ಮಾತುಗಳ ಪೆಟ್ಟಿಗೆಯಲ್ಲಿ ತುಂಬಿಕೊಂಡಿವೆ ಭಾವನೆಗಳು,
ಆದರೆ ತುಟಿಗಳ ಬಾಗಿಲು ತೆರೆದುಕೊಳ್ಳುತ್ತಿಲ್ಲ.
ಹೃದಯದ ಸಾಗರದಲ್ಲಿ ಅಲೆಗಳು ಎದ್ದರೂ,
ಹೊರಗೆ ಬಂದು ಹೊಮ್ಮಲು ದಾರಿಯಿಲ್ಲ.
ಕಣ್ಣುಗಳು ಹೇಳಲು ಬಯಸುತ್ತಿವೆ ಸಾವಿರ ಕಥೆಗಳು,
ಆದರೆ ನೋಟದಲ್ಲಿ ಮಾತ್ರ ಮೌನದ ಹಚ್ಚೆ.
ಕಿವಿಗೆ ಹತ್ತಿರ ಬಂದು ಹೇಳಬೇಕೆನಿಸುವುದೂ,
ಓಸೆಯಾಗಿ ಹಾರಿ ಹೋಗುತ್ತಿದೆ.
ಮನಸಿನಲ್ಲಿ ಬರೆಯುತ್ತಿದ್ದೇನೆ ಅಕ್ಷರಗಳ ಸಾಲು,
ಆದರೆ ಲೋಕಕ್ಕೆ ಅದು ಕಾಣಿಸುವುದಿಲ್ಲ.
ಹೇಳಲು ಬಹಳಿದೆ, ಹೇಳಲಾಗುತ್ತಿಲ್ಲ…
ಮೌನವೇ ನನ್ನ ಭಾಷೆ, ಭಾವನೆಗಳೇ ನನ್ನ ಪದ್ಯ.
ಸಂಜಯ್?
- Sanjay
21 Aug 2025, 10:54 pm
- ಅನುಷಾ.ರೈ
19 Aug 2025, 07:30 pm
ಕಳೆದೋದೆ ನಾ ನಿನ್ನ ಇಳಿ ಸಂಜೆ ಕೆನ್ನೆಯಲಿ
ಸೆಳೆದೋದೆ ನಾ ನಿನ್ನ ನೆರಿಗೆಯ ಅಂಚಿನಲ್ಲಿ
ಅರಳಿದ ಎದೆಯಲ್ಲಿ ನಿನದೇ ನಗು
ಹುಚ್ಚೇದ್ದ ಕನಸೀನ ಸೋಗು
ನಾ ನಿನಗೆ ನೀ ನನಗೆ ಮಡಿಲಾ ಮಗು
ಪ್ರೀತಿಯ ಜೋಗುಳಲಿ ತೂಗು
ತುಟಿ ನನ್ನಲ್ಲಿ ತಡವರಿಸಲು
ಮುತ್ತಿಂದ ಮಾತಾಡಿ ಹೋಗು......
ಕಳೆದೋದೆ ನಾ ನಿನ್ನ ಇಳಿ ಸಂಜೆ ಕೆನ್ನೆಯಲಿ.
ಪಿಸು ಮಾತು ನೀ ಹೇಳಿ ಹೋಗು
ತುಸು ಲಜ್ಜೆ ಮೂಡೊ ಮುನ್ನ..
ಬಿಸಿ ಉಸಿರು ಆಲಂಗಿಸಿ ನೋಡು,
ಎಳೆ ಮನಸು ಮಾಗೊ ಮುನ್ನ..
ಓ...ಏಳೆಳು ಜನುಮ
ನೀ ನನ್ನಾಸಂಗ
ಇರುವೆ ಎಂದು ಭಾಷೆ ನೀಡು ಬಾ
ಕೈ ಮೇಲೆ ಕೈ ಹಾಕಿ.......
ಕೈ ಮೇಲೆ ಕೈ ಹಾಕಿ.......
✒️ ಅನಿಲ
- ANIL.R.C
19 Aug 2025, 12:04 pm
- Shivanand Jadi
13 Aug 2025, 12:17 pm
ಮಿತಿ ಮೀರಿದ ಮನಸಿನ ಭಾವನೆಗಳು
ಕಣ್ಣಲ್ಲೆ ನನಸಾಗದೆ ಉಳಿದಿರುವ ಅದೆಷ್ಟು ಕನಸುಗಳು
ಕೈಗೆಟುಕದೆ ಕೈಲಾಸದೆತ್ತರಕೆ ಕೈ ಚಾಚಿಸುವ ಧನ ಧಾನ್ಯಗಳು
ಇತ್ತ ಮನೆಯ ಜವಾಬ್ದಾರಿ ಅತ್ತ ಪ್ರೀತಿಯ ರಾಯಭಾರಿ ನೂರೆಂಟು ದಾರಿಗಳು