Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನೆ ನನ್ನ ಮನದ ಮಾಹಾರಾಜನು

ಅವನ ಹೃದಯದಲಿ ಹೇಗೆ ಕಟ್ಟಲಿ ಪ್ರೀತಿಯ ಗೂಡೊಂದನು
ಪ್ರತಿ ಕ್ಷಣಗಳು ಕಳೆಯುತಿವೆ ನಿನ್ನದೆ ನೆನಪಿನಂಗಳದಲಿ

ಹುಸಿಯಾಗದಿರಲಿ ನನ್ನ ಕನಸು ಆ ಕನಸೆ ಎಂಥ ಸೊಗಸು
ನಿನ್ನ ಹೆಜ್ಜೆಯಲಿ ಹೆಜ್ಜೆ ಹಾಕುವ ಬಯಕೆ ಮೂಡಿದೆ

ಶೃಂಗಾರದ ಹೊಸ ಕಾವ್ಯವು ನಿನ್ನ ಕಂಡಲೆ ಎದೆಯ ತುಂಬಿದೆ
ತಿರುಗಿ ತಿರುಗಿ ನಿನ್ನ ನೋಡುವಾಸೆ ನೋಡಿ ನಿನ್ನ ಮುದ್ದಾಡುವಾಸೆ

ಇಲ್ಲಿವರೆಗೂ ಸೋಲದ ನಾನು ನಿನಗೆ ಹೇಗೆ ಸೋಲೊಪ್ಪಿದೆ
ತಿಳಿಯದಾಗಿದೆ ನನ್ನ ಸೋಲಿನ ಮೂಲ ತಿಳಿದರು ಮತ್ತೆ ಸೋಲುವೆ ನಾ

ಅತ್ತ ಇತ್ತ ಎತ್ತ ಹೋದರು ಎದುರಾಗುತಿದೆ ನಿನ್ನ ಪ್ರತಿಬಿಂಬವು
ಕೇಳುವೆ ಆ ದೇವನಲ್ಲಿ ನಿನ್ನನೆ ನನ್ನ ಮನದ ಮಹಾರಾಜನಾಗಿ...

28/2/2020

- Irayya Mathad

29 Feb 2020, 12:23 am

ಹೃದಯವೆಂಬ ಖಾಲಿ ಹಾಳೆಯಲ್ಲಿ

ಹೃದಯವೆಂಬ ಖಾಲಿ ಹಾಳೆಯಲ್ಲಿ
ನೀ ಬರೆದೆ ಒಲವಿನ ಸಾಲುಗಳ!!
ಮನವೆಂಬ ಬಂಜರು ಬಯಲಿನಲ್ಲಿ
ನೀ ಬಿತ್ತಿದೆ ಸುಂದರ ಕನಸುಗಳ!!

ನಿಶ್ಯಬ್ಧವಾದ ಅಂತರಾಳದಲ್ಲಿ
ನೀ ನುಡಿಸಿದೆ ಸುಂದರ ವಾಧ್ಯಗಳ!!
ತುಟಿಯಂಚಿನ ಕಿರುನಗೆಯಲ್ಲಿ
ನೀ ಮರೆಸಿದೆ ಎಲ್ಲಾ ನೋವುಗಳ!!

ಬರವಸೆ ಕಾಣದ ಬಂಡೆದೆಯಲ್ಲಿ
ನೀ ತುಂಬಿದೆ ಹೊಸ ಭಾವಗಳ!!
ಕಾರ್ಮೋಡ ಸರಿಸಿ ಈ ಬದುಕಿನಲ್ಲಿ
ನೀ ಬಂದು ಸುರಿದೆ ಬೆಳದಿಂಗಳ!!

- ಪಿ.ಜಿ.ಜ್ಯೋತಿ

28 Feb 2020, 03:32 pm

ಅಮೂಲ್ಯವಾದದ್ದು...

ಸಾಗರದ ಆಳದಲ್ಲಿ
ದೊರೆಯಿತು...
ಬೆಲೆಬಾಳುವ
ಮುತ್ತು.....‌
ಅದಕ್ಕಿಂತಲೂ
ಅಮೂಲ್ಯವಾದದ್ದು...
ಅಮ್ಮನು ನೀಡಿದ
ಕೈ ತುತ್ತು.....

- ಪಿ.ಜಿ.ಜ್ಯೋತಿ

28 Feb 2020, 02:46 pm

ಸೊಬಗು

ಹೃದಯದಲ್ಲಿ ನೀನಿದ್ದರೆ ಮರೆತು ಬಿಡುತ್ತಿದೆ ಆದರೆ ಹೃದಯವೇ ನೀನಾಗಿದ್ದರೆ ಹೇಗೆ ಮರೆಯಲಿ ಹೂಗಳನ್ನೆ ನಾಚಿಸುವ ಒಯ್ಯಾರದ ತುಣುಕು ನೀನು ನಕ್ಷತ್ರಗಳನ್ನೇ ಮೀರಿಸುವ ಹೊಳೆವ ಮಿಣುಕು ನೀನು ಈಗ ಹೇಳು ನಾ ಹೇಗೆ ಮರೆಯಲಿ ನಿನ್ನ ನಾನು creat by sagi

- Sagi Sagar

28 Feb 2020, 10:50 am

ಏಕಾಂಗಿ

ಏಕಾಂಗಿ ಚಂದ್ರನ ಅಳುವಿಗೆ
ತಂಗಾಳಿ ಜೊತೆಯಾಗಿ
ಕೊರಗುವ ಮನಸಿನ ಕುಲುಮೆಗೆ
ನೆನಪುಗಳೇ ಬೆಂಕಿಯಾಗಿದೆ,
ಕಾಲದ ಕೊಡುಗೆ ಕೈಗುಡದೆ,
ಕಾಮನಬಿಲ್ಲಿನ ಕಾಂತಿಯು ಮಾಸಿದೆ.

ಯಾರು ಇಲ್ಲದ ಒಂಟಿ ಹೃದಯ ಸ್ನೇಹಕಾಗಿ ಕಾದಿದೆ ಮನವ ತೆರೆದು ಹೇಳೋ ತವಕವಿದರು
ಪದಗಳು ಮೌನವ ಕಾರಿದೆ
ಮೌನದ ಸಮರವಿದರು ಮಾತು ಹೊರಗೆ ಜಾರಿದೆ
ಕಣ್ಣ ತುಸು ಬೆವರ ಹನಿಯು ರೇಪೆಯಿಂದ ಹಾರಿದೆ.

ನೆನ್ನೇಗಳು ಬರಿದಾಗಿ,
ನೆನಪುಗಳು ಮರೆಯಗಿ,
ನನ್ನಗೆ ನನ್ನೇಂಬ ಪ್ರೀತಿಯು ನನ್ನಲಿ ಮೂಡಿದೆ
ಇಂದು ಹೊಸ ಬಾಳ ಚೈತನ್ಯವು ತುಂಬಿದೆ.

- Kris

28 Feb 2020, 09:36 am

ಗೆಳತಿ

ನಿನ್ನ ಮೇಲಿನಾಸೆ ಎಂದು ಕೊನೆಯಾಗದೆ 
ಕೊಂಚ ದೂರ ಆದ್ರೂ ಮನಸು ಅಳುತಲಿದೆ 
ಅಪ್ಪಿಕೊಳ್ಳೊ ಬೇಕು ಅನ್ನೊ ಕಲ್ಪನೆಗೆ 
ಕೈಯ ಚಾಚಿ ನಿಲ್ಲು ಈ ಜನುಮ ಸಾಕೆನೆಗೆ...

- beast riderrr

28 Feb 2020, 07:35 am

ಅಗಲಿಕೆಯ ಶಿಕ್ಷೆ...!!

ಜನ್ಮ ಕೊಟ್ಟೆ
ಜೀವ ಕೊಟ್ಟೆ
ಜೀವನ ಏನೆಂದು
ಕಲಿಸಿ ಕೊಟ್ಟೆ
ಸ್ನೇಹ ಪ್ರೀತಿ
ಎಲ್ಲವೂ
ನೀ ಕೊಟ್ಟ ಬಿಕ್ಷೆ...!
ನನ್ನಗಲಿ ಕೊಟ್ಟೆ
ನೀ ಯಾಕೆ ಈ ಶಿಕ್ಷೆ...!!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

27 Feb 2020, 11:08 pm

ನೋವಿನ ರಾತ್ರಿ

ಚುಕ್ಕಿ ಚಂದ್ರಮ
ನಕ್ಕ ರಾತ್ರಿ
ಮನವು ಬಿಕ್ಕಿ
ಅತ್ತ ರಾತ್ರಿ
ನೀನಾದೆ ಮುಗಿಲು
ಮನದಲ್ಲಿ ದಿಗಿಲು
ನೋವೊಂದೆ ಮಿಗಿಲು..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

27 Feb 2020, 11:03 pm

ಮನದ ಕನ್ನಡಿ

ಹಾಯಾದ ಸಂಜೆಯಲಿ
ಹಿಡಿದಿಹೆನು ಲೇಖನಿ,
ಬರೆಯಬೇಕೆಂದಿರುವೆ
ಸುಂದರ ಶಾಯರಿ.
ಅರಿಯದೆ ಗೀಚುತಿರುವೆ
ಸಾಲು ಸಾಲು ಸಾಲುಗಳನ್ನು,
ಮನದೊಳಗೆ ಹುದುಗಿರುವ
ನೋವು ನಲಿವುಗಳೆಲ್ಲ
ಬಿಳಿ ಹಾಳೆಯ ಮೇಲೆ
ಬಣ್ಣ ತಳೆದುಕೊಂಡಿಹುದು,
ನನ್ನೆದೆಯ ಕನ್ನಡಿಯ
ನಾನೆ ಕಂಡು ಅಚ್ಚರಿಗೊಂಡು
ನನ್ನ ಮೊಗದ ಮೇಲೆ
ನನಗೆ ಅರಿವಾಗದಂತೆ
ಮಾಸದ ನಗು ಮೂಡಿದೆ.!

- ಅಕ್ಷತ

27 Feb 2020, 07:40 pm

ನಿರುದ್ಯೋಗಿಯ ಪಾಡು

ಬೆಳಗಿನ ಸೊರಗಿನಲ್ಲಿ ಎದ್ದು
ನೆನ್ನೆಯ ಚಿಂತೆಯ ಹೋತು
ಏಳಲು ಮನಸಿಲ್ಲದೆ ಹಾಸಿಗೆ ಸರಿಸಿ
ಆರಂಭ ನನ್ನ ದಿನದ ಓಟ.

ಹಾಲು ತರಲು ಒಂದು ಬಾರಿ
ತಿಂಡಿ ತರಲು ಒಂದು ಬಾರಿ
ದಿನಸಿ ತರಲು ಒಂದು ಬಾರಿ
ಹೀಗೆ ಅಂಗಡಿಗು ಮನೆಗೂ ಹಾರಿ ಹಾರಿ
ದಿನದ ಆಟ ಶುರು ರೀ.

ಆಟ ಮುಗಿಯಲ್ಲು ಆನೊಂದು ಗಂಟೆ
ಆನೊಂದರಲ್ಲಿ ಹಲ್ಲು ಉಜ್ಜಿ ಮುಖ ತೊಳೆದು
ಅಂಕಲ್ ಅಂಗಡಿಯ ತಿಂಡಿ ತಿಂದು
ಶುರು ಈ ಸೋಮಾರಿಯ ತುತ್ತೂರಿ.

ಹಗಲೆಲ್ಲ ಟಿವಿಗು ಹಾಸಿಗೆಗೂ ನಾ ಸ್ವಂತ
ಹೇಗೋ ಸಮಯವ ಸರಿಸಿ ಬಂತು ಸಂಜೆಯ ಹಂತ ಮತ್ತೆ ಶುರು ಅಂಗಡಿಗೆ ಹೋಗುವ
ಅಟದ ಕಾಟ.

ಕಿರಣ್ ಕ್ರೀಸ್

- Kris

27 Feb 2020, 08:22 am