Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರಳಿ ಬಾರದ ಊರಿಗೆ

ಕಾಲನ ಕಾಲಿಗೆ ನೀವು ಬಲಿಯಾಗಿ
ನನ್ನ ನೆನಪಲ್ಲಿ ಶಾಶ್ವತ ನೆಲೆಯಾಗಿ
ಎಲ್ಲವನ್ನೂ ಮರೆತು ಮರೆಯುವ ನನಗೆ
ನಿಮ್ಮ ಮರೆಯಲಾಗುತ್ತಿಲ್ಲ.
ಬದುಕಿಗೆ ನಿಮ್ಮ ಆಗಮನ
ಅವಿಸ್ಮರಣೀಯ ಆ ಕ್ಷಣ
ನಿಮ್ಮೊಂದಿಗೆ ಕಳೆದ ದಿನ
ಕಲಿತ ಜೀವನ ಪಾಠಗಳು
ನಾವು ಬದುಕಿರುವವರೆಗೂ ಉಸಿರಾಡುತ್ತವೆ
ಮರಳಿ ಬಾರದ ಊರಿಗೆ ತೆರಳುವ ಮುನ್ನ
ಒಂದೇ ಒಂದು ಸರಿ ನಿಮ್ಮೊಂದಿಗೆ
ಮಾತನಾಡಲೇ ಬೇಕಿತ್ತು ನಾನು........

- Pavankumar Honawad

13 Jan 2020, 12:51 pm

ಹೈಕುಗಳು

ಹೈಕು
•••••••
೧೪೩.
ಇಷ್ಟ ಪಟ್ಟ ಹೆಂಡತಿಗೆ
ಗಂಡ ವಿಚಿತ್ರವಾಗಿ ಕಂಡರೆ
ಅದು ಮದವೆಗೂ ಮುಂಚಿನ ಸಲುಗೆ.

೧೪೪.
ಅವಳು ಎಲ್ಲರಂತೆಯೇ
ಕಾಣುತ್ತಿರುವದು
ವ್ಯತ್ಯಾಸ ಗುರುತಿಸಲಾಗದ
ನತದೃಷ್ಟ ಗಂಡನ ಕೆಲಸ.

೧೪೫.
ಸಂಬ್ರಮದಲ್ಲಿ ತೊಡಗಿದಾಗಲೊಮ್ಮೆ
ಎದ್ದು ಎದ್ದು ಹೋಗುವವರು
ವೇದಿಕೆಯಿಂದ ವಂಚಿತರು.

೧೪೬.
ಸಂಭಾಷಣೆಯುದ್ದಕ್ಕೂ
ಮಾತು ಮರೆಸುವ ಜಾಯಮಾನ
ತಪ್ಪಿತಸ್ಥರೆಂದು ಒಪ್ಪಿಕೊಂಡ ಹಾಗೆ.

೧೪೭.
ನಿಜವಾದ ಸನ್ನಿವೇಶವೊಂದು
ಕಣ್ಣಿಗೆ ಬಿದ್ದಾಗ ಆಕಾಶದ ಅಗಲದಷ್ಟು
ನಮ್ಮ ಮುಖಸ್ತುತಿ.

೧೪೮.
ಸಮಬಲ ಮತ್ತು ಸ್ವಾರಸ್ಯಗಳೆರಡೂ
ಬಿಳಿಯ ಗೋಡೆಯ ಕೆಡಿಸಲು
ಇದ್ದಿಲಿನಿಂದ ಬರೆದ ಕಪ್ಪು ಅಕ್ಷರಗಳು.

೧೪೯.
ಹಿಂದಿನ ಮಹರ್ಷಿಗಳಿಗೆ
ವಿದ್ಯುತ್ ಇರದಿದ್ದರೂ
ಅವರ ಮಾತಿನ ಪ್ರಯೋಗ
ಇಂದಿನ ವಿದ್ವತ್ತನ್ನೂ ಅವಮಾನಿಸುವುದು.

೧೫೦.
ಸದಾವಕಾಶಕ್ಕೂ ಒಮ್ಮೆ
ಸ್ವಾತಂತ್ರ್ಯ ದೊರೆತರೆ
ಹಿಂದುಳಿದ ಹಳ್ಳಿಗಳೆಲ್ಲ
ನಗರಗಳನ್ನೂ ನಾಚಿಸುವವು.

೧೫೧.
ಸ್ವಾಧ್ಯಾಯ ನಮ್ಮ ದೈನಂದಿನ
ಬದುಕಿನ ಹಣ ಸೆಳೆಯುವ
ಎ.ಟಿ.ಎಮ್ ಇದ್ದ ಹಾಗೆ.

೧೫೨.
ಗಬ್ಬೆದ್ದು ನಾರುವ ನಗರಗಳು
ಹಿಂದಿನ ಪರಂಪರೆ ಮೀರಿಸುವಂತಿವೆ.

೧೫೩.
ಅಗಾಗ ಬೆನ್ನು ಮುಟ್ಟಿಕೊಳ್ಳುವ
ಆತುರ ಮುಖಕ್ಕೆ ಮುಖ ಕೊಡದ
ವಾಚಾಳಿಗಳ ವಾದ ವಿವಾದ.

೧೫೩.
ನಾವು ನೆನಪಿಸಿಕೊಂಡಾಗಲೊಮ್ಮೆ
ಮಾಂತ್ರಿ ಕ ಲೋಕದ ಪರಿಚಯ
ನಾವೆ ಹಚ್ಚಿದ ಮರಗಳು.

೧೫೪.
ಶುದ್ದೀಕರಣ ಪ್ರಕ್ರೀಯೆ
ಇಂದು ನಿನ್ನೆಯದಲ್ಲ
ಅದು ಹಿಂದಿನಿಂದಲೂ
ಹರಿದು ಬಂದ ಮತ ಸಂಪ್ರದಾಯ.

೧೫೫.
ಹುಬ್ಬೇರುವ ಮೊದಲು
ದಾರಿ ಕಾಣದು,ದಾರಿ ಸಿಕ್ಕಾಗ
ಜೊತೆ ಇರುವವರೆಲ್ಲರೂ
ಕಾಣದಾಗುವರು.

೧೫೬.
ಪೋಟೋ ತೆಗೆಯುವ
ಮೊದಲು ವೇದಿಕೆಯ ಮೇಲೆ
ಹಲ್ಲು ಕಿರಿಯುವ ವಿಧಾನ
ಬಹಳ ದಿನಗಳಿಂದ ರೂಢಿ ಇದೆ.

೧೫೭.
ಎಲ್ಲರೂ ನಮ್ಮವರೆಂದು
ಬೀಗುವ ಮೊದಲು ಪಕ್ಕದಲ್ಲೇ
ಇದ್ದವರನ್ನು ಒಂದು ಬಾರಿ ನೋಡಲು
ಮರೆಯದಿರಿ.

೧೫೮.
ಕೂಗಾಡಿ ಹಾಡುವ ಮೊದಲು
ದ್ವನಿ ಚೆನ್ನಾಗಿರಬೇಕಾದದ್ದನ್ನು
ವಾದ್ಯ ನುಡಿಸುವವರೂ ಅರಿತಿರಬೇಕು.

೧೫೯.
ವೇದಿಕೆಯ ಮೇಲೆ ಭಾಷಣ
ಮಾಡುವವರೆಲ್ಲರೂ ಒಂದಲ್ಲ ಒಂದು
ರೀತಿಯಲ್ಲಿ ವಿರಾಗಿಗಳು.

೧೬೦.
ಬೇಷರತ್ತಾಗಿ ವಾದ್ಯ
ನುಡಿಸುವವರೆಲ್ಲರಿಗೂ
ಮುಖಲಕ್ಷಣವಿರಬೇಕು.

‌‌ ‌‌‌‌‌ ‌‌// ಸುರೇಶ ಜಕಾತಿ.ಜಮಖಂಡಿ//
8746086658.

- ಸುರೇಶ ಜಕಾತಿ.ಜಮಖಂಡಿ

12 Jan 2020, 11:29 pm

ಅಮ್ಮ

ಹಂಸಾಗೆ ನಡೆ ಚೆಂದ
ಕೋಗಿಲೆಗೆ ದ್ವನಿ ಚೆಂದ
ನವಿಲಿಗೆ ನಾಟ್ಯ ಅಂದ
ಆದರೆ ನನ್ನ ಅಮ್ಮ ಎಲ್ಲದಕ್ಕಿಂತ ಚೆಂದ

- Bhavani.k.p Kp

12 Jan 2020, 06:51 pm

ಗುರು

ಗುರು ವನ್ನು ಪಡೆಯುವುದು
ಅಮೃತ ವನ್ನೂ ಸವಿದಂತೆ
ಗುರುವಿನೊಡನೆ ನಡೆಯುವುದು
ಜೇನನ್ನು ಸವಿದಂತೆ ಚಿರಕಾಲ ಕಲಿಸುವ
ಗುರುವನ್ನು ಮರಳಿ ಪಡೆಯುವುದು
ಮುಗಿಲಿನ ಚಂದ್ರನನ್ನು ಪಡೆದಂತೆ

- Bhavani.k.p Kp

12 Jan 2020, 06:47 pm

ಮೋಸಗಾತಿ ಹೆಣ್ಣೆ

ಹೇ ಹೆಣ್ಣೇ ನಿನಗೆ ಆಗಸಕ್ಕೆ
ಹಾರಿ ಚಂದಿರನ ತಂದು ಕೊಡುವೆ ಎಂದು
ಭೂಮಯಲ್ಲೇ ಸ್ವರ್ಗವ ತೋರಿಸುವನೆಂದು ಹೇಳಿದ ಸುಳ್ಳನ್ನು ನಂಬಿದ ನೀನು
ನಿನ್ನ ಮನಕ್ಕೆ ಚೂರು
ನೋವಾಗದಂತೆ
ಕಷ್ಟಗಳೆ ಕಾಣದಂತೆ
ನಮ್ಮ ಮನೆಯ ಮಗಳಂತೆ
ಗೌರವಿಸಿ ನನ್ನೆಲ್ಲಾ ಪ್ರೀತಿಯ
ನಿನಗಾಗಿ ದಾರೆಯೆರೆಯುವೆ ನೆಂದು
ಸಾರಿ ಸಾರಿ ಕೂಗಿ ಹೇಳಿದರು ನಂಬದೇ ಹೋದೆಯಲ್ಲೇ.
ಮನಸಾರೆ ಮೆಚ್ಚಿ ಪ್ರೀತಿಸುವವನಿಗೆ
ನೋವ ಕೊಟ್ಟು ಹೋದೆಯಲ್ಲೇ
ಹೇ ಹೆಣ್ಣೇ ನೀ ಶಾಶ್ವತ ವಾ.

✍ಕನಸುಗಾರ

- varadaraju@gmail.com

12 Jan 2020, 12:58 pm

ರೈಲು ಬಂಡಿ

ರೈಲು ಬಂಡಿ
•••••••••••••••

ಚುಕು ಬುಕು ರೈಲು ಬಂದಿತ್ತನ್ನಾ
ಟಕ....ಟಕ....ಸದ್ದನು ಮಾಡಿತ್ತನ್ನಾ
ಪಂವ....ಪಂವ.....ಪೀಪಿಯ ಊದಿತ್ತಣ್ಣ
ಊರಿಂದೂರಿಗೆ ಸಾಗಿತ್ತನ್ನಾ.

ಜೋಡಿ ಕಬ್ಬಿಣದ ಹಳಿಯ ಮೇಲೆ
ಬೋಲ್ಟ್ ನು ಬಿಗಿದ ಕಂಬಿಯ ಮೇಲೆ
ಗುಂಡನೆ ಗಾಲಿಗಳುರುಳುತ ರೈಲು
ಬೊಂಗಾ ಹೊಗೆಯನು ಬಿಟ್ಟಿತ್ತಣ್ಣ.

ಗಡ... ಗಡ... ಸದ್ದದು ಹಳಿಯ ಮೇಲೆ
ಡಬ್ಬಿಗಳನೇಕ ವಯ್ಯಾರದಿಂದಲೆ
ಹರಿಯುವ ಹಾವಿನ ರಭಸವಣ್ಣ
ಅಂಕು ಡೊಂಕಾಗಿ ಸಾಗಿತ್ತಣ್ಣ.

ರೈಲಿನ ಒಳಗೆ ಹೊರಡುವೆನೆಂದರೆ
ಬಗೆ ಬಗೆ ತಿಂಡಿಯ ಮೋಜಣ್ಣ
ತಿನ್ನಲು ಬಾರಿ ಮಜವಣ್ಣ
ರೈಲಿನ ಪ್ರಯಾಣ ಖುಷಿಯಣ್ಣ.

ಚಲಿಸುವ ಗಿಡಗಳ ಕಿಟಕಿಯ ನೋಟ
ಒಳಗೆ ಇರುವುದು ಕುಡಿಯುವ ನೀರು
ಮೆತ್ತನೆ ಸೀಟು,ಶೌಚಾಲಯಗಳು
ಅಲ್ಲೇ ಇರುವವು ನೋಡಣ್ಣ.

ಕೈಯ ಮಾಡಿದರೆ ನಿಲ್ಲದು ರೈಲು
ಸೀಟಿಯ ಹೊಡೆದರೆ ಸದ್ದು ಕೇಳದು
ಕೆಂಪು ದ್ವಜ ಒಂದೇ ನಿಲ್ಲುವ ಬಾವುಟ
ಹಸಿರು ದ್ವಜ ತೋರಿ ಹೊರಡುವುದಣ್ಣ.

ಕುದುರೆಯಂತೆ ಬಲ ಓಡುವದಣ್ಣ
ಹಾವಿನ ಮಾಟದಿ ಹರಿಯುದಣ್ಣ
ಕಾಲಲಿ ಬಿದ್ದರೆ ತುಳಿಯುವದಣ್ಣಾ
ಟ್ರಾಫಿಕ್ ತೊಂದರೆ ತಡೆಯುವದಣ್ಣ.

ಕಲ್ಲಿದ್ದಲನ್ನು ತಿನ್ನುವುದಣ್ಣ
ವಿದ್ಯುತ್ತನ್ನು ಕುಡಿಯುವುದಣ್ಣ
ರೈಲಿನ ಒಳಗೆ ಟಿ.ವ್ಹಿ.ಯು ಇರುವುದು
ನೋಡುತ ಸಾಗಲು ಮಜವಣ್ಣ.

// ಸುರೇಶ ಜಕಾತಿ.ಜಮಖಂಡಿ//
8746086658.

- ಸುರೇಶ ಜಕಾತಿ.ಜಮಖಂಡಿ

12 Jan 2020, 09:35 am

ಮಸಣದ ಹಾದಿ

ಹೂ ಒಂದು ಇಡಿದು ನಿನ್ನ
ಮುಡಿಗೇರಿಸಲು ನಾ ಓಡೋಡಿ ಬಂದನಲ್ಲಾ ಗೆಳತಿ
ನಿನ್ನ ಮುಡಿಗೆ ಬೇರೊಂದು
ಹೂ ಸೇರಿತಲ್ಲೆ
ನಾ ತಂದ ಹೂ ಮಸಣದ
ಹಾದಿಯ ಇಡಿದಿದೆ
ನನ್ನೆಲ್ಲಾ ಕನಸುಗಳ
ಬುತ್ತಿಯೊಂದಿಗೆ.
ನಿನ್ನ ಬದುಕಿಗೆ ಶುಭ ಹಾರೈಸುತ.

✍ಕನಸುಗಾರ

- varadaraju@gmail.com

11 Jan 2020, 08:54 pm

ಇನಿಯ ನೀ ಬಂದು ಸೇರು ನನ್ನ

ನಿನ್ನ ಬರುವಿಕೆಗೆ ಕಾದು ಕಾದು
ಸಾಕಾಗಿದೆ ಇನಿಯ
ನಾ ಎಷ್ಟು ಕಾಯಲಿ ನಿನ್ನ.
ಏನೂ ಅರಿಯದ ನನಗೆ
ನೀ ಮುಗ್ದ ಪ್ರೀತಿಯ ಕೊಟ್ಟೆ.
ಮಗುವಂತೆ ಜೋಪಾನ ಮಾಡಿದೆ.
ನನ್ನೆಲ್ಲಾ ಕಷ್ಟ ಸುಖಗಳಿಗೆ ಸ್ಪಂದಿಸಿದೆ
ನೀನೆ ನನ್ನ ಪ್ರಪಂಚ ಎಂಬಂತೆ
ನನ್ನ ಮನದಲ್ಲಿ ಬಂದಿಯಾದೆ
ನೀ ಇಂದು ನನ್ನಿಂದ ಮರೆಯಾಗಿರುವೆ.
ನನ್ನ ಕಣ್ಣೀರು ಜಾರಿ ಹೋಗುವ ಮುನ್ನ
ನೀ ಬಂದು ಸೇರು ನನ್ನ.

✍ಕನಸುಗಾರ

- varadaraju@gmail.com

11 Jan 2020, 08:01 pm

ಹೇ ದೇವತೆ

ಗುಳಿಗೆನ್ನೆಯ ನಗುವಿನ ಚೆಲುವೆ
ಎಲ್ಲರನೂ ನಗಿಸುತ್ತ ನೀ ನಗುತಿರುವೆ
ಆ ಚಂದ್ರಿರ ಮುಖದವಳು ನೀನು
ಕಾಡಿಗೆ ಕಂಗಳನ ನೋಟವನ್ನು ಬಿರುವೆ......

ನಿನ್ನ ಮುಖವು ಆ ಬೆಳದಿಂದಗಳ ಬಲೆಯಂತೆ
ತಿಂಗಳೊಮ್ಮೆ ಬರುವ ಹುಣ್ಣಿಮೆಯ ಚಂದ್ರಿರನಂತೆ
ನೀ ನಿದರೆ ಇಡೀ ಲೋಕವನ್ನೇ ಮರೆಸುವೆ
ಎದೆಂದೆಗೂ ಮರೆಯದಂತ ಚೆಲುವಿನ ಕಂಗಳು ನೀನು.....

ಆ ಆಗಸದಲ್ಲಿ ಕಮನಬಿಲ್ಲಿನವಳು
ಏಳು ಬಣ್ಣದವಳು ನೀನು
ನಿನ್ನ ನಗು ಆ ಆಕಾಶವೇ ಕರಾಗಿ ನಿಂತಿತು
ಈ ಭೂಮಿ ನೀ ಪಾದ ಸ್ವರ್ರ್ಸದಿಂದ ಪವನವಾಗಿತ್ತು...

ಹೇ ದೇವತೆಯ ಸುಂದರಿಯೇ
ನೀ ಎಲ್ಲಿವಿರುವೆ
ನಿನ್ನನ್ನು ನೋಡಲು ನನ್ನ ಕಣ್ಣು ಕಾಯುತ್ತಿದೆ
ಬೇಗ ಬಂದು ಸೇರಬರದೆ ಈ ನನ್ನ ಮನವನ್ನ......

- Ajay

11 Jan 2020, 06:17 am

ಕನಸಿನ ರಾಣಿ

ಮಲ್ಲಿಗೆ ಮುಖದ ರಾಜಕುಮಾರಿ...
ನಿನ್ನ ನಗೆಯು ಶೃಂಗಾರ ಸಿರಿ...
ಬೊಂಬೆ ಮಾತಿನ ಚೇಲುವೆ ನೀ,ಸಿಂಗಾರಿ...
ಕೇಳಿ ಮರೆತಿರುವೆ ನಾ ಮನೆಯ ದಾರಿ...

➡ ಬಸವರಾಜ್ ಕನ್ನೂರ...✍

- BasavarajKannur

10 Jan 2020, 08:51 pm