Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆಳೆಯ...

ಗೆಳೆಯಾ ನಿನ್ನ ಸನಿಹದಲ್ಲಿ..
ದುಗುಡವೆಲ್ಲ ಮಾಯವಾಗಿ..
ಮನಸು ಬದಲಾಯ್ತು ಚಿಟಿಕೆಯಲಿ..
ನಿಟ್ಟುಸಿರು ಬಂತು ಜೋರಾಗಿ..

- deepu

16 Jan 2020, 11:06 pm

ಕಾವ್ಯ ಹುಟ್ಟಿದ ಜಾಡು ಹಿಡಿದು..!

ಕೇರಿಯಂಚಿನ ಹೆಂಚಿನ ಮನೆಯ
ಕೆಂಚವ್ವನ ಮಂಚದೊಳಾಡುವ
ಕೂಸಿನ ನಸುನಗೆಯಲ್ಲಿತ್ತು ಕವಿತೆ..
ಬರದ ನಡುವೆ ಸುರಿದ ಸೋನೆಯ
ಹನಿಯೊಳು ಕುಣಿದಾಡುವ ಪೋರನ
ಮನದ ಮೂಲೆಯಲ್ಲಿತ್ತು ಕವಿತೆ..

ಮನೆಯ ಹುಂಜ ಕತ್ತೆತ್ತಿ ಕೂಗಿದಾಗ
ಕುಣಿದ ಶಿರದ ಕುಂಚದ ಕುಣಿತದಿ
ಅಂದಣವೇರಿ ಅಡಗಿ ಕುತಿತ್ತು ಕವಿತೆ..
ರೂಪಸಿಯ ಕಣ್ಣ ಸನ್ನೆಯ ನೋಟ
ವೈಯ್ಯಾರಿಯ ಬೆಕ್ಕಿನ ನಡಿಗೆಯ ಮಾಟ
ಕಂಡಾಗಲೆಲ್ಲ ನಕ್ಕು ಬಂದಿತ್ತು ಕವಿತೆ..

ದಾರಿಹೋಕ ವ್ಯಾಪಾರಿಯ ಕೂಗು
ಮಾರಿ ಜಾತ್ರೆಯ ಒಲಗದ ಸದ್ದಲ್ಲಿ
ಜಾರಿ ನನ್ನೋಡನೆ ಬಂದಿತ್ತು ಕವಿತೆ..
ಮಳೆ ಮಂಜು,ಇಳೆ ಹಸಿರ ಪರಿಸರ
ಬೀಸಿದ ತಂಗಾಳಿಯೊಡಲ ಬೆಸುಗೆಗೆ
ಮನದ ಮನೆಯಲ್ಲಿ ಮೂಡಿತ್ತು ಕವಿತೆ..

ಯಾರದೋ ಸಂಚಿಗೆ,ಜಾರಿದ ಕಂಬನಿ
ಒಡನೆ ಕಾಡಿದ ಕೆಂಗಣ್ಣಿನ‌ ಮಿಂಚಿಗೂ
ದಕ್ಕಿತ್ತು ಗಾವಿಲರ ದಿಕ್ಕರಿಸಿದ ಕವಿತೆ..
ಒಕ್ಕುವ ರೈತನ ತೋಳ್ಬಲದಡಿಯಲ್ಲಿತ್ತು
ಮೊಲ್ಲೆ ಮುಡಿದ ಹೆಣ್ಣಿನ ಮುಡಿಯಲ್ಲಿತ್ತು
ಒಲ್ಲೆನೆಂದರೂ ಬಿಡದೆ ಕಾಡುವ ಕವಿತೆ..


- ಲಕುಮಿಕಂದಮುಕುಂದ

16 Jan 2020, 05:09 pm

ಗ್ರಹಣ ಹಿಡಿದದ್ದು ಯಾರಿಗೆ..?

ಅಧಿಕಾರದ ಮದವೇರಿ ಕುರ್ಚಿಗಾಗಿ
ಕಾದಾಡಿ ಅರಿವಳಿದವಗೆ ಹಿಡಿದಿದೆ ಗ್ರಹಣ
ಇಲ್ಲದವರ ದಳ್ಳುರಿಯ ಕಿಡಿ ತಾಕಿ
ಉಳ್ಳವರ ಅಹಂ ಸುಟ್ಟು ಹಿಡಿದಿದೆ ಗ್ರಹಣ

ಮಾನವ ಧರ್ಮದ ನಿಜವರಿಯದ
ನರಮೇಧದ ಕತೃಗಳಿಗೆ ಹಿಡಿದಿದೆ ಗ್ರಹಣ..
ನರನೇ ಹರನೆಂದು ಮೇರೆದ ಕಾಲಕ್ಕೆ
ಕೆಂಡಕಾರುವ ವೈರಿಗಳ ವರ್ಗಕ್ಕಿದೆ ಗ್ರಹಣ

ಭಾರತದ ಏಕತೆಯ ಜೇನುಗೂಡಿಗೆ
ಕಲ್ಲೆಸದ ಖಧೀಮರಿಗೆ ಹಿಡಿದಿದೆ ಗ್ರಹಣ..
ಹೆಣ್ಣು ಹಣ್ಣೆಂದು ಉಂಡೊಗೆದಾತಂಗೆ
ಎನೂ ಮಾಡದ ಕಾನೂನಿಗಿದೆ ಗ್ರಹಣ..

ಸೌಂದರ್ಯ ಲಾಲಸೆಯಲಿ ಮೊಳಗಿದ
ಪಾಪಿಗಳ ಕೂಪದಡಿಲಿದೆ ಕರಾಳ ಗ್ರಹಣ.
ಎಲ್ಲ ತಿಳಿದು ತಪ್ಪೆಸೆಗುವ ಮನುಕುಲದ
ನಿರ್ಣಾಮಕ್ಕೆ ಕಾರಣವಾಗದೆ.? ಗ್ರಹಣ.!

- ಲಕುಮಿಕಂದಮುಕುಂದ

16 Jan 2020, 03:24 am

ಯಮುನಾ ದಡದಿ..

ಓ ಮನಸೇ..!
ನಿನ್ನೊಲವ ವರ್ಷಧಾರೆ
ಸುರಿದಿದೆ ಇಂದೇತಕಿ
ಹೃದಯದ ಕಂಪಿಸಿದೆ
ಬಹುಶಃ ನಿನ್ನೋಲವ
ಧಾರೆಗೆ ಸಿಡಿಲು
ಗುಡುಗು ಅವತರಿಸಿವೆಯೇ?
ಹೇಳಿ ಬಿಡು ಒಮ್ಮೆ
ಮನಸಿನ ಎಲ್ಲ ಭಾವಗಳಿಗೆ
ಗೊಲ್ಲನ ಮನಸಿನೋಳು
ರಾಧೆಯದೆ ಧರ್ಭಾರವೆಂದು
ಅವನೂ ಅವಳಿಗಾಗೆ
ಕಾತರಿಸಿ ಕಾಯುವನು
ಯಮುನೆಯ ದಡದಿ.

- ಲಕುಮಿಕಂದಮುಕುಂದ

16 Jan 2020, 03:18 am

.......ಸಂಕೊಲೆ.......

ಪ್ರೀಯ ಗೆಳೆಯ ಬಾಳ ದನಿಯ
ನನ್ನ ಪ್ರೀತಿಯ ಸಂಕೊಲೆಯಲ್ಲಿ
ಬಂದಿಸಿ ಹೋಸದಾದ ಪ್ರೇಮಾಂಕುರಕ್ಕೆ
ಆದಿ ಯಾಗುವ ಭಾವನೆ...

ಬಾಳ ಒಡತಿ ಪ್ರೀಯ ಗೆಳತಿ
ಸಮಾಜದ ಅಪಮಾನದ ಸಂಕೊಲೆಯ
ಕಳಚಿ ಬಂದಿಸುವುದಾದರೆ ಸ್ನೇಹ
ಸಂಕೊಲೆಯಲ್ಲಿ ಬಂದಿಸು...

ಪ್ರೇಮ ರಾಜನ ಪ್ರೇಮಾಂಕುರದ
ಬಂದಿಗಳು ನಾವು ನಾಮಗೆಲ್ಲಿ
ಆಪಮಾನದ ರಾಣಿಯ ಸಂಕೊಲೆ
ನಾಮಗ್ಯರು ಸಂಕೊಲೆ ತೊಡಿಸುವವರು..
....‌‌..✍✍ವಿನೋದ್

- Vinod Naik Vinod Naik

16 Jan 2020, 02:01 am

ಕನ್ನಡ

ಕನ್ನಡವೆನಿತು ಸೊಗಸು,
ಕುಣಿಯುವುದೀ ಮನಸು!! 

ಮೇಘದ ಹನಿಯಂತೆ ಕನ್ನಡ
ಸ್ವಾತಿ ಮುತ್ತಿನಂತೆ ಕನ್ನಡ
ಸೌಮ್ಯ ಕುಸುಮದಂತೆ ಕನ್ನಡ, 
ನೀ ಗೆಲ್ಲಿಸಂ  ಸಿರಿಗನ್ನಡ.. 

ದುಂಬಿಗೆ ಮಕರಂದದಂತೆ ಕನ್ನಡ.                          ನೀರಿನಂತೆ ಕನ್ನಡ, 
ಬೆಟ್ಟಕ್ಕೆ ಹಚ್ಚ ಹುಲ್ಲಿನಂತೆ ಕನ್ನಡ.                           ಜೇನಿನಂತೆ ಕನ್ನಡ. 

 ನೀನಾಗು ಕನ್ನಡದ ಕುಡಿ
 ಹೋರಾಡಿ ಕನ್ನಡಕ್ಕೆ ಮಡಿ, 
 ನೀನಾಗುವವರೆಗೆ ಮಣ್ಣ ಹುಡಿ
 ಮಾತನಾಡು ಕನ್ನಡ ನುಡಿ.

- Sunilgarag

15 Jan 2020, 02:00 pm

ಮುದ್ದು ಗೊಂಬೆ

ನಯನಗಳು ಚಿಟ್ಟೆಯಂತೆ.....
ಕೇಶವು ಬುಟ್ಟಿ ಒಳಗಿರುವ ಹೂವಿನಂತೆ.....
ನೋಟದಲ್ಲಿ ನಟಿಸಿ.....
ತುಟಿಯಲ್ಲಿ ಚುಂಬಿಸಿ....
ಕೇಳು ಎಂದಾಗಲೇ
ಹೇಳಿ ಹೋಗುವ....
ನನ್ನ ಮುದ್ದು ಗೊಂಬೆ ❤️

- Dit-o boys

13 Jan 2020, 09:35 pm

ಎನ್ನ ಮನದ ಒಡತಿ

ಮುದ್ದು ಮುಖದ ಮಿನುಗು
ಸುಂದರಿ ನೀನು...
ಕೋಮಲ ಮೂಗು ನಿನಗೆ ಮೆರಗು
ಕೆಂದಾವರೆ ಮುದ್ದು ತುಟಿ ನಿನ್ನ ಅಂದ
ಅದರೊಳಗಿನ ದಂತಪಂಕ್ತಿ ಇನ್ನು ಚಂದ..
ಚಂದಿರ ನ ಕಾಂತಿಯ ಮಂಕು ಗೊಳಿಸಿದ
ರೂಪರಾಶಿ ನಿನ್ನದು..
ಬಣ್ಣಿಸಲು ಪದಗಳು ಸಾಲದು
ವರ್ಣನೆಗೆ ನಿಲುಕದ ಸೌಂದರ್ಯ ನಿನ್ನದು
ನೋಡಿದರೆ ಮತ್ತೊಮ್ಮೆ ಇನ್ನೊಮ್ಮೆ ಮಗದೊಮ್ಮೆ ನೋಡಬೇಕೆನ್ನುವ
ಸೌಂದರ್ಯದ ಗಣಿ ನೀನು
... ಎನ್ನ ಮನದ ಒಡತಿ ನೀನು...

- santhoshkumar

13 Jan 2020, 09:10 pm

ಮರಳಿ ಬಾರದ ಊರಿಗೆ

ಕಾಲನ ಕಾಲಿಗೆ ನೀವು ಬಲಿಯಾಗಿ
ನನ್ನ ನೆನಪಲ್ಲಿ ಶಾಶ್ವತ ನೆಲೆಯಾಗಿ
ಎಲ್ಲವನ್ನೂ ಮರೆತು ಮರೆಯುವ ನನಗೆ
ನಿಮ್ಮ ಮರೆಯಲಾಗುತ್ತಿಲ್ಲ.
ಬದುಕಿಗೆ ನಿಮ್ಮ ಆಗಮನ
ಅವಿಸ್ಮರಣೀಯ ಆ ಕ್ಷಣ
ನಿಮ್ಮೊಂದಿಗೆ ಕಳೆದ ದಿನ
ಕಲಿತ ಜೀವನ ಪಾಠಗಳು
ನಾವು ಬದುಕಿರುವವರೆಗೂ ಉಸಿರಾಡುತ್ತವೆ
ಮರಳಿ ಬಾರದ ಊರಿಗೆ ತೆರಳುವ ಮುನ್ನ
ಒಂದೇ ಒಂದು ಸರಿ ನಿಮ್ಮೊಂದಿಗೆ
ಮಾತನಾಡಲೇ ಬೇಕಿತ್ತು ನಾನು........

- Pavankumar Honawad

13 Jan 2020, 12:51 pm

ಹೈಕುಗಳು

ಹೈಕು
•••••••
೧೪೩.
ಇಷ್ಟ ಪಟ್ಟ ಹೆಂಡತಿಗೆ
ಗಂಡ ವಿಚಿತ್ರವಾಗಿ ಕಂಡರೆ
ಅದು ಮದವೆಗೂ ಮುಂಚಿನ ಸಲುಗೆ.

೧೪೪.
ಅವಳು ಎಲ್ಲರಂತೆಯೇ
ಕಾಣುತ್ತಿರುವದು
ವ್ಯತ್ಯಾಸ ಗುರುತಿಸಲಾಗದ
ನತದೃಷ್ಟ ಗಂಡನ ಕೆಲಸ.

೧೪೫.
ಸಂಬ್ರಮದಲ್ಲಿ ತೊಡಗಿದಾಗಲೊಮ್ಮೆ
ಎದ್ದು ಎದ್ದು ಹೋಗುವವರು
ವೇದಿಕೆಯಿಂದ ವಂಚಿತರು.

೧೪೬.
ಸಂಭಾಷಣೆಯುದ್ದಕ್ಕೂ
ಮಾತು ಮರೆಸುವ ಜಾಯಮಾನ
ತಪ್ಪಿತಸ್ಥರೆಂದು ಒಪ್ಪಿಕೊಂಡ ಹಾಗೆ.

೧೪೭.
ನಿಜವಾದ ಸನ್ನಿವೇಶವೊಂದು
ಕಣ್ಣಿಗೆ ಬಿದ್ದಾಗ ಆಕಾಶದ ಅಗಲದಷ್ಟು
ನಮ್ಮ ಮುಖಸ್ತುತಿ.

೧೪೮.
ಸಮಬಲ ಮತ್ತು ಸ್ವಾರಸ್ಯಗಳೆರಡೂ
ಬಿಳಿಯ ಗೋಡೆಯ ಕೆಡಿಸಲು
ಇದ್ದಿಲಿನಿಂದ ಬರೆದ ಕಪ್ಪು ಅಕ್ಷರಗಳು.

೧೪೯.
ಹಿಂದಿನ ಮಹರ್ಷಿಗಳಿಗೆ
ವಿದ್ಯುತ್ ಇರದಿದ್ದರೂ
ಅವರ ಮಾತಿನ ಪ್ರಯೋಗ
ಇಂದಿನ ವಿದ್ವತ್ತನ್ನೂ ಅವಮಾನಿಸುವುದು.

೧೫೦.
ಸದಾವಕಾಶಕ್ಕೂ ಒಮ್ಮೆ
ಸ್ವಾತಂತ್ರ್ಯ ದೊರೆತರೆ
ಹಿಂದುಳಿದ ಹಳ್ಳಿಗಳೆಲ್ಲ
ನಗರಗಳನ್ನೂ ನಾಚಿಸುವವು.

೧೫೧.
ಸ್ವಾಧ್ಯಾಯ ನಮ್ಮ ದೈನಂದಿನ
ಬದುಕಿನ ಹಣ ಸೆಳೆಯುವ
ಎ.ಟಿ.ಎಮ್ ಇದ್ದ ಹಾಗೆ.

೧೫೨.
ಗಬ್ಬೆದ್ದು ನಾರುವ ನಗರಗಳು
ಹಿಂದಿನ ಪರಂಪರೆ ಮೀರಿಸುವಂತಿವೆ.

೧೫೩.
ಅಗಾಗ ಬೆನ್ನು ಮುಟ್ಟಿಕೊಳ್ಳುವ
ಆತುರ ಮುಖಕ್ಕೆ ಮುಖ ಕೊಡದ
ವಾಚಾಳಿಗಳ ವಾದ ವಿವಾದ.

೧೫೩.
ನಾವು ನೆನಪಿಸಿಕೊಂಡಾಗಲೊಮ್ಮೆ
ಮಾಂತ್ರಿ ಕ ಲೋಕದ ಪರಿಚಯ
ನಾವೆ ಹಚ್ಚಿದ ಮರಗಳು.

೧೫೪.
ಶುದ್ದೀಕರಣ ಪ್ರಕ್ರೀಯೆ
ಇಂದು ನಿನ್ನೆಯದಲ್ಲ
ಅದು ಹಿಂದಿನಿಂದಲೂ
ಹರಿದು ಬಂದ ಮತ ಸಂಪ್ರದಾಯ.

೧೫೫.
ಹುಬ್ಬೇರುವ ಮೊದಲು
ದಾರಿ ಕಾಣದು,ದಾರಿ ಸಿಕ್ಕಾಗ
ಜೊತೆ ಇರುವವರೆಲ್ಲರೂ
ಕಾಣದಾಗುವರು.

೧೫೬.
ಪೋಟೋ ತೆಗೆಯುವ
ಮೊದಲು ವೇದಿಕೆಯ ಮೇಲೆ
ಹಲ್ಲು ಕಿರಿಯುವ ವಿಧಾನ
ಬಹಳ ದಿನಗಳಿಂದ ರೂಢಿ ಇದೆ.

೧೫೭.
ಎಲ್ಲರೂ ನಮ್ಮವರೆಂದು
ಬೀಗುವ ಮೊದಲು ಪಕ್ಕದಲ್ಲೇ
ಇದ್ದವರನ್ನು ಒಂದು ಬಾರಿ ನೋಡಲು
ಮರೆಯದಿರಿ.

೧೫೮.
ಕೂಗಾಡಿ ಹಾಡುವ ಮೊದಲು
ದ್ವನಿ ಚೆನ್ನಾಗಿರಬೇಕಾದದ್ದನ್ನು
ವಾದ್ಯ ನುಡಿಸುವವರೂ ಅರಿತಿರಬೇಕು.

೧೫೯.
ವೇದಿಕೆಯ ಮೇಲೆ ಭಾಷಣ
ಮಾಡುವವರೆಲ್ಲರೂ ಒಂದಲ್ಲ ಒಂದು
ರೀತಿಯಲ್ಲಿ ವಿರಾಗಿಗಳು.

೧೬೦.
ಬೇಷರತ್ತಾಗಿ ವಾದ್ಯ
ನುಡಿಸುವವರೆಲ್ಲರಿಗೂ
ಮುಖಲಕ್ಷಣವಿರಬೇಕು.

‌‌ ‌‌‌‌‌ ‌‌// ಸುರೇಶ ಜಕಾತಿ.ಜಮಖಂಡಿ//
8746086658.

- ಸುರೇಶ ಜಕಾತಿ.ಜಮಖಂಡಿ

12 Jan 2020, 11:29 pm