Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವೇದನೆ

ಬಾಲ್ಯದಲ್ಲಿ ವಿದ್ಯಾ ಸಿಗಲಿಲ್ಲ...
ಬದುಕಲ್ಲಿ ಐಶ್ವರ್ಯ ಬರಲಿಲ್ಲ..
ನೀ ಮತ್ತೇಕೆ ಇರುವೆ ಆಯಸ್ಸು..
ಜೊತೆ ಇರಲು ಒಪ್ಪುತ್ತಿಲ್ಲ ಮನಸ್ಸು...!!

- Harish Gowda

17 Mar 2020, 11:15 pm

ಸಿಹಿ ನೆನಪು

ಅಂದೊಮ್ಮೆ
ಬಚ್ಚಿಟ್ಟ ಸ್ನೇಹಿ ನೀ
ಇಂದೇಕೋ
ಕೈ ಚಾಚಿ ಹಾರಿಸಬೇಕೆಂಬ
ಬಯಕೆ

- ಹಂಸ ಕುಲಾಲ್ ✍️✍️✍️

- ಹಂಸವೇಣಿ

17 Mar 2020, 11:14 pm

ಶೀರ್ಷಿಕೆ ರಹಿತ

ನನ್ನೇ ನಾ ಮರೆವೇ ಕ್ಷಣಕ್ಕೆ ಒಲವೇ
ಜೊತೆಗಿರಲು ನೀ ನನೊಂದಿಗೆ
ಅದೆಷ್ಟು ಚಂದವೋ ನಿನ್ನ ಸಾನಿಧ್ಯ
ದೂರ ನಡೆದರೂ ಬಿಡದೇ ಕಾಡುವೆ
ಉಸಿರಾಗಿ ಈ ಸಂಗಾತಿ ಜೊತೆಗೆ ನಡೆವೆ,,,

ಪಾನಿಪೂರಿ ನಿನಗಾಗಿ

- ಹಂಸ ಕುಲಾಲ್ ✍️✍️✍️

- ಹಂಸವೇಣಿ

17 Mar 2020, 11:09 pm

ಅದೇನೋ ಖುಷಿ

ಒಂದೊಮ್ಮೆ ನಿನ್ನ ನೆನಪು
ಕಿರಿದಾಗಿ ಮುಗುಳು ನಗೆ
ಈ ತುಟಿಯ ಅಂಚಲಿ ಜಿನುಗಿ
ನೆನಪೇ ಇಲ್ಲ ವಾಸ್ತವದ ನೋಟವೇ
ಎಂಬ ಅನುಮಾನ ಮನದೊಳಗೆ
ಉತ್ತರಿಸುವ ನೆನಪು ನಿನಗಿಲ್ಲವೆ?

- ಹಂಸ ಕುಲಾಲ್✍️✍️✍️

- ಹಂಸವೇಣಿ

17 Mar 2020, 10:52 pm

ಅಭಿಪ್ರಾಯ

ಆಲೋಚನೆ-ಅಭಿಪ್ರಾಯಗಳು
ಅಮೂಲ್ಯ ರತ್ನಗಳು
ಸಂಗ್ರಹಣೆ- ಸಂರಕ್ಷಣೆ
ನಮ್ಮೆಲ್ಲರ ಹೊಣೆ

"ನಾನು" ಹೋದರೆ ಹೋದೇನು
ಎಂದರು ಅಂದು ಕನಕದಾಸರು
ಎಲ್ಲೆಲ್ಲಿಯೂ "ನಾನೇ" ಎಂದು
ಬೀಗುವರು ಇಂದು ಮಾನವರು

ಇತರರ ಆಲೋಚನೆಗೂ;
ಇರುವುದು ಬೆಲೆ
ಅರಿತರೆ ಉಳಿಯುವುದು
ಎಲ್ಲರ ಕಲೆ



ಶಾರದ

- ಶಕುಂತಲಾ

17 Mar 2020, 06:37 pm

ಅತ್ಯಾಚಾರ

ಜಗದಲ್ಲಿ ನಡೆದಿದೆ ಅತ್ತ್ಯಾಚಾರ.
ಕೇಳುವವರು ಯಾರು ಇಲ್ಲವೇ ಹೆಣ್ಣಿನ ವಿಚಾರ.
ಎಲೆಕ್ಷನ್ ಮಾಡ್ತಾರೆ ಕುರ್ಚಿಗೋಸ್ಕರ ಪ್ರಚಾರ.
ಇಂದೆಂಥ ಪ್ರಕಾರ.
ಅವಳಿಗೂ ಬದುಕಲು ಬಿಡಿ ಸ್ವಲ್ಪ ಮಾಡಿ ವಿಚಾರ.
ಇದೇನಾ ನಮ್ ದೇಶದ ಸಂಸ್ಕಾರ.


ningraj h ✍️✍️✍️

- NingrajHoratti

17 Mar 2020, 12:06 pm

ಭೂತ-ಭವಿಷ್ಯ-ವರ್ತಮಾನ

ಭೂತಕಾಲದೊಳ್ ಕಳೆದುಹೋದ ಕ್ಷಣಗಳ
ಮರಳಿ ನೆನೆದರೆನು ಫಲವಿದೆ.
ಮರುಖಳಿಸಿ ನೆನೆದೊಡನೆ ಮಾಸಿಹೋದ
ಕಾಲ ಮರಳಿ ಬಾರದೆಂದು ತಿಳಿಯದೆ!!

ಅಳಿಸಲಾಗದ ಸುಖ-ದುಃಖಗಳ ಸರಮಾಲೆ
ನೆನಪೆಂಬ ಸಾಗರವ ಸೇರಿದೆ.
ನೀ ಸಾಗಿಬಂದ ದಾರಿಯಲಿ ದಿನ-ದಿನವು
ಜೀವನ ಕಲಿಸಿದ ಪಾಠ ನೆನಪಿದೆ!!

ಭವಿಷ್ಯದಲಿ ಬರಬಹುದಾದ ದಿನಗಳ
ಎನಿಸಿ ಅದರೊಳೇಕೆ ಮುಳುಗುವೆ.
ನೀ ಎನಿಸಿದೊಡನೆ ಗುಣಿಸಿ ಒಡನೆ
ಕನಸಿನ ಕ್ಷಣಗಳು ಬಾರದೆಂದು ತಿಳಿಯದೆ!!

ವರ್ತಮಾನ ಕಾಲದೊಳ್ ನೀನೇಕೆ
ಭೂತ-ಭವಿಷ್ಯದೊಳ್ ಅಡಗಿಹೋಗುವೆ.
ಪ್ರಸ್ತುತದೊಳ್ ನಡೆಯುತಿರುವುದ ಅವಲೋಕಿಸಿ
ಮುನ್ನಡೆಯುವುದ ಆಲೋಚಿಸಿ ನಿರ್ಧರಿಸುವುದ ತಿಳಿಯದೆ!!
-ಅಮರೇಶಯ್ಯಾ ಎಸ್. ಸಾಹುಕಾರ್

- Amareshayya S Sahukar

16 Mar 2020, 04:55 pm

‌‌‌ಸಾಕು ಸಾಕೆನ್ನ ಮನವೇ

‌‌‌ಸಾಕು ಸಾಕೆನ್ನ ಮನವೇ
ನಿಲ್ಲಿಸು ನಿನ್ನಯ ಆಟಾಟೋಪವ
ಮಂಜದು ಕವಿದಿಹುದು ನಿನ್ನಯಯಾ ಗುರಿಗೆ
ಎಲ್ಲವನೂ ಬದಿಗೊತ್ತಿ ಸಾಗಲೇಬೇಕಿದೆ ನೀ ಅದರೆಡೆಗೆ!!

ಯಾರ್ ಬರದಿದ್ದರೇನು ನೀ ನಡೆವ ದಾರಿಯಲಿ ನಿನ್ ಜೊತೆಗೆ
ಸಾಧಿಸುವೆನೆಂಬುವ ಛಲವೂಂದಿರಲಿ ನಿನ್ನೋಂದಿಗೆ
ಮರೆಯದಿರಿ ಎಂದೆಂದಿಗೂ ನೀ ಜೊತೆಗಿರುವ ನಿನ್ನೊಂದಿಗೆ..
ಭರವಸೆಯಿಡು ನೀ ತಲುಪೇ ತಲುಪುವವೇ ನಿನ್ನಯಯಾ ಗುರಿಗೆ!!
-ಅಮರೇಶಯ್ಯಾ ಎಸ್. ಸಾಹುಕಾರ್

- Amareshayya S Sahukar

16 Mar 2020, 04:46 pm

ದಂತದ ಗೊಂಬೆ

ಪುಟ್ಟ ಮಗುವಂತೆ ಮನಸ್ಸು
ಆಕೆ ಅಂದ ಎಂತಾ ಸೊಗಸು
ನಿನ್ನ ಕುಡಿ ನೋಟ ಕದ್ದಿಹುದು ನನ್ನ ಮನಸ್ಸು
ನಡೆದರೆ ಬಳುಕುವಳು ಬಳ್ಳಿಯಂತೆ
ನಕ್ಕರೆ ಹೊಳೆಯುವಳು ಮುತ್ತಿನಂತೆ
ಸೀರೆ ತೊಟ್ಟಾಗ ಕಾಣುವಳು ಅಪ್ಸರೆಯಂತೆ
ಚೆಲುವೆ ನೀ ಉರಿಯುತ್ತಿರು
ಸೂರ್ಯನಂತೆ
ಯಾರೂ ನಿನ್ನ ಸೋಕದಂತೆ.
ನೀ ನನ್ನ ಹೃದಯದ ಅರಮನೆಯ ಮಹರಾಣಿ
ನಿನ್ನಂದಕ್ಕೆ ಸರಿಸಾಟಿ ಯಾರಿಲ್ಲ ನನ್ನ ಮುದ್ದು ಜಾಣೆ.
ಲವ್ ಯು ಕಂದ

✍️ಕನಸುಗಾರ

- varu

16 Mar 2020, 10:30 am

ನಾನು...

ನಾನು ನನ್ನದೆನ್ನುವುದು ಏನು ಇಲ್ಲ.
ದೇಹ ಆತ್ಮವು ನನ್ನದಲ್ಲ.
ನಾನು ನನ್ನದು ಅನ್ನೋ ಅಹಂಕಾರ ಯಾಕೆ
ತೊರೆಯಲಿಲ್ಲ.
ತಂದೆ ತಾಯಿ ಕೊಟ್ಟ ಜನ್ಮ..
ಹೆಸರು ಯಾರೋ ಇಟ್ಟರನ್ನ.
ಕಲಿತ ವಿದ್ಯೆ ಅರಿತ ಕಸಬು
ಯಾವದು ನನ್ನದಲ್ಲ.
ನಾನು ನನ್ನದು ಅನ್ನೋ ಅಹಂಕಾರ ಯಾಕೆ
ತೊರೆಯಲಿಲ್ಲ.
ಸತ್ತಮೇಲೆ ದೇಹ ಆತ್ಮ ಎರಡು
ಬೇರೆ ಆಗುವುದಂತೆ.
ಎರಡು ದೀನ ದುಃಖವಂತೆ.
ಮತ್ತೆ ಅವರಿಗವರದೇ ಚಿಂತೆಯಂತೆ.
ನನ್ನವರು ಯಾರು ಇಲ್ಲಾ
ನನ್ನದೆಂದು ಏನು ಇಲ್ಲಾ

- NingrajHoratti

16 Mar 2020, 10:21 am