Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕತ್ತಲು ರಾತ್ರಿ ಇತ್ತು
ಅದು ಕೂಡ ನನ್ನ ಜೊತೆ ಇತ್ತು
ಏನು ಅದರ ಕಣ್ಣೋಟ ಇತ್ತು
ನಾನು ಅದರ ಮೇಲೆ ಇದ್ದೆ
ಅದು ನನ್ನ ಕೆಳಗೆ ಇತ್ತು
ತಪ್ಪಾಗಿ ತಿಳ್ಕೊಬೇಡಿ ನನ್ನ ದೋಸ್ತುಗಳೆ
ಅದು ನನ್ನ ಮೋಟರ್ ಬೈಕ್ ಇತ್ತು
- hanumanaik lamani
04 Mar 2020, 08:45 am
ನಾಚಿ ಕರಗಿವುದು
ಮಂಜಿನ ಬಿಂದು
ಆ ನೇಸರನ
ಸ್ಪರ್ಶಕ್ಕೆ ಸೋತು
ನಾ ಕದ್ದು ಬಿಡಲೆಂಬ
ಬಯಕೆ
ಚಿವ್ ಗುಟ್ಟಿರುವ
ಹಕ್ಕಿಗಳೊಡನೆ ಸೇರಿ
ಅವ ಬರುವ ದಾರಿಗೆ
ಸ್ವಾಗತ ನೀಡೋ
ಬಯಕೆ
ಕಂಡ ಕ್ಷಣಕ್ಕೆ ಅರಿವಿಲ್ಲದೆ
ಅವನ ನಗೆಗೆ
ಪ್ರತಿ ನಗೆಯ ಚೆಲ್ಲೋ
ತಾವರೆಯೊಳಗೆ ಸೇರಿ
ನನ್ನೀ ನಗುವ ಅವನಿಗೆ
ರವಾನಿಸುವ
ಬಯಕೆ
- ಹಂಸ
- ಹಂಸವೇಣಿ
04 Mar 2020, 07:15 am
ಮನದಾಳದ ನಿಶಬ್ದ ಪಿಸು ನುಡಿಯು
ಸಾಲು ಮಾತುಗಳಲ್ಲಿ ಇಣುಕಿ ನೋಡಲು
ಅದ್ಯಾವ ಭಾಷೆಯ ರಾಗ ಕೊಡಲಿ ನಾ
ಎಂದು ಮನ ಕ್ಷಣಕ್ಕೆ ಮೌನದಿ ಕುಳಿತಿರಲು ಭಾವನೆಗಳೇ ಅಕ್ಷರಗಳಾಗಿ ನುಡಿದು
ಸಾಲುಗಳಾಗಿ ಸಾಗಿ ನಡೆಯುತ್ತಿದೆ , . . .
- ಹಂಸ
- ಹಂಸವೇಣಿ
03 Mar 2020, 09:54 pm
ಇಂದು ನಾನೇ ಶರಣಾಗಿರುವೇನೆ ನಿನೆದುರು
ಏ,, ಹೋಗೋ ಇನ್ನೂ ಕಾಡೋ ಆಸೆಯೇ
ನಿನ್ನ ಕಣ್ಣ ಬಲೆಯೊಳಗೆ ಬಚ್ಚಿಟಿಬಿಟ್ಟೆ
ಈ ಉಚ್ಛ್ವಾಸ ಸದಾ ನಿನ್ನ ಉಸಿರ ಬಯಸುತ್ತಿದೆ
- ಹಂಸವೇಣಿ
03 Mar 2020, 08:20 pm
ದಿಕ್ಕು ಗಾಣದೆ ಬಿಟ್ಟು ನಿಟ್ಟುಸಿರ
ಇಕ್ಕುತಿಹರ ತಾಯೆ ನಿತ್ಯ ಕಣ್ಣನೀರ||.....
ಚಿಕ್ಕಿಗಳನಿಟ್ಟು ಬಿಡಿಸಿ ನಿನ್ನ ಶ್ರೀಚಕ್ರ
ಮೊಕ್ಕತ ನಿತ್ಯಪೂಜೆಗೆ ನಿನ್ನ ಚಿತ್ರ||....
#ವಾತ್ಸಲ್ಯ ತಾಯೇ ಭಕ್ತವತ್ಸರ ಕಾಯೇ|.
ಮಂಕು ಮನಕೆ ಇತ್ತು ಚೇತನ
ಕೊಂಕು ಮನಕ ಬಿತ್ತಿ ವಿಜ್ಞಾನ||....
ಬಿಂಕದ ಮನಕೆ ಹಾಕಿ ಅಂಕುಶ
ಅಂಕೆಮೀರದಿಟ್ಟು ಧರ್ಮದಿಶ||....
#ಕರುಣೆಯ ಕಿರಣವೇ ಹರಹು ಬೆಳಗ|.
ಮಗ್ಗದ ಮನೆಗಳಲ್ಲಿ ಹಿಗ್ಗ ನಿರಿಸಿ
ಕುಗ್ಗಿಹೋಗದಂತ ಬದುಕ ಕಲಿಸಿ||.…..
ಸುಗ್ಗಿಯೆಂಬುದ ನಿತ್ಯವೂ ತರಿಸಿ
ಮೊಗ್ಗಿನ ನಗೆಯ ಮೊಗದಿ ಬಿರಿಸಿ||....
#ಪೊರೆವ ತಾಯೆ ಪ್ರೀತಿ ತೋರೆ||.
ಶುದ್ಧಿ ಯೆಂಬುದ ತನುವಿಗಿಟ್ಟು
ಬುದ್ಧಿಯೆಂಬುದ ಮನಸ್ಸಿಗಿಟ್ಟು||.....
ಅದ್ದಿದಂತಿರಿಸಿ ಸಂಸ್ಕರಬ್ಧಿಯೊಳ
ಮುದದಿ ನೀ ನೆಲಸೆ ಎದಿಒಳ||....
#ಒಲವವೇದವ ನಿರಿಸಿ ಸಲಹು ತಾಯೇ||.
- samna
03 Mar 2020, 08:13 pm
ಮೌನವಾಗು ಒಮ್ಮೆ ಮೌನವಾಗು,,,,
ಮೌನವಾಗು ಒಮ್ಮೆ ಮೌನವಾಗು,,,,
. - ಹಂಸ ✍️✍️✍️
- ಹಂಸವೇಣಿ
03 Mar 2020, 08:05 pm
ಒಡನಾಡಿಗಳ ಸಹಿಸುವ
ಗುಣವಂತನೀತ
ಹೊಗಳಿಕೆ ತೆಗಳಿಕೆಗೆ
ತಲೆಕೆಡಿಸಿಕೊಳ್ಳದಾತ
ಅಲುಗಾಡದ ಮೇರು ಪರ್ವತ
ಬಸಂತ
ಅಡಿಯಿಡುವೆಡೆಯೆಲ್ಲ ಜಯ
ಸದಾ ಚಿಂತನೆಯಲ್ಲೆ ತನ್ಮಯ
ಎದುರಾಳಿಗೆ ಇವಳೆಂದರೆ ಭಯ
ಹೊಗಳಿಕೆಯೆ ಇವಳಿಗೆ ಅಭಯ
ಶ್ರೇಯ
ಬಳ್ಳಿಯಂತ ಚಂದ
ಸುಮತ ಮಕರಂದ
ಮೌನವೇ ಇವಳಿಗೆ ಅಂದ
ಬೃಂದ
ಮಾತಿನಲಿ ಸಿರಿವಂತ
ಬದಲಾಗದ ಮೇರು ಸಂತ
ಏರಿಳಿತವಿಲ್ಲದ ಪಂಡಿತ
ಹೇಮಂತ
ಜಗ್ಗದ ಕುಗ್ಗದ ಸರದಾರ
ಎಲ್ಲಿಯು ನಿಲ್ಲದ ಸವಾರ
ಅಂಜಿಕೆಯಿಲ್ಲದ ದೀರ
ನಾಮದಲ್ಲೆ ನಂಜನು ಹೊತ್ತ ಈಶ
ನಂಜುಡೇಶ
ಮನೆಯಲ್ಲಿ ಇವನೇ ಅಗ್ರಜ
ತರಗತಿಯಲಿ ಇವನಿದ್ದರೆ ಮಜ
ಹರಟೆ ಗುಂಪಿನ ರಾಜ
ಪೃಥ್ವಿ ರಾಜ
ಇವಳ ನಡೆ- ನುಡಿಯಲಿಲ್ಲ ಹುಸಿ
ಸದಾ ಮಾಡುವಳು ಕಲಿಕೆಗೆ ಕಸಿ
ಸರ್ವರ ಸೆಳೆವಳು ಸ್ನೇಹದ ಬಲೆ ಬೀಸಿ
ಬಿಳಿಯರೊಡನೆ ಸೆಣಸಿದಳು ಆ ಝಾನ್ಸಿ
ಪರಿಕ್ಷೆಯೊಡನೆ ಹೋರಾಡುತಿಹಳು ಈ ಝಾನ್ಸಿ
ತರಗತಿಯಲಿ ಇವನೇ ಕುಬ್ಜ
ಪಠ್ಯೇತರಗಳಲ್ಲಿ ಅಗ್ರಜ
ಪಡೆವನು ಅನಿಯಮಿತ ರಜಾ
ಗಣನೆಗಿಲ್ಲ ನೀಡುವ ಸಜಾ
ಹೊಳೆಯುವುದು ವದನಾರವಿಂದ
ಅರವಿಂದ
ಅಡಿಯಿಡುವೆಡೆಯೆಲ್ಲ ಶೀತ
ಗೈರಾಜರಿಗೆ ಚಿರಪರಿಚಿತ
ಸಾಧನೆಗೆ ಅಪರಿಚಿತ
ಅಂಜೂರದಂತ ಲಿಖಿತ
ಋಷಿಯಂತೆ ನಿಶ್ಚಿಂತ
ರಿಷಿತ
ಎಲ್ಲೆಲ್ಲಿಯು ಪಡೆವಳು ಮಾನ್ಯ
ಎಂದೆಂದಿಗು ಇವಳು ಅನನ್ಯ
ಸದಾ ಕಾಯುವಳು ಗೌಪ್ಯತೆಯನ್ನ
ಚೈತನ್ಯ
ಏನೇನು ಅರಿಯದ ಕೂಸು
ಮೂಗಿನ ಮೇಲೆಯೆ ಮುನಿಸು
ಸದಾ ಮಾಡುವಳು ಕಸರತ್ತು
ಪಡೆಯಲು ಯಶಸ್ಸು
ಚೈತನ್ಯ
ನಡೆಯಲಿ ಸೌಮ್ಯವತಿ
ನುಡಿಯಲಿ ಪರಿಣಿತಿ
ನೋಟದಲಿ ಗಂಭೀರವತಿ
ಹೊಂದಿರುವಳು ಸಾಧನೆಗೆ ಪರಿಮಿತಿ
ಶ್ರಾವಂತಿ
ನಗುಮೊಗದ ಸುಂದರಿ
ಹಡೆದವರ ಮುದ್ದಿನ ಕುವರಿ
ಹೊರಟಿಹಳು ಸಾಧನೆಯ ಸವಾರಿ
ಇವಳು ತರಗತಿಯ ಉಷ
ಅನುಷ
ಇವಳು ಸದ್ಗುಣಗಳ ಕುಂಚ
ಮುನಿಸಿ ಎಲ್ಲೋ ಕೊಂಚ
ಕಿರುನಗೆಯಿಂದಲೆ
ಸೆಳೆವಳು ಸರ್ವರ ಮನ
ಕಾಂಚನ
ನಡೆನುಡಿಯಲಿ ಸದಾ ಅನೃತ
ಹಡೆದವರ ಮುದ್ದಿನ ಸುತ
ಹೊಂದಿರುವನು ಸುಂದರ ವದನ
ಚಂದನ
ಅಭಿನಂದನೆಗೆ ದೂರ
ನೋಟದಲಿ ಸುಂದರ
ಮನೆಯವರ ಮುದ್ದಿನ ಕಲಶ
ಅಭಿಲಾಷ
ಸರ್ವಕು ಇವಳೇ ಆಧಾರ
ನೋಡಲಿವಳು ಬಲು ಸಪೂರ
ಅಡಿಗಡಿಗೆ ಅರಸುವಳು ಕಾರ್ಯ
ಸಹಪಾಠಿಗಳೆ ಇವಳ ಧೈರ್ಯ
ಐಶ್ವರ್ಯ
ಪರ್ವತವೇರುವ ಆಸೆ
ಪ್ರಯತ್ನ ಚೇತನ ಮೂರು ತಾಸೆ
ಸಾಧನೆ ಕೇವಲ ಅರ್ಧಾಂಶ
ತರಗತಿಯಲಿ ಇವನೆ ಭಾಷ
ಲೋಕೇಶ್
ಚಂಚಲವಾದ ಮನಸ್ಸು
ಪೂರೈಸಲು ತಂದೆಯ ಕನಸು
ಶಿಕ್ಷಣವೇ ಇವನ ಅಸ್ತ್ರ
ಹಿಡಿಯಲೊಂದಿನ ಶಸ್ತ್ರಾಸ್ತ್ರ
ತಂದೆಯ ಮೆಚ್ಚಿನ ಸನ್
ನಿತಿನ್
ಬದಲಾಗದ ರೀತಿ ನೀತಿ
ನೆನೆವರೆದೆಯಲಿ ಸೃಷ್ಟಿ ಭೀತಿ
ಮರೆಯಲಾಗದ ಮೂರುತಿ
ಪ್ರೀತಿ
ನಡೆನುಡಿಯಲಿ ಸೌಮ್ಯ
ಅದೃಷ್ಟವೆ ಅಗಮ್ಯ
ಸಾಧನೆಯಲಿ ಅಗಣ್ಯ
ಹಡೆದವರ ಪುಣ್ಯ
ನವ್ಯ
ಇವನು ಆರಡಿಯ ಗನ್
ಹಿಡಿದಿಹನು ಮೂರಿಂಚಿನ ಪೆನ್
ಪರಿಗಣಿಸನು ಯಾವುದೆ ಕಾನೂನ್
ಸಾಧನೆಯಲಿ ಸದಾ ಮೂನ್
ನಿತಿನ್
ಸದಾ ಪಾಲಿಸುವನು ಮೌನ
ಗಳಿಸನು ಒಂದಿಷ್ಟು ಜ್ಞಾನ
ಇವನ ಗಣನೆಗಿಲ್ಲ ವಿಜ್ಞಾನ
ದಿನವು ಮಾಡುತ ಭೋಜನ
ಅಡಿಗಡಿಗೆ ತುಂಬಿದೆ ಅಚೇತನ
ಚೇತನ
ನಾಮದಲ್ಲಿದೆ ಸಿರಿ
ಸುಂದರ ಕೇಶಸಿರಿ
ಸುಂದರವಾದ ಸ್ತ್ರೀ
ಇವಳಿಗೆ ಕಂಬನಿ ಫ್ರೀ
ಚಂದುಶ್ರಿ
- ಶಕುಂತಲಾ
03 Mar 2020, 06:25 pm
ಮನೆ ಮನಗಳ ನಡುವಿನ ಕಂಪೌಂಡ ಗೋಡೆಗಳು ಎತ್ತರಕ್ಕೇರುತ್ತೀವೆ
ಹೊಲ ಗದ್ದೆಗಳ ಬದುವಿನ ಮೇಲೆ ಜಾಲಿಗಿಡಗಳು ಸಾಲು ಹೆಚ್ಚುತಿವೆ
ಜಾತಿ ಜಾತಿ ಗಳ ನಡುವೆ ಧರ್ಮ ಧರ್ಮಗಳ ನಡುವೆ ಅಪನಂಬಿಕೆಯ ಅಟ್ಟಹಾಸ
ನದಿ, ಹಳ್ಳ, ಕೊಳ್ಳಗಳು ದಿಕ್ಕು ಕಾಣದೇ ದಿಕ್ಕೇಟ್ಟು ದಿಕ್ಕಾಪಾಲಾಗಿ ಹರಿಯುತಿವೆ
ಗೋಪುರ,ಗುಂಬಜ, ಮೀನಾರ ಗಳು ನೆಲದ ಕಡೆ ಮುಖ ಮಾಡಿವೆ
ಮುಖ ಚಹರೆಗಳ ಮೇಲೆ ಮುಖ ಮರೆ ಮಾಚುವ ಮುಖವಾಡಗಳ ವಿಕೃತ ನಗೆಯ ತಕತೈ
ಸ್ನೇಹ,ಪ್ರೀತಿ,ಪ್ರೇಮ, ಬಾಂಧವ್ಯಗಳ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತೀವೆ
ಹೃದಯ ಹೃದಯಗಳ ನಡುವೆ ಬೆಸೆಯುವ ಸೇತುವೆಗೆ ಬಿರುಕು ಹೆಚ್ಚುತಿದೆ.
- Siddugouda
03 Mar 2020, 12:25 pm
ನನ್ನ ಎದೆಯಾಳದಲ್ಲಿ
ಅರಳಿದ ಹೂವು ನೀನು
ಪ್ರೀತಿಯ ಅಂಕುರಿಸಿದೆ ಸಾಗರದಷ್ಟು
ಮನದಂಗಳದಲ್ಲಿ ಮೋಹದ ಮಳೆ ಸುರಿಸಿ ಕಣ್ಣಂಚಿನಲ್ಲಿ ಕಿರುನಗೆಯ ಬೀರಿ
ಲೋಕದ ಪರಿಯಲ್ಲಿ ಚಿತ್ತಾರ ಮೂಡಿಸಿದೆ ನನ್ನ ಹೃದಯದ ಅಂತರಾಳದಲ್ಲಿ
ನನ್ನ ಜೀವನವನ್ನು ಮಿನುಗುವ ಹಾಗೆ
ಮನೆ-ಮನಗಳಲ್ಲಿ ದೀಪ ಹಚ್ಚುವ ತಾರೆಯು ನೀನು
ನನ್ನೆದೆಯ ಕನಸಿನ ಕುಸುಮವೇ
ನನ್ನೊಳಗಿನ ಭಾವನೆಗಳ
ಹಂಚಿಕೊಳ್ಳಲು ಆತುರ ಹೆಚ್ಚಾಗಿ
ಕಾತುರದಿಂದ ಕಾಯುತಿರುವೆ
ಸಪ್ತಪದಿ ತುಳಿಯುವ ಆ ಘಳಿಗೆ.. !!!
ಎ ಜಿ ಶರಣ್
- ಎ ಜಿ ಶರಣ್
03 Mar 2020, 07:51 am
ಯಾರು ಅರಿವರು ಈ ತಾತ್ಸಾರದ ನೋವನ್ನು
ನಾನೇನು ಅಪರಾಧ ಮಾಡಿದೆ ಈ ನಿರ್ಲಕ್ಷದ ಶಿಕ್ಷೆ
ಪಡೆಯಲು,
ಪಣ ತೋಟು ಊಳಿಗೆ ಮಾಡಿದರು ನಿನ್ನ
ಲಕ್ಷ ಮಾಡರು, ಕಷ್ಟಕೆ ನೇರವಾಗಿ ಹೆಗಲು ನೀಡಿದರು
ಕೊರತೆಗಳ ಕಾಣುವರು,
ಉಸಿರ ಹಂಚಿ ಜೀವ ನೀಡಿದ ಜೀವದಾತನೆ ನಿನ್ನ ಊಪೇಕ್ಷೇ ಮಾಡುವ ಬಾಳು ನರಕವೆ ಹೌದು,
ಆಸೆಯ ಮನದಿ ಸ್ನೇಹವ ಅಪೇಕ್ಷಿಸಿದೆ
ನನ್ನ ಅಸಡ್ಡೆ ಮಾಡಿದರು,
ವಸ್ತುಗಳ ಪ್ರೀತಿಸಿ ವ್ಯಕ್ತಿಗಳ ಉಪಯೋಗಿಸೊ ಕಟುಕರಾದರು ಇಂದಿನ ಜನರು,
ನಿಜ ಪ್ರೀತಿಯ ತೋರಿ ನಿಜ ಸ್ನೇಹವ ಕೋಟವನಿಗೆ
ಅನಾದರದ ಅನುರಾಗವೆ ಕೊಡುಗೆ.
ಕಿರಣ್ ಕ್ರೀಸ್
- Kris
03 Mar 2020, 07:50 am