Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುರಿದ ಮನಸಿನ ತಲೆ ಸವರುವವರ್ಯಾರು

ಮುರಿದ ಮನಸುಗಳಲ್ಲಿ ಮೌನ ಆವರಿಸಿ... ಮಾತುಗಳು ಮೌನಕ್ಕೆ ಶರಣಾಗಿ...
ಹಳೆಯ ನೆನಪುಗಳು ಮನದಲ್ಲಿ ಸುಳಿದಾಡುತಿರುವಾಗ ದುಃಖ ಮನದೊಳಗೆ ಉಕ್ಕಿ ಕಂಗಳಲ್ಲಿ ಕಣ್ಣೀರು ಸುರಿಸುವಾಗ ಆ ಮುರಿದ ಮನಸಿಗೆ ತಲೆ ಸವರುವವರ್ಯಾರು...?

- Mallesh

30 Jan 2020, 04:39 pm

ನಲ್ಲೆ

ನಿನ್ನ ಕಣ್ ಮಿಂಚಿಂದ ಸೆಳೆದಿಟ್ಟೆ ನಲ್ಲೆ,
ಅದರ ಸಂಚ ನಾನೇನು ಬಲ್ಲೆ..?
ಮನಸಾರೆ ನಿನಗೆ ಮನಸೋತೆ ಮಲ್ಲೇ..
ಆದರೂ ಕರಗದ ನಿನ್ನ ಹೃದಯ ಕಲ್ಲೇ..???

- deepu

30 Jan 2020, 04:37 pm

ನನ್ನ ಪ್ರಾಣ ಉಳಿಸು ಬಾ

ಓ ಪ್ರೀತಿಯ ಪೂಜಾಳೇ ಹೇಳು ಬಾ....
ಈ ಕುರುಡು ಹೃದಯಕ್ಕೆ ದಾರಿಯ ತೋರು ಬಾ...

ಮನದ ಅಂತರಾಳದೊಳಗೆ ನೀ ಸೇರು ಬಾ...
ಪ್ರೀತಿಯ ಕೊರತೆಯ ನೀ ತುಂಬು ಬಾ .....

ನನ್ನ ಉಸಿರಲ್ಲಿ ಬೆರೆತು ಬಾ...
ಹೃದಯದ ಬಡಿತವ ಕೇಳು ಬಾ...

ನೆತ್ತರಿನಲ್ಲಿ ಬೆರೆತು ಬಾ....
ನನ್ನ ಪ್ರಾಣ ಉಳಿಸು ಬಾ...

✍️ ನಿನ್ನ ಪ್ರೀತಿಯ
ಪವನ

- Pavankumar Honawad

30 Jan 2020, 09:06 am

ನಿನ್ನ ನೋಡಿದ ಕ್ಷಣವೂ ಕಾಡಿದೆ

ನಿನ್ನ ನೋಡಿದ ಕ್ಷಣವೂ ಕಾಡಿದೆ
ನನ್ನ ಹೃದಯವು ತನನ ಎಂದಿದೆ!!
ಕವನ ಬರೆಯುವ ಗೀಳು ಹತ್ತಿದೆ
ಮನದ ಪುಸ್ತಕ ತುಂಬಿ ಹೋಗಿದೆ!!

ಈ ಏಕಾಂಗಿಯ ಸಂಚಾರದಲಿ
ಜಾತ್ರೆಯ ಮೆರವಣಿಗೆ ದಿನ ಸಾಗಿದೆ!!
ಬಿಳಿ ಹಾಳೆಯ ಕಲ್ಪನೆಯಲಿ
ಬಣ್ಣದ ಚಿತ್ತಾರ ತಾ ಮೂಡಿದೆ!!

ಆ ಚಂದ್ರಮನ ಮರೆಮಾಡಲು
ಬಾನಿಗೆ ಚಪ್ಪರವ ಹಾಕಬೇಕಿದೆ!!
ಚುಕ್ಕಿ ತಾರೆಗೆ ಕೂಡಿ ಕಳೆಯುವ
ಲೆಕ್ಕಾಚಾರವ ಹೇಳಿ ಕೊಡಬೇಕಿದೆ!!

ನಾ ಸಾಗಲು ಹೆಜ್ಜೆ ಗುರುತದು
ಹಿಂದೆ ಬರುತ ಈಗೀಗ ಕೆಣಕುತ್ತಿದೆ!!
ಕಂಡು ಕಾಣದ ಹೊಸ ಲೋಕವು
ಕೈ ಬೀಸಿ ನನ್ನನ್ನು ಕರೆದಂತಿದೆ!!

- ಪಿ.ಜಿ.ಜ್ಯೋತಿ

29 Jan 2020, 10:48 am

ಕನಸಿನ ಕನ್ಯೆ...

ಕನಸಿನ ಕನ್ಯೆ ಕಲ್ಪನೆಗೂ ಮೀರಿದ್ದಳು...
ಕಣ್ಬಿಟ್ಟು ನೋಡಿದರೆ ಕತ್ತಲು ಕತ್ತಲು...
ಹುಡುಕಾಡಿದೆ ನಾ ಎಲ್ಲಾ ಸುತ್ತಲೂ...
ಕಾಣಲೇ ಇಲ್ಲ ನೋಡಿದರು ಎತ್ತಲೂ...
ಆಗ ಅನಿಸಿತು ಮನಸಿಗೆ ಇದು ಕನಸೇ... ✍️ಮಲ್ಲ...

- Mallesh

28 Jan 2020, 05:32 pm

ಸಂಸಾರವೆಂಬುದೊಂದು ಗೂಳಿ.

ಸಂಸಾರವೆಂಬುದೊಂದು ಗೂಳಿ.
ಆಶೆ-ಮೋಹ ಎಂಬ ಎರಡು ಕೊಂಬು ಮೂಡಿ
ಸಿಕ್ಕ ಸಿಕ್ಕ ವರಿಗೆಲ್ಲ ಗುದ್ದಾಡಿಕೊಂಡಿ,
ಉಲಿವ ಇಂದ್ರೀಯಗಳಿಗೆಲ್ಲ ನಶೆ ಏರಿಸಿಕೊಂಡಿ
ಪಾಪದ ಬಲೆಯನ್ನು ಮೈಗೆ ಸುತ್ತಿಕೊಂಡಿ
ಮಾಯೆಯನ್ನು ತಲೆಯ ಮೇಲೆ ಹೊತ್ತು ಮೆರಸಿಕೊಂಡಿ
ನಾನು; ನನ್ನದೆಂಬ ಸುಳಿಯೊಳಗೆ ಸಿಲುಕಿಕೊಂಡಿ
ಹುದಲೊಳಗೆ ಸಿಲುಕಿ ವಿಲವಿಲ ಒದ್ದಾಡುವ ಕೋಣದಂತಾದಿ.
ಗುರು ಬಸವ ಪ್ರಿಯ ರೆವಣಸಿದ್ದೇಶ್ವರನನ್ನು ಕೂಗಿ ಕರೆ..
ಅವನೊಬ್ಬನೇ ನಿನ್ನ ಮೇಲೆತ್ತಬಲ್ಲ.

ರಚಣೆ: ಆರ್ ವೀ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063

- Siddugouda

28 Jan 2020, 02:59 pm

ಹಳಿ ತಪ್ಪಿದ ರೈಲಿನಂತೆ ಜೀವನ...

ಹಳಿತಪ್ಪಿದ ರೈಲಿನಂತಾಗಿದೆ ನನ್ನ ಜೀವನ...
ಎತ್ತ ಸಾಗುತಿದೆ ಎಂದು ತಿಳಿಯದಾಗಿದೆ ಮನ...
ಉಳಿವಿಗಾಗಿ ಮಾಡಬಹುದು ಸಕಲ ಪ್ರಯತ್ನ...
ಅದೃಷ್ಟವಿದ್ದರೆ ನಡೆಸಬಹುದು ಜೀವನ...
ಇಲ್ಲವಾದರೆ ಬದುಕಿಗೆ ಅಂತಿಮ ನಮನ...
✍️ಮಲ್ಲ...

- Mallesh

28 Jan 2020, 02:21 pm

ಬೀಜದೊಳಗಿನ ವೃಕ್ಷ

ಮದ್ದಿನೊಳಗೆ ಅಡಗಿ ಕುಳಿತ ಬೆಂಕಿ,
ಮಣ್ಣು, ಜಲ,ಗಾಳಿ,ಸೂರ್ಯರಶ್ಮಿಯೊಳಗೆ ಅಡಗಿ ಕುಳಿತ ಜೀವ ಸೆಲೆ,
ಬೆಳಕಿನೊಳಗೆ ಅಡಗಿ ಕುಳಿತ ಪರಂಜ್ಯೋತಿ,
ಧ್ವನಿಯೊಳಗೆ ಅಡಗಿ ಕುಳಿತ ಪ್ರಶಾಂತತೆ,
ಬೀಜದೊಳಗೆ ಅಡಗಿ ಕುಳಿತ ವೃಕ್ಷ ದ ಪ್ರತಿಬಿಂಬ,
ಅನಂತಾತೀತದೊಳಗೆ ಲೀನವಾಗಿ ಕುಳಿತ ಜಗದೀಶ್ವರ,
ಶರಣರ ಅಂತರಂಗದಲ್ಲಿ ಅಡಗಿ ಕುಳಿತ ಗುರು ಬಸವ ಪ್ರಿಯ ರೇವಣಸಿದ್ದೇಶ್ವರ ನೀವೇ ಪ್ರಮಾಣು.

ರಚಣೆ:ಆರ್ ವೀ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063

- Siddugouda

28 Jan 2020, 12:40 pm

ನೋಡು ಬಾ ಇಂದು

ನಾ ನೆಟ್ಟ ಬೀಜವೊಂದು
ಮೊಳಕೆಯೊಡೆಯುತಿದೆ
ನೋಡು ಬಾ ಇಂದು !

ಅನುಭವವೇ ಆಹಾರವಾಗಿ
ಆಶಯವೇ ರಕ್ಷಣೆಯಾಗಿ
ಬೆಳೆವ ಸಸಿಯ ಸೊಗಸ
ನೋಡು ಬಾ ಇಂದು !

ಯಾವ ತಳಿಯೋ;ಫಲವೋ
ಅರಿಯದೆ ಬೆಳೆಸಿದ
ಸಮೃದ್ಧ ಸಸಿಯ
ನೋಡು ಬಾ ಇಂದು!

ಅಸಮಾನತೆಯ ಸೋಂಕು
ತಗುಲಿ ಅವಸಾನದಂಚಿನಲ್ಲಿದ್ದಾಗ
ಔಷಧ ಸಿಂಪರಿಸಿದ ವೈದ್ಯರ
ನೋಡು ಬಾ ಇಂದು!

ವಕ್ರವಾಗಿ ವಿಸ್ತರಿಸಿದ್ದ
ಸಸಿಯ ಕಸಿ ಮಾಡಿ
ಸರಿದಾರಿ ತೋರಿದ ಗುರುಗಳ
ನೆನೆಯ ಬಾ ಇಂದು!


ಶಾರದ

- ಶಕುಂತಲಾ

28 Jan 2020, 08:21 am

ಏರಿಮೇಲೆ ಏರಿ ಕುಳಿತೆ ನೀನು.

ಅಲೆಗ್ಝಾಂಡರ ಜಗತ್ತೆ ಗೆದ್ದುಬಿಡುವೆ ಎಂದು ಹೊರಟಿದ್ದ ;
ಆದರೆ ಹಾದಿ ಬೀದಿ ಯಲ್ಲಿ ಬಿದ್ದು ಹೆಣವಾಗಿದ್ದ.
ಕೋಟೆ ಕೊತ್ತಲು ಮಹಲು ಅರಮನೆಗಳ ಕಟ್ಟಿ
ಹಾಡು, ನೃತ್ಯ, ವಾದ್ಯ, ತಾಳ-ಮೇಳ, ಬಡಸಿ; ಹೊನ್ನು-ಹೆಣ್ಣು - ಮಣ್ಣು ಗಳ ಮೈ ಕುಣಿಸಿ,
ಏರಿ ಮೇಲೆ ಏರಿ ಕುಳಿತೇ ನೀನು.
ಗುರು ಬಸವ ಪ್ರಿಯ ರೇವಣಸಿದ್ದೇಶ್ವರ ಕೈ ಹಿಡಿದು ಕರೆದಾಗ,
ಕೈ ಝಾಡಿಸಿ ಹೋದ ಮರುಳೆ ನೀ ಹಳೆ ಮರುಳೆ.

ರಚಣೆ: ಆರ್ ವಿ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063

- Siddugouda

27 Jan 2020, 07:11 pm