ಪುಟ್ಟ ಮಗುವಂತೆ ಮನಸ್ಸು
ಆಕೆ ಅಂದ ಎಂತಾ ಸೊಗಸು
ನಿನ್ನ ಕುಡಿ ನೋಟ ಕದ್ದಿಹುದು ನನ್ನ ಮನಸ್ಸು
ನಡೆದರೆ ಬಳುಕುವಳು ಬಳ್ಳಿಯಂತೆ
ನಕ್ಕರೆ ಹೊಳೆಯುವಳು ಮುತ್ತಿನಂತೆ
ಸೀರೆ ತೊಟ್ಟಾಗ ಕಾಣುವಳು ಅಪ್ಸರೆಯಂತೆ
ಚೆಲುವೆ ನೀ ಉರಿಯುತ್ತಿರು
ಸೂರ್ಯನಂತೆ
ಯಾರೂ ನಿನ್ನ ಸೋಕದಂತೆ.
ನೀ ನನ್ನ ಹೃದಯದ ಅರಮನೆಯ ಮಹರಾಣಿ
ನಿನ್ನಂದಕ್ಕೆ ಸರಿಸಾಟಿ ಯಾರಿಲ್ಲ ನನ್ನ ಮುದ್ದು ಜಾಣೆ.
ಲವ್ ಯು ಕಂದ
ನಾನು ನನ್ನದೆನ್ನುವುದು ಏನು ಇಲ್ಲ.
ದೇಹ ಆತ್ಮವು ನನ್ನದಲ್ಲ.
ನಾನು ನನ್ನದು ಅನ್ನೋ ಅಹಂಕಾರ ಯಾಕೆ
ತೊರೆಯಲಿಲ್ಲ.
ತಂದೆ ತಾಯಿ ಕೊಟ್ಟ ಜನ್ಮ..
ಹೆಸರು ಯಾರೋ ಇಟ್ಟರನ್ನ.
ಕಲಿತ ವಿದ್ಯೆ ಅರಿತ ಕಸಬು
ಯಾವದು ನನ್ನದಲ್ಲ.
ನಾನು ನನ್ನದು ಅನ್ನೋ ಅಹಂಕಾರ ಯಾಕೆ
ತೊರೆಯಲಿಲ್ಲ.
ಸತ್ತಮೇಲೆ ದೇಹ ಆತ್ಮ ಎರಡು
ಬೇರೆ ಆಗುವುದಂತೆ.
ಎರಡು ದೀನ ದುಃಖವಂತೆ.
ಮತ್ತೆ ಅವರಿಗವರದೇ ಚಿಂತೆಯಂತೆ.
ನನ್ನವರು ಯಾರು ಇಲ್ಲಾ
ನನ್ನದೆಂದು ಏನು ಇಲ್ಲಾ
ಬರೆಯಲು ಮನಸಾಯಿತು
ಒಂದು ಕವನ
ಅದಕ್ಕೆ ಹೊದೆನ ಏಕಾಂತದ ವನ....
ಆಗಲೇ ಜೋರಾಗಿ ಬಿಸಿತು ಪವನ
ಪುಳಕ ಗೊಂಡಿತು ನನ್ನ ತನುಮನ
ಮರೆತೇ ಹೋಯಿತು
ನಾ... ಬರೆಯಲು ಬಂದ ಕವನ..
ಅದಕ್ಕೆ ಆಯಿತು ನನ್ನ ಮನ ಮೌನ....ದೇವ್
ಪ್ರಕೃತಿಯು ನಮ್ಮೆಲ್ಲರ ಜೀವತ್ಮವಾಗಿದೆ......
ಪ್ರಕೃತಿಯು ದೇವರು ನಮ್ಮೆಲ್ಲರಿಗೆ ಕೊಟ್ಟ ಅಮೂಲ್ಯ, ಉದಾತ್ತ, ಅದ್ಭುತ ವಾದ ಕೊಡುಗೆ.
ಹರಿಯುವ ನದಿಗಳು
ಸುಂದರವಾದ ಕಣಿವೆಗಳು
ಅದ್ಭುತ ವಾದ ಪರ್ವತ ಶ್ರೇಣಿಗಳು
ಸುಂದರವಾಗಿ ಹಾಡುವ ಪಕ್ಷಿಗಳು
ಶಾಂತವಾಗಿ ಹರಿಯುವ ಸಾಗರಗಳು
ನೀಲಿ ಆಕಾಶ
ಕಾಲಕ್ಕೆ ತಕ್ಕಂತೆ ಧರೆ ಯನ್ನು ತಂಪಾಗಿಸಲು ಬೀಳುವ ಮಳೆ .
ಪಾರ್ವತಗಳು --ನಮ್ಮನ್ನು ರಕ್ಷಿಸುವ ರಕ್ಷಾ ಕವಚ.
ಸಸ್ಯಗಳು-ಬದುಕಲು ಆಹಾರವನ್ನು ನೀಡುತ್ತವೆ.
ಜಲ-ನಮ್ಮ ಜೀವಾತ್ಮ ವಾಗಿದೆ
ಧರಿತ್ರಿ--ನಮ್ಮನ್ನು ಉಲ್ಲಿಸಿಕೊಳ್ಳುವ ಮಾತೆ ಅವಳು.