ಸುಂದರ ವನದಲ್ಲಿ ಅರಳಿದ ಕೇಂದಾವರೆ ನೀ
ಆಕಾಶದಿ ಹಾರುವ ಹಕ್ಕಿ ನೀ
ನನ್ನ ಉಸಿರ ಏರಿಳಿತವು ನೀ
ಹೇಳದ ಸಾವಿರ ಮಾತಿಗೆ ಸ್ಪೂರ್ತಿ ನೀ
ಎಷ್ಟು ಹೇಳಿದರು ಬಣ್ಣಿಸಲಾಗದ್ದ ಚಲುವೆ ನೀನು
ಈ ಕವಿತೆ ಬರೆದ ಪ್ರೇಮಿ ನಾನು
ನನ್ನ ಸುತ್ತ - ಮುತ್ತಲು ಎಷ್ಟೋ ಜನ ಗೋಪಿಕೆಯರು ಇದ್ದರೂ, ನನ್ನ ಮನಸು ನಿನ್ನ ದ್ಯಾನದಲ್ಲೇ ಮುಳುಗಿರುವುದಲ್ಲೇ ರಾಧೆ.....
ನನನ್ನು ಎಲ್ಲರೂ ತಮ ತಮಗೆ ಸ್ವಂತ ಅಂಥ ಅಂದುಕೊಳ್ಳುವರು ಅವರಿಗೆ ತಿಳಿಯದ ಸಂಗತಿಯೆಂದರೆ ನೀ ನನ್ನ ಮನದರಸಿಯೆಂದು...
ಈ ಪ್ರಪಂಚದ ಹಾಗು - ಹೋಗುಗಳನ್ನು ನೋಡುವ ನಾನು ನಿನ್ನ ಮಡಿಲಲ್ಲಿ ಮಲಗಿ ಕೊಳಲು ನುಡಿಸುತ್ತಾ ಪ್ರೇಮನೂರಾಗದಲ್ಲಿ ಮೈ ಮರೆಯುವೆ,
ಇಡೀ ಜಗತ್ತು ನನನ್ನು ಕಳ್ಳಯೆನ್ನುವದರಲ್ಲಿ ತಪ್ಪೇನಿಲ್ಲ.....
ಯಾಕಂದರೆ ನನನ್ನು ನಾನೇ ಮರೆಯುವಸ್ಟು ನನ್ನ ಪ್ರೀತಿಸುವ ಈ ನಿನ್ನ ಮನವ ಕದ್ದಿರುವೆ,
ನಿನ್ನ ನನ್ನ ಮನವು ಸೇರಿದಂತೆ ನನ್ನ ಹೆಸರಿನ ಜೊತೆ ನಿನ್ನ ಹೆಸರು ಸದಾ ಪ್ರೀತಿಗೆ ಸ್ಪೂರ್ತಿಯಾಗಿರಲಿ
ಪ್ರೀತಿಯ ಪಾರಿವಾಳ
ಹಾರ ಬಲ್ಲೆಯ್ಯಾ ಮುಗಿಲೆತ್ತರಕ್ಕೆ
ನನ್ನ ಒಲವಿನ ಅಭಿಮಾನಕ್ಕೆ
ನನ್ನ ಉಸಿರಿನಲ್ಲಿ ಕಾಯುತಿರುವೆ ಮನದಂಗಳದಲ್ಲಿ
ಸದಾ ಮಿನುಗುವ ತಾರೆಯ
ನಗುವಿನ ಚಿಲುಮೆಯಲ್ಲಿ
ಮಗುವಾಗಿ ಸದಾ ಹಂಬಲಿಸಿತಿರುವೆ ಚೆಲುವೆ...
ತೀಳಿಯದಿ ನಾ ತಪ್ಪು ಮಾಡಿದೆ
ಪ್ರೀತಿ ಬಯಸಿ ನಿನ್ನ ಮನ ನೋಯಿಸಿದೆ
ನನ್ನ ಇಷ್ಟ ಹೇಳಿ ನಾ ನಿನ್ನ ಕಾಡಿದೆ
ತೀಳಿಯದೆ ಮಾಡಿದ ತಪ್ಪಿಗೆ ನಾ ದಿನವು ಪರಿತಪಿಸಿದೆ
ಒಂದು ಸಲ ಕ್ಷಮಿಸಿ ಬಿಡು ನಾ ನಿನ್ನ ಪ್ರಿತಿಸಿದೆ
ಪ್ರೀತಿಯ ಗಾಳಿಯೇ ಬೀಸದ ಹೃದಯಕ್ಕೆ ಇಂದು ಒಲವಿನ ಗಾಳಿ ಬೀಸಿದೆ...
ಮನಸು ಅರಿವಿಲ್ಲದೆ ಅವಳೆಡೆಗೆ ಜಾರಿದೆ...
ಅವಳ ಮುಂಗುರುಳ ನೋಡಿದ ಕ್ಷಣದಿಂದ ಮನಸು ಹಿಡಿತಕ್ಕೆ ಸಿಗದೇ ಓಡುತಿದೆ...
ಅವಳು ಕೊಟ್ಟ ಆ ಒಂದು ಮುಗುಳುನಗೆ ನನ್ನ ಬೆಂಬಿಡದೆ ಕಾಡುತಿದೆ...
ಮನಸೇ... ನಿನಗೇಕೆ ಇಷ್ಟೊಂದು ಹಠ ನನಗೆ ತಿಳಿಯದಾಗಿದೆ... ಅಂದರೆ...ಮನಸೇ... ನಿನಗೆ ಪ್ರೇಮಾಂಕುರವಾಗಿದೆ... ✍️ಮಲ್ಲ...