ಬೆಳಗು ಕವಿತೆ( ಮಾತೃ ಸ್ವರೂಪ)
----------------------------------
ನಿನ್ನೊಡಲ ಧ್ವನಿಯಾದ ನನಗೆ
ಹೂ ಬಿಡುವ ಯೌವ್ವನ;
ಮಕರಂದ ಸವಿಯಲು ಇನ್ನೂ ಬಾರದ
ದುಂಬಿಯ ಮೌನ ಮೀರಿದ ಗಾನಯಾನ.
ನಿನ್ನಂತರಂಗಕ್ಕೊಂದು ನೆನಪಿನ ಚುಕ್ಕೆ ನಾನು
ಹೊಳಪು ನೀಡಿದ ನಿನ್ನ ವಾತ್ಸಲ್ಯ
ಚಿದಾಕಾಶದಲ್ಲಿ ಕೋಟಿ ನಕ್ಷತ್ರಗಳ ಮೆರಗು
ಗೆಲ್ಲುವ ಪ್ರತಿ ರಂಗದಲ್ಲೂ ನಿನ್ನದೇ ಹೆಸರು.
ನಾನಾಡುವ
ಪದ-ಶಬ್ಧಗಳ ಸಂಯೋಜನೆಗೆ
ವೀಣೆ ನುಡಿಸುವ ಆ ನಿನ್ನ ಹೃದಯ ದ್ವನಿ;
ಮೃದಂಗದ ಅಲೆಗಳು ಕಿವಿಗೆ ಅಪ್ಪಳಿಸಲು
ಹುದುಗಿ ಹೋಗಿದ್ದವು ಆ ನಿನ್ನ ನುಡಿಗಳು.
ಬಿದ್ದು ಎದ್ದಾಗಲೊಮ್ಮೆ
ಹೆಚ್ಚಾಗುತ್ತಿರುವ ಈ ಬದುಕಿನ ಭಾರ ಕಳೆಯಲು
ಶೃತಿ ಹಿಡಿದು ತಾಳ ಹಾಕುತ್ತಿದೆ
ಸೂರ್ಯನ ಬೆಳಕಿನಲ್ಲಿ ಮಂದವಾಗಿ
ಇನ್ನೂ ಕಾಣದ ನಕ್ಷತ್ರದಂತೆ ಆ ನಿನ್ನ ನಗು.
ಹಿಂದಿನ ಜನುಮದ ಇಂದಿನ ಋಣ
ನಾನಾಗಿದ್ದೇನೆ ನಿನ್ನ ಮಗು
ಹಸಿರಾಗಿ,ಹೆಸರಾಗಿ,ಎದೆಯುಸಿರು ನೀನಾಗಿ
ತೆನೆಭಾರ ಹೊತ್ತ ಸಸಿಯಂತೆ ಆ ನಿನ್ನ ತಾಳ್ಮೆ
ಬಾನೆತ್ತರಕ್ಕೆ ಬೆಳೆದರೂ; ವಂದಿಸಲೇಬೇಕು
ಕ್ಷಮಯಾಧರಿತ್ರಿ ನೀನು ನನಗೆ.
ನಿನ್ನೊಟ್ಟಿಗೆ ( ಕವಿತೆ)
---------------------------
ನಕ್ಕು ಬಿಡು ಒಮ್ಮೆ
ನಿನ್ನೊಡನೆ; ನನ್ನ ಕಡು ಕಷ್ಟಗಳು
ಮಾತನಾಡುತ್ತಿವೆ;ದೂರ ಸರಿದರೂ
ಪ್ರತಿ ಬಾರಿ ಮೈಕೊಡವಿ
ಎದ್ದು ನಿಲ್ಲುತ್ತವೆ.
ನಕ್ಕಾಗಲಾದರೂ
ಬಾರದ ಬಿಕ್ಕಳಿಕೆ ಬಂದು ಬಿಡಲಿ.
ಅಮೃತ ತತ್ವಗಳೇ ಮರೆತುಹೋಗಿವೆ
ನೀ ನನ್ನ ಮರೆತಂತೆ;ಅಂದಿನ ಕಷ್ಟಗಳು
ಮರೆತು ಬಿಡಲಿಲ್ಲ ನನ್ನನ್ನು;
ಆಗಲಾದರೂ ಸಿಗಬಹುದು
ಎಂಬ ಹುಸಿ ಬರವಸೆ
ನನಗೆ.
ನಿನ್ನ ಕಣ್ಣ ಮುಂದಿನ ಜಗತ್ತು
ಆ ನನ್ನ ಮಕ್ಕಳು ;
ನೋಡಬಾರದೇ ಒಮ್ಮೆ
ಅವರ ನಲಿವುಗಳನ್ನು;
ನಿನ್ನನ್ನು ಸಂತೈಸುವ
ಹಾರೈಕೆ ಮಾತ್ರ ನನ್ನಲ್ಲಿದೆ
ದೇವರ ಮುಂದಿಟ್ಟ ಅಗರಬತ್ತಿಯಂತೆ,
ಇಂದು ನೀನು ನನಗೆ.
ಅಳಲು ನಿನ್ನಲ್ಲಿ ಕಣ್ಣೀರು
ಉಳಿದಿಲ್ಲ ಒಂದು ಹನಿ,
ಅಳಲೇಬೇಕಾದ ಅನಿವಾರ್ಯತೆ
ನಿನ್ನಲ್ಲಿದ್ದರೆ;ನಾ ಅಳಿದ ಮೇಲೆ ಅಳು.
ಅಳುವಿನ ಹಿಂದಿನ ನಗು
ಆಗಲಾದರೂ
ತಿಳಿದೀತು ನಿನಗೆ.
ನಿಮ್ಮ ಕಣ್ಣ ನಂದದೀಪಾವೆಂದ
ನಾನು
ನಿಮ್ಮ ಅಸಾರೆಯಲ್ಲಿ ಬದುಕುತಿದ್ದೆ
ಆ ಕ್ಷಣದಿ
ಆಸೆ ಹುಟ್ಟಿಸಿತ್ತು ನಿಮ್ಮ ಪ್ರೀತಿ
ದುರ್ವಿದಿಯಂತೆ ಒದಗಿತು
ನಿಮ್ಮ ಆಗಲಿಕೆ
ಅದರಿಂದ ನೊಂದ ನಾನು
ನೀವೂ ನನ್ನ ಬಳಿ ಇರುವಿರಿ ಎಂದು
ಹುಯೆಯಲ್ಲಿ ಬದುಕುತಿರುವೆ
ಮಾತುಗಳಿಗೊಂದು ಮೌನ ಪೋಣಿಸಿ,
ಬುದ್ದಿಯನ್ನು ಎದೆಹಿಡಿತಕ್ಕೆ ತಾಗಿಸಿ,
ಕುಣಿಯುತ್ತ ಪಿತ ಅಂತಃಕರಣದ ಹೆಣ್ಣು,
ನೀನಾದ ಮೇಲೆ,ಸಂಗೀತ ಶೃತಿಯು ನಾನಾಗಿ
ಹುಣ್ಣಿಮೆಯ ಬಯಲಲ್ಲಿ ತಂಪಾದ ಚಂದಿರನು
ಕಂಪಾದ ಸೊಂಪಾದ ಬೆಳದಿಂಗಳು ಹಾಸಿರಲು,
ಒಮ್ಮೆ ಕೈ ಮಾಡಿ ನೀ ಯನ್ನ ಕರೆಯಬಾರದೇ!
ಕೇಳುವ ಕಿವಿಗಳಿರುವವು , ಓಲೆ ನೀ ಪೋಣಿಸಿರುವೆ,
ಮನದ ಮೃದಂಗವನ್ನೊಮ್ಮೆ ಬಾರಿಸಬಾರದೇ,
ಎದೆಯ ಬಂಧನದ ಬನದೊಳಗೆ ಸದಾ ಪ್ರೇಮದಾ ಅಮಲು ,
ಪ್ರೀತಿಯ ನಶೆ ನೀ ಏರಿಸಬಾರದೇ!
ಬಾನಂಗಳದಿ ಬಾನಾಡಿ ಹಾರಾಡಿ,ಹಾರಾಡಿ,
ಹಕ್ಕಿಗಳು ತಾವಾಗಿಯೇ ಸೇರಿ ರುಜು ಮಾಡುವಂತೆ
ದೇವರು ಹೊಸೆದ ಪ್ರೇಮದಾರವನ್ನೊಮ್ಮೆ ನೀ ನೆನೆಯಬಾರದೇ!
ಒಮ್ಮೆ ಕೈ ಮಾಡಿ ನೀ ಎನ್ನ ಕರೆಯಬಾರದೇ!
ನಾನು ನೋಡ ಹೊರಟಾಗಲೊಮ್ಮೆ ,
ನಿನ್ನ ಮೂಗುತಿಯ ಹೊಳಪು, ಮಿಂಚು ತಾಗಿಸಿ ,
ಹೊಳೆಯುವ ನಕ್ಷತ್ರವೇ ನೀನಾಗಿರಲು ,
ಮನಕೆ ಮಂದಾರವ ನೀ ತೋರಬಾರದೇ!
ಕನಸಿನಲ್ಲೊಮ್ಮೆ ಸ್ವಪ್ನ ನೀನಾಗಿ
ಕಾಮನ ಬಿಲ್ಲಿನಲಿ ಕಂಡ ಏಳು ಬಣ್ಣದ ಚೆಲುವೆ,
ಒಮ್ಮೆ ಕೈ ಮಾಡಿ ನೀ ಯನ್ನ ಕರೆಯಬಾರದೇ!
ನವಿಲು ಕಣ್ಣಿನ ಚೆಲುವೆ ಇಂಪಾದ ಒಲವ ತೋರಿ,
ಚಿತ್ತತಾಳ ಬಾರಿಸಲು ಹೃದಯವೀಣೆಯ ನುಡಿಸಿ,
ಧ್ಯಾನದೊಳಗಿದ್ದ ಮೌನ ಸನ್ಯಾಸಿ ನಾನು,
ಬಿಕ್ಕಳಿಕೆ ಬಾರದ ಬಿಸಿಯಾದ ಏದುಸಿರು ತರಿಸಲು,
ಹಸಿರು ಬಳ್ಳಿಯ ಮೇಲೆ ಹರಡಿರುವ ಹೂ ನೀನಾಗಬಾರದೇ,
ಕೌಸ್ತುಭವ ಹೊರ ಸೂಸಿ ಮಲ್ಲಿಗೆಯ ಬಿರುನಗೆಯ ಬೀರಿ,
ಒಮ್ಮೆ ಕೈ ಮಾಡಿ ನೀ ಎನ್ನ ಕರೆಯಬಾರದೇ!
ಇಂದೆಷ್ಟೋ ನಾಳೆಗಳು ಹಿಂದೆಷ್ಟೋ ಆದವು,
ಸಮ ರಸದ ಸರಸತಿಯು ನೀನಾದ ಮೇಲೆ
ಬ್ರಮರಕ್ಕಿನ್ನೂ ಗಂಟೆ ಜಾಗಟೆಯ ಸದ್ದು ,
ದುಂದುಬಿಯು ನಾವಾಗಿದ್ದೇವೆ; ಎಲ್ಲಿದೆ ಸಂತೃಪ್ತಿ?
ಶಿವನ ಸನ್ನಿಧಾನವು ಇನ್ನೂ ದೂರ, ಬಹುದೂರ,
ಇನ್ನಾದರೂ ಸುರಿಸಬಾರದೇ ನೀನು ಪ್ರೀತಿಯ ರಸ
ತೇರು ಎಳೆಯೋಣ ಬಾ ನಾವು,
ಜತೆ ಸೇರಿದಾಗಲೇ ಪ್ರೀತಿಯ ಸಮರಸ,
ಸೂರ್ಯನೇ ಬಂದಿಹನು,
ಎದೆಯಂಗಳವನ್ನೊಮ್ಮೆ ಹದಮಾಡಿ ಗುಡಿಸಬಾರದೆ,
ಒಮ್ಮೆ ಕೈಮಾಡಿ ನೀ ಎನ್ನ ಕರೆಯಬಾರದೇ!
// ಮೃದಂಗಜ//
ಸುರೇಶ ಜಕಾತಿ.ಜಮಖಂಡಿ
8746086658
Read my thoughts on YourQuote app at https://www.yourquote.in/suresh-jakati-bciz7/quotes/gjl-teeru-elleyoonn-baa-1qovb