ತಾಯಿಯ ಕರುಳ ತನಿಸೋ ವರವ ನೀಡೋ
ದೇವನೇ ಜಗದಿ ಧನ್ಯನಗುವೇ ನಾ !!
ಶತಕೋಟಿ ದೇವರ ಅನುಗ್ರಹವ ಕಾಣುವೆ ಅವಳ ಮಡಿಲಲ್ಲಿ ಲೋಕದಿ ಪುಣ್ಯನಗುವೇ ನಾ !!
ಅಮೃತಕ್ಕಿಂತಲು ಮಿಗಿಲು ಅಮ್ಮನ ಎದ್ದೆ ಹಾಲು
ಸ್ವರ್ಗಕ್ಕಿಂತಲು ಮಿಗಿಲು ಅಮ್ಮನ ಮುದ್ದು ಮಡಿಲು ಕಾಣದ ದೇವರ ಹುಡುಕದೆ ತಾಯಿಗೆ ಕೈಯ ಮುಗಿವೆ ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂದು ನಾನು ಅರಿವೇ.
ನಾನು ಪಡೆದ ಪುಣ್ಯ ತಾಯಿ ಒಬಳು
ನನ್ನ ಹಡೆದ ಕರುನಾಡ ತಾಯಿ ಒಬಳು
ದರೆಯ ತುಗೋ ಭೂಮಿ ತಾಯಿ ಒಬಳು
ಮಾತೆಯ ಸೆರಗಿನಲ್ಲಿ ಸುರಕ್ಷಿತನ್ನು ಎಂದೂ ನಾನು.
ಅಮ್ಮ ನಿನ್ನ ಋಣವ ತೀರಿಸೋ ವರವ ಬೇಡುವೆ ನಾ.
ಬದುಕ ಕಳಿಸೋ ಮೊದಲ ಗುರುವು ಅವಳು
ನನ್ನ ಪ್ರೀತಿಯ ಮೊದಲ ಒಲವು ಅವಳು
ಕಷ್ಟ ಸಮಯದಿ ಹೆಗಲು ನೀಡೋ ಗೆಳೆಯನಾಗುವಳು
ಕಾಯಿಲೆಯಲ್ಲಿ ಬಳಲೋವಾಗ ನಿನಗೆ ವೈದ್ಯನಾಗುವಳು
ಅವಳ ಬದುಕೆಲ್ಲ ನಿನ್ನ ನಗುವಿಗಾಗಿ ಜೀವಿಸುವಳು.
ಅಮ್ಮ ನಿನ್ನ ಮಹತ್ವ ಹೇಳಲು ವರ್ಣಮಾಲೆಯ ಅಕ್ಷರಗಳು ಸಾಲದು.
ಕಿರಣ್ ಕ್ರೀಸ್
ಚಂದ್ರನಿಲ್ಲದ ರಾತ್ರಿ
ತುಂಬಾ ಕತ್ತಲು
ಚಂದ್ರನಿಲ್ಲದಾ ರಾತ್ರಿ
ತುಂಬಾ ಕತ್ತಲು
ಗಗನದಲ್ಲಿ ನಿಂತು
ನಕ್ಕುಬಿಡು ಒಮ್ಮೆ
ಗಗನದಲ್ಲಿ ನಿಂತು
ನಕ್ಕುಬಿಡು ಒಮ್ಮೆ
ಜಗದ ತುಂಬಾ
ಬೆಳದಿಂಗಳಾ
ಬೆಳಕು ಚೆಲ್ಲಲಿ
ಮಾಘ ಮಾಸ ಕೃಷ್ಣ ಚತುರ್ದಶಿಯದು
ದೇವತೆಗಳಲ್ಲಿ ಅತ್ಯಂತ ನಿಗೂಢನಾಗಿಹ
ಲೋಕಕಲ್ಯಾಣಕ್ಕಾಗಿ ವಿಷವ ಆಪೋಶಿಸಿಹ
ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ
ಪಂಚಭೂತಗಳ ಒಡೆಯನಾಗಿಹ ಶಿವನಿಗೆ
ಪಾರ್ವತಿಯೊಂದಿಗೆ ಭೂ-ಸಂಚಾರ ಯೋಗ.
ಪರ್ವತ ರಾಜನ ಮಗಳಾದ ಪಾರ್ವತಿಯು
ಸದಾ ಶಿವನ ಸೇವೆಯಲ್ಲಿ ತೊಡಗಿಕೊಂಡು
ಆಹಾರ ತ್ಯಜಿಸಿ ಧ್ಯಾನ, ಪ್ರಾರ್ಥನೆಯಿಂದ
ಶಿವನ ಪ್ರೀತಿಯನ್ನು ಒಲಿಸಿಕೊಂಡು
ದೇವಾನುದೇವತೆಗಳ ಸಮಕ್ಷಮದಲ್ಲಿ
ಮದುವೆಯಾದ ಸುಂದರ ದಿನವಿದು.
ಗಂಗೆಯನ್ನು ತಲೆಯ ಮೇಲೆ ಹೊತ್ತು
ಎದೆಯಲ್ಲಿ ಗೌರಿಯನ್ನು ಕುಳ್ಳಿರಿಸಿ
ಸುಬ್ರಹ್ಮಣ್ಯನನ್ನು ಸರವಾಗಿ ಧರಿಸಿ
ನಂದಿಯ ಮೇಲೆ ಕುಳಿತುಕೊಂಡ
ಕೈಲಾಸವಾಸಿಯ ರುದ್ರತಾಂಡವನಿಗೆ
ಭೂಸಂಚಾರ ಮಾಡುವ ಸುಮಧುರ ದಿನ.
ಭೂಮಿಯ ಮೇಲಿನ ಜೀವರಾಶಿಗಳು
ಸೂರ್ಯೋದಯಕ್ಕೂ ಮುನ್ನ ಎದ್ದು
ಶುಚಿರ್ಭೂತರಾಗಿ ಶಿವ ನಾಮವ ಜಪಿಸತ್ತಾ
ರಾತ್ರಿಯೆಲ್ಲ ಜಾಗರಣೆಯಿಂದ ಇದ್ದು
ರಾತ್ರಿಯ ಕತ್ತಲೆಯ ನಂತರ ಬರುವ
ಬೆಳಕಿನ ಅರ್ಥ ಹುಡುಕುವ ದಿನವದು.
ಆಡಂಬರ ಮುಕ್ತ, ಭಸ್ಮವ ಬಳಿದಿಹ,
ಹುಲಿಚರ್ಮ ಉಟ್ಟ, ಧ್ಯಾನಪ್ರಿಯನಿಗಾಗಿ
ಹಗಲು ಉಪವಾಸ, ರಾತ್ರಿ ಜಾಗರಣೆ ಮಾಡಿ,
ಶಿವನ ಕೃಪೆಗೆ ಪಾತ್ರವಾಗುವ ಶುಭದಿನ.
ಉಪವಾಸ, ಜಾಗರಣೆ ಮತ್ತು ಶಿವಧ್ಯಾನಗಳ
ಸಂಗಮವೇ ಭೂಲೋಕದಲ್ಲಿ ಶಿವರಾತ್ರಿ.
ಪ್ರೀತಿ ಒಂದು ದಿನ ಕಳೆದರೆ ನೋವಾಗುತ್ತದೆ ಮನಸ್ಸಿಗೆ
ತಾಯಿ ಲಾಲಿ ಒಂದು ದಿನ ಕಳೆದರೆ ನೋವಾಗುತ್ತದೆ ಮಗುವಿಗೆ
ವರ್ಷದ ಬೆಳೆ ಒಂದು ದಿನ ಕಳೆದರೆ ನೋವಾಗುತ್ತದೆ ನಮ್ಮ ರೈತನಿಗೆ
ಆದರೆ ನಮ್ಮ ಯೋಧರ ಜೀವ ಒಂದು ದಿನ ಕಳೆದರೆ ನೋವಾಗುತ್ತದೆ ಭಾರತಾಂಬೆಯ ಜನತೆಗೆ
ಅದಕ್ಕೆ ಅನ್ನೋದು ಜೈ ಜವಾನ್ ಜೈ ಕಿಸಾನ್
ಮನದ ನೋವು ಮರೆಯಲು ಮಸಣದ ದಾರಿ ಹುಡುಕುವುದು ಎಷ್ಟು ಸರಿ
ಬಿಟ್ಟುಹೋದ ಹುಡುಗಿಯ ಪ್ರೇಮವನ್ನು ಮರೆಯಲು ಬಾರಿನ ದಾರಿ ನೋಡುವುದು ಅದೆಷ್ಟು ಸರಿ
ಆದರೆ ಜೀವನದಲ್ಲಿ ಯಾವುದೇ ರೀತಿ ಮಳೆ ಗಾಳಿ ಎನ್ನದೆ ತನ್ನ ಆಹಾರ ಹುಡುಕುತ್ತಾ ಹೋಗುವ ಇರುವೆಯನ್ನು ನೋಡಿ ನೀನು ಅರಿ
ಅದುವೇ ಜೀವನದಲ್ಲಿ ಜೀವಿಸುವ ಜೀವನದ ಶೈಲಿಯ ಪರಿ