ಓ ಭಾರತಾಂಬೇ ನಿನಗೆ ಗೊತ್ತಾ ,
ಒಂಬತ್ತು ತಿಂಗಳ ತನ್ನ ಹೊಟ್ಟೆ ಯೊಳಗೆ ಇಟ್ಟು ಕೊಂಡು ಹೋರ ಹಾಕಿದಳು ಹೆತ್ತ , ಅವಳ ಋಣ ತೀರಿಸಬಹುದತ್ತ ಆದರೆ ತಾಯೆ ನೀ ಸಾಯುವವರೆಗೂ ಸಾಕಿದೆ ನನ್ನ ಹೊತ್ತ , ನಿನ್ನ ಋಣ ತೀರಿಸಲೂ ಸಾಧ್ಯ ವಾಗುವುದಿಲ್ಲತ್ತ , ನಿನ್ನ ಋಣ ತೀರಿಸಲೂ ವೀರ ಯೋಧರು ಹೋದರು ಯುದ್ಧದಲ್ಲಿ ಸತ್ತ ಅವರಾಂಗ ಆಗಬೇಕು ನಾ ಇವತ್ತ , ನಿನ್ನ ಈ ಪುಣ್ಯ ಭೂಮಿಯಲ್ಲಿ ಹುಟ್ಟಬೇಕು ನಾ ಮತ್ತಾ ಮತ್ತಾ
ಭಟ್ಟಾಕಳಂಕ ತರ್ಕದಿ ಅಜ್ಞಾನವನು ಸೋಲಿಸಿದರು.
ಚೆನ್ನಭೈರಾದೇವಿ ವೀರ ಬಲದಿಂದ ಶತ್ರುವನು ಮುರಿದರು
ಇವರ ಸಾಧನೆ ಶಾಶ್ವತ ದೀಪದಂತೆ ಹೊಳೆಯಿತು,
ಇವರ ನೆನಪು ಶಾಶ್ವತವಾಗಿ ತನುಮನದಲ್ಲಿ ಉಳಿಯಿತು.
----------- ಆಶಾ ಡಿಸೋಜಾ ✍️✍️✍️
ದುಂಡು ಮಲ್ಲಿಗೆಯೇ
ನೀ ಅರಳೊ ಮುದ್ದಾದ ಚೆಲುವಿಗೆ ,
ಈ ಲೋಕದಾ ಚಂದುಳಿ ಚೆಲುವಿಯರೆಲ್ಲಾ ಒಟ್ಟಾಗಿ ,
ನಿನ್ನಾ ನೋಡುತಲೆ ಆಹಾ ಆಹಾ... ಎಂದು ಉದ್ಗಾರಿಸುತ್ತಾ ,
ನೀ ಚೆಲ್ಲುವಾ ಪರಿಮಳವ ಘಂ ಎನ್ನುವ ಪರಿಮಳವನ್ನೆ ಅಸ್ವಾಸುತ್ತಿರುವರು ...
ಮೈಸೂರು ಮಲ್ಲಿಗೆಯೇ ,
ಬೆಳ್ಳಗಿನ ನಿನ್ನ ಮೈ ಬಣ್ಣದ ಅಂದಕೆ
ಬೆಳ್ ಮುಗಿಲಲ್ಲಿ ನಕ್ಷತ್ರಗಳ ಮಿನುಗಿಸಿ,
ಬಾನ ತುಂಬೆಲ್ಲಾ ಬೆಳದಿಂಗಳ ಚೆಲುತ್ತಾ ಮೋಡಗಳ ಮೆರೆಯಲ್ಲಿ ನಿಂತು , ನಿನ್ನಂದವ ಮನಸಾರೆ ಕಣ್ತುಂಬಿಕೊಳ್ಳುತಿಹನು
ಸೂಜಿ ಮಲ್ಲಿಗೆಯೇ ನಿನ್ನಿಂದಾನೆ
ಆ ಸಾಗರಿಯು ಕೂಡಾ ಅಲೆಗಳಲ್ಲಿ ಅಪ್ಪಳಿಸುತ್ತಾ
ಬೆಳದಿಂಗಳನು ಎಳೆ ಎಳೆಯಾಗಿ ಸ್ವೀಕರಿಸುತ್ತಾ
ತುಂಬಾ ಆಸೆಯಿಂದ ಪ್ರೀತಿಸುತ್ತಾ ಸಂಬ್ರಮಿಸುತಿಹಳು ....