Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿನ್ನ ನೆನಪೆಂಬ ತೂಗುಯ್ಯಾಲೆ
ನನ್ನ ಮನದಲ್ಲಿ ಜೀಗುತಿದೆ ನಲ್ಲೆ!!
ಈ ನಿಶ್ಯಬ್ಧ ಬದುಕ ಬನದಲ್ಲಿ
ನನ್ನ ವನವಾಸ ಉದಿಯಾಯಿತಲ್ಲೇ!!
ಮುಂಜಾನೆ ಎಳೆ ಹುಲ್ಲ ಮೇಲೆ
ಹೊಳೆ ಹೊಳೆವ ಇಬ್ಬನಿಯ ಸಾಲೇ!!
ನನ್ನ ಕಣ್ಣ ರೆಪ್ಪೆಯ ಅಂಚಿನಲ್ಲಿ
ಮಂಜಾಯ್ತು ಕಂಬನಿಯ ಮಾಲೆ!!
ನೀನಿರದ ಲೋಕ ಬರೀ ಸುಳ್ಳೇ
ನೀನಿರುವೆ ಸದಾ ನನ್ನ ಹೃದಯದಲ್ಲೇ!!
ಕನಸೆಂಬ ದೀಪವನು ಆರಿಸಿ
ಕಡುಗತ್ತಲೆಯಲ್ಲಿ ಒಬ್ಬಂಟಿ ಆದೆನಲ್ಲೇ!!
- ಪಿ.ಜಿ.ಜ್ಯೋತಿ
18 Feb 2020, 11:53 am
ವನದಿ ಕುಸುಮವು ಅರಳಿ
ಘಮಿಸಿದರೆ ಫಲವೇನು!!
ಯಾರು ಹೊಗಳುವರುಂಟು
ವನಸುಮದ ಚೆಲುವ!!
ಎಲೆ ಮೆರೆಯಲ್ಲಿ ಕಾಯಡಗಿ
ಮಾಗಿ ಹಣ್ಣಾದರೇನು!!
ಯಾರು ರುಚಿಸುವರುಂಟು
ಕಾಣದ ಹಣ್ಣಿನ ಸವಿಯ!!
ಇರುಳು ಕತ್ತಲೆಯಲ್ಲಿ
ಬಿನ್ನಾಣವ ತೋರಿದರೇನು!!
ಯಾರು ಕಾಣುವರುಂಟು
ಬೆಳಕು ಇರದ ಬೆಡಗ!!
ಅಂಗೈಯ ಮುಷ್ಟಿಯನ್ನು
ಬಿಗಿಯಾಗಿ ಹಿಡಿದರೇನು!!
ಯಾರು ಅರಿತವರುಂಟು
ಬದುಕಿನ ಆಗು ಹೋಗು!!
- ಪಿ.ಜಿ.ಜ್ಯೋತಿ
18 Feb 2020, 11:45 am
ಬರೀ ದೇಹ ನಾನು, ನನ್ನ ಉಸಿರು ನೀನು.
ಬರೀ ಕಣ್ಣ ರೆಪ್ಪೆ ನಾನು, ಅಧರೊಳಗಿನಿ ಬೆಳಕು ನೀನು.
ಬರೀ ಹೃದಯ ನಾನು, ಅದರೊಳಗಿನ ಬಡಿತ ನೀನು.
ಈ ಎರಡು ಜೀವನದಲ್ಲಿ, ನಿನ್ನ ಬಿಟ್ಟು ನಾನು,
ನೀರಿಲ್ಲದ ಮೀನು.
ಇಂತಿ ನಿಮ್ಮ ಪ್ರೀತಿಯ
GIRISH SAMEL NAYAK
- Girishsamelnayak
17 Feb 2020, 11:00 pm
ಹೊಲೆಯೋಣ ಬಾ ಗೆಳತಿ
ಪ್ರೀತಿ- ಪ್ರೇಮ ವೆಂಬ ದಾರವನು
ರೀಲು ಬಾಬೀನುಗಳಿಗೆ ತುಂಬಿ
ಹೃದಯಕ್ಕೆ ಹೃದಯ ಹೊಂದಿಸಿ
ಧೃಡಚಿತ್ತದಿಂದ ಕಾಲ್ಪಡಿ ತುಳಿದು
ದೊಡ್ಡ ಚಕ್ರದಿಂದ ಸಣ್ಣ ಚಕ್ರವ ತಿರುಗಿಸಿ
ಹರಿದು ಚಿಂದಿಯಾದ ಈ ಸಮಾಜದ
ಆ ಅಂಚು ಈ ಅಂಚು ಮೃದುವಾಗಿ ಎಳೆದು ಹೊಂದಿಸಿ ಹೊಲೆಯೋಣ ಬಾ ಗೆಳತಿ.
ಬಟ್ಟೆ ಹಳೆಯದಾದರೇನು ಹೊಸದಾದರೇನು
ಎರಡು ಮಾಡೋದು ಮಾನಮುಚ್ಚೋ ಕೆಲಸ
ಬಟ್ಟೆ ಹಳೆಯದು ಹೊಸದು ಎಂದೆನೆಸಲ್ಲಿಲ್ಲ ನಮ್ಮ ಯಂತ್ರದ ಹೊಲಗೆ
ಅಳತಿಯಲಿ ಕತ್ತರಸಿ ಒಪ್ಪುವಂಗ ಇಪ್ಪಾಗಿ ಇರಿಸುವ ಶಿವದಾಸಿಮಯ್ಯರ ಆಶೀರ್ವಾದ ಬೆನ್ನಿಗೈತಿ
ಬದುಕೆಂಬ ಬಟ್ಟೆಯ ಮೇಲೆ ಕಷ್ಟ ನಷ್ಟಗಳ ಎಂಬ ತೂತು ಗಳು ಬಿದ್ದಾಗ ತೇಪೆ ಹಚ್ಚಿ ತೆಪ್ಪ ಸಾಗಿಸಬೇಕು
ಸೂಜಿಗಿಲ್ಲ ದಣಿವು ದಾರಕ್ಕಿಲ್ಲ ಮರೆವು
ಉಳಿ ಕಲ್ಲನ್ನು ಕಟೆದು ಮೂರ್ತಿ ಮಾಡಿತು
ಸೂಜಿ ಬಟ್ಟೆಗೆ ಚುಚ್ಚಿ ಚುಚ್ಚಿ ಧಿರಿಸು ಮಾಡಿತು
ಕಲ್ಲು ಕಷ್ಟ ಸಹಿಸಿ ಸಹಿಸಿ ಪೂಜಿಸುವ ಮೂರತಿಯಾಗಿ
ಬಟ್ಟೆ ಕಷ್ಷ ಸಹಿಸಿ ಸಹಿಸಿ ಧರಿಸುವ ಧಿರಸಾಗಿ
ಸೂಜಿ ದಾರ ಸಿಂಪಿಗ ಮೂವರು ಮುಕ್ಕಣ್ಣನ ಕಣ್ಣಾದರು
ಸೂಜಿ ದಾರಕ್ಕೂ ಯಾತರ ಸಂಬಂಧ
ಹೊಂದಿಸಿ ಬಂಧಿಸಿ ಸಂಭಂದ ಗಟ್ಟಿಗೊಳಿಸುವ ಕೆಲಸ
ಒಂದೇ ಹೊಟ್ಟೆಯಲಿ ಹುಟ್ಟಿದ ಅಣ್ಣತಮ್ಮರಿಗಿಲ್ಲ ಹೊಂದಾಣಿಕೆ
ಹೆಣ್ಣು ಮಣ್ಣು ಹೊನ್ನು ಗೆ ಹೊಡದಾಡುವರೆಲ್ಲ
ಸೂಜಿ ದಾರ ನೋಡಿ ಕಲಿಯಬೇಕು ಬಾಳತುಂಬೆಲ್ಲ.
ರಚಣೆ: ಆರ್ ವ್ಹಿ ಗೌಡರ
ಮೊ : 9008060918.
- Siddugouda
17 Feb 2020, 02:28 pm
ಗಲ್ಲದ ಮೇಲೆ ಕಪ್ಪು ಚುಕ್ಕಿ
ಯಾರೋ ಇಟ್ಟವರು!!
ಕೆನ್ನೆ ಮೇಲೆ ದೃಷ್ಠಿ ಬೊಟ್ಟ
ಯಾರೋ ಇಟ್ಟವರು!!
ಹಣೆಯ ಮೇಲೆ ಮುತ್ತಿನ ತಿಲಕ
ಯಾರೋ ಇಟ್ಟವರು!!
ಹುಬ್ಬ ತೀಡಿ ನನ್ನ ಕಂದನ
ಮುದ್ದು ಮಾಡುವರು!!
ಅಂಗೈಯ ಮೇಲೆ ನೇಸರ
ಬೆಳಕ ತೋರ ಬಂದನು!!
ಅಂಗಾಲ ಮೇಲೆ ಚಂದಿರ
ತಂಪನೆರೆಯ ಬಂದನು!!
ಹಗಲು ಇರುಳು ದೃಷ್ಟಿ ತಡೆದು
ನಿನ್ನನು ಕಾಯುವೆನು!!
ಮುದ್ದು ಕಂದ ನಿನ್ನ ಅಂದ
ಹೊಗಳಿ ಹಾಡುವೆನು!!
- ಪಿ.ಜಿ.ಜ್ಯೋತಿ
17 Feb 2020, 11:56 am
ಮನವೆಂಬ ಮಾಮರದಲ್ಲಿ
ಚಿಗುರಿದೆ ಪ್ರೀತಿಯ ಹಸಿರು!!
ಸುಮವೆಂಬ ಪ್ರೇಮದ ಬಾಣ
ಬಯಸಿದೆ ದುಂಬಿಯ ಮಿಲನ!!
ಎದೆಯಲ್ಲಿ ಕೊಗಿಲೆಯ ಗಾನ
ನುಡಿಸಿದೆ ಒಲವಿನ ತನನ!!
ಚಿಗುರೆಲೆಯ ಸಂಭ್ರಮ ಕಂಡು
ಬೆರಗಾಗಿ ನಿಂತಿದೆ ನಯನ!!
ಆ ಸೂರ್ಯ ಚಂದ್ರರೇ ಸಾಕ್ಷಿ
ನವ ಋತುವಿನ ಸಂಭ್ರಮಕೆ!!
ಹೊಸದಾದ ಆಸೆಯ ಹೊತ್ತ
ಹೃದಯಗಳ ಸಮ್ಮಿಲನಕೆ!!
ಹರಿಯುತಿಹ ವಿರಹದ ತಡೆಗೆ
ಸಾಗುತಿದೆ ಒಲವಿನ ನಡಿಗೆ!!
ಬಯಸಿದ ಪ್ರೀತಿಯ ಹೂವು
ಸೇರಿಹುದು ಪ್ರೇಮಿಯ ಮುಡಿಗೆ!!
- ಪಿ.ಜಿ.ಜ್ಯೋತಿ
17 Feb 2020, 11:49 am
ಹಡೆದ ತಾಯಿಯ ಪಾದದಲ್ಲೇ
ಇರುವುದು ಸಕಲ ದೇವರು!!
ಕೈಯ ಮುಗಿದು ಶಿರವ ಬಾಗಲು
ತೆರೆಯುದು ಸ್ವರ್ಗದ ಬಾಗಿಲು!!
ತಾಯ ಮಮತೆಯ ಕಡಲಿನಲ್ಲಿ
ದೊರೆವುದು ಬದುಕಿನ ರತ್ನವು!!
ಅವಳ ಸೇವೆಯ ಗೈದರೆ ಸಾಕು
ಜಪ ತಪ ಪೂಜೆಯು ಏಕೆ ಬೇಕು!!
ತಾಯ ಮಡಿಲಿನಲ್ಲೇ ಇರುವುದು
ಸಕಲ ಭೋಗ ಐಶ್ವರ್ಯವು!!
ಮಮತೆ ಸೆರಗ ಹೊದಿಕೆ ಮುಂದೆ
ರತ್ನಕಂಬಳಿ ಮುದುಡಿಹುದು!!
ತಾಯ ಮುಂದೆ ಎಲ್ಲ ಶೂನ್ಯವು
ಬದುಕಿಗೆ ಅವಳೇ ಆಸರೆ!!
ಆಳುವವರು ಯಾರೇ ಇರಲಿ
ಅವಳ ಮಮತೆಗೆ ನಾ ಸೆರೆ!!
ತಾಯಿ ತೋರುವ ಮಾರ್ಗದಲ್ಲಿ
ನಡೆದರ ಅದುವೇ ವಿಜಯವು!!
ಕಂದ ಎಂದು ಕರೆವುದ ಕೇಳಲು
ಮಡಿದರೂ ಮರಳುವೆ ನಿತ್ಯವು!!
- ಪಿ.ಜಿ.ಜ್ಯೋತಿ
17 Feb 2020, 11:34 am
ಕಪ್ಪುಕಣ್ಣಿನ ಸುಂದರಿ
ಬೇಡುವೆ ನಾ ನಿನ್ನ ಪರಿಪರಿ
ಒಪ್ಪಿಕೋ ನನ್ನ ಪ್ರೀತಿಯ, ಕಿನ್ನರಿ
ಎಂದೆಂದಿಗೂ ನೀನೆ ನನ್ನ ಸ್ವಪ್ನ ಸುಂದರಿ,
- Veena
17 Feb 2020, 10:24 am
ದೂರದ ಊರಿನಿಂದ
ಬೀಸಿ ಬಂದಿರುವ
ತಂಗಾಳಿ ತಂದ ಸಂದೇಶ!!
ನಿನ್ನ ಹೃದಯದಿಂದ
ನನ್ನ ಹೃದಯದವರೆಗೆ
ಮಿಡಿದಿರುವ ಪ್ರೇಮ ಸಂದೇಶ!!
ನವ ಉಲ್ಲಾಸಕೂನೂ
ನವ ಉತ್ಸಾಹಕೂನೂ
ಪ್ರೇರಣೆಯ ತಂದ ಸಂದೇಶ!!
ಬದುಕಿನ ಸಾಗರದ
ಅಲೆ ಅಲೆಯ ಸೆಲೆಯಲ್ಲಿ
ನೆಲೆಸಿರುವ ಭಾವ ಸಂದೇಶ!!
ಹರೆಯದಲಿ ಹರಿವ
ನೀರಂತೆ ಒಲವು
ಜರಿಯಾಗಿ ಹರಿದ ಸಂದೇಶ!!
ಹೂ ಗಂಧವೆಲ್ಲ ಸೌಗಂಧವಾಗಿ
ಘಮ ಘಮಿಸುತಿರುವ
ಜೀವದ ಉಸಿರ ಸಂದೇಶ!!
- ಪಿ.ಜಿ.ಜ್ಯೋತಿ
17 Feb 2020, 09:58 am
ಎದೆಯಲಿ ನಿನ್ನ ಸದ್ದು
ನಗುತ್ತಲೇ ನನ್ನ ಕದ್ದು
ಓಡೋದೆ ನೀ ಎದ್ದು..
- Sanddep Kota
17 Feb 2020, 06:12 am