Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವಿಪಲ ಪ್ರೇಮ

ನಿನಗಾಗಿ ಕಾಯುವ ಬದಲು,
ಕಲ್ಲ ಮುಂದೆ ಕಾದಿದ್ದರೆ, ಕಲ್ಲಿಗೆ ಜೀವ
ಬರುತ್ತಿತ್ತೋ ಏನೋ?
ನಿನಗಾಗಿ ಕಣ್ಣೀರ್ ಇಡುವ ಬದಲು,
ಕಲ್ಲ ಮುಂದೆ ಅತ್ತಿದ್ದರೆ, ನನ್ನ ಕಣ್ಣೀರ
ಓರುತ್ತಿತ್ತೋ ಏನೋ?

- Basavanna Lanke

04 Feb 2020, 10:11 am

ಶೇಷ

ನಿನ್ನ ನಿರೀಕ್ಷೆ ಯ
ಆಕಾಂಕ್ಷೆಯ
ಗಣತಿಯಲ್ಲಿ
ಅಗಣಿತ
ನಕ್ಷತ್ರ ಗಳ
ಗುಣಿತ


ಭಾವನೆಗಳು
ಸಂಕಲನ
ವ್ಯವಕಲನ

ಒಲವು
ಭಾಗಾಕಾರ

ವಿರಹ
ಶೇಷ

- Kencharayappa Kaviok

04 Feb 2020, 07:54 am

ಮನಸನ ಮಾತು

ಸುಂದರ ವನದಲ್ಲಿ ಅರಳಿದ ಕೇಂದಾವರೆ ನೀ
ಆಕಾಶದಿ ಹಾರುವ ಹಕ್ಕಿ ನೀ
ನನ್ನ ಉಸಿರ ಏರಿಳಿತವು ನೀ
ಹೇಳದ ಸಾವಿರ ಮಾತಿಗೆ ಸ್ಪೂರ್ತಿ ನೀ
ಎಷ್ಟು ಹೇಳಿದರು ಬಣ್ಣಿಸಲಾಗದ್ದ ಚಲುವೆ ನೀನು
ಈ ಕವಿತೆ ಬರೆದ ಪ್ರೇಮಿ ನಾನು

- bharath kumar r

03 Feb 2020, 10:01 pm

ರಾಧಾಕೃಷ್ಣ

ನನ್ನ ಸುತ್ತ - ಮುತ್ತಲು ಎಷ್ಟೋ ಜನ ಗೋಪಿಕೆಯರು ಇದ್ದರೂ, ನನ್ನ ಮನಸು ನಿನ್ನ ದ್ಯಾನದಲ್ಲೇ ಮುಳುಗಿರುವುದಲ್ಲೇ ರಾಧೆ.....
ನನನ್ನು ಎಲ್ಲರೂ ತಮ ತಮಗೆ ಸ್ವಂತ ಅಂಥ ಅಂದುಕೊಳ್ಳುವರು ಅವರಿಗೆ ತಿಳಿಯದ ಸಂಗತಿಯೆಂದರೆ ನೀ ನನ್ನ ಮನದರಸಿಯೆಂದು...
ಈ ಪ್ರಪಂಚದ ಹಾಗು - ಹೋಗುಗಳನ್ನು ನೋಡುವ ನಾನು ನಿನ್ನ ಮಡಿಲಲ್ಲಿ ಮಲಗಿ ಕೊಳಲು ನುಡಿಸುತ್ತಾ ಪ್ರೇಮನೂರಾಗದಲ್ಲಿ ಮೈ ಮರೆಯುವೆ,
ಇಡೀ ಜಗತ್ತು ನನನ್ನು ಕಳ್ಳಯೆನ್ನುವದರಲ್ಲಿ ತಪ್ಪೇನಿಲ್ಲ.....
ಯಾಕಂದರೆ ನನನ್ನು ನಾನೇ ಮರೆಯುವಸ್ಟು ನನ್ನ ಪ್ರೀತಿಸುವ ಈ ನಿನ್ನ ಮನವ ಕದ್ದಿರುವೆ,
ನಿನ್ನ ನನ್ನ ಮನವು ಸೇರಿದಂತೆ ನನ್ನ ಹೆಸರಿನ ಜೊತೆ ನಿನ್ನ ಹೆಸರು ಸದಾ ಪ್ರೀತಿಗೆ ಸ್ಪೂರ್ತಿಯಾಗಿರಲಿ


- VenuCA

03 Feb 2020, 12:21 pm

ಕನ್ನಡಿ

ನನ್ನ ತಪ್ಪುಗಳು,
ನನ್ನೆದೆಯಲ್ಲಿ ಪ್ರಜ್ವಳಿಸೋ ಕಿಡಿಗಳು..
ನನ್ನನ್ನು ಸುಡದೆ,
ಅವು ಸಾಯಲಾರವು..

- deepu

03 Feb 2020, 12:13 am

ಚೆಲುವೆ

ಪ್ರೀತಿಯ ಪಾರಿವಾಳ
ಹಾರ ಬಲ್ಲೆಯ್ಯಾ ಮುಗಿಲೆತ್ತರಕ್ಕೆ
ನನ್ನ ಒಲವಿನ ಅಭಿಮಾನಕ್ಕೆ
ನನ್ನ ಉಸಿರಿನಲ್ಲಿ ಕಾಯುತಿರುವೆ ಮನದಂಗಳದಲ್ಲಿ
ಸದಾ ಮಿನುಗುವ ತಾರೆಯ
ನಗುವಿನ ಚಿಲುಮೆಯಲ್ಲಿ
ಮಗುವಾಗಿ ಸದಾ ಹಂಬಲಿಸಿತಿರುವೆ ಚೆಲುವೆ...

- ಎ ಜಿ ಶರಣ್

02 Feb 2020, 11:33 pm

ಮನದ ಮಾತು

ತೀಳಿಯದಿ ನಾ ತಪ್ಪು ಮಾಡಿದೆ
ಪ್ರೀತಿ ಬಯಸಿ ನಿನ್ನ ಮನ ನೋಯಿಸಿದೆ
ನನ್ನ ಇಷ್ಟ ಹೇಳಿ ನಾ ನಿನ್ನ ಕಾಡಿದೆ
ತೀಳಿಯದೆ ಮಾಡಿದ ತಪ್ಪಿಗೆ ನಾ ದಿನವು ಪರಿತಪಿಸಿದೆ
ಒಂದು ಸಲ ಕ್ಷಮಿಸಿ ಬಿಡು ನಾ ನಿನ್ನ ಪ್ರಿತಿಸಿದೆ

- bharath kumar r

02 Feb 2020, 08:39 pm

ಮನಸಿನ ಮಾತು

ಅಂದದ ಭೂಮಿಯ ಮೇಲೆ
ಸುಂದರ ಚಿತ್ರ ಬರೆದು
ಬಣ್ಣಿಸಲೆಂದು ಬಂದಿರುವೆ
ಈ ಸೌಂದರ್ಯವನ್ನು
ಇನ್ನೇನು ಹೆಚ್ಚು ಹೇಳುವುದು
ಭೂವಿಗೀಳಿದ ಚಿತಾರ ನಿನ್ನು
ಇಂತೀ
ಭರತ್ ಕುಮಾರ್ ಆರ್ ಬಿ

- bharath kumar r

02 Feb 2020, 08:23 pm

ಅವನ ಕಣ್ಣಲ್ಲಿ ಬಚ್ಚಿಟ್ಟ

ಅವನ ಕಣ್ಣಲ್ಲಿ ಬಚ್ಚಿಟ್ಟ
ಅವಳ ಆ ಅಂದ
ಕಂಬನಿಯಾಗಿ ಹರಿದು
ಕೊರಳ ಬಳಸಿ ಆರಿತು!!

ಅವನ ಹೃದಯದಿ ಬಚ್ಚಿಟ್ಟ
ಮೊದಲ ಒಲವಿನ ಚೆಂದ
ಹೇಳದೇ ಉಳಿದುಹೋಗಿ
ಎದೆಯನ್ನು ಚುಚ್ಚಿತು!!

ಅವನು ಅದರದಲಿ ಬಚ್ಚಿಟ್ಟ
ಹೇಳದ ಸ್ವರವೊಂದ
ಗಧ್ಗದಿಸಿ ಮೌನದ ಸೆರೆಯಲ್ಲಿ
ಸಿಲುಕಿ ಮರೆಯಾಯಿತು!!

- ಪಿ.ಜಿ.ಜ್ಯೋತಿ

02 Feb 2020, 11:50 am

ಕವನದ ಅಂಗಳ

ಕವನದ ಅಂಗಳ
ನಿನ್ನಯ ಈ ಕಂಗಳು!!
ನಿನ್ನನು ನಾ ನೋಡಿದ
ಆ ದಿನವೇ ಬೆಳದಿಂಗಳು!!

ನಕ್ಷತ್ರದ ಊರಿನಿಂದ
ನೀ ಭುಮಿಗೆ ಜಾರಿ ಬಂದೆ!!
ಅಂಗೈಯ ಬೊಗಸೆ ತುಂಬ
ಒಲವನ್ನು ತುಂಬಿ ತಂದೆ!!

ಹೂದೋಟದಲ್ಲಿ ನೀ ಅರಳಿ
ಸೌಗಂಧ ಸೂಸಿ ನಿಂತಿರುವೆ!!
ನನ್ನೆದೆಯ ಮಿಡಿತ ನೀನಾಗಿ
ನವ ರಾಗವನು ಮೀಟಿರುವೆ!!

ಸಾಗರದ ಅಲೆಗೆ ಮುತ್ತಿಟ್ಟು
ಚಿಪ್ಪಲ್ಲಿ ಅವಿತು ನಕ್ಕಿರುವೆ!!
ಪರ್ವತದ ಶಿರವ ನೀ ಏರಿ
ಆಗಸಕೆ ಕೈ ಚಾಚಿರುವೆ!!

ಒಲವೆಂಬ ಮಳೆಯ ಸುರಿಸಿ
ನೆನೆದಾಗ ನಡುಕವೆ ಚೆಲುವೆ!!
ಬಿಸಿ ಅಪ್ಪುಗೆಗೆ ಇದೆ ಒಪ್ಪಿಗೆ
ಎದೆಯಾಳ ಸೇರಿಕೋ ಒಲವೇ!!

- ಪಿ.ಜಿ.ಜ್ಯೋತಿ

02 Feb 2020, 11:38 am