Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹನಿಗವನ

ಅವಳೆಂದೊ
ದೂರವಾಗಿದ್ದಾಳೆ
ನನ್ನೆದೆಯೊಳಗಿಂದ
ಕಳೆದು ಹೋದ
ಗುಮಾನಿ ನನಗೆ
ಕವಿತೆಯ ಭಾವದಲಿ
ದೂರು ದಾಖಲಿಸಿದ್ದೇನೆ
ಸಿಕ್ಕರೂ ಸಿಗಬಹದೆಂಬ
ಆಸೆಯಿಂದ.

ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ ೫೮೨೨೦೫
ತಾಲೂಕ

- Marulasiddappa Doddamani

20 Feb 2020, 07:09 am

ಹನಿಗವನ

ಕತ್ತಲಾದಂತೆ
ಕಾಡುವ
ಕವಿತೆಗೆ
ಬೆಳಕು
ಮೂಡುವ
ಮುನ್ನ ಹೆರಿಗೆ.

ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ ೫೮೨೨೦೫
ತಾಲೂಕ

- Marulasiddappa Doddamani

20 Feb 2020, 07:08 am

...ಪ್ರೀತಿಯ ಕನಸು

ಮಲ್ಲಿಗೆ ಮನಸು
ನಿನ್ನದೇ ಕನಸು
ಮಂಜು ಆಗುವ ಮುನ್ನ
ನೀನೆ ಬಂದು ಎಚ್ಚರಗೊಳಿಸಿ
ಪಿಸುಮಾತಿನ ವಯಸ್ಸು
ಪ್ರೀತಿಯ ಮನಸು
ನೀ ಬಲ್ಲೆ ಆ ನನ್ನ ಪ್ರೀತಿಯ ಮನಸು
ಸದಾ ನೀ ನನ್ನನ್ನು ಪ್ರೀತಿಸು...

..## ಅಮರ್ ಭಗತ್ ##...
(ಅಮರೇಶ್)

- amaresh amar

19 Feb 2020, 11:40 pm

ಕನಸು

ನನ್ನದೊಂದು ಪುಟ್ಟ ಕನಸು
ಸುತ್ತಲೂ ಸ್ವಚ್ಚಂದ ಪರಿಸರ
ಎಲ್ಲಿ ನೋಡಿದರೂ ಕೂಡ
ಹಸಿರು ಬಣ್ಣದಿಂದ ಕಂಗೊಳಿಸುಹುದು

ಅಲ್ಲಿ ನಾನೊಬ್ಬಳೇ ಇರಬೇಕು
ಪ್ರಕೃತಿಯ ಸುಂದರ ನೋಟವನ್ನು
ಕಣ್ಣು ತುಂಬ ಕಾಣಬೇಕು
ನನ್ನೆಲ್ಲ ನೋವುಗಳನ್ನು ಮರೆತು

ನಾನು ಬದುಕುವಷ್ಟ್ ದಿನ
ಅಲ್ಲೇ ಜೀವಿಸಬೇಕು
ಯಾರ ನೆರವು ಇಲ್ಲದೆ
ನನ್ನ ಪಾಡಿಗೆ ಆಯಾಗಿ ಇರಬೇಕು

- azna

19 Feb 2020, 08:57 pm

ನನ್ನ ಪ್ರೀತಿಯ ಗೆಳತಿಗೆ

ಬಾಳ ಪಯಣದಿ ನೂರು ನೆನಪುಗಳ ಸಾಲು
ಪಯಣವ ಸಿಹಿ ಗೋಳಿಸುವ ಕೆಲವೊಂದು ನೆನಪುಗಳು ಮನದಿ ಗಾಯ ಉಳಿಸುವ ಹಲವು ನೆನಪುಗಳ ಗುರುತು.

ಅವಳ ಕಣ್ಣ ಸೆರೆಯಲ್ಲಿ ಸೆರೆಗೊಂಡ ಮೊದಲ ಪ್ರೀತಿಯ ನೆನಪು, ಪ್ರೀತಿಯ ಪಿಸು ಮಾತಿನಲ್ಲಿ ನಾ ಮರೆಯದ ಆ ನೆನಪು.

ಪ್ರೀತಿಯ ಮಾಯೆಯಲ್ಲಿ ಸಿಲುಕಿದ ಪುಟ್ಟ ಹೃದಯ ಜೇನಿನ ಸಿಹಿ ನಗುವ ನೋಡಿ ಮೋಸವಾಗಿ ಹೋದೆಯಾ
ನೋವೇಂಬ ನಶೆಯಲ್ಲಿ ನರಳಿಹೇ ಇದೇನು ನನ್ನ ವಿಧಿಯ
ಕಣ್ಣ ಬೆವರ ಹನಿಯ ಒರೆಸದೇ ಎಲ್ಲಿ ಹೋದೆ ನನ್ನ ಪ್ರಿಯ

ಬದುಕೆಲ್ಲ ಬರಿದು ನಿನ್ ಇಲ್ಲದೇ
ಹಿಂದೆ ತಿರುಗಿ ನೋಡೇನು ನಾನು
ಬರಿ ನೋವಿನ ಗುರುತುಗಳೇ ನನ್ನ ದಾರಿಯೆಲ್ಲ
ಆದರೂ ಸುಖವಾಗಿ ಬಾಳುವೆ ಕಾರಣ
ನಿನ್ನ ಮದುರ ನೆನಪುಗಳೇ ನನ್ನ ಹೃದಯವೇಲಾ.

- Kris

19 Feb 2020, 07:50 pm

ನೀನು

ಪ್ರೀತಿ
ಇಲ್ಲದ
ಮನದಲ್ಲಿ
ಪ್ರೀತಿಯ
ನೀರ
ಹಣಿಸಿ
ಪ್ರೀತಿ
ಚಿಗುರಿಸಿದ
ಮಳೆ ಹನಿ
ನೀನು

- ಅಕ್ಷತ

19 Feb 2020, 05:42 pm

ನೆನಪಿನ ಭರಣಿ..

ನಾವಿಬ್ಬರು ಜೊತೆಯಿದ್ದ
ಸುಂದರ ಕ್ಷಣಗಳನ್ನು
ಗಾಜಿನ ಭರಣಿಯೊಳಗೆ
ತುಂಬಿಟ್ಟಿರುವೆ ಭದ್ರವಾಗಿ.

ಅದನ್ನು ನೋಡುತ್ತಾ
ನಮ್ಮಿಬ್ಬರ ಬದುಕಿನ
ಸಮಯ ಕಳೆಯುವುದು
ನಮಗಿರುವ ಕಾಯಕ.

ಅದರೊಳಗೆ ಸಿಹಿ-ಕಹಿ
ಮಿಶ್ರಣದಿಂದ ಕೂಡಿದ
ನೆನಪುಗಳು ಜೀವನವ
ನಡೆಸಲು ದಾರಿ-ದೀಪ.

ಎಂದಿಗೂ ಒಡೆಯದಿರು
ನೆನಪಿನ ಬುತ್ತಿಯನು
ಕೊನೆವರೆಗು ಜೋಪಾನವಾಗಿ
ಕಾಪಿಡೋಣ ಪ್ರೀತಿಯನು.

- ಅಕ್ಷತ

19 Feb 2020, 05:40 pm

ನನ್ನೊಳಗಿನ ಕವಿತೆ

ನಾನು ನನ್ನೊಳಗಿನ ಕವಿತೆ ಸಾಯಲು ಬಿಡುವದಿಲ್ಲ
ಫಿನಿಕ್ಸ ಪಕ್ಷಿಯಂತೆ ನನ್ನ ಕವಿತೆ ಆಕಾಶಕ್ಕೆ ನೆಗೆಯುತ್ತದೆ
ಬಿಲ್ಲಿಗೆ ಜಗ್ಗಿ ಕಟ್ಟಿದ ಬಾಣದಂತೆ ನುಗ್ಗುತ್ತದೆ
ಗನ್ ಒಳಗೆ ರೆಡಿಯಾಗಿ ಕುಳಿತ ಗುಂಡಿನಂತೆ ಸಿಡಿಯುತ್ತದೆ
ಜಿಂಕೆಯಂತೆ ಟನ್ ಟನ್ ಎಂದು ನೆಗೆ-ನೆಗೆದು ಕುಪ್ಪಳಿಸಿ ಓಡುತ್ತದೆ

ಮೂರಡಿ ಆರಡಿ ತೆಗ್ಗನಲಿ ಹುದುಗಿಸಿ ಬಳೆದು ಮಣ್ಣೆಳೆದರೂ ಮೇಲೆದ್ದು ಬರುವದು ನನ್ನ ಕವನ

ಬೊಡ್ಡೆಗಚ್ಚಿ ಕಡೆದು ಎಸೆಡ್ ಸುರುವಿದರು ಚಿಗುರೊಡೆದು ಮತ್ತೆ ಮೊಗ್ಗು ಹೂ ಕಾಯಿ ಹಣ್ಣು ಬಿಡುವುದು ನನ್ನ ಕವನ

ನನ್ನ ಕವನದ ಸಮಾದಿ ಮೇಲೆ ಜಾಲಿ ಮರ ನೆಟ್ಟರೂ ಸಮಾದಿಯಿಂದ ಎದ್ದು ಗುಲಾಬಿ ಹೂವಾಗಿ ಅರಳುವುದು

- Siddugouda

19 Feb 2020, 12:37 pm

ನನ್ನ ಸಿದ್ದಂತಾ

ನಾನು ಗೆಲುವನ್ನು ಒಪ್ಪಿಕೊಳಲ್ಲ,
ಸೋಲನ್ನು ಲೆಕ್ಕ ಮಾಡಲ್ಲ .
ಯಾಕೆಂದ್ರೆ...............
ನಂಗೆ ಗೆಲ್ಲಬೇಕೆಂಬ ಆಸೆ ಇಲ್ಲ ,
ಸೋಲುತಿನಿ ಅನ್ನೋ ನಿರಾಸೆ ಇಲ್ಲ .
ಇರೋದು ಒಂದೇ
ಗೆಲುವು -ಸೋಲಿನ ಮಧ್ಯದಲ್ಲಿ ಇರೋ ಜೀವನದ ಜೊತೆ ಹೋರಾಟ ಮಾಡಬೇಕು ಅನ್ನೋ ಸಿದ್ದಾಂತ ಮಾತ್ರ........
✍️ ವೇಣು ಸಿ. ಎ ✍️

- VenuCA

19 Feb 2020, 01:34 am

ಸುಪನಾತಿ ಸೊಳ್ಳಿ

ಕಳ್ಳತನದಿಂದ ಬಂದು ಮುತ್ತು ಕೊಡುತ್ತಾಳೆ ಕಳ್ಳಿ..... ಮುತ್ತುಕೊಟ್ಟ ಜಾಗದಲ್ಲಿ ಕೆರೆದಾಗ ಆಗುತ್ತೆ ಗುಳ್ಳಿ.... ಮತ್ತೆ ಮತ್ತೆ ಮುತ್ತು ಕೊಡಲು ಬರುತ್ತಾಳೆ ಮಳ್ಳಿ...... ಸಾಲದು ಅಂತ ಜೊತೆಗೆ ಕರೆದು ತರುತ್ತಾಳೆ ಕರುಳಬಳ್ಳಿ .....ಯಾರು ಇರಬಹುದು ಅಂತ ತಿರುಗಿ ನೋಡಿ ಬ್ಯಾಡ್ರಿ ಹೊಳ್ಳಿ..... ಅದು ನನಗೆ ಅಂತಲ್ಲ ನಿಮಗೆಲ್ಲರಿಗೂ ಮುತ್ತು ಕೊಡುತ್ತಾಳೆ ಸುಪನಾತಿ ಸೊಳ್ಳಿ......

- hanumanaik lamani

19 Feb 2020, 01:08 am