Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಛಂದ ಪದ್ಯಗಳು

ಮುಕ್ತಗಳು
-------------------------------
೦೧.ಭಾವಲಹರಿ
______________________
ತನು ಒಂದಾರೂ ಅದರೊಳಗೆ
ಭೂಕಂಪ,ಸಮುದ್ರ ಸುನಾಮಿ
ಸೃಷ್ಟಿಸಲೆಂದೇ ಇರುವ
ಹಲವು ರೀತಿಯ ಮನಗಳು
ಇರುವುದೊಂದೇ ಭಾವಲಹರಿ
ಎಲ್ಲರೆದೆಯ ಕುಟ್ಟಲು.

೦೨.ನಾಲಿಗೆ
--------------------
ನಮ್ಮ ಮನೆಯ ನಾಯಿಯದು
ಚಪಲ ವಾಂಛೆಯ ಹಿತ್ತಲು
ಕುರುಡು ಕಿವುಡು ಎಲ್ಲ ಇಹುದು
ರಸವ ನೆಕ್ಕುವುದು ಸುತ್ತಲು
ಸಿಕ್ಕ ಸಿಹಿ,ಕಾರ,ಹುಳಿಯ ಸವಿದು
ಕಹಿಯ ಬಲ್ಲ ನಾಲಿಗೆ.

೦೩.ಕವಿಗಳು
______________
ಇವರು ಎತ್ತು ,ಇವರು ಎಮ್ಮೆ
ರಥವ ಹಿಡಿದು ಎಳೆವರು
ನಾಡ ನುಡಿಯ ಹಿರಿಮೆ ಗರಿಮೆ
ಎಲ್ಲ ಮಹಿಮೆಯ ತಿಳಿವರು
ಲೆಕ್ಕವಿಲ್ಲದ ಪದ-ಪದ್ಯ-ಗದ್ಯರಚನೆ ಬಲ್ಲರು
ಉರಿಯ ನುಂಗಿ ತಂಪು ಹಿಂಗಿ
ಹಾಲು ಹಿತವ ಕೊಡುವರು
ಎದೆಗೆ ಹೊಕ್ಕ ಸಿಕ್ಕ ವಿಷವ
ಬಿಕ್ಕಿ ಬಿಕ್ಕಿ ಕಕ್ಕುವರು
ಓದು- ಬರಹ ಬಲ್ಲರವರು
ಖಡ್ಗ ಲೇಖನಿ ಹಿಡಿವರು
ಯಾರಿಗುಂಟು ಯಾರಿಗಿಲ್ಲ
ಅಕ್ಷರ ತೆನೆ ತುರುಕುವವರು
ಇವರೇ ನಮ್ಮ ಗಣಪ-ಬಳಪ
ಲಕ್ಷ್ಮಿ- ಸರ್ವಸ್ವ ನುಡಿವರು
ಮುಂಬರುವ ಪೀಳೆಗಗೆ ಎದೆಹಾಲು ನೀಡುವರು
ಇವರೇ ನಮ್ಮ ಕವಿಗಳು ನಾಡ ನುಡಿಯ ಕಲಿಗಳು.

೦೪. ರಾಜಕಾರಣಿಗಳು
________________________
ನಾಡನೊಡೆವ ಮಂದಿ ಇವರು
ನಮ್ಮ ನೆಲವ ಬಲ್ಲರು
ನಮ್ಮ ಮತವ ಗೆಲ್ಲುವನಕ
ಛಲದಿ ಬಿಡದೆ ಮೆರೆವರು
ನಲಿವ ನಮ್ಮ ನಾಡದೇವಿಯ
ಕೊರಳ ಹಾರವ ಕದಿವರು
ಒಲಿದ ನೆರಳಿನಲ್ಲಿ ಕಳುವು
ಇವರ ಕಾಯಕ ಎಂದಿಗೂ
ಅಂದಿಗಿಂದಿಗೆಲ್ಲ ಇವರೆ ಭಾರತವ ಆಳಿದವರು
ಕೆಳವರ್ಗದವರನೆಲ್ಲ ನೆತ್ತಿ ಹಿಂಡಿ ಬಿಡುವರು
ದಲಿತರಾದಿಯಾಗಿ ಇವರ ತುದಿಯನೆಲ್ಲ ಬಲ್ಲರು
ಕೊಟ್ಟುದೊಂದು ಪಡೆವರೈದು
ಬ್ರಷ್ಟಹಿತವ ಹೊಂದಿದವರು
ಇವರೆ ನಮ್ಮ ರಾಜ್ಯ ರಾಜರೆಂದು
ಉಲಿದು ಮೆರೆವರು ವೋಟು ನೋಟು
ಎಲ್ಲ ತಿಂದು ಜನರ ಹಿತವ ಮರೆತರು.

೦೫. ಗೋಪಾಲ
____________________
ಶ್ಯಾಮವರ್ಣ ಶ್ವೇತಹಾರ
ಗೋವುಗಳನು ಕಾಯ್ವನು
ಕೊಳಲನೂದಿ, ನಾದವಿಡಿದು
ಹಿಂಡು ದನವ ಕರೆವನು
ಗೋಪಿಕೆಯರ ಮನವ ಬಲ್ಲ
ಮಾತು ಬಲ್ಲ ಮಲ್ಲನು
ಕಂಸ ಕೊಂದ ಗಿರಿಯನೆತ್ತಿ
ಹಿಡಿದ ವೀರ ಧೀರನು.

// ಮೃದಂಗಜ//


ಸುರೇಶ ಜಕಾತಿ‌.ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

25 Jan 2020, 09:22 pm

...ಮದುವೆ ಸಂಬಂಧ...

ಮದುವೆಯೆಂಬುವುದು ಯಾವತ್ತೋ
ಆಗಬಾರದ ಬಂಧನ
ಇದು ಎರಡು ಜೀವಗಳ ನಡುವಿನ
ಜನ್ಮ ಜನ್ಮಾಂತಾರ ಅನುಬಂಧ......

ಕೆಲವು ಸನಿವೇಶಗಳ ಕಲ್ಪನೆಯಿಂದ
ಕೂಡಿರಬಾರದು ಜೀವನ
ಅದರಲ್ಲಿ ಪರಸ್ಪರ ನೈಜತೆ
ಹೊಂದಿರಬೇಕು ಸರಿಸಮಾನ....

ಗಂಡ-ಹೆಂಡತಿ ಕುಡಿ ಬಾಳಿದರೆ
ಸುಖ-ಸಂಸಾರವಾಗುತ್ತೆ
ಬಿರುಕು ಬಿಟ್ಟಿದರೆ ಸಂಸಾರದಲ್ಲಿ ಇಲ್ಲ
ಯಾವ ಸಾರ......

- Ajay

25 Jan 2020, 09:00 pm

ಮಾತೃಸ್ವರೂಪ

ಬೆಳಗು ಕವಿತೆ( ಮಾತೃ ಸ್ವರೂಪ)
----------------------------------
ನಿನ್ನೊಡಲ ಧ್ವನಿಯಾದ ನನಗೆ
ಹೂ ಬಿಡುವ ಯೌವ್ವನ;
ಮಕರಂದ ಸವಿಯಲು ಇನ್ನೂ ಬಾರದ
ದುಂಬಿಯ ಮೌನ ಮೀರಿದ ಗಾನಯಾನ.

ನಿನ್ನಂತರಂಗಕ್ಕೊಂದು ನೆನಪಿನ ಚುಕ್ಕೆ ನಾನು
ಹೊಳಪು ನೀಡಿದ ನಿನ್ನ ವಾತ್ಸಲ್ಯ
ಚಿದಾಕಾಶದಲ್ಲಿ ಕೋಟಿ ನಕ್ಷತ್ರಗಳ ಮೆರಗು
ಗೆಲ್ಲುವ ಪ್ರತಿ ರಂಗದಲ್ಲೂ ನಿನ್ನದೇ ಹೆಸರು.

ನಾನಾಡುವ
ಪದ-ಶಬ್ಧಗಳ ಸಂಯೋಜನೆಗೆ
ವೀಣೆ ನುಡಿಸುವ ಆ ನಿನ್ನ ಹೃದಯ ದ್ವನಿ;
ಮೃದಂಗದ ಅಲೆಗಳು ಕಿವಿಗೆ ಅಪ್ಪಳಿಸಲು
ಹುದುಗಿ ಹೋಗಿದ್ದವು ಆ ನಿನ್ನ ನುಡಿಗಳು.

ಬಿದ್ದು ಎದ್ದಾಗಲೊಮ್ಮೆ
ಹೆಚ್ಚಾಗುತ್ತಿರುವ ಈ ಬದುಕಿನ ಭಾರ ಕಳೆಯಲು
ಶೃತಿ ಹಿಡಿದು ತಾಳ ಹಾಕುತ್ತಿದೆ
ಸೂರ್ಯನ ಬೆಳಕಿನಲ್ಲಿ ಮಂದವಾಗಿ
ಇನ್ನೂ ಕಾಣದ ನಕ್ಷತ್ರದಂತೆ ಆ ನಿನ್ನ ನಗು.

ಹಿಂದಿನ ಜನುಮದ ಇಂದಿನ ಋಣ
ನಾನಾಗಿದ್ದೇನೆ ನಿನ್ನ ಮಗು
ಹಸಿರಾಗಿ,ಹೆಸರಾಗಿ,ಎದೆಯುಸಿರು ನೀನಾಗಿ
ತೆನೆಭಾರ ಹೊತ್ತ ಸಸಿಯಂತೆ ಆ ನಿನ್ನ ತಾಳ್ಮೆ
ಬಾನೆತ್ತರಕ್ಕೆ ಬೆಳೆದರೂ; ವಂದಿಸಲೇಬೇಕು
ಕ್ಷಮಯಾಧರಿತ್ರಿ ನೀನು ನನಗೆ.

// ಮೃದಂಗಜ//
ಸುರೇಶ ಜಕಾತಿ.ಜಮಖಂಡಿ
.





- ಸುರೇಶ ಜಕಾತಿ.ಜಮಖಂಡಿ

25 Jan 2020, 10:12 am

...ಬದುಕೇ ಸುಗಮಧುರ...

ನಿನ್ನ ಕಣ್ಣುನಲ್ಲಿ
ನಂದಾದೀಪವೆಂದ ನಾನು
ನಿನ್ನ ಪ್ರೀತಿಯ ಅಸರೆಯಲ್ಲಿ
ಬದುಕುವೆ ಆ ಕ್ಷಣದಿ.....

ಮನಸ್ಸಿನಲ್ಲಿ ಆಸೆ ಹುಟ್ಟುವಂತೆ
ಮಾಡಿತು ಈ ಪ್ರೀತಿ
ನಿನ್ನ ಆ ಪ್ರೀತಿ ನನ್ನ
ಇಡೀ ಬದುಕೇ ಬದಲಾಗಿತ್ತು....

ನೀ ಆ ನಗು
ನನ್ನ ದಿನದ ಭವಿಷ್ಯ
ನಿನ್ನ ನೋಟ
ನನ್ನ ಬದುಕಿನ ಅಭ್ಯಾಸ....

ಹೇ ಮನಸ್ಸೇ
ನೀ ಎಷ್ಟು ಸುಂದರ
ನನ್ನ ಬದುಕಿನ ಮಂದಿರ
ನಿನ್ನ ಬಂದರೆ ನನ್ನ ಬದುಕೇ ಸುಗಮಧುರ........

- Ajay

25 Jan 2020, 06:35 am

ಪ್ರಾಮಾಣಿಕತೆ

ಪ್ರಾಮಾಣಿಕತೆಯ ಬೆಳಕ
ಜಗಕೆ ಪಸರಿಸಲು ಹೊರಟೆ
ಅಂಧಕಾರದ ಅಮಲು
ಪ್ರಾಮಾಣಿಕತೆನ್ನೇ ಕೂಡಿ ಹಾಕಿತಲ್ಲ..!

ಬುದ್ದನೊಳಗಿನ ಶುಭ್ರ ಮನದ
ಪ್ರಾಮಾಣಿಕತೆಯ ಪರಿ ಆತನ
ಹಿಂಬಾಲಕರಿಗೂ ಮತ್ತೊಬ್ಬ
ಬುದ್ದನಾಗಲು ಸಾಧ್ಯವಾಗಲಿಲ್ಲವಲ್ಲ..!

ನಗು ಮುಖದೊಳಗಿಹ ನೈಜ
ಸೌಂದರ್ಯದ ಪ್ರಾಮಾಣಿಕತೆ
ಅದೆಷ್ಟು ಬಣ್ಣ ಬಳಿದರೂ
ಅವಳೊಳಗೆ ಬರಲೇ ಇಲ್ಲವಲ್ಲ..!

ಪ್ರಾಮಾಣಿಕತೆಯ ತೂಕ ಹೆಚ್ಚಿದಷ್ಟು
ಮನದ ನೆಮ್ಮದಿ ಹೆಚ್ಚಾಯಿತು ನೋಡು..!
ಪ್ರಾಮಾಣಿಕತೆ ತೂಕ ಕುಗ್ಗಿದಷ್ಟು
ಮನದ ನೆಮ್ಮದಿ ಕಡಿಮೆಯಾಯಿತಲ್ಲ..!

- ಅಕ್ಷತ

24 Jan 2020, 10:37 pm

ನಿನ್ನೊಟ್ಟಿಗೆ ( ಕವಿತೆ)

ನಿನ್ನೊಟ್ಟಿಗೆ ( ಕವಿತೆ)
---------------------------
ನಕ್ಕು ಬಿಡು ಒಮ್ಮೆ
ನಿನ್ನೊಡನೆ; ನನ್ನ ಕಡು ಕಷ್ಟಗಳು
ಮಾತನಾಡುತ್ತಿವೆ;ದೂರ ಸರಿದರೂ
ಪ್ರತಿ ಬಾರಿ ಮೈಕೊಡವಿ
ಎದ್ದು ನಿಲ್ಲುತ್ತವೆ.

ನಕ್ಕಾಗಲಾದರೂ
ಬಾರದ ಬಿಕ್ಕಳಿಕೆ ಬಂದು ಬಿಡಲಿ.
ಅಮೃತ ತತ್ವಗಳೇ ಮರೆತುಹೋಗಿವೆ
ನೀ ನನ್ನ ಮರೆತಂತೆ;ಅಂದಿನ ಕಷ್ಟಗಳು
ಮರೆತು ಬಿಡಲಿಲ್ಲ ನನ್ನನ್ನು;
ಆಗಲಾದರೂ ಸಿಗಬಹುದು
ಎಂಬ ಹುಸಿ ಬರವಸೆ
ನನಗೆ.

ನಿನ್ನ ಕಣ್ಣ ಮುಂದಿನ ಜಗತ್ತು
ಆ ನನ್ನ ಮಕ್ಕಳು ;
ನೋಡಬಾರದೇ ಒಮ್ಮೆ
ಅವರ ನಲಿವುಗಳನ್ನು;
ನಿನ್ನನ್ನು ಸಂತೈಸುವ
ಹಾರೈಕೆ ಮಾತ್ರ ನನ್ನಲ್ಲಿದೆ
ದೇವರ ಮುಂದಿಟ್ಟ ಅಗರಬತ್ತಿಯಂತೆ,
ಇಂದು ನೀನು ನನಗೆ.

ಅಳಲು ನಿನ್ನಲ್ಲಿ ಕಣ್ಣೀರು
ಉಳಿದಿಲ್ಲ ಒಂದು ಹನಿ,
ಅಳಲೇಬೇಕಾದ ಅನಿವಾರ್ಯತೆ
ನಿನ್ನಲ್ಲಿದ್ದರೆ;ನಾ ಅಳಿದ ಮೇಲೆ ಅಳು.
ಅಳುವಿನ ಹಿಂದಿನ ನಗು
ಆಗಲಾದರೂ
ತಿಳಿದೀತು ನಿನಗೆ.

ನಕ್ಕಾಗ
ಎದೆ ಹಿಗ್ಗಿ ಹಗುರಾದೀತು
ಬಾವನೆಗಳೊಂದರಂತೆ;
ನೀ ಅಳಲು
ಜಗವೇ ಅಳಬೇಕಾಗುವುದು;
ನಗಲು ಇದೇಕೆ? ಇಷ್ಟೇಕೆ ಹಠ?
ನಿನ್ನೊಟ್ಟಿಗೆ ನಾನಿರಲು...


       --ಸುರೇಶ ಜಕಾತಿ.ಜಮಖಂಡಿ
                 8746086658

               ೨೭/೦೯/೨೦೧೫

- ಸುರೇಶ ಜಕಾತಿ.ಜಮಖಂಡಿ

24 Jan 2020, 08:16 am

ನನ್ನ ಕವಿತೆ

ಅದೂ ನಾ ಬರೆದ ಕವಿತೆಯೊಂದು
ನೆನಪಾಗಿತು ಇಂದು
ನಿನಗಾಗಿ ಹೇಳುತಿರುವೇ
ನೀ ಕೇಳಲು ಬರುವೆಯ ಇಂದು...

ನನ್ನ ಕನಸಿನಲ್ಲಿ ನೀ ಬರುವೆ
ನೀ ನನಸಾಗಿ ಬಂದೆ ಇಂದು
ನೆನಪುಗಳಲ್ಲಿ ನೆನಪುಗಳನ್ನು
ನಾ ಹೇಳುವೆ ನೀ ಕೇಳುವೆಯ ಮನಸ್ಸೇ...

ಅಂದು ನೀ ಕೊಟ್ಟ ಪ್ರೀತಿ
ಇಂದು ನನ್ನ ಮನಸ್ಸು
ಮತ್ತೆ ಮತ್ತೆ ಬೇಕೆಂದು ಕೇಳುತ್ತಿದೆ
ಒಮ್ಮೆ ನೀ ಹಿಂದೂ ತಿರಿಗಿ ನೋಡಬರದೆ.....

ಹೇ ಮನಸ್ಸೇ
ನೀ ಎಲ್ಲೇ ಹೋದರು
ಈ ಮನಸ್ಸು ನೀ ಬರುವ
ದಾರಿಯನ್ನು ಸದಾ ಕಾಯುತ್ತ ~ಇರುತ್ತೆ~ ...

- Ajay

24 Jan 2020, 06:11 am

ಕನ್ನಡದ ಹೈಕುಗಳು

ಕನ್ನಡದ ಹೈಕುಗಳು
--------------------------------
೨೩೧.
ಸುಳ್ಳು ಸಾಕ್ಷಿ ಹೇಳುವುದೆಂದರೆ
ಮಹಾ ಅಪರಾದ ಮಾಡಿದಷ್ಟು ಹೆದರಿಕೆ
ಏಕೆಂದರೆ ಅದು ಆತ್ಮ ಸಾಕ್ಷಿಯ ವಿರುದ್ಧ.

೨೩೨.
ಸಾವಿನ ಜೊತೆ ಹೊರಾಡುವವರೆಲ್ಲರೂ
ಯಮಧರ್ಮನ ಸಂಬಂಧಿಕರು
ಏಕೆಂದರೆ ಚಿತ್ರಗುಪ್ತನ ಲೆಕ್ಕದಲ್ಲಿ
ಇದೂ ಕೂಡ ಒಂದು ಹಣೆಯ ಬರಹ.

೨೩೩.
ಬ್ರಹ್ಮ ಸತ್ಯಗಳಲ್ಲಿ ಈಶ್ವರೀಯ ಗುಣ
ಎದ್ದು ಕಾಣುವುದು.ಏಕೆಂದರೆ
ಅದು ಪಂಚ ಮಹಾಭೂತಗಳಿಗಿಂತಲೂ
ಅತೀತ ಮತ್ತು ಮಿಗಿಲಾದದ್ದು.

೨೩೪.
ಸ್ವಾರಸ್ಯಕರ ಸಂಗತಿ ಎಂದರೆ
ಸೇವಾ ಮನೋಭಾವವೂ ಇಂದು
ವ್ಯಾಪಾರೀಕರಣದ ಹಂತ ತಲುಪಿದೆ.

೨೩೫.
ಸಂದರ್ಭ ಹಾಗೂ ಸನ್ನಿವೇಶಗಳಲ್ಲಿ
ಮನುಷ್ಯನ ವರ್ತನೆ ಕಾಗೆ,ಗೂಬೆ
ಗಳಿಗಿಂತಲೂ ಘೋರವಾಗಿರುವುದು
ಏಕೆಂದರೆ ವಯಸ್ಸಾದ ಮೇಲೆ
ಇದೆಲ್ಲವೂ ಸಹಜ.

೨೩೬.
ಪರಂಪರೆಗಳನ್ನು ಬೆನ್ನು
ಹತ್ತಿದಾಗಲೆಲ್ಲ.ಪುಕ್ಕಟೆಯಾದ
ವಿಚಾರಗಳು ತಿಳಿದು ಬರುವವು
ಅವೇ ನಮ್ಮ ವೇದೋಪನಿಷತ್ತುಗಳು.

೨೩೭.
ಸಂಬ್ರಮದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ
ದೇಶ ವಿದೇಶಗಳಲ್ಲೆಲ್ಲಾ ಹೆಸರು ಮಾಡಿತ್ತು
ಆದರೆ ಬಡವರ ಮನೆಯ ಜ್ಯೋತಿಯು
ಎಣ್ಣೆ ಬತ್ತಿ ಇಲ್ಲದೆ ನರಳುತ್ತಿತ್ತು.

೨೩೮.
ಸುಂದರವಾದ ಶರೀರ,ರೂಪ,ಲಾವಣ್ಯಗಳು
ಶಿವನಿಗಿಂತಲೂ ಪ್ರಖರವಾದವು.
ಇದೇ ವಿಚಾರವಾಗಿ ಬೆನ್ನು ಹತ್ತಿದ
ವಿಶ್ವಾಮಿತ್ರನ ಧರ್ಮ ಲಾಂಚನ
ಗಿಡಗಂಟೆಗಳಲ್ಲಿ ನೇತಾಡುತ್ತಲಿತ್ತು.

೨೩೯.
ಮುಂಬರುವ ಜಗತ್ತು ಧರೆಯ ಮೇಲಿನ
ಸ್ವರ್ಗವೆಂಬುದೊಂದು ಹಿತೋಕ್ತಿ.
ಆದರೆ ಅದರ ವಿರುದ್ಧ ವಾದುದೆಲ್ಲವೂ
ಇಂದು ತಾನೆ ರಾಜನೆಂಬಂತೆ ಮೇರೆಯುತ್ತಲಿದೆ.

೨೪೦.
ನಮ್ಮ ಸಮಾಜದ ಬಹು ಮುಖ್ಯ ವಿಚಾರ
ನೀತಿಬೋಧನೆ .ಏಕೆಂದರೆ ಬೋಧಕರೆಲ್ಲರೂ
ತರಬೇತಿಯನ್ನು ಪಡೆಯುತ್ತಲಿರುವ
ಜ್ನಾನ ಪಿಪಾಸುಗಳು.

೨೪೧.
ಸಮಬಲದಿಂದ ಗೆದ್ದುದೆಲ್ಲವೂ
ಕ್ರಾಂತಿ ಎಂದರೆ ಹೇಗೆ ?
ಎಲ್ಲರೂ ಬಿದ್ದಾಗ ತಾನೆ
ಎದ್ದೇಳಬೇಕು.!!

೨೪೨.
ನಿದ್ದೆಯಿಂದವತರಿಸಿದ ಕನಸು
ಇಂದು ನಿನ್ನೆಗಳ ಮರೆತು
ನಾಳೆಗಳನ್ನಷ್ಟೇ ಮೆಲುಕು
ಹಾಕುತ್ತಿದೆ.

೨೪೩.
ಜಗತ್ತಿನ ಜನರೆಲ್ಲರೂ ಬದಲಾಗುತ್ತಿದ್ದಾರೆ
ಎಂದರೆ ಸ್ವಾನುಭವ ಮತ್ತು ಸ್ವಾಧ್ಯಾಯ
ಎರಡೂ ಎಲ್ಲರಲ್ಲೂ ಹೆಚ್ಚಾಗಿರುವುದು.

೨೪೪.
ಅವಕಾಶಗಳು ಇಂದು ನಮ್ಮನ್ನೇ
ಹಿಂದೆ ಹಾಕಿ ಮುನ್ನುಗ್ಗುತ್ತಲಿವೆ
ಎಂದರೆ ಬೇರೆಯವರು ಅವುಗಳ
ಪ್ರಯೋಜನ ಪಡೆಯುತ್ತಲಿದ್ದಾರೆ.

೨೪೫.
ಗುರುಪರಂರೆಯನ್ನು ಮರೆಯುವುದೆಂದರೆ
ನಮ್ಮ ಅಜ್ಞಾನ ನಾವು ಒಪ್ಪಿಕೊಂಡಂತೆ.

೨೪೬.
ಸುಲಲಿತವಾದ ಸಾಹಿತ್ಯ ರಚನೆಗೆ
ವೇದೋಕ್ತಿಗಳೇ ಬೇಕಾಗಿಲ್ಲ
ಸೃಜನಶೀಲತೆ ಇದ್ದರೆ ಸಾಕು.

೨೪೭.
ಅರಿವು ಮತ್ತು ಆಚಾರ ನಮ್ಮ
ನಾಲಿಗೆಯ ಮೇಲೆ ನಡೆದಾಡಬೇಕಾದ
ಎರಡು ಅಂತಿಮ ಸತ್ಯಗಳು.

೨೪೮.
ಅರಿವಿನ ಮನೆ ಈ ಶರೀರ.

೨೪೯.
ಅವಸಾನದ ಅಂಚಿನಲ್ಲಿದ್ದ
ಆತ್ಮನಿಗೆ ಬ್ರಹ್ಮನು ತನ್ನ ಪದವಿ ಕೊಟ್ಟಂತೆ
ಮಾಯಾ ಬಜಾರು ಈ ಶರೀರ.

೨೫೦.
ಸುಂದರವಾದದ್ದೆಲ್ಲವೂ
ಅನುಭವಿಸಲು ಇರುವುದಲ್ಲ,
ಆರಾಧಿಸಲು.ಅದಕ್ಕೆಂದೆ ಹೇಳುವರು
ಸತ್ಯಂ,ಶಿವಂ,ಸುಂದರಂ.

// ಮೃದಂಗಜ//

ಸುರೇಶ ಜಕಾತಿ. ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

23 Jan 2020, 07:53 pm

ಕಾಣದಿರುವ ನಕ್ಷತ್ರ

ನಿಮ್ಮ ಕಣ್ಣ ನಂದದೀಪಾವೆಂದ
ನಾನು
ನಿಮ್ಮ ಅಸಾರೆಯಲ್ಲಿ ಬದುಕುತಿದ್ದೆ
ಆ ಕ್ಷಣದಿ
ಆಸೆ ಹುಟ್ಟಿಸಿತ್ತು ನಿಮ್ಮ ಪ್ರೀತಿ
ದುರ್ವಿದಿಯಂತೆ ಒದಗಿತು
ನಿಮ್ಮ ಆಗಲಿಕೆ
ಅದರಿಂದ ನೊಂದ ನಾನು
ನೀವೂ ನನ್ನ ಬಳಿ ಇರುವಿರಿ ಎಂದು
ಹುಯೆಯಲ್ಲಿ ಬದುಕುತಿರುವೆ


ನೊಂದ ಹೃದಯ

- ನಂದಿನಿ ದಾವಣಗೆರೆ

23 Jan 2020, 08:43 am

ಸಹನೆ ನಿನ್ನದಾದರೆ

ಸಹನೆ
ನಿನ್ನದಾದರೆ ಸಕಲವೂ ನಿನ್ನದೇ
ವಿನಯ
ನಿನ್ನದಾದರೆ ವಿಜಯವೂ ನಿನ್ನದೇ

✍️ PJ. PAVAN

- Pavankumar Honawad

23 Jan 2020, 08:18 am