Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಆಕಾಶದಂತೆ ಜೀವನವು ಕೂಡ ವಿಸ್ತಾರವಾಗಿ ಇರಬೇಕು
ಪಕ್ಷಿಗಳಂತೆ ಸ್ವಚ್ಚಂದವಾಗಿ ನಾವು ಹಾರಾಡಬೇಕು
ಮೋಡಗಳು ಒಂದಾಗಿ ಮಳೆ ಬರುವಂತೆ
ಜೀವನದಲ್ಲಿ ಸುಖ ಸಂತೋಷಗಳು ಬರಬೇಕು
ಮಿಂಚಿನಂತೆ ತೊಂದರೆಗಳು ತಟ್ಟನೆ
ಮಾಯವಾಗಬೇಕು
ಸಿಡಿಲಿನ ಶಬ್ದವು ಸುಮಧುರ ಧ್ವನಿಯಾಗಿ ಮೊಳಗಬೇಕು
ಸುತ್ತಲೂ ನೋಡಿದರೆ ಶಾಂತವಾಗಿ ಕೂಡಿದ
ವಾತಾವರಣ ಇರಬೇಕು
ಬಿಳಿ ಬಣ್ಣದಂತೆ ಯಾವುದೇ ಕೊಳಕು
ಇಲ್ಲದೆ ಮನಸ್ಸು ಶುದ್ಧವಾಗಿ ಕಾಣಬೇಕು
ಮನ ಬೇಸರದಲ್ಲಿ ಇದ್ದಾಗ ಗಾಳಿ ಬೀಸಿ ಹೋದಂತೆ ದುಃಖಗಳು ಕೂಡ
ಅದರಲ್ಲಿ ಕಾಣೆ ಆಗಬೇಕು.
- azna
20 Feb 2020, 07:47 pm
ಕನಸು ಕಾಣುವ ಕಣ್ಣಿಗೆ
ನನಸಂತೆ ಬಂದೇಯಾ
ನಸುನಗುವ ಬೀರುತಾ ನಲಿಯುತಾ ನಿಂದೇಯಾ?
ಕಣ್ಣಾ ಕಂಬನಿ ಜಾರದಂತೆ ರೆಪ್ಪೆ ಕಾವಲು
ನಿನ್ನ ನೆನಪು ಮಾಸದಂತೆ ಈ ನನ್ನ ಮನವು ಕಾವಲು
ಓ ನನ್ನ ಗೆಳೆಯ
ಇನ್ನಾದರೂ ಅರ್ಥೈಸಿಕೋ ನನ್ನ ಪ್ರೀತಿಯ
- Veena
20 Feb 2020, 06:18 pm
ಮರೆತ ನೆನಪುಗಳ
ಜೊತೆ ಜೊತೆಗೆ ಈ ಕ್ಷಣ
ಕ್ಷಣಗಳ ನೆನೆದು ಹೇಳುವ
ಮಾತುಗಳಾದವು ಕವನ
ಪ್ರೀತಿಗೆ ಎದುರಾಯಿತು
ಅನುಮಾನದ ಆಗಮನ
ದೂರವಾದವು ಇಬ್ಬರ ಮನ
ಮನಸ್ಸಿನ ಮಾತು ಕೇಳದೆ
ನುಡಿಯುವ ನಾಲಗೆಯ ನಡೆಗೆ
ಕೊಟ್ಟರು ಅರಿಯದೆ
ಮಾಡದ ತಪ್ಪಿಗೆ ಶಿಕ್ಷೆ
ಸಿಕ್ಕೀತೆ ನನಗೆ ಅನುಮಾನದ
ತಪ್ಪಿಗೆ ನೋವಿನ ಭಿಕ್ಷೆ....!?
ಗುಡುಗು ಸಿಡಿಲುಗಳಂತೆ ತುಂಬಿವೆ
ಸಂಶಯ ನಿನ್ನ ಮನದಾಳದಲೆಲ್ಲ,
ಮಿಂಚಂತೆ ಮರೆಯಾಗಿದೆ
ಪ್ರೀತಿ ನಿನ್ನ ಕಣ್ಣೋಟದಿಂದ….
ದೂರಕ್ಕೆ ಸರಿಸು ಸಂಶಯದ ಪರದೆಯ
ಮತ್ತೆ ದೊರಕದು ನಿನಗೆ ಕಳೆದ ಸಮಯ…
- Pb
20 Feb 2020, 12:49 pm
ಪದ್ಯ ಹೇಳುವ ಮರ
ಬೆಳೆವ ಸಸಿಗಳಿಗೆ ಆಧಾರ
ನಿಮ್ಮ ಒಂದೊಂದು ಪದ್ಯವು
ಬಹು ಅರ್ಥವ ಸೂಚಿಸಿ
ಬೆಳೆಸುವುದು ನಮ್ಮಲ್ಲಿ ಒಲವು
ಸಾಗಲಿದು ಸದಾ ಹೀಗೆ ನಮ್ಮೆಲ್ಲರರಸಿ
ಇರಲು ನಿಮ್ಮ ರಾಮಧಾನ್ಯ ಚರಿತೆ
ಜ್ಞಾನಕ್ಕೇನಿದೆ ಕೊರತೆ?
ಶಾರದ
- ಶಕುಂತಲಾ
20 Feb 2020, 09:41 am
ನಿನ್ನ ಹಂತೇಕ ಅಂತಾದೇನೈತಿ
ಈ ಜೀವ ನೀ ಕಂಡಾಗೋಮ್ಮೆ
ನಿನ್ನ ಸಲುವಾಗಿ ಹಾತೋರಿತೈತಿ
ಮನಸಿನ್ಯಾಗ ನಿನ್ನ ಧ್ಯಾನಿಸಿ ಧ್ಯಾನಿಸಿ
ಜೀವ ಶವ ಆಗುದಂತೂ ಖಾತ್ರಿ ಆಗೇತಿ.
ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ
ತಾಲೂಕ...ಜಿಲ್ಲೆ...ಗದಗ
- Marulasiddappa Doddamani
20 Feb 2020, 08:22 am
ಪ್ರೀತಿ ಮಾಡೋರಿಗೆ
ಸಾಕ್ಷಿನ ಇರಂಗಿಲ್ಲ
ಮನಸಾಕ್ಷಿಯೊಂದಿದ್ದರ
ಬಾಳು ಸುಂದರವಾಗಿರತಲ್ಲ.
ಮರುಳಸಿದ್ದಪ್ಪ ದೊಡ್ನಮನಿ
ಹುಲಕೋಟಿ
- Marulasiddappa Doddamani
20 Feb 2020, 08:20 am
ಶಾಯರಿ
ಪ್ರೀತೆಂದ್ರ ಒಂದು ನಮೂನಿ
ಕೊರೆಯು ಹುಳಾ ಇದ್ದಂಗ
ಒಬ್ಬೊಬ್ಬರಿಗೆ ಒಂದೊಂದು ರೀತಿ
ಅದು ಕೊರಿದ ಬಿಡಂಗಿಲ್ಲ .
ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ
- Marulasiddappa Doddamani
20 Feb 2020, 08:19 am
ಶಾಯರಿಗಳು
(೧) ನಿನ್ನ ಕೆನ್ನಿಗೆ
ಗುಲಾಬಿ ಬಣ್ಣ ತುಂಬೇತಿ
ಬಣ್ಣದ ರಂಗಿಗೇ ನನ್ನ
ಹೃದಯನ ಕಳದು ಹೋಗೆತಿ.
(೨) ನಿನ್ನ ತುಟಿ ನೋಡಿದರ ಗುಲಾಬಿ
ಹೂವು ಆಗ್ಯಾವು
ಮುಟ್ಟಿ ನೋಡಿದರ ಮೆತ್ತಗದಾವು
ಮುತ್ತಿಟ್ಟರ ಹೂವಿನಂಗ ಅರಳತಾವು .
ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ
- Marulasiddappa Doddamani
20 Feb 2020, 07:20 am
ಶಾಯರಿ
ನೀ ಎಷ್ಟು ಬಾಣಾ ಬಿಟ್ಟರೂ
ನನ್ನೆದಿಗೆ ತಾಕಿದ್ದಿಲ್ಲ
ನಿನ್ನ ವಾರಿಗಣ್ಣಿನ ನೋಟಕ್ಕ
ನನ್ನ ಹೃದಯನಾ
ಒಡದು ಚೂರು ಚೂರಾತಲ್ಲ .
ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ
- Marulasiddappa Doddamani
20 Feb 2020, 07:19 am
ಅವಳೆಂದೊ
ದೂರವಾಗಿದ್ದಾಳೆ
ನನ್ನೆದೆಯೊಳಗಿಂದ
ಕಳೆದು ಹೋದ
ಗುಮಾನಿ ನನಗೆ
ಕವಿತೆಯ ಭಾವದಲಿ
ದೂರು ದಾಖಲಿಸಿದ್ದೇನೆ
ಸಿಕ್ಕರೂ ಸಿಗಬಹದೆಂಬ
ಆಸೆಯಿಂದ.
ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ ೫೮೨೨೦೫
ತಾಲೂಕ
- Marulasiddappa Doddamani
20 Feb 2020, 07:09 am