ಅರಿಯದೇ ಹೋದೆನು ನಾ ಬಯಸಿದ್ದದಾದರೂ ಏನು,
ತಿಳಿಯದೆ ಎಡವಿದೆನು ನನ್ನ ಕನಸಿನ ಲೋಕ ನೀನೆಂದು,
ಮಂಕಾದೆನು ಈ ಕಲ್ಪನೆಯ ಲೋಕದ ತಿಳಿವನ್ನರಿಯದೆ,
ಬಿಗಿಯುತ್ತಿರಲು ಉಸಿರು , ಕಳೆದು ಹೋದೆನು ನಿನ್ನ ನೆನಪಲ್ಲಿ.
ಕಡು ಬಿಸಿಲ ಬೇಗೆಯಲಿ
ಕರಿ ಮೋಡ ಕವಿದಿದೆ
ನಿನ್ನ ಮನಸಿನ ಮುಗಿಲಿನ್ಯಾಗ
ಮಳೆ ಬೀಳುವ ಮುನ್ಸೂಚನೆ
ಬಿರುಗಾಳಿಯ ರಭಸಕೆ
ಪೂರ್ತಿ ಮೋಡವೆಲ್ಲ ಚದುರಿ ಹೋಗುತ್ತಿವೆ
ಅವಳ ನೆನಪ ಹನಿಯ ಹೊತ್ತುಕೊಂಡು.
ಬಾ ಗೆಳತಿ ಕೈ ಕೈ ಹಿಡಿದು ಬಾಳ ಬೆಟ್ಟವ ಹತ್ತೋಣ
ಕಲ್ಲು ಮುಳ್ಳಗಳ ಮೆಟ್ಟಿ ನಿಲ್ಲೋಣ
ಬಾಳ ಹಾದಿಯಲಿ ಮುಳ್ಳು ಇಟ್ಟವರಿಗೆ ಹುಡುಕಿ ಗುಲಾಬಿ ಹೂ ಕೊಡೋಣ.
ವಿಷದ ಬಟ್ಟಲು ತಂದವರಿಗೆ ಅಮೃತದ ಪಾಯಸವ ಕುಡಿಸೋಣ.
ಹರಿದ ಪಟದ ಸೂತ್ರವ ಎಳದು ತಂದು ಕಟ್ಟಿ ಮತ್ತೆ ಬಾನಿಗೆ ಪಟವ ಹಾರಿಸೋಣ.
ನಂಜೇರಿದ ಅಚ್ಚಿನಲಿ ಬೆಲ್ಲದ ಪಾಕವ ಸುರಿಯೋಣ
ನೆಲಕೆ ಕಿತ್ತಿ ಬಿದ್ದ ರೆಕ್ಕೆ ಪುಕ್ಕಗಳನು ಹೆಕ್ಕಿ ತಂದು ಅಂಟಿಸಿ ಮತ್ತೆ ರೆಕ್ಕೆ ಬಡೆಯುವಂತೆ ಮಾಡೋಣ.
ಕಣ್ಣಲ್ಲಿ ಕರಗಿದ ಕಣಸುಗಳ ಜಾಗದಲಿ ಹೊಸ ಕನಸುಗಳ ಹೆಣೆಯೋಣ
ನಾವು ನಡೆವ ಹಾದಿಯಲ್ಲಿ ಮುಳ್ಳು ಇಟ್ಟವರನ ತಬ್ಬಿ ಮುಂದೆ ನಡೆಯೋಣ
ಹೃದಯಕೆ ಆದ ಗಾಯಗಳಿಗೆ ಪ್ರೀತಿಯ ಮುಲಾಮ ಹಚ್ಚೋಣ
ಒಣಗಿದ ರೆಂಬೆ ಕೊಂಬೆಗಳಲಿ ಚಿಗರು ಒಡಮೂಡಿ ಬರಲು ಸ್ನೇಹ-ಪ್ರೀತಿಗಳೆಂಬ ನೀರು ಹಾಕೋಣ.
ಅಂದಕಾರ ಕವಿದ ಮನಗಳ ಹೃದಯ ಬಾಗಿಲಲಿ ಸಾಲು ದೀಪಗಳ ಬೆಳಗಿಸೋಣ.
ನಮಗೆರಡು ಬಗೆದವರು ಎಂದೆಂದು ಒಂದಾಗಿ ಬಾಳಲೆಂದು ಹಾರೈಸೋಣ
ಸುಟ್ಟ ಕನಸುಗಳ ಜಾಗದಲಿ ಬರವಸೆಯ ಸಸಿಯ ನೆಡೋಣ
ಬಾ ಗೆಳತಿ ಕೈ ಕೈ ಹಿಡಿದು ಬಾಳ ಬೆಟ್ಟವ ಹತ್ತೋಣ
ಮುಲ್ಲು ಕಳ್ಳುಗಳ ನು ಮೆಟ್ಟಿ ನಿಲ್ಲೋಣ.
ಭಗವಂತನಿಗೆ ಈಗಿಗ ಹೋಮ್ ಗಾರ್ಡ ಕೆಲಸ ಜೋರ.
ಡ್ರೆಸ್ ಇಲ್ಲ, ಪಗಾರ ಇಲ್ಲ, ರೆಸ್ಟ್ ಅಂತೂ ಬೇಕಾಗೇ ಇಲ್ಲ.
ಮನೆ ಕಂಪೌಡ ಗೋಡೆಗೆ ಆನಿಸಿ ಕೂಡಿಸಿದರೆ ಸಾಕ.
ಬಾಯ ಗಡಗಿ ಕಿಡ್ನಿ ಗಡಗಿ ತುಂಬಕೊಂಡ ಸನಿಹ ಬಂದವರಿಗೆ ಹಲ್ಲ ಕಿರಿದು ಕೈ ಮುಗಿದ ಮುಂದಕೆ ಕಳಸ್ತಾನೆ.
ಭಗವಂತನಿಗೆ ಈಗಿಗ ರಸ್ತೆಗೆ ಜಾಗ ಹೋಗದಂತೆ ಕಾಯೋ ಕೆಲಸ ಜೋರು.
ಆ ಜಾಗದಲ್ಲಿ ಸಣ್ಣದೊಂದು ಗುಡಿ ಕಟ್ಟಿ
ಹಣೆಗೆ ಒಂದಿಷ್ಟು ಕೂಕಮಾ ಇಬತ್ತಿ ಬಳಿದು ಊದಕಡ್ಡಿ ಬೇಳಗಿಸಿ ಇಟ್ರ ಸಾಕ.
ಯಾವ ಕೋರ್ಟ ಕಛೇರಿಯಂದ ಆರ್ಡರ ತಂದ್ರು ಅಳಗಾಡಂಗಿಲ್ಲ ಒಂದೈವತ್ತವರ್ಷ.
ಗೆಳತಿ ನಾ ನಿನ್ನ ಸನಿಹದಲ್ಲಿ ಎಷ್ಟು ಸಮಯ ಕಳೆದರೂ ಅದು ನನಗೆ ಕಡಿಮೆ...
ನನ್ನ ಬಯಸಿ ಬಳಿ ಬಂದು ನೀ ಆದೆಯಲ್ಲ ಪ್ರೇಯಸಿ ಅದು ನನಗೆ ತಂದಿದೆ ಹಿರಿಮೆ...
ಕನಸಲ್ಲೂ ಕಂಡಿರಲಿಲ್ಲ ನೀ ನನ್ನ ಬಾಳಲ್ಲಿ ಸುಳಿದು ಆಗುವೆಯಂದು ಪ್ರಿಯತಮೆ...
ಚಿಮ್ಮುತಿದೆ ನನ್ನ ಬಾಳಲ್ಲಿ ಪ್ರತಿ ಕ್ಷಣದಲ್ಲೂ ಈಗ ಸಂತೋಷದ ಚಿಲುಮೆ... ✍️ಮಲ್ಲ...