Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮೊಬೈಲ್ ಎಂಬ ಜೊತೆಗಾರ
ಸಮಯದ ಕೊಲೆಗಾರ..!
ಹಿಡಿದರೆ ಸಮಯದ ಅಭಾವ..!
ಸಮಯವನ್ನೆ ಹಾಳು ಮಾಡುವ...!
ಒಳ್ಳೆತನದಿಂದ ನಡೆದರೆ ಒಳ್ಳೆಯವ..!
ಕೆಟ್ಟತನದಿಂದ ನಡೆದರೆ ಕೆಟ್ಟವ....!!
ಇವನಿಗೆ ಊಟ ನಿದ್ದೆಯು ಬೇಕಿಲ್ಲ.....!!
ನೆಟ್ಟು ಚಾರ್ಜ್ ಬಿಟ್ಟರೆ ಬೇರೇನು ಕೇಳಲ್ಲ..!!!
- Harish Gowda
21 Mar 2020, 12:25 pm
ನನ್ನವಳ ನೆನಪೊಂದು ನನ್ನ ಕಾಡುತಿತ್ತು...
ಮರೆಯಲು ಹೋದರೆ ಅದು ಮನಕೆ ಮತ್ತೆ ಸುಳಿಯುತಿತ್ತು...
ಕಾಡುತಿತ್ತು ಮನವ ಕಾಡುತಿತ್ತು...
ಅವಳಿಗಾಗಿ ಜೀವನವನ್ನು ಮುಡುಪಾಗಿಡಬೇಕೆನಿಸುತಿತ್ತು...
ಏಕೆಂದರೆ...? ಅವಳಾಗಿದ್ದಳು ನನ್ನ ಬಾಳಿನ ಸ್ವತ್ತು... ✍️ಮಲ್ಲ...
- Mallesh
21 Mar 2020, 12:00 pm
ಹುರಳಿ ಬೇಳೆ ತರಿಸಿ....
ಅಸೀಟು ಮಾಡಿಸಿ.....
ಉಪ್ಪು, ಖಾರ,ಜೀರಿಗೆ, ಎಲ್ಲ ಸೇರಿಸಿ......
ಕಲಿಸಿ ಮುದ್ದೆ ಮಾಡಿ ಚಚ್ಚಿ ಉಂಡೆ ಮಾಡಿಸಿ.......
ಒತ್ತಿ ಅರೆದು ಒಣಗಿಸಿ.........
ಎಣ್ಣೆಯಲ್ಲಿ ಕರೆಸಿ......
ತಿಂದರೆ ಆದೀತು..... ಹಪ್ಪಳ......!
-ಧನುಷ್. ಬಿ
9880028207
- DHANUSH.B
21 Mar 2020, 11:59 am
ಅಣ್ಣ ಎಂಬ ಎರಡು ಅಕ್ಷರಗಳು
ಅಮ್ಮ ಎಂಬ ಎರಡು ಅಕ್ಷರಗಳು
ಅವೆರೆಡು ಅಕ್ಷರಗಳು ಬೆರೆತು
ಖುಷಿ ಎಂಬ ಎರಡು ಅಕ್ಷರಗಳು
ನಮ್ಮ ಜೀವನದಲ್ಲಿ ತುಂಬಿರುತ್ತೆ ❤
- PAMPANA GOUDA
21 Mar 2020, 08:31 am
ಪುಟ್ಟ ನಗುವಿನ ಮನಸವಳು
ಅವಳ ಅಂದ ಎಂತಾ ಸೊಗಸು
ನಿನ್ನ ಕುಡಿ ನೋಟ ಕದ್ದಿಹುದು
ನನ್ನ ಪುಟ್ಟ ಮನಸ್ಸುನ........
ನಡೆದರೆ ಆ ಅಪ್ಸರೆಯಂತೆ
ನಚ್ಚುವಂತೆ ಬಳುಕುವ ಬಳ್ಳಿಯಂತೆ
ನುಡಿದರೆ ಆ ಮಾತಿನ ಮಲ್ಲನು
ಮೀರಿಸುವಂತೆ ನುಡಿಯಂತೆ....
ಅವಳು ನಕ್ಕರೆ ಹೊಳೆಯುವಳು
ಮುತ್ತಿನ ವಜ್ರನಂತೆ ಕಾಣುವಳು
ಸೀರೆ ಹುಟ್ಟಿದರೆ ನನ್ನವಳು ಕಾಣುವಳು
ಆ ದೇವತಾ ಸುಂದರಿಯಂತೆ....
ಚೆಲುವೆ ನೀ ಉರಿಯುವ
ಆ ಸೂರ್ಯಕಾಂತಿಯಂತೆ,
ಯಾರು ನಿನ್ನ ಸೋಕದಂತೆ
ನಾ ಕಾಯುವೆ ಕಾಯುವೆ....
ನೀ ನನ್ನ ಹೃದಯಕೆ
ರಾಣಿ ಮಹಾರಾಣಿ
ನಿನ್ನಂದಕ್ಕೆ ಸರಿಸಾಟಿ ಯಾರಿಲ್ಲ
ನನ್ನ ಮುದ್ದಿನ ಜಾಣೆ.....
- Ajay
20 Mar 2020, 10:16 pm
ಎದೆ ನೆಲದಲ್ಲಿ ಹುಟ್ಟಿ
ಕಿಣಿ ಗಜ್ಜೆನಾದದಿ ಕುಣಿದು ಹರಿಣಿಹರಿದು
ಕುಳಿ ಕೆಡವಿ ಕಸವೊಟ್ಟಿ
ಇಳಿದುಹೋಗಿ ಬಿಡುತ್ತದೆ ಜೀವವ ತರಿದು
ತುಟಿ ಅಂಚಿನಲ್ಲಿ ಮೂಡಿ
ಮನಮುಗಿಲಿಗೆ ಬಣ್ಣಬಿಲ್ಲ ಹೊದಿಸಿ
ಉಸಿರನೆ ಮರೆಸಿ ಹಾಡಿ
ತಬ್ಬಲಿ ಮಾಡಿ ಬಿಡುತ್ತದೆ ಮದಿಸಿ
ಕಾತರತೆ ಬಾಗಿಲಲ್ಲಿ ನಿಲ್ಲಿಸಿ
ಕನಸಿನ ಮೊಹಲನೆ ಕಟ್ಟಿಬಿಡುತ್ತದೆ
ಉಟ್ಟ ವಸ್ತ್ರಗಳನೆ ಬಿಚ್ಚಿಸಿ
ದಾರಿ ಇಲ್ಲದೆಲ್ಲಿಗೋ ಅಟ್ಟಿಬಿಡುತ್ತದೆ
ಮೋಹವ ಸದ್ದಡಗಿಸಿ ಇಟ್ಟು
ಹುಳಗೊಳಗೇ ಲೆಕ್ಕಹಾಕಿ ತನೆಳೆಲೆ ಮೆದ್ದು
ಬಾಳಿಗೆಂಬಂತೆ ಗೂಡನಿಟ್ಟು
ಚಿಟ್ಟೆಯಾಗಿ ಹಾರಿಬಿಡುತ್ತದೆ ರೆಕ್ಕೆಹೊದ್ದು
ಸಂತೋಷ್ ನಾಗರತ್ನಮ್ಮಾರ
- samna
20 Mar 2020, 08:17 pm
ಒಂದು ಪದ,
ಎರಡು ಅಕ್ಷರ,
ಸಣ್ಣ ಸಣ್ಣ ಹುಸಿ ಮುನಿಸು,
ಕೋನೆಯಿಲ್ಲದ ಪ್ರೀತಿ ಮತ್ತು ನಂಬಿಕೆ,
ಬೆಲೆಕಟ್ಟಲಾಗದ ಭಾವನೆಗಳು,
ಎನೇ ಆದರೂ ನಾನೀದಿನಿ ಅನ್ನೋ ವಿಶ್ವಾಸ,
ಕಷ್ಟಕ್ಕೆ ಹೆಗಲು, ಸಂತೋಷಕ್ಕೆ ಸಾತ್
ಕೋಡೋ ಒಂದು ಪವಿತ್ರ ಹೃದಯ
ಅದು ಅಣ್ಣ...
- Chaitra Kulkarni
20 Mar 2020, 07:10 pm
ಪಾರವೇ ಇಲ್ಲ ನಿನ್ನ ಪ್ರಿತಿಗೆ
ಶಬ್ಧವೆ ಇಲ್ಲ ನಿನ್ನ ಸೌಂದರ್ಯಕ್ಕೆ
ಮಾತೆ ಇಲ್ಲ ನಿನ್ನ ಅದ್ಭುತ ನುಡಿಗಳಿಗೆ
ಏನೆಂದು ವರ್ಣಿಸಲಿ ನಾನು...
ಅಮ್ಮಾ
- Chaitra Kulkarni
20 Mar 2020, 07:10 pm
ಕೊನೆಗೂ ಬಂದಿಹುದು ಚೆಲುವ ಯುಗಾದಿ,
ತೋರುತ ಮನಕೆ ಮೋದದ ಹಾದಿ,
ಕುಡುಕರಿಂದ ತುಂಬಿ ಕೊನೆಗೆ
ಜೂಜಾಟವ ಕಾಣುವುದು ಬೀದಿ,
ಸವಿಯುವುದು ನಮ್ಮ ಮನವು
ಬೇವು-ಬೆಲ್ಲದ ಸಿಹಿಯ ನದಿ.
ತೊಡಗಲಿ ಮನವು ಇಂದು
ಬೇವು-ಬೆಲ್ಲವ ಬೀರುವಲಿ,
ಎಲ್ಲರ ಜತೆ ಮನದಿಂದ
ಸಂತಸವ ಪಡೆಯುವಲಿ,
ಬೇವು-ಬೆಲ್ಲವ ಸವಿದು
ಮುಗುಳ್ನಗೆಯ ತರುವಲಿ.
ಬೇವೂ ಹೆಚ್ಚಾಗದಿರಲಿ,
ಬೆಲ್ಲವೂ ಹೆಚ್ಚಾಗದಿರಲಿ,
ಎರಡೂ ಸಮನಾಗಿರಲಿ,
ಬಾಳು ಗುಲಾಬಿಯಾಗಲಿ.
- Sunanda bai slv kavana channel
20 Mar 2020, 06:33 pm
ನಮ್ಮ ಮನೆಯ ಮುಂದೆ ಇದೆಯೊಂದು
ಕಟ್ಟೆ......
ತುಂಬುತ್ತದೆ ನೂರಾರು ಜನ-ಜಾನುವಾರುಗಳ
ಹೊಟ್ಟೆ.......
ನಮ್ಮ ಊರಿನ ರಾಜಕಾರಣಿಗಳ ಹತ್ತಿರ ಇದೆ
ಕೋಟಿಯ ಕಟ್ಟೆ......
ಆದರೂ ತುಂಬಲಿಲ್ಲ ರಾಜಕಾರಣಿಗಳ
ಹೊಟ್ಟೆ......
-ಧನುಷ್. ಬಿ
9880028207
- DHANUSH.B
20 Mar 2020, 05:33 pm