Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಆ ಚಂದಿರ ನಿನ್ನ ನೋಡಿ
ನಾಚಿ ನಿರಾದನು
ಯಾರು ಈ ಸುಂದರ ಚಲುವೆ
ಎಲ್ಲಿ ಇದಲ್ಲೂ ಇಷ್ಟು ದಿನ.....
ಆ ಸೂರ್ಯ ಹೇಳುವನು
ನೀ ಯಾವ ಚಲುವೆ
ಎಲ್ಲಿ ಇದೆ ಇಷ್ಟು ದಿನ
ನೀ ಯಾಕೆ ಮೊದಲೇ ಸಿಗಲಿಲ್ಲ ನನಗೆ....
ಆ ದೇವೇಂದ್ರನಿಗೆ ಅಷ್ಟು
ಜನ ಅಪ್ಸರೆ ಇದ್ರು
ನಿನ್ನ ನೋಡಿ ಮೈ ಮರೆತೇನು
ಯಾರು ಈ ಚಲುವೆ....
ನನ್ನ ಮನಸ್ಸು ಹೇಳಿತ್ತು
ನೀನೇ ನನ್ನ ಹೃದಯದ ಮಹಾರಾಣಿ
ನೀ ಇಲ್ಲದೆ ಜೀವನ ಕಾಲಿ ಕಾಲಿ
ನೀ ಬಂದ್ರೆ ನನ್ನ ಜೀವನ ಸುಂದರ....
ಹೇ ಗೆಳತಿಯೇ
ನಿನಗಾಗಿ ಕಾಯುತ್ತಿದೆ
ಈ ನನ್ನ ಹೃದಯ,ನೀ ಹೇಳುವ
ಆ ಒಂದು ಮಾತುನ್ನು ಕೇಳಲ್ಲೂ
ನನ್ನ ಮನಸ್ಸು ಕಾಯುತ್ತಿದೆ
ನೀ ಬೇಗ ಬಂದು ಹೇಳುವೆಯ...?
ನಿನಗಾಗಿ ಕಾಯುವೆ.. ಕಾಯುವೆ.....
- Ajay
17 Feb 2020, 12:54 am
ತಂದೆ -ತಾಯಿ ಸೇವೆ ಮಾಡ ಬನ್ನಿರೋ
ತಿದ್ದಿ ತಿಡಿ ಬೆಳಸಿದ ಗುರುವ ನೆನೆಸ ಬನ್ನಿರೋ !!ಪ!!
ಕರವ ಮುಗಿದು
ಮನದಿ ನೆನೆದು
ಕಲ್ಮಷ ತೊರೆದು
ಹರುಷ ತಳೆದು !!ತಂದೆ!!
ಗಂಗೆ-ತುಂಗೆ-ಕಾವೇರಿಯರ ನಾಡಲಿ
ಶಿವ ಶರಣರ ಬೀಡಲಿ
ವರಭಕ್ತಿಯಿಂದಲಿ
ಹರುಷದ ಮನದಲಿ !!ತಂದೆ!!
ಮದ ಮೋಹ ಬಿಟ್ಟು
ತನುವ ಕೊಟ್ಟು
ಮನವ ನೆಟ್ಟು
ಪ್ರೀತಿ ಪ್ರೇಮದಿಂದಲಿ !!ತಂದೆ!!
ಸ್ನೇಹದ ನಡೆಯಲಿ
ಪ್ರೇಮದ ನುಡಿಯಲಿ
ಸತ್ಯದ ಬೆಳಕಲಿ
ನಿತ್ಯ ಜೀವ ನಡೆಸುತಾ !!ತಂದೆ!!
*ಕಿದ್ವಾಯಿ ರಾಜಶೇಖರ್.
- Raj Raj
16 Feb 2020, 05:54 pm
ಮಂಗಳಮುಖಿಯು ನಾನು
ಅವನಿಂದ ಅವಳಾದೇನು,
ಹಡೆದವ್ವನ ಮಡಿಲಿಗೆ ಭಾರವಾದೆನು
ಸಮಾಜದ ಮಾತಿಗೆ ತಲೆಬಾಗುವ
ತಂದೆಗೆ ಬೇಡವಾದೆನು.
ಒಡಹುಟ್ಟದವರು ಅಕ್ಕ
ತಂಗಿಯರಾದರು,
ಎದೆಯಾಲ ಉಣಿಸದ ಅಮ್ಮ
ತಾಯಿಯಾದಳು,
ಮಗನ ಕೊಡದ ಅತ್ತೆ ಮಾಂಗಲ್ಯ
ಕಟ್ಟಿ ಅತ್ತೆಯಾದಳು.
ಮಂಗಳಮುಖಿಯು ನಾನು,
ಊರಮಂದಿ ಮೂಗು ಮುರಿದು
ಸಾಗುವರು ಅಂಟಿ ಮುಟ್ಟದ ಹಾಗೆ
ಮೈಯ ಸೋಕಿದರೆ ಕಳಂಕವೆಂದು.
ಜೀವನ ನೀಡದಿದ್ದರೂ ಪರವಾಗಿಲ್ಲ
ಜೀವವಿಂಡುವ ಮಾತನಾಡಬೇಡಿ
ನನ್ನಲಿಲ್ಲದ ನ್ಯೂನತೆಗಳನ್ನು ನೀವು
ತುಂಬಿಕೊಳ್ಳಬೇಡಿ.
ಓದುವ ಹಕ್ಕು ಮೊದಲೇ ನನಗಿಲ್ಲ
ಮನಸಿಗಿಲ್ಲದ ದೋಷ ಮೈಯಿಗಂಟಿಸಿ
ಬಿಡುವರಲ್ಲ, ಚಿಗುರು ಆಸೆಗಳ ನಗುವು
ಆದಿಯಲ್ಲೇ ಅಂತ್ಯ ಕನಸು ಕಾಣುವ
ಕಣ್ಣಿಗೆ ಕರಾಳ ರಾತ್ರಿಗಳೇ ನಿತ್ಯ.
ಮಂಗಳಮುಖಿಯು ನಾನು,
ಉಜ್ಜುಗದ ಗೋಜಿಗೆ ಹೋಗುವ
ಹಾಗೆಯೇ ಇಲ್ಲ ಬೆವರ ಬೆಲೆ ನನಗೆ
ತಿಳಿದಿದ್ದರೂನು ನನ್ನ ಬೆಲೆ ತಿಳಿದವರು
ಇಲ್ಲಿ ಯಾರು ಇಲ್ಲ.
ಹೊಟ್ಟೆ ಪಾಡಿಗಾಗಿ ಭಿಕ್ಷೆಬೇಡುವೆ
ನನ್ನಪಾಲಿನ ಅನ್ನವನ್ನೂ ಹಂಚಿ ತಿನ್ನುವೆ,
ಕೋಜಾ ಎನ್ನುವರು ಕೆಲವರು ಹಿಜರಾ
ಎನ್ನುವವರು ಅಲವರು.
ನಿಮ್ಮ ಮಾತಿಗೆ ಮನದಲ್ಲಿ ಕಿಂಚಿತ್ತೂ
ಬೇಸರವಿಲ್ಲ ನಗೆಯೊಂದು ಮೂಡುತ್ತದೆ
ನಿಮ್ಮ ಸಣ್ಣ ಮನಸ್ಥಿತಿಯನು ನೋಡಿ.
ನಿತ್ಯ ಸುಮಂಗಳಿಯು ನಾನು ನನ್ನಂತೆ
ನಿಮ್ಮ ಬಾಳು ಆಗದಿರಲಿ ಎಂದು ಆ ಅರ್ಧನಾರೀಶ್ವರನಲ್ಲಿ ಅನುನಿತ್ಯ ನಾ
ಮೊರೆಯಿಡುವೆನು.
- ಚುಕ್ಕಿ
16 Feb 2020, 02:52 pm
ಕವಿಯು ಬರೆದ ಪ್ರೇಮಗೀತೆಯ
ಸಾಲು ಕಠಿಣವೇ ಆಗಿದೆ!!
ಎದೆಯ ಕಡಲ ದಡದ ಮೇಲೆ
ಒಂಟಿ ಪಯಣ ಸಾಗಿದೆ!!
ಹರಿವ ನದಿಯ ಮೂಲ ಹುಡುಕಿ
ಧುಮುಕುವ ಆಸೆ ಮೂಡಿದೆ!!
ದಟ್ಟ ಕಾನನದ ನಟ್ಟ ನಡುವೆ
ಕುಳಿತು ಅಳಬೇಕು ಎಂದೆನಿಸಿದೆ!!
ನಲಿವ ಒಲಿಮೆಯ ಸಿರಿಯ ಕಂಡು
ಮನದಿ ಮರುಕವು ಹುಟ್ಟಿದೆ!!
ಯಾರಿಗೆ ಯಾರೂ ಇಲ್ಲ ಎನ್ನುವ
ಸತ್ಯವು ಸಂಭ್ರಮ ಪಡುತಿದೆ!!
- ಪಿ.ಜಿ.ಜ್ಯೋತಿ
16 Feb 2020, 12:15 pm
ಕಲ್ಲಾದರೇನು ಶಿವ
ಮಣ್ಣಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!
ಹೂವಾದರೇನು ಶಿವ
ಮುಳ್ಳಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರವು!!
ನೆರಳಾದರೇನು ಶಿವ
ಬಿಸಿಲಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!
ಹಗಲಾದರೇನು ಶಿವ
ಇರುಳಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!
ಕಡಲಾದರೇನು ಶಿವ
ಮುಗಿಲಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!
ಹುಟ್ಟಾದರೇನು ಶಿವ
ಸಾವಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!
- ಪಿ.ಜಿ.ಜ್ಯೋತಿ
16 Feb 2020, 09:45 am
ನೀ ಸಮಯದ ಮುಳ್ಳಾಗು
ನಾ ಘಂಟೆಯ ಮುಳ್ಳಾಗುವೆ
ಕಾಲ ಕೂಡಿಬಂದಾಗ
ಖಂಡಿತ ಭೇಟಿಯಾಗೋಣ
- Palappa NG Pala
16 Feb 2020, 07:38 am
ದೀಪದ ಬೆಳಕಿನ ಕಿರಣಗಳು
ನಿನ್ನ ಮೈ ಸೊಕಿದಾಗ
ಆ ಮೈ ಬಣ್ಣದ ಅಂದವನ್ನು
ಸೆಳೆಯುವ ಕಣ್ಣುಗಳು
ದೃಷ್ಟಿತಾಗಿಸಿ ಬಿಡುತ್ತವೆ
dj vishal ❤❤❤
- Vishal Hiremath
15 Feb 2020, 11:15 pm
ಭಾವಗಳ ಬಾರವ್ವ ಹೊತ್ತು ನಡೆಯುವೆ ನಾ
ಕುದಿಯುವ ಆಸೆಯಲ್ಲಿ ನೊಂದು ಬೆಂದಿದೆ ಹೃದಯ.
ಕಿರಿದು ಕಿರಿದು ನಲಿವಿನೊಳಗೆ ಅಡಗಿದೆ ನನ್ನ ಬದುಕು ನಲಿವೆಲ್ಲ ಕನಸಾಗಿ ಕರಗಿ ಹರಿಯುವ ಕಡಲಲ್ಲಿ ಸಾಗಿದೆ ನನ್ನ ಹಡಗು.
ಸ್ನೇಹವೆಂಬ ನಿಧಿಯ ಹುಡುಕಿ ಸಾಗಿದೆ ದಿನವು ಪಯಣ ಗೆಳೆಯರಿಲ್ಲದೆ ಬರಿದಾಗಿದೆ ನನ್ನ ಈ ಹರಣ
ಯಾರು ಇಲ್ಲದ ಒಂಟಿ ಹೃದಯಕ್ಕೆ ಸ್ನೇಹವಾಯಿತು ಎರಡು ಸಾಲಿನ ಕವನ.
~ ಕಿರಣ್ ಕ್ರೀಸ್
- Kris
15 Feb 2020, 06:09 pm
ನೆನಪೆಂಬ ಅಂತರಂಗ ಅವಳಿರುವ ಕನಸೆಡೆಗೆ ಅರಿವಿಲ್ಲದೆ ಸಾಗುತ್ತಿದೆ...
ಪ್ರಶ್ನಿಸಿದಾಗಲೆಲ್ಲಾ ಬರೀ ನಗುವಲ್ಲೇ ಉತ್ತರಿಸಿದರೆ
ನಿನ್ನ ನಗುವ ಒಗಟ ಹೇಗೆ ಬಿಡಿಸಲಿ ತಿಳಿಸು ಈಗಲಾದರು...
ನಿನ್ನ ಉಸಿರೊಡನೆ ಉಸಿರಾಗಿ ಬೆರೆತುಹೋದ ಈ ಜೀವನ
ನೀನಿರದ ಕಲ್ಪನೆಯು ನನಗಿಲ್ಲ ಗೆಳತಿ...
ಹುಚ್ಚು ಕಲ್ಪನೆಯದು ನಿನ್ನಲ್ಲೇ ಬೆರೆಯಲೆಂದು ಅಚ್ಚು ಒತ್ತಿದ ಹೃದಯ ಬೆಚ್ಚಿ ಹೆದರಿದೆ ಗೆಳತಿ...
ಕಚ್ಚಿದ ಕೆನ್ನೆಯ ಗುರುತು ಕೆರಳಿ ಅಣಕಿಸುತ್ತಿದೆ ಬಂದೊಮ್ಮೆ ಹೇಳಿ ಬಿಡು ಈ ಜಗಕ್ಕೆ ನಾನೆಂದು ನಿನ್ನವಳು ಎಂದು...!!
ವಿರೇಶಗೌಡ
- VeereshaVeeresha
15 Feb 2020, 03:05 pm
ನೀ ನನ್ನ ಕಣ್ಣಲ್ಲಿ
ಕಣ್ಣಟ್ಟು ನೋಡಿದರೆ
ಕಾಣುವುದು ನಿನ್ನ ಬಿಂಬ...
ನೀ ಕಣ್ಣೆದುರು ಕಾಣದೇ
ಮರೆಯಾಗಿ ನಿಂತಿರಲು
ಕಂಬನಿಯು ಕಣ್ಣ ತುಂಬ...
- ಪಿ.ಜಿ.ಜ್ಯೋತಿ
15 Feb 2020, 12:26 pm