Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶಾರಿ

ರೋಡ್ ಮೇಲೆ ಹೋಗ್ತಾ ಇತ್ತು ಒಂದು ಲಾರಿ...... ಅದರ ಮೇಲೆ ಹಾರುತ್ತಾ ಇತ್ತು ಒಂದು ಶಾರಿ.... ಜಿಗಿದು ಹಿಡಿದೆನು ನಾ ಆ ಶಾ ರೀ..
... ಎರಡೇಟು ಕೊಟ್ಲು ಆ....ನಾರಿ..... ಅಲ್ಲಿಂದ ಬಿದ್ದೆ ನಾನು ಕಾಲುಜಾರಿ........

- hanumanaik lamani

19 Feb 2020, 12:49 am

ನಮ್ಮ ಬಾಲು

ಬಾರ್ ನಲ್ಲಿ ಸಿಕ್ಸ್ಟಿ ಗೆ ಅಂತಾರೆ ಕಾಲು

- hanumanaik lamani

19 Feb 2020, 12:44 am

ಪಲ್ಲವಿಯ ಅಡ್ಡ ಹೆಸರು ಪಲ್ಲು

ಪಲ್ಲವಿಯ ಅಡ್ಡಹೆಸರು ಪಲ್ಲು.... ಅವಳಿಗೆ ತುಂಬಾ ಚೆನ್ನಾಗಿದೆ ಹಲ್ಲು.... ಅದನ್ನು ನೋಡಿ ಬೀದಿನಾಯಿಗಳು ಸುರಿಸುತ್ತವೆ ಜೊಲ್ಲು ....ಪಕ್ಕದಲ್ಲಿ ನೀ ನಿಂತರೆ ಹೊಡೆಯೇಲ್ಲಾ ಅವರಿಗೆ ಕಲ್ಲು.....

- hanumanaik lamani

19 Feb 2020, 12:35 am

ತಾಯಿಯ ಮಡಿಲು

ಹೊಟ್ಟೆಯಲ್ಲಿ ಇರುವಾಗ ಕಟ್ಟಿದಳು
ಕೋಟಿ ಕೋಟಿ ಕನಸು,
ಕಂದನ ಬರುವಿಕೆಗಾಗಿ ಮಿಡಿಯುತ್ತಿತ್ತು
ಆ ತಾಯಿ ಮನಸು,
ಕಂದನ ಮೊಗವ ನೋಡಿದ ಕ್ಷಣ
ನವಮಾಸದ ನೋವನ್ನೆಲ್ಲ ಮರೆತಳು ತಾಯಿ ತಕ್ಷಣ

- Veena

18 Feb 2020, 11:09 pm

ಹಳೆಯ ನೆನಪು

ಯಾರಿಗೂ ಸಿಗದ ಒಂದು ಸಂಬಂಧ
ನನ್ನ ಬದುಕಿನಲ್ಲಿ ಬಂದ ಒಂದು ಆತ್ಮೀಯ ಬಂಧ
ಗೆಳೆತನದಲ್ಲಿ ಇದ್ದ ಆ ಸಮಯ
ಕಳೆದು ಹೋದ ಆ ನೆನಪುಗಳು
ದಿನೇ ದಿನೇ ಮರುಕಳಿಸುವುದು

ಮೌನದಲ್ಲಿ ಇರುವಾಗ ಕಾಡುವ ಪ್ರಶ್ನೆ
ಎಂದಿಗೂ ಮುಗಿಯದ ಯೋಚನೆ
ಕಾರಣವಿಲ್ಲದೆ ಮುರಿದ ಕಥೆ
ಹಾಗೇ ಉಳಿದಿರುವ ಮಾತು
ಹೀಗೆ ಆಕಸ್ಮಿಕವಾಗಿ ಸಿಕ್ಕಿದ ಆ ಗೆಳೆತನ

ನೋವಿನಿಂದ ತುಂಬಿದ ಮನಸು
ನಗುಬೀರುತ್ತಾ ಕುಳಿತಿರುವ ಮುಖ
ಬಚ್ಚಿಟ್ಟ ಕೆಲವು ಪದ
ತುಂಬಿ ತುಳುಕುತ್ತಾ ಇರುವ
ಸಾಗರದ ಅಲೆಯಂತೆ ಕೊನೆಯಾಗದು

ನೋಡದೆ ಮಾಡಿದ ಗೆಳೆತನ
ಕಣ್ಮರೆಯಾಗಿದೆ ಇಂದು
ಅದೇ ನೆನಪಿನಲ್ಲಿ ಮನಸು
ಕೊರಗುತ್ತಾ ದಿನ ಕಳೆಯುತಿದೆ
ಮತ್ತೆ ಬರಬಾರದೇ ಆ ಕ್ಷಣ.

- azna

18 Feb 2020, 08:25 pm

ಅಪ್ಪ

ನಾ ಈ ಲೋಕವ ಕಾಣುವ ಮುನ್ನವೇ
ಅಪ್ಪ ನೀ ನನಗಾಗಿ ಒಂದು ಸುಂದರ
ಕನಸಿನ ಲೋಕವನ್ನೇ ಶೃಷ್ಠಿಸಿದ್ದೆ!!

ನಾ ನೊಂದು ಅಳುವ ಮುನ್ನವೇ
ಅಪ್ಪ ನೀ ನನ್ನನ್ನು ನಿನ್ನಯ ಎದೆಗಪ್ಪಿ
ಮುದ್ದಿಸಿ ಸಾಂತ್ವನ ಮಾಡುತ್ತಿದ್ದೆ!!

ನಾ ನಡೆಯಲು ಕಲಿಯುವ ಮುನ್ನವೇ
ಅಪ್ಪ ನೀ ನನ್ನಯ ಕೈ ಹಿಡಿದು ನಡೆಸಿ
ನನಗೆ ಬದುಕಿನ ದಾರಿ ತೋರುತಿದ್ದೆ!!

ನಾ ಬಯಕೆಯ ಅರಿಯುವ ಮುನ್ನವೇ
ಅಪ್ಪ ನೀ ಅರಿತು ನಾ ಬಯಸುವುದನ್ನು
ನನ್ನೆದುರಿಗೆ ತಂದು ಇಡುತಿದ್ದೆ!!

ನಾ ಚಿತ್ರವ‌ ಬರೆಯುವ ಮುನ್ನವೇ
ಅಪ್ಪ ನೀ ನನ್ನಯ ಬದುಕಿನ ಚಿತ್ರಕ್ಕೆ
ಸುಂದರವಾದ ಬಣ್ಣವನ್ನು ತುಂಬಿದ್ದೆ!!

ನಾ ಕನಸಿನ ಲೋಕ ಕಟ್ಟುವ ಮುನ್ನವೇ
ಅಪ್ಪ ನೀ ನನ್ನಲಿ ಕರಗದ ಕನಸಾಗಿ
ಮರೆಯದ ನೆನಪಾಗಿ ಉಳಿದು ಹೋದೆ!!

- ಪಿ.ಜಿ.ಜ್ಯೋತಿ

18 Feb 2020, 06:26 pm

ನನ್ನ ಕವಿತೆ..

ನಾ ಬರೆಯುವ ಕವಿತೆಯಲ್ಲಿ
ಹೊಸತನದ ಸಂಭ್ರಮವಿದೆ
ಹಳೆ ನೋವಿನ ಸಾಲು ಬಿಟ್ಟಿಲ್ಲ
ಬಾಡುವ ಮುನ್ಸೂಚನೆ ಇಲ್ಲವೇ ಇಲ್ಲ.!

ಭಾವನೆಗಳ ಕಟ್ಟಿ ಹಾಕಿ
ಸೋತು ಸುಣ್ಣವಾದಾಗ
ನೋವಿಗೆ ಜೊತೆಯಾಗಿ ನಿಂತದ್ದೆ
ಅಸಹಾಯಕ ಲೆಖನಿ ಮತ್ತು ಪುಸ್ತಕ.!

ಬರೆದಷ್ಟು ಬೆಂಬಿಡದೆ
ಕಾಡುವ ಸಾಲುಗಳಿಗೆ
ಅಲಂಕಾರ ಮಾಡಿರುವೆ ನಾ
ಚೆಂದವಾದ ಉಪಮೆಗಳ ತೊಡಿಸಿ.!

ಕವಿತೆ ಕವಿತೆಯಾಗದಿದ್ದರೂ
ನನ್ನೆಲ್ಲ ನೋವು-ನಲಿವಿಗೆ
ಜೊತೆಯಾಗಿರುವ ಸಂಗಾತಿಯಾಗಿ
ಕೈ ಹಿಡಿದು ನಡೆಯುತಿರುವೆ ಸುಖವಾಗಿ.!

- ಅಕ್ಷತ

18 Feb 2020, 05:03 pm

ನೆರೆಹಾವಳಿಕೋರ

ಮೊನ್ನೆ ವರುಣ ಆಧುನಿಕ ರಾಕ್ಷಸ ರಾವಣಾವತಾರ ಎತ್ತಿ ನಮ್ಮೂರಿಗೆ ಬಂದಿದ್ದ
ಹತ್ತು ತಲೆಯೆತ್ತಿ ದಶ ದಿಕ್ಕುಗಳಲ್ಲಿ ನಾಲಿಗೆ ಚಾಚಿದ್ದ
ಬಡವರ ಬದುಕನ್ನು ರಸ್ತೆಗೆ ಎಳೆದು ತಂದಿದ್ದ
ಮಲಗಿ ನಿದ್ರೆಗೆ ಜಾರಿದವರ ಕಣ್ಣುಗಳನು ಶಾಶ್ವತ ಮುಚ್ಚಿಸಿದ್ದ

ಬಿದಿರು ಹುಲ್ಲು ಗಳಿಂದ ನಿರ್ಮಿಸಿದ ಗುಡಿಸಲಿಗೆ ಮೊನ್ನೆ ವರುಣರಾಕ್ಷಸ ನುಗ್ಗಿದ್ದಾ
ಒಲೆಯ ಮೇಲೆ ಬೋಗಾಣಿಯಲ್ಲಿ ಕುದಿಸಿದ ಅನ್ನದ ಅಗಳು ಹಾಗೆ ಇದೆ
ದನದ ಕೊಟ್ಟಿಗೆಯಲ್ಲಿ ಎತ್ತು ಎಮ್ಮೆಯ ಕಾಲಿನಲ್ಲಿ ಬಿದ್ದ ಹೆಂಡೆ ಉಚ್ಚೆ ಹಾಗೆ ಇದೆ
ಹಸುಗೂಸ ಬಾಯಲ್ಲಿ ಅವ್ವಳ ಮೊಲೆ ಹಾಲು ತೊಟ್ಟಿಕ್ಕುತ್ತಿದೆ
ದಂಡೆತ್ತಿಬಂದ ರಾಕ್ಷಸ ವರುಣ, ಇದ್ದವರನ್ನ ಇದ್ದಲ್ಲೆ ಹೆಣ ವಾಗಿಸಿದ್ದ

ಬದುಕಿನ ತುಂಬ ಹೋರಾಟ ಮಾಡಿಕೊಂಡು ಬದುಕು ಕಟ್ಟಿಕೊಂಡವರ ಮನೆಗೆ ವರುಣ ರಾಕ್ಷಸ ಬಂದಿದ್ದ
ಅಷ್ಟು ಜನುಮದ ದ್ವೇಷ ತೀರಿಸಿಕೊಳ್ಳಲು ಶಪತಮಾಡಿದ್ದ
ಸಮುದ್ರವನ್ನೇ ಮನೆ ಮುಂದೆ ತಂದು ನಿಲ್ಲಿಸಿದ್ದ
ಊರ ಮುಂದಿನ ಕೊಚ್ಚೆ ನೀರನ್ನ ಅಡುಗೆ ಮನೆಗೆ ನುಗ್ಗಿಸಿದ್ದ
ಅಡುಗೆ ಮಾಡುವ ಬೋಗಾಣಿಗಳೆಲ್ಲಾ ನೀರಲ್ಲಿ ಈಜಾಡುವಂಗ ಮಾಡಿದ್ದ
ಬಡವರ ಬದುಕು ಊರ ಗಟಾರದ ದಂಡಿಗೆ ಬಂದ ಕುಂಡರುವ ಹಂಗ ಮಾಡಿದ್ದ.

- Siddugouda

18 Feb 2020, 04:11 pm

ನೀ ಬರೆದ ಪ್ರೇಮದ ಓಲೆ

ಹೃದಯ ಸಂದುಕದಲ್ಲಿ ನೀ ಬರೆದ ಪ್ರೇಮ ಓಲೆಗಳ ಸಾಲು ಸಾಲು
ಆಗಾಗ ನೆನಪಾದಾಗ ಓದಿ ಓದಿ ಒಪ್ಪಾವಾಗಿ ಮಡಚಿಡುವೆ
ನೀ ಗೀಚಿದ ಪ್ರೇಮ ನಿವೇದನೆಯ ಸಾಲುಗಳು ಹೃದಯ ಕೊರಳಿಗೆ ಬಳಸಿ, ಅಪ್ಪಿ ಮುದ್ದಾಡುತ್ತಿವೆ
ಪ್ರೇಮ ಪತ್ರದ ಸಂದುಕದಲ್ಲಿ ಮಸುಕಾದ ಕಣ್ಣಡಿಯಲ್ಲಿ ಗತಕಾಲದ ಸವಿ ಸವಿ ನೆನಪುಗಳ ಅನಾವರಣ
ನಿನ್ನ ಗೆಜ್ಜೆ ಸಪ್ಪಳಗಳ ಧ್ವನಿ, ಓಲೆಗಳ ಅಕ್ಷರಗಳ ಅಂತರಂಗದಲ್ಲಿ ಅಡಗಿ ಕುಳತಿದೆ
ನನ್ನ ಹೃದಯ ಪೋಸ್ಟ ಬಾಕ್ಸದಲಿ ನೀ ಹಾಕಿದ ಪ್ರೇಮ ಪತ್ರಗಳು ಹೊಸರಾಗ ಹಾಡುತ್ತಿವೆ
ಪತ್ರಗಳಿಗೆ ರೆಕ್ಕೆ ಮೂಡಿ ಹೃದಯಂಗಳದಲ್ಲಿ ಹಾರಾಡಿ ಮತ್ತೆ ಸಂಜೆ ಗೂಡಿಗೆ ಬರಲಿ
ನಾ ಚಿತೆ ಏರುವಾಗ ಪ್ರೇಮ ಪತ್ರಗಳು ಸುಡದಂತೆ ಉಳಿಸಿಕೊಳ್ಳುವುದೇ ಚಿಂತೆ
ಮತ್ತೊಂದು ಜನ್ಮಕು ನೀ ಬರೆದ ಓಲೆಗಳ ಜೊತೆಗೆ ಬರಬೇಕೆಂಬುವುದೇ ನನ್ನ ಕೊನೆಯಾಸೆ

ರಚಣೆ: ಆರ್.ವೀ.ಗೌಡರ

- Siddugouda

18 Feb 2020, 12:53 pm

ರಾಧೆ ಶ್ಯಾಮ

ಶ್ಯಾಮ ನಿನ್ನಯ ನಾಮ ಕೇಳಿ
ರಾಧೆಯು ನಾಚಿಕೊಂಡಳು!!
ನಿನ್ನ ಕೊಳಲ ನಾಧದ ಸುಧೆಗೆ
ಮೈಯ ಮರೆತು ನಿಂತಳು!!

ಮೊದಲ ಪ್ರೇಮ ನೀನೇ ಶ್ಯಾಮ
ಹರೆಯದಲ್ಲಿ ಕೊಡುಗೆ ನೀಡಿ!!
ಮಡಿವವರೆಗೂ ಪ್ರೇಮಿಯಾದೆ
ಹೃದಯದೊಳಗೆ ಗಮಕವಾದೆ!!

ಮುಡಿದ ಹೂವ ಚೆಲುವಿನಲ್ಲಿ
ಗಂಧವಿತ್ತು ಘಮಿಸುತಿರುವೆ!!
ಗಮನ ಸೆಳೆದು ಮನವ ಕದ್ದು
ಮರೆಗೆ ನಿಂತು ನೋಡುತಿರುವೆ!!

ಮರೆಯಲಾರದ ಒಲುಮೆ ನೀನು
ಮೊದಲ ಪ್ರೇಮದ ಚಿಲುಮೆ ನೀನು!!
ಯುಗವೇ ಕಳೆದರೂ ಅಳಿಸದಂತೆ
ರಾಧೆಯು ಶ್ಯಾಮನ ಪ್ರೀತಿಗೆ ಸ್ವಂತ!!

- ಪಿ.ಜಿ.ಜ್ಯೋತಿ

18 Feb 2020, 12:13 pm