
ಕಾಪಿಟ್ಟುಕೊ...
- ಅಕ್ಷತ
04 Jan 2020, 12:06 am
ಮುಂಡಿಗೆ ಪದ್ಯ-೦೨
__________________
ಬರುವಾಗಲದು ಬಿಂಕು ಬಿಣ್ಣಾಣದ ಪಾತರಗಿತ್ತಿ
ಅರಮನೆಯಂದದಿ ಸೊಗಸು ವಯ್ಯಾರವ
ಕಂಡು ಹಿಂಜರಿಯದೆ ಬಂದು ನೆಲೆಸಿಹುದು
ನೊಂದು ಸಾಗುವುದು ಈ ಭೂಮಿ ಮೇಲೆ!
ಹಿಂಸೆಯ ತಾಳದ ತಂಬೂರಿಯ ಮೀಟುತ
ದಿನಗಳನೆನಿಸಿ ಮುಂದೆ ದೂಡುತ್ತ
ಎಷ್ಟು ದಿನವಿದಕೆ ಬಾಯಾರಿಕೆ; ಮೇಲೆ ಬಿಸಿ ತಾಪ
ನೂರ್ಮಡಿಲು ಗೆದ್ದಿಹುದು;
ಬಂದು ಒಂದೇ ಸವನೇ ಬಿಕ್ಕುತ್ತಿದೆ.!!
ಇಂದಿಗೆ ನೊಂದಿಹುದು, ನಾಳೆ ಎಂಬುದ ಕನಸು
ಮತ್ತೆ ತಡೆವರಿಸಿ ಬಾಯಾಡಿಸುತ್ತಲಿದೆ
ಮುಂದೆ ನಲಿವುದು ಹಿಂಬದಿಯ ಬಯಲಲ್ಲಿ
ಕೆಸರುಗದ್ದೆಯ ಓಟ ;ಮುಂದೈದು ಪಂಚ ತಾರೆಯರು
ಆರತಿಯ ಬೆಳಗುತಿಹರು!!!
ಸೊಂಟ ಕಟ್ಟಿದ ಭಾಷೆ,ವಿಧ ವಿಧದ ತೃಷೆ ನಮಗೆ
ಬಲಿಯ ಕೊಡಲವರು ಆಡುವರು ಮೃದುಭಾಷೆ
ಆರು ನಾರಿನ ಹಗ್ಗ ಸೊಂಟಕ್ಕೆ ಬಿಗಿದಿಹರು
ಬಿಡಿಸೆಂದು ಭಗವಂತನ ಬೇಡುತಿಹರು!!!!
ಒಂದೇ ಮಗ್ಗುಲಲ್ಲಿ ನಾಲ್ಕೈದು ಮಕ್ಕಳು
ಎಣಿಕೆ ಮಾಡುವುದರೊಳಗೆ ಜೀಕುತಿಹರು
ಎಡದಂಡೆ ಬಲದಂಡೆ ಬಯಲು ಸೀಮೆಯಲಿ
ನಾರಿ ತಾ ವಸ್ತ್ರವಿಡಿದು ಕುಣಿದಿಹಳು!!!!!
ಎದೆ ಅಂಗಿ ಹರಿದಿರಲು ಕಲೆಯೊಂದು ಕಲಿತು
ಬಲಿತ ದೇಹದ ಭಾಗ ಭಾವಕ್ಕೂ ನಿಲುಕದು
ಎದೆಯ ತೂಕದ ಮುಂದೆ ಮತ್ತೆ ಇನ್ನೇನು?
ಕತ್ತು ಹಿಸುಕುವ ಉದ್ಯೋಗದಿ ಭ್ರಷ್ಟ ಭಾವ!!!!!!
ನಯ ವಿನಯದೆದಿರು ಜಾನಕಿಯ ಸೂಚನೆ
ಹಿಂದೆ ಕೈಕೆಯಿಯ ಶಪಥ ಪಟ್ಟಿ
ಮುಂದೆ ಕನ್ಗಳ ಸೊನ್ನೆಯನು ಬರೆಯದೆ
ನೊಂದ ಬಕುತನಿಗಿನ್ನೂ ನಾಲ್ಕು ಗೇನು!!!!!!!
--- ಸುರೇಶ ಜಕಾತಿ.ಜಮಖಂಡಿ
8746086658
ವಿಳಾಸ:- ಶ್ರೀಹರಿ ನಿಲಯ,ಮಹಾಲಿಂಗೇಶ್ವರ ಕಾಲೊನಿ.ಜಮಖಂಡಿ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕು- 587301
- ಸುರೇಶ ಜಕಾತಿ.ಜಮಖಂಡಿ
03 Jan 2020, 11:15 pm
ಮುಂಡಿಗೆ ಪದ್ಯ-೦೧
____________________
ನಿದಿರೆಯೊಳಗೊಂದು ಅಮಲು
ಕೊಡಲು ಬಂದಳು ತಾಂಬೂಲು
ಬೆಚ್ಚಿ ಬಿದ್ದಾಗ ಇಳಿ ಹೊತ್ತು ಸಂಜೆ
ಅಕ್ಕರೆಯ ತೋರಲವಳೇ ಇಲ್ಲ.
ಬಿಕ್ಕುತ್ತ ಬಿದ್ದಿತ್ತು ಬೆಕ್ಕು;ಹೊಸ್ತಿಲೊಳಗೆ
ಹಾಲು ಚೆಲ್ಲಿದ ಪಾತ್ರೆ
ಶಿವನಿಗಂಟಲೇ ಇಲ್ಲ ಬಿಲ್ವ ಪತ್ರೆ
ಹಿಗೇಕೆ ಎಂದು,ಮನನೊಂದುಕೊಂಡು
ಊರುರು ತಿರುಗಿದ ಮಾತು
ಎನೆಯಿಲ್ಲದೆ ಕೊನೆಗೊಂಡು
ನೆಲಕುರಳಲೇ ಇಲ್ಲ.
ಬಾಯೊಳಗೆ ಬಾಯಿಟ್ಟು
ತಾಂಬೂಲು ತಿಂದ ಎಂಜಲು
ದೀಪದೊಳಗೆ ಅಡಗಿದ
ಎಣ್ಣೆ ಬತ್ತಿಯಾದುದ ಕಂಡ
ಸಂತ ಬೈರಾಗಿಯ ಮಾತು
ಸುಳ್ಳಾಗಲಿಲ್ಲ .
ಇನಿತೆಂದು ಮನನೊಂದು
ಸೂರ್ಯನಾಡುವ ಮಾತು
ಬಲು ಸೊಗಸು ಇಹುದೆಲ್ಲ
ಕೇಳಲರಿಯಲು, ಇಲ್ಲಿ ಜನರೇ ಇಲ್ಲ!!!
--- ಸುರೇಶ ಜಕಾತಿ .ಜಮಖಂಡಿ
8746086658.
- ಸುರೇಶ ಜಕಾತಿ.ಜಮಖಂಡಿ
03 Jan 2020, 01:21 pm
ಮನದೊಳಗೆ ಆರಾಧಿಸಿ ಹೃದಯತುಂಬಿ ಪ್ರೀತಿಸಿ ನನ್ನ ಕೈ ಹಿಡಿದವರು ನನ್ನ ದೇವರು ತನ್ನವರ ಮರೆಮಾಚಿ ಇಷ್ಟ ಸತಿ ಬೇಕೆಂದು ಅರಸಿ ಬಂದವರು ನನ್ನ ದೇವರು ನನ್ನ ಕಷ್ಟವ ಕಡಿದು ತ್ಯಾಗ ಸೇವೆಯಲ್ಲಿ ದುಡಿದು ಬದುಕಿಗೆ ಆಶ್ರಯವ ನೀಡಿದವರು ಸರ್ವ ಸಕಲವ ನನಗೆ ಕ್ಷಣದಲ್ಲಿ ನೀಡುತಲಿ ಜಗದೊಳಗೆ ನನ್ನ ಹೆಸರ ಹುಡುಕು ತಿಹರು ಬದುಕಿಗೆ ಗುರುವಾಗಿ ಹೃದಯದಲಿ ನೆಲೆಯಾಗಿ ಶಾಶ್ವತದ ಪ್ರೀತಿಯ ಬಯಸುತಿಹರು ಮನ ಬಯಸೋ ಪತಿಯಾಗಿ ಮಣಿ ಯೊಳಗೆ ಮುತ್ತಾಗಿ ಸಿಂಧೂರ ತಿಲಕ ದಲ್ಲಿ ಮಿರುಗುತಿಹರು ಮುತ್ತು ರತ್ನಗಳ ಬಯಕೆ ನನಗಿಲ್ಲ ವೈಭವದ ಬದುಕಿನಲ್ಲಿ ಅವರ ಜೊತೆ ನಾನಿರಲು ನಂರತೆಯ ಮನದೊಳಗೆ ಮಗುವಾಗಿ ಅವರಿರ ಲೂ ಸಿರಿ ಸುಖದ ಕೊರತೆ ನನಗಿಲ್ಲ ಸಂತಸದ ಬದುಕಿಗೆ ಹಾರೈಸಿ ರೀ ಎಲ್ಲಾ
- nagamani Kanaka
02 Jan 2020, 08:12 pm
ಹೋಗದಿರು ಗೆಳೆಯ ಈ ಜೀವವಾ ತೊರೆದು
ಮಾಡಿದ ತಪ್ಪುಗಳ ಕ್ಷಣಕ್ಷಣಕು ನೀ ತಿವಿದು..
ಕಾಡದಿರು ಇನಿಯ ನೀ ಪ್ರೀತಿಯಾ ಬೆಸೆದು
ಈ ಜೀವನಾ ಕಳೆವೆ ನಿನ ತೋಳಲಿ ಉಳಿದು..
ಹೇಳದಿರು ಗೆಳೆಯ ನೀ ಬೇಡ ಇನ್ನೆಂದು
ಹೇಳಿದ ಮರುಕ್ಷಣವೆ ನನ ಉಸಿರ ಕೊನೆ ಅಂದು..
- ಸಾಹಿತ್ಯಶ್ರೀ
02 Jan 2020, 01:24 am
ಶಾಂತಾ
ಬಿಗಿಮಾಡಿಕೋ
ಕೊಡಪಾನ..
ಬೀಳದಂಗೆ
ನೋಡಿಕೊ
ಜೋಪಾನ..
ಪುಂಡರ ಮೇಲೆ
ಇರಲಿ ಸ್ವಲ್ಪ
ಗಮನ..
ಎಚ್ಚರ ತಪ್ಪಿ
ಬಿದ್ದರೆ ಮಾಡ್ತಾರೆ
ಅವಮಾನ..
- ಅಕ್ಷತ
01 Jan 2020, 11:56 pm
ನೀ ಹೂವಂತೆ......
ನಾ ದುಂಬಿಯಂತೆ......
ನಿ ಎಷ್ಟೇ ದೂರಹೋದರು.....
ನ ಬರುವೇ.....
ನಿನಗಾಗಿ ಕಾಯುವೇ....
ನಿನ್ನ ನೆನಪಲ್ಲೆ ಸಾಯುವೇ......
- Ravi Jackie
01 Jan 2020, 09:52 pm
ಹೊಸ ವರುಷ.... ಹೊಸ ಹರುಷ....
ನೂರಾರು ಕನಸು.... ಬಯಸುತಿದೆ ಮನಸು.....
ಆಗುತ್ತಿಲ್ಲ ಯಾವುದೊಂದು ನನಸು......
ಓ ದೇವರೇ ಯಾಕೆ ನಿನಗೆ ನಮ್ಮ ಮೇಲೆ ಮುನಿಸು.....
ಕರ ಮುಗಿದು ಬೇಡುವೆನು ನಮ್ಮನ್ನು ಹರಸು.....
ಆದಷ್ಟು ಬೇಗ ನಮ್ಮಿಬ್ಬರನ್ನು ಸೇರಿಸು......
ಹೊಸವರ್ಷದ ಶುಭಾಶಯಗಳು ...... ಒಳ್ಳೆದಾಗಲಿ.....
- MkiranJadhav
01 Jan 2020, 06:01 am
ಗೋದಿ ಬಣ್ಣದ ಮೈಯವಳು,
ಸಂಪಿಗೆಯ ಮೂಗಿನವಳು,
ಮಿನುಗುವ ತಾರೆಗಳ ಥರ ನಗುವವಳು....
ಮುಂಜಾನೆಯೇ ಕೆಲಸ ಶುರು ಮಾಡುವಳು,
ಮಕ್ಕಳ ಪೋಷಣೆ ಮಾಡುವಳು,
ಪತಿಯ ಹಿತ ಬಯುಸುವಳು....
ಮನೆಯ ಸ್ವಚ್ಛತೆ ಕಾಪಾಡುವಳು,
ಕುಟುಂಬದ ಆರೋಗ್ಯ ಯೋಚಿಸುವಳು,
ದೇವರಲ್ಲಿ ಎಲ್ಲರ ಕುಶಲತೆಯ ಕೋರುವಳು....
ನನ್ನ ಪ್ರೀತಿಯ ಕುಸುಮಳಿವಳು,
ಕಷ್ಟವನ್ನೆಲ್ಲ ನುಂಗುವಳು,
ತನ್ನ ಬಗ್ಗೆ ಯೋಚಿಸದೆ ಎಲ್ಲರ ಗಮನ ಹರಿಸುವವಳು....
ಮುಸ್ಸಂಜೆಯ ಮನೆಯ ಲಕ್ಷ್ಮಿ ಇವಳು,
ಮಡಿಯಲ್ಲಿ ದೀಪ ಹಚ್ಚುವಳು,
ಮನೆಯಲ್ಲ ಬೆಳಗುವವಳು...
ರುಚಿಯಾದ ಅಡುಗೆ ಮಾಡುವಳು,
ಪ್ರೀತಿಯಿಂದ ಬಡಸುವವಳು,
ನಮ್ಮೆಲ್ಲರ ಕ್ಷೇಮ ನೋಡುವವಳು
ಮಿನುಗುವ ತಾರೆಯ ಹಾಗೆ ನಗುವವಳು...
ನನ್ನವಳು ಇವಳು ನನ್ನವಳು
ನನ್ನೆದೆಯ ಕುಸುಮಳಿವಳು.....
- yogi
30 Dec 2019, 08:08 pm
ನಿನ್ನ ನಗುವಲ್ಲಿ ಏನೋ ವಿಶೇಷವಿದೆ
ನಿನ್ನ ಮಾತಲ್ಲಿ ಏನೋ ಕಾಳಜಿ ಇದೆ
ನಿನ್ನ ನೋಟದಲ್ಲಿ ಏನೋ ಮಿಂಚಿದೆ
ನಿನ್ನ ಪ್ರೀತಿಯಲ್ಲಿ ಏನೋ ಗಟ್ಟಿತನವಿದೆ
ನಿನ್ನ ಒಲವಲ್ಲಿ ಏನೋ ಬಿಟ್ಟಿರಲಾಗದ ಬಂಧವಿದೆ
ಅದಕ್ಕಾಗಿ ನಿನ್ನೊಲವ ನಗುವಿನ ಪ್ರೀತಿಯ ನೋಟಕ್ಕೆ ನಾ ತಲೆಬಾಗಿದೆ
- MkiranJadhav
30 Dec 2019, 10:34 am