Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಂಡಿಗೆ ಪದ್ಯ-೦೧.

ಮುಂಡಿಗೆ ಪದ್ಯ-೦೧
____________________

ನಿದಿರೆಯೊಳಗೊಂದು ಅಮಲು
ಕೊಡಲು ಬಂದಳು ತಾಂಬೂಲು
ಬೆಚ್ಚಿ ಬಿದ್ದಾಗ ಇಳಿ ಹೊತ್ತು ಸಂಜೆ
ಅಕ್ಕರೆಯ ತೋರಲವಳೇ ಇಲ್ಲ.

ಬಿಕ್ಕುತ್ತ ಬಿದ್ದಿತ್ತು ಬೆಕ್ಕು;ಹೊಸ್ತಿಲೊಳಗೆ
ಹಾಲು ಚೆಲ್ಲಿದ ಪಾತ್ರೆ
ಶಿವನಿಗಂಟಲೇ ಇಲ್ಲ ಬಿಲ್ವ ಪತ್ರೆ
ಹಿಗೇಕೆ ಎಂದು,ಮನನೊಂದುಕೊಂಡು
ಊರುರು ತಿರುಗಿದ ಮಾತು
ಎನೆಯಿಲ್ಲದೆ ಕೊನೆಗೊಂಡು
ನೆಲಕುರಳಲೇ ಇಲ್ಲ.

ಬಾಯೊಳಗೆ ಬಾಯಿಟ್ಟು
ತಾಂಬೂಲು ತಿಂದ ಎಂಜಲು
ದೀಪದೊಳಗೆ ಅಡಗಿದ
ಎಣ್ಣೆ ಬತ್ತಿಯಾದುದ ಕಂಡ
ಸಂತ ಬೈರಾಗಿಯ ಮಾತು
ಸುಳ್ಳಾಗಲಿಲ್ಲ .

ಇನಿತೆಂದು‌ ಮನನೊಂದು
ಸೂರ್ಯನಾಡುವ ಮಾತು
ಬಲು ಸೊಗಸು ಇಹುದೆಲ್ಲ
ಕೇಳಲರಿಯಲು, ಇಲ್ಲಿ ಜನರೇ ಇಲ್ಲ!!!


--- ಸುರೇಶ ಜಕಾತಿ .ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

03 Jan 2020, 01:21 pm

ನನ್ನ ದೇವರು

ಮನದೊಳಗೆ ಆರಾಧಿಸಿ ಹೃದಯತುಂಬಿ ಪ್ರೀತಿಸಿ ನನ್ನ ಕೈ ಹಿಡಿದವರು ನನ್ನ ದೇವರು ತನ್ನವರ ಮರೆಮಾಚಿ ಇಷ್ಟ ಸತಿ ಬೇಕೆಂದು ಅರಸಿ ಬಂದವರು ನನ್ನ ದೇವರು ನನ್ನ ಕಷ್ಟವ ಕಡಿದು ತ್ಯಾಗ ಸೇವೆಯಲ್ಲಿ ದುಡಿದು ಬದುಕಿಗೆ ಆಶ್ರಯವ ನೀಡಿದವರು ಸರ್ವ ಸಕಲವ ನನಗೆ ಕ್ಷಣದಲ್ಲಿ ನೀಡುತಲಿ ಜಗದೊಳಗೆ ನನ್ನ ಹೆಸರ ಹುಡುಕು ತಿಹರು ಬದುಕಿಗೆ ಗುರುವಾಗಿ ಹೃದಯದಲಿ ನೆಲೆಯಾಗಿ ಶಾಶ್ವತದ ಪ್ರೀತಿಯ ಬಯಸುತಿಹರು ಮನ ಬಯಸೋ ಪತಿಯಾಗಿ ಮಣಿ ಯೊಳಗೆ ಮುತ್ತಾಗಿ ಸಿಂಧೂರ ತಿಲಕ ದಲ್ಲಿ ಮಿರುಗುತಿಹರು ಮುತ್ತು ರತ್ನಗಳ ಬಯಕೆ ನನಗಿಲ್ಲ ವೈಭವದ ಬದುಕಿನಲ್ಲಿ ಅವರ ಜೊತೆ ನಾನಿರಲು ನಂರತೆಯ ಮನದೊಳಗೆ ಮಗುವಾಗಿ ಅವರಿರ ಲೂ ಸಿರಿ ಸುಖದ ಕೊರತೆ ನನಗಿಲ್ಲ ಸಂತಸದ ಬದುಕಿಗೆ ಹಾರೈಸಿ ರೀ ಎಲ್ಲಾ

- nagamani Kanaka

02 Jan 2020, 08:12 pm

ಮನದ ಮಾತು

ಹೋಗದಿರು ಗೆಳೆಯ ಈ ಜೀವವಾ ತೊರೆದು
ಮಾಡಿದ ತಪ್ಪುಗಳ ಕ್ಷಣಕ್ಷಣಕು ನೀ ತಿವಿದು..
ಕಾಡದಿರು ಇನಿಯ ನೀ ಪ್ರೀತಿಯಾ ಬೆಸೆದು
ಈ ಜೀವನಾ ಕಳೆವೆ ನಿನ ತೋಳಲಿ ಉಳಿದು..
ಹೇಳದಿರು ಗೆಳೆಯ ನೀ ಬೇಡ ಇನ್ನೆಂದು
ಹೇಳಿದ ಮರುಕ್ಷಣವೆ ನನ ಉಸಿರ ಕೊನೆ ಅಂದು..

- ಸಾಹಿತ್ಯಶ್ರೀ

02 Jan 2020, 01:24 am

ಜೋಪಾನ ಶಾಂತ

ಶಾಂತಾ
ಬಿಗಿಮಾಡಿಕೋ
ಕೊಡಪಾನ..

ಬೀಳದಂಗೆ
ನೋಡಿಕೊ
ಜೋಪಾನ..

ಪುಂಡರ ಮೇಲೆ
ಇರಲಿ ಸ್ವಲ್ಪ
ಗಮನ..

ಎಚ್ಚರ ತಪ್ಪಿ
ಬಿದ್ದರೆ ಮಾಡ್ತಾರೆ
ಅವಮಾನ..

- ಅಕ್ಷತ

01 Jan 2020, 11:56 pm

ಹೂ

ನೀ ಹೂವಂತೆ......
ನಾ ದುಂಬಿಯಂತೆ......

ನಿ ಎಷ್ಟೇ ದೂರಹೋದರು.....
ನ ಬರುವೇ.....

ನಿನಗಾಗಿ ಕಾಯುವೇ....
ನಿನ್ನ ನೆನಪಲ್ಲೆ ಸಾಯುವೇ......

- Ravi Jackie

01 Jan 2020, 09:52 pm

ಹೊಸ ವರ್ಷ

ಹೊಸ ವರುಷ.... ಹೊಸ ಹರುಷ....
ನೂರಾರು ಕನಸು.... ಬಯಸುತಿದೆ ಮನಸು.....
ಆಗುತ್ತಿಲ್ಲ ಯಾವುದೊಂದು ನನಸು......

ಓ ದೇವರೇ ಯಾಕೆ ನಿನಗೆ ನಮ್ಮ ಮೇಲೆ ಮುನಿಸು.....
ಕರ ಮುಗಿದು ಬೇಡುವೆನು ನಮ್ಮನ್ನು ಹರಸು.....
ಆದಷ್ಟು ಬೇಗ ನಮ್ಮಿಬ್ಬರನ್ನು ಸೇರಿಸು......

ಹೊಸವರ್ಷದ ಶುಭಾಶಯಗಳು ...... ಒಳ್ಳೆದಾಗಲಿ.....

- MkiranJadhav

01 Jan 2020, 06:01 am

ನನ್ನೆದೆಯ ಕುಸುಮ....

ಗೋದಿ ಬಣ್ಣದ ಮೈಯವಳು,
ಸಂಪಿಗೆಯ ಮೂಗಿನವಳು,
ಮಿನುಗುವ ತಾರೆಗಳ ಥರ ನಗುವವಳು....

ಮುಂಜಾನೆಯೇ ಕೆಲಸ ಶುರು ಮಾಡುವಳು,
ಮಕ್ಕಳ ಪೋಷಣೆ ಮಾಡುವಳು,
ಪತಿಯ ಹಿತ ಬಯುಸುವಳು....

ಮನೆಯ ಸ್ವಚ್ಛತೆ ಕಾಪಾಡುವಳು,
ಕುಟುಂಬದ ಆರೋಗ್ಯ ಯೋಚಿಸುವಳು,
ದೇವರಲ್ಲಿ ಎಲ್ಲರ ಕುಶಲತೆಯ ಕೋರುವಳು....

ನನ್ನ ಪ್ರೀತಿಯ ಕುಸುಮಳಿವಳು,
ಕಷ್ಟವನ್ನೆಲ್ಲ ನುಂಗುವಳು,
ತನ್ನ ಬಗ್ಗೆ ಯೋಚಿಸದೆ ಎಲ್ಲರ ಗಮನ ಹರಿಸುವವಳು....

ಮುಸ್ಸಂಜೆಯ ಮನೆಯ ಲಕ್ಷ್ಮಿ ಇವಳು,
ಮಡಿಯಲ್ಲಿ ದೀಪ ಹಚ್ಚುವಳು,
ಮನೆಯಲ್ಲ ಬೆಳಗುವವಳು...
ರುಚಿಯಾದ ಅಡುಗೆ ಮಾಡುವಳು,
ಪ್ರೀತಿಯಿಂದ ಬಡಸುವವಳು,
ನಮ್ಮೆಲ್ಲರ ಕ್ಷೇಮ ನೋಡುವವಳು
ಮಿನುಗುವ ತಾರೆಯ ಹಾಗೆ ನಗುವವಳು...
ನನ್ನವಳು ಇವಳು ನನ್ನವಳು
ನನ್ನೆದೆಯ ಕುಸುಮಳಿವಳು.....

- yogi

30 Dec 2019, 08:08 pm

ಅವಳು

ನಿನ್ನ ನಗುವಲ್ಲಿ ಏನೋ ವಿಶೇಷವಿದೆ
ನಿನ್ನ ಮಾತಲ್ಲಿ ಏನೋ ಕಾಳಜಿ ಇದೆ
ನಿನ್ನ ನೋಟದಲ್ಲಿ ಏನೋ ಮಿಂಚಿದೆ
ನಿನ್ನ ಪ್ರೀತಿಯಲ್ಲಿ ಏನೋ ಗಟ್ಟಿತನವಿದೆ
ನಿನ್ನ ಒಲವಲ್ಲಿ ಏನೋ ಬಿಟ್ಟಿರಲಾಗದ ಬಂಧವಿದೆ
ಅದಕ್ಕಾಗಿ ನಿನ್ನೊಲವ ನಗುವಿನ ಪ್ರೀತಿಯ ನೋಟಕ್ಕೆ ನಾ ತಲೆಬಾಗಿದೆ

- MkiranJadhav

30 Dec 2019, 10:34 am

ಅವಳಿಗಾಗಿ......

ದಿನಕಳೆದಂತೆ ಹೆಚ್ಚಾಗುತ್ತಿದೆ ನಿನ್ನ ಮೇಲೆ ಒಲವು......

ಇರುತ್ತಿಲ್ಲ ನನ್ನ ಮನ ನಿನ್ನಗಲಿ ಒಂದು ದಿನವು....

ಬೇಕಿನ್ನೂ ನಿನ್ನೊಲವ
ಈ ಪ್ರೀತಿ ಪ್ರತಿ ದಿನವೂ.....

ಕಾಯುವೆನು ಪ್ರತಿಕ್ಷಣವು
ನಿನ್ನ ಆಗಮನವೇ ನನ್ನ ಬಾಳಿನ ಅತಿಮಧುರ ಕ್ಷಣವು.......

- MkiranJadhav

30 Dec 2019, 10:29 am

ಕನಸು-ಮನಸು

ಬೆಳಗಿನ ಜಾವದಿ
ಸೂರ್ಯನ ಕಿರಣವು
ಅವಳ ಮೈಮುದುಕಿದಾಗ
ಅವಳ ನಗು, ಅವಳ ಆಟ,
ಅವಳ ನೋಟ!
ನನ್ನೊಳಗಿನ ಪ್ರೀತಿಯ ಹುಚ್ಚನ್ನು
ಕೆದಡುತ್ತಿರುವವಳು ಇವಳೇ
ಎಂದು ಮನ ಹೇಳಿತು.
ನನ್ನೊಳಗಿನ ಭಾವನೆಗಳನ್ನು
ಅವಳಲ್ಲಿ ಹಂಚಿಕೊಳ್ಳುವ
ಆತುರ ಹೆಚ್ಚಾದಂತೆ,
ಅವಳನ್ನು ನೋಡಬೇಕೆನ್ನುವ
ಕಾತುರವೂ ಹೆಚ್ಚಾಗತೊಡಗಿತು.
ಕೆಲವು ಕಾಲ ಕಣ್ಮುಚ್ಚಿ
ಕಣ್ತುಂಬಿಕೊಂಡು, ಕಣ್ತೆರೆದು
ನೋಡಿದಾಗ, ಕಣ್ಮಿಂಚಿನಂತೆ
ಮಾಯವಾದವಳು ಅಂದು...
ಕಾಣುತ್ತಿಲ್ಲ ಕೇಳಿಕೊಂಡರೂ ಇಂದು...

ದೇವರಾಜ್...

- Devraj Kadur

29 Dec 2019, 12:21 pm