Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದ ಹುಡುಗನಿಗೆ ❤️❤️❤️

ನಿನ್ನೊಂದಿಗೆ ನಾನು
ಇರುವಾಸೆ ಎಂದೆಂದು
ನಿನ್ನೀ ಮುದ್ದು ಪ್ರೀತಿಯ
ಸವಿಯುವಾಸೆ ಮೂಡುತಿಹುದು


ರೆಪ್ಪೆ ಮುಚ್ಚಲು ಕಣ್ಣೊಳಗೆ
ಕಾಡುವ ಕನಸು ನಿನೊಲವು
ಮಾಸದ ಪಿಸು ಮಾತುಗಳಿಗೆ
ಸ್ವರದ ಲಾಂಛನವು ನೀನಾಗಬೇಕು


ಕಿರುಬೆರಳು ಚಾಚಿದರೂ ಕ್ಷಣವೇ
ತಾಕಬೇಕು ನಿನ್ನೀ ಹಸ್ತವು
ಪೂರ್ಣ ವಿರಾಮವೇ ನೀಡಲಾಗದ ನನ್ನೀ
ಕಾಟಕ್ಕೆ ನೀನೊಬ್ಬನೇ ಹಕ್ಕುದಾರನಾಗಬೇಕು


- ಹಂಸ ಕುಲಾಲ್✍️✍️✍️

- ಹಂಸವೇಣಿ

15 Mar 2020, 05:00 pm

ಸೈನಿಕನ ಹೆಂಡ್ರು

ಈ ದಿವಸಕಂತ ಕಾದು ಸಾಕಾಯ್ತು ಯಜಮಾನ
ಬರುವೆ ಎಂದ ನಿನ್ನ ಪತ್ರ ತಲುಪಿ ಸ್ಯಾನೆ ದಿನ ಆಗದ
ಇನ್ನೂ ಬರಲಿಲ್ಲಾವ ನೀ ಯಾತಕ ನನ್ನ ಒಡೆಯ?
ಆ ಯುದ್ಧದ ಸಬ್ಧ (ಶಬ್ಧ) ಇನೆಷ್ಟು ನೀ ಕೇಳಬೇಕೊ ಯಜಮಾನ



ಹೇ ಆಕಿ ಏನವ್ವ ನಿನ್ನ ಗಂಡ ಬರೋ ದಾರಿ ಕಾದಯ
ಅಯ್ಯೋ ಮಗಳೆ ನಾ ನುಡಿದ್ದಿದೆ ಅಂದೆ ನಿನ್ನ ತಲೆಗೆ ಹೋಗಿತೆ
ಸೈನಿಕ ಅವ ಎಂದಿದರು ಆ ಮಣ್ಣಗೆ ಹೋಗಕ್ಕೆ ಅಂತಾನೆ ಇರುವ
ನೀ ಬಾರಿ ಸಣ್ಣಕಿ ಹಣೆ ಪಟ್ಟಿ ನಿನ್ನೇ ಬರೆದು ಕಂಡಿ
ಅವನ ಆರಿಸಕ್ಕ ಹೋದಿ ಅವ್ನ ಬಿಟ್ಟು ಬೇರೆ ಹುಡುಗನ ಕಟ್ಟಿಕೊಂಡು ನಡಿಯೋ ದಾರಿ ಎಷ್ಟ್ ಚಂದ ಇತ್ತೆ ಮಾರಾಯ್ತಿ,
ಈಗ ಗಂಡ ಒಂದು ಕೂಸೆಂದು ಮಹಾರಾಣಿ ಹಂಗ ಬಾಳ್ತ ಇದ್ದಿ
ನಿನ್ನ ಮಂಕು ಬುದ್ಧಿಗಿಷ್ಟು ಹೋಗು ಮನೆ ಕಡಿ ಯಾವ ಬಂದೂಕು ನುಂಗೀತೂ ನಿನ್ನವನ್ನ



ಹೇ ಅಜ್ಜವ್ವ ಅದೆಂತಾ ನುಡೀತಿ ಮುಚ್ಚು ನಿನ್ ಬಾಯ
ತು ತೂ ನನ್ ಯಜಮಾನ ಪತ್ರ ಬರೆದಾನ ಬರ್ತೀನಿ ಎಂದ
ಅದ್ಯಾಕೆ ಅಪಶಕುನ ಮಾತ ನುಡೀತಿ ಬಿಡ್ತು ಅನ್ನೆ ಅಜ್ಜವ್ವ
ನನ್ನವ ಬಾರಿ ಗಟ್ಟಿ ಅದಾನ ಮುಟ್ಟಿ ಉಳಿವರೆ ಯಜಮಾನನ
ದೇಶಕ್ಕೆ ಮಗನಾಗಕ ಹೋಗನ ನನ್ನ ಒಡೆಯ ಅದ ತಿಳಿ ನನ್ನ ಮರುಳೆ ಅಂದಿ ನೀ ಮರುಳೆ ಅಜ್ಜವ
ಬರುವ ನೀ ನನ್ ಜೊತೆ ಕೂತ್ ನೋಡು ನನ್ ಯಜಮಾನ ಓಡ್ ಬಂದಾನಾ ನಿನ್ ಕಣ್ಣ್ ಮುಂದಾಗೆ ನನ್ ಹೆಗಲ ಮೇಲೆ ಹೊತ್ತಿ ಹೋಗ್ತನಾ
ಎಂತದೆ ನೀ ಬೇರೆಯವ್ನ ಕಟ್ಟಿ ಬಾಳು ಚಂದ ಅಂತಿ
ಹೋಗ್ ಹೋಗೆ ಅಜ್ಜವ್ವ ನಾ ಈಗ ಮಹಾರಾಣಿನೇ
ಎಂತಕ ಅಂದಿ ಕೇಳೆ ಅಜ್ಜವ ನನ್ನವ ದೇಶಕ್ಕೆ ಮಹಾರಾಜ
ನಾ ಯಾರ್ ತಿಳಿದಿ ಸೈನಿಕನ ಹೆಂಡ್ರು ತಿಳಿತೆ ಅಜ್ಜವ್ವ
ಇನ್ನೂ ಜೋರ್ ಕೂಗಿನಿ ಕೇಳೆ ನಾ ಸೈನಿಕನ ಹೆಂಡ್ರು ಕಣೆ ಅಜ್ಜವ್ವ


- ಹಂಸ ಕುಲಾಲ್✍️✍️✍️


ಪ್ರತಿ ಸೈನಿಕನ ಹೆಂಡತಿ ಹೀಗೆ ಅವನ ದಾರಿ ಕಾಯುತ್ತಾಳೇನೋ, ಇವಳು ಕಾಯುವ ದಾರಿ ನಿರಾಸೆ ತರದಿರಲಿ ಅವಳ ನಂಬಿಕೆ ಎಂದು ಹುಸಿಯಾಗದಿರಲಿ ಬೇಡಿಕೊಳುವ.

ಜಾನಪದ ಶೈಲಿಯಲ್ಲಿ ಬರೆಯುವ ಹಂಬಲದ ದಾರಿಯಲ್ಲಿ.
ನಿಮ್ಮ ಅಭಿಪ್ರಾಯ ತಿಳಿಸಿ.

- ಹಂಸವೇಣಿ

15 Mar 2020, 03:58 pm

ಹಾಡಿಗೊಂದು ಕವಿತೆ,,,



ನನ್ನ ಪ್ರೇಮದ ಸಿಂಧುವೇ
ಈ ಕಣ್ಣ ಹನಿಗೆ ಬಂಧು ನೀ
ಯಾಕೀ ಮೌನ ಸಾಕುಮಾಡು
ಒಮ್ಮೆ ಆಲಿಸೋ ಮನದ ಮಾತಾ




ಚಪ್ಪರದ ಹಸಿರು ಹಾಸಿದರೇನೋ
ಬಣ್ಣದ ಚಿತ್ತಾರ ಚಿತ್ರಸಿದ್ದರೇನೋ
ಅಕ್ಷತೆ ಸಿಂಚನಾ ಶಿರದಲ್ಲಿ ಬಿದ್ದರೇನೋ
ಅವನೆಸರ ನನೊಡನೆ ಅಚ್ಚೆ ಒತ್ತಿಸಿದರೇನೋ



ನೋಡು ನಿನ್ನ ಬರುವಿಕೆಗಾಗಿ ಕಾಯುತ್ತಿರುವೆ
ನಿನ್ನವಳು ನಾ ಎಂದಿಗೂ ಇನಿಯಾ ಕಾಣದೆ ನಿನ್ನೀಡಬೇಕಾದ ಸಿಂಧೂರ ಕಾಯುತಿದೆ ಒಡೆಯನ
ನಿನ್ನ ಆಸರೆಯ ಬಯಸಿದೆ ಕೆನ್ನೆಯ ಹನಿ





ಹಸೇಮಣೆಯಲ್ಲೂ ಕಾಯುತ್ತಿರುವೆ
ಉಸಿಯಾಗಿಸದೆ ಬಾ ನನ್ನವನೆ
ತಿಳಿದಿಲ್ಲವೇ ನನ್ನ ನಿನ್ನ ಪರಿಣಯ
ಅಂದೇ ನಡೆದಿದೆ ಸಾಕ್ಷಿಗೆ ಈ ಮನವಿದೆ
ನಿನ್ನವಳ ಕರೆದೊಯ್ಯಲು ಧಾವಿಸು
ನನ್ನ ಪ್ರೇಮದ ಸಿಂಧುವೇ


ಕೊನೆವರೆಗೂ ಕಾಯುವಳು ನಿನ್ನೀ ಅರಸಿ,,, ಬರುವೆ ಅಲ್ಲವೇ?

                   *************


ಹಸೆಮಣೆ ಏರಿದ ಅವಳ ಮನ ಅವನಲ್ಲಿ ಇರಲು. ಹೇಗೆ ತಾನೇ ಮತ್ತೊಬ್ಬನಿಗೆ ತನ್ನ ಕೊರಳ ನೀಡುವಳು. ಒಂದು ನಂಬಿಕೆಯಲ್ಲಿ ಕೂತು ಕಾಯುತ್ತಿರುವಳು ಅವನ ಬರುವಿಕೆಗಾಗಿ. ಬರುವನೇ ಅವನು?


      

- ಹಂಸ ಕುಲಾಲ್✍️✍️✍️

- ಹಂಸವೇಣಿ

15 Mar 2020, 03:54 pm

ಬಾಳೆಂಬ ಕಡಲಿನಲಿ

ಬಾಳೆಂಬ ಕಡಿಲಿನಲಿ
ತೇಲುತ ಬರುತಲಿದೆ
ಸಂಸಾರವೆಂಬ ನೌಕೆ!!
ಪಯಣಿಗಳು ನೀನಾಗಿ
ಕುಳಿತಿರಲು ಹಾಯಾಗಿ
ನಾವಿಕನು ನಾನಾಗಿರುವೆ!!

ಸುಖ ದುಃಖ ಎನ್ನುವ
ಅಲೆಗಳ ಏರಿಳಿತ
ಪ್ರತಿ ನಿತ್ಯ ಬದುಕಿನಲ್ಲಿ!!
ಜೊತೆಯಾಗಿ ನೀನಿರಲು
ಬದುಕೆಲ್ಲ ಹಾಲ್ಗಡಲು
ಸಿರಿ ಸುಖ ಬಾಳಿನಲ್ಲಿ!!

ಹುಸಿಕೋಪ ನಡುನಡುವೆ
ಸಿಹಿ ಮುತ್ತ ನಾ ಕೊಡುವೆ
ಬೇಕಿನ್ನು ಯಾವ ಒಡವೆ!!
ಮನದೊಡತಿ ನನ್ನ ಗೆಳತಿ
ಈ ಬಾಳಿಗೆ ಆರತಿ
ಹುಣ್ಣಿಮೆ ನಿನ್ನ ನಗುವು!!

ದೂರದ ತೀರದಲಿ
ಹೊಳೆಯುವ ಬೆಳಕನ್ನು
ತಲುಪಲು ಹೊರಟಂತೆ!!
ಒಲಿಮೆಯ ಚಿಲುಮೆಯ
ಚಿಮ್ಮುತಲಿ ಸಾಗುತಿದೆ
ನಮ್ಮಯ ಸಂಸಾರ ನೌಕೆ!!

- ಪಿ.ಜಿ.ಜ್ಯೋತಿ

15 Mar 2020, 07:34 am

ಒಂಟಿ ಬಾಳು,,,,,

ಒಂಟಿಯಾಗಿ ಬಂದ ಜೀವ,,,,
ಒಂಟಿಯಾಗಿ ಹೋಗುವಾಗ,,,,
ಯಾರು ಬಿಟ್ಟು ಹೋದರೆನು,,,,, ಈ,,,, ಬದುಕು ಮಾತ್ರ ನಿಲ್ಲದು,,,,,
ದೀಪವೀ,,,,

- ದೀಪವಿ

14 Mar 2020, 01:11 pm

...ನನ್ನ ಮನಸ್ಸಿನ ರಾಣಿ....

ಪುಟ್ಟ ಮಗುವಂತೆ ಮನಸ್ಸು
ನನ್ನ ಮನಸ್ಸಿನ ರಾಣಿಗೆ
ತುಂಟ ನಗೆ ಬಿರುವಳು
ಹೃದಯದ ದೇವತಾ ಸುಂದರಿ...

ಅದೇನೂ ಕಾತರವು ನನ್ನ ಮನಸ್ಸಿಗೆ
ನಿನ್ನ ಮನಸ್ಸಿಗೆ ನನ್ನ ಮನಸ್ಸು ಸೇರಲು
ಅದೆಷ್ಟು ಬೇಗನೆ ಬಂದು
ನಿನ್ನ ಮನ ಸೇರಲು ನನಗೆ.....

ನಿನ್ನ ಆ ಕಣ್ಣಿನ ನೋಟವು
ಬಣ್ಣ ಬಣ್ಣದ ರಂಗವಲ್ಲಿ ನನ್ನೆದೆಯಲ್ಲಿ
ಆ ಕ್ಷಣದಲ್ಲಿ ನಾ ಸೋತುಬಿಟ್ಟೆ
ನಾ ಮೌನಿಯದೆ ನಿನ್ನ ನಗುವಲ್ಲಿ.....

ನನ್ನ ಕಣ್ಣಿಗೆ ಬೇರೆ ಏನು
ಕಾಣದಂತೆ ನಿನ್ನ ಮುಖ ಮೋಡಿ ಮಾಡಿದೇ
ಈ ಪುಟ್ಟ ಮನಸ್ಸಿಗೆ
ಹುಚ್ಚು ಹಿಡಿದಿಡೆಯಿಸಿದೆ.....

ಕಣ್ಣು ಮುಂಚಿದ್ದರು ನೀ ಕಾಣುವೆ
ಒಮ್ಮೆ ಕೃಪೆ ತೋರಬರದ ಚೆಲುವೆ
ಕನಸಲ್ಲಿ ಉಳಿಯದೆ ನನ್ನಸಾಗಿ ಬರಬಾರದೆ
ನಿನಗೆಂದೇ ಕಾದಿದೆ ಇಲ್ಲೊಂದು ಜೀವ.....
ಬೇಗ ಬಂದು ಸೇರು...

- Ajay

14 Mar 2020, 12:02 pm

ಮನ್ನಿಸು ಮೋಸಗಾತಿಯ

ಪ್ರೀತಿಯೆಂಬ ಮಾಯಾಲೋಕದಲ್ಲಿ
ಮುಳುಗಿಸಿ ಹೋದೆಯಲ್ಲೇ ನನ್ನಾ.
ಸದಾ ನಿನ್ನ ನಷೆಯಲ್ಲೇ ತೇಲುತಿಹೆನು ಇನ್ನಾ.
ಕಾಣದ ಲೋಕಕ್ಕೆ ಕೊಂಡೋಯ್ದೆ ನನ್ನಾ
ನನ್ನ ನಂಬಿಕೆಗಳಿಗೆ ಬೆಂಕಿ ಇಟ್ಟೆಯಲ್ಲೇ ಚಿನ್ನ.
ಈ ಪ್ರೀತಿ ಅನ್ನೋದು ಮಾತಿಗಷ್ಟೆ ಚೆನ್ನ.
ಅನುಭವಿಸಲೂ ನೀ ಬಿಡಲೇ ಇಲ್ಲವಲ್ಲಾ ನನ್ನಾ.
ಇಷ್ಟಾದರೂ ಆಕೆ ಚೆನ್ನಾಗಿರಲೆಂದು ನಾ ಬೇಡುವೆ ದೇವರನ್ನಾ

- varu

14 Mar 2020, 09:44 am

ಪ್ರೇಮ ಮತ್ತು ಕಾಮ,,,(ಎಡಕಲ್ಲು ಗುಡ್ಡದ ಮೇಲೆ)

ಪ್ರೇಮದ ಮೇಲೆ ಕಾಮ ನಡೆಸಿರುವ ಹೋರಾಟ ಇದು ,,,,,,,,,,,,
ಕಾಮ ಅನ್ನುವದು ಅಂತರಂಗದ ಅತ್ಯಂತ ಕ್ರೂರ ವೈರಿ ,,,,,,,,
ಪ್ರೇಮ ಒಂದಕ್ಕೆ ಇರೋದು ಅದನ್ನ ಗೆಲ್ಲೊ ಶಕ್ತಿ,,,,,,,,,,,,
ಇಷ್ಟು ದಿನ ಕಾಮದ ಬಲೆ ಯಲ್ಲಿ ಬಿದ್ದ ಅವಳು ಇಂದು ಪ್ರೇಮದಿಂದ ಮತ್ತೆ ನನ್ನ ಗೆದ್ದಿದ್ದಾಳೆ,,,,,,,,,,,,,,,,,
ಕಾಮದ ಪ್ರತೀಕ ವಾದ ನಿನ್ನ ಸ್ನೇಹ ಇನ್ನು ಅವಳಿಗೆ ಬೇಡ,,,,,,

- ದೀಪವಿ

14 Mar 2020, 01:29 am

ಬಾಳೆಂಬ ನೌಕೆಯಲ್ಲಿ ಒಂಟಿ ಪಯಣಿಗ ನಾನು,

ನನ್ನ ಪ್ರೇಮದ ನೋವಿಗೆ ನೀನಾದೆ ಪ್ರೇಮದ ಕವಿತೆ,,,,,,,,,,,,,,
ನಿನ್ನ ಮೋಸದ ಪ್ರೀತಿಯಲ್ಲಿ ನಾನು ಬಿದ್ದು ಅರಿಯದೆ ಸೋತೆ,,,,,,,,,,,,,,,
ಏ ನನ್ನ ಹೃದಯದ ಹೂವೆ,,,,,,,,
ನೀ ಅರಳುತಿರು,,,,,,,
ನನ್ನುಸಿರಿನ ಉಸಿರೇ ,,,,,,,,,,,
ನೀ ಎಂದೆಂದಿಗೂ ಬಾಡದಿರು,,,,,
ನನ್ನೂಲವಿನ ಗೆಳತಿಯೇ,,,,
ನಿನ್ಎಂದಿಗೂ ಖುಷಿಯಾಗಿರು,,,,
ಒಲಿದ ಒಡೆಯನ ಜೊತೆಗೆ ಸುಖವಾಗಿರು,,

- ದೀಪವಿ

14 Mar 2020, 12:29 am

ಚೆಲುವನ ಮುಗುಳು ನಗೆಗೆ

ಚೆಲುವನ ಮುಗುಳು ನಗೆಗೆ
ಮನಸೋತ ಮಲ್ಲಿಗೆಯು ನಾನು!!
ಹರೆಯದ ತೋಟದೊಳಗೆ
ಅರಳಿದ ಹೊಂಗನಸು ನೀನು!!

ನಿಶ್ಯಬ್ಧ ಲೋಕದಿಂದ ಧರೆಗಿಳಿದ
ಚೆಲುವ ಚೆನ್ನಿಗ ರಾಜಕುಮಾರ!!
ಸುಸ್ವಾಗತವು ಗೆಳೆಯ ನಿನಗೆ
ಈ ನನ್ನ ಹೃದಯದ ಅರಮನೆಗೆ!!

ಮೇಘ ಮಾಲೆಯನು ಹಿಡಿದು
ಕಾದಿದ್ದೆ ಇನಿಯ ನಿನಗಾಗಿ!!
ನೀ ಬಂದು ಎದುರು ನಿಂತ ಕ್ಷಣವೇ
ಮೈ ಮರೆತು ಹೋದೆನು ನಾನಾಗೇ!!

ಹೂ ಬಾಣದಂತ ನೋಟವನು
ನೀ ಎಸೆದೆ ನನ್ನಯ ಕಡೆಗೆ!!
ಹೃದಯವನು ನಾಟಿದ ನೋಟವು
ನನ್ನೊಳಗೆ ಮಿಡಿಯಿತು ಅನುರಾಗ!!

ಸಂಜೆಗೆಂಪಿನ ಕಾಂತಿಯ ರಂಗು
ಈ ನನ್ನ ಗುಳಿ ಕೆನ್ನೆಯ ತುಂಬ!!
ಶಿರ ಬಾಗಿ ನಿಂತಿರುವೆನು ನಾನು
ನೀ ಬಂದು ಸೇರಿಕೋ ನನ್ನನು!!

ನೀ ನನ್ನ ಸಂದಿಸಿದ ಕ್ಷಣವೇ
ನಾನಾದೆನು ನಿನ್ನಯ ಒಡವೆ!!
ನೀ ಜೊತೆಯಾಗಿ ಇರಲು ಹೀಗೆ
ಈ ಬಾಳು ಬಲು ಸುಂದರ ಸ್ವರ್ಗ!!

- ಪಿ.ಜಿ.ಜ್ಯೋತಿ

13 Mar 2020, 12:39 pm