Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆಳೆಯನ ನೆನಪು.. ❤

ಒಂದು ದಿನ ಆ ಕರಾಳ ರಾತ್ರಿ...!!!

ಆ ರಾತ್ರಿಯ ಸಮಯದಲ್ಲಿ ಬರುವ ಚಂದಿರ
ನನ್ನ ಪಾಲಿಗೆ ಸತ್ತು ಹೋದಂತಿತ್ತು...

ಎಲ್ಲವೂ ಭಯದ ಶಬ್ದಕ್ಕೆ ಕಿವಿಗೊಡುವಂತಿತ್ತು..

ನನಗೆ ಜೀವವನ್ನು ನೀಡಿದ ಪುಣ್ಯಾತ್ಮನನ್ನು ಊರಿಗೂರೇ ನೆನೆಸುವಂತಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಸದ್ದು ನಿದ್ದೆ ಹೋಗಿ ಮೌನ ಎದ್ದು ನಿಂತಿತ್ತು..

ಅಂಧಕಾರವು ಬೆಳಕನ್ನು ಮೆಟ್ಟಿ ನಿಂತಿತ್ತು..

ನನ್ನ ಜೀವನದಲ್ಲಿ ವಿಧಿಯು ಗಹಗಹಿಸಿ
ನಗುತ ನಿಂತಿತ್ತು....

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು.. !!


ಗೆಳೆಯನ ನೆನಪುಗಳು ಮನ ಕುಲುಕುತಿತ್ತು..

ಮನಸಿಗೆ ಮಂಕು ಕವಿದು ಸುಮ್ಮನೆ ಮಲಗಿತ್ತು..

ಅಂದು ನನ್ನ ಪ್ರಾಣ ಪಕ್ಷಿ ಹಾರಿ ಹೋದಂತಾಗಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಆಡಿ ನಲಿದ ದಿನಗಳು ಕಣ್ಣೆದುರು ನಿಂತಿತ್ತು..

ಮನಸ್ಸು ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿತ್ತು..

ಅಂದು ಮುಂಜಾನೆ ಸೂಸುವ ಗಾಳಿಯು
ಬಿರುಗಾಳಿಯಂತಾಗಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು...!!


ತಾಯಿಯ ಮುಖದಲ್ಲಿ ದುಃಖವು ತುಂಬಿ ತುಳುಕುತ್ತಿತ್ತು...

ಆ ನೋವ ಯಾವ ಜೀವವು ತಡೆಹಿಡಿಯದಂತಿತ್ತು..

ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಸದ್ದು
ಬದಿಗೆ ಸರಿದು ಸುಮ್ಮನೆ ನಿಂತಂತಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಬರಸಿಡಿಲು ಎದೆಗೆ ಅಪ್ಪಳಿಸಿದಂತಿತ್ತು..

ಬಿರುಗಾಳಿಗೆ ಸಿಲುಕಿ ತತ್ತರಿಸಿದಂತಿತ್ತು..

ಜೀವದ ಹಂಗು ತೊರೆವ ಆಸೆ ನನಗೂ ಬಂದಂತಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಅಂದು ನನ್ನ ಜೀವನ ಜೀವವಿಲ್ಲದ ಬೊಂಬೆಯಾದಂತಾಗಿತ್ತು...

ಈ ಬೊಂಬೆಗೆ ಉಸಿರು ನೀಡಿದ ಗೆಳೆಯನಿಲ್ಲದಂತಾಗಿತ್ತು..

ಗೆಳೆಯನಿಲ್ಲದ ಜೀವನ ಇನ್ನೇಕೆ ಎಂದೇನಿಸಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಕೋಪ ತಾಪ ಸಿಟ್ಟು ಮುನಿಸು ಅಳು
ಎಲ್ಲವೂ ಬಂದಂತಿತ್ತು..

ಯಾರಿಗೇಳದ ಸಂಧರ್ಭ ನನಗೊದಗಿ ಬಂದಿತ್ತು..

ಊರಿಗೂರೆ ನನ್ನ ನೋಡುತ್ತ ನಿಂತಂತಿತ್ತು...

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಗೆಳೆಯನನ್ನೊಮ್ಮೆ "ಪಪ್ಪ " ಎಂದು ಕೂಗೆಂದು
ನನ್ನ ಮನ ಹೇಳಿದಂತಿತ್ತು...

ಕೂಗಿದರೂ ನನ್ನ ಕೂಗು ಗೆಳೆಯನಿಗೆ ಕೇಳಿಸದಂತಿತ್ತು..

ಕೂಗಲೂ ಗಂಟಲಲ್ಲಿ ದನಿಯೇ ಇಲ್ಲದಂತಾಗಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!

- ಇಂತಿ ನಿನ್ನ ಉಸಿರು..
( Dad's lil princess

- AratiRajkumar

23 Mar 2020, 08:34 pm

ನನ್ನವನು

ಆಕಾಶದಲ್ಲಿ ನೀ ದೀಪಾವಾದೇ..
ಇರುಳಾಗಿ ನಾನು ನಿನಗಾಗಿ ಕಾದೇ...
ಈ ಮೌನಕೀಗ ಮಾಧುರ್ಯವಾದೇ..
ಹೊರತಾಗಿ ನಿನ್ನ ನಾ ಖಾಲಿಯಾದೇ...
ಸಿಹಿ ಕಹಿ ಏನಾದರೂ ಪ್ರತಿ ಕ್ಷಣ
ಜೊತೆಯಾಗಿರು... ಜೊತೆ ಜೊತೆಯಾಗಿರು...

- AratiRajkumar

23 Mar 2020, 02:06 pm

ಬದುಕಿನ ಕನ್ನಡಿ

ಅಂಧಕಾರನವ
ನಿಂದಿಸುವ ನಿಂದಕ,
ಅವನಿಂದಲೇ ಬದು
ಕು ಇಂದು ಸಾರ್ಥಕ,
ಅಂಧಕಾರದ ನಡುವೆ
ಹೊಳೆಯುವುದೇ ಕಾಯಕ,
ನಿಂದಕನವ ನೆಲೆಸುವ
ಯುಗ್ಮ ಕೇವಲ ಕ್ಷಣಿಕ,
ಹೊಳೆಯುತಿರು ಬಾಳಲಿ
ಅವ ನೆಲೆಸುವ ತನಕ.

ನಿಂದಕನವ
ಬದುಕಿನ ರಮಣೀಯ ಕನ್ನಡಿ,
ಓಡುವುದು ಅವನ ಕಂಡು
ಮನದಾಗ ಅಡಗಿಹ ರಾಡಿ,
ಅವನ ನುಡಿಗಳೇ ನಿನ್ನ
ಬದುಕಿಗೆ ದೈವ ನುಡಿ.

- Sunanda bai slv kavana channel

22 Mar 2020, 09:21 pm

ಕಾಡಿದ ಅಲೆ

ಬೇಡಲಿಲ್ಲ ನಿನ್ನ ಬರುವಿಕೆಗಾಗಿ
ಆದರೂ ನೀ ಬಂದೆ ನನ್ನ ಮನ ಸೇರಲು
ಆದರೆ ಯಾಕೆ ಬಾಗಿಲಿಗೆ ಬಾಂದವಳು
ಸೇರಿದೆ ಬೇರೆ ಮನೆಯ ಎನ್ನ ಹೃದಯಕೆ
ನೋವನ್ನು ಕೊಟ್ಟು

ಕಿರಣ್ ವೇನು....

- Actors creations

22 Mar 2020, 04:15 pm

ಕಣ್ಣೀರಿನ ಜೋತೆಗೆ

ಕಾರಣವಿಲ್ಲದೆ ಸುರಿವ
ಕಣ್ಣೀರಿದು ಹೇಳುತ್ತಿದೆ ನೂರು
ಕಾರಣವಾ...✍️
ಕಲೆತು
ಕಳೆದ
ಕ್ಷಣಗಳ ನೆನೆದು
ಕಣ್ಣೀರಿದು
ಕೋಡಿಯಾಗಿದೆ...✍️
ಕಾಲನಾಟಕೆ ಮಣಿದು
ಕಳೆಯಬೇಕಿದೆ
ಕಾಲವನು
ಕಾಲನ
ಕರೆ ಬರುವವರೆಗೂ...
ಕಣ್ಣೀರಿನ ಜೊತೆಗೆ...✍️✍️

- Arjun Usha

21 Mar 2020, 09:56 pm

ಅಣ್ಣನ ಪ್ರೀತಿ

ನಿರೀಕ್ಷಿಸಲಾಗದ ದಿನ ನೀವು ನನಗೆ ಸಿಕ್ಕ ಆ ಕ್ಷಣ ನಿಮ್ಮೊಳಗೆ ಆಶ್ರಯ ವ ಬೇಡಿತ್ತು ಅಂದು ನನ್ನ ಮನ ನಿಮ್ಮ ನಿಸ್ವಾರ್ಥ ಪ್ರೀತಿಯ ತ್ಯಾಗದಿಂದ ಸಾರ್ಥಕವಾಯಿತು ನನ್ನ ಜೀವನ ಎರಡು ಮನಗಳ ನಡುವೆ ನಡೆಯುವ ಸಣ್ಣ ಕದನವು ತರುವುದು ಕ್ಷಣದಲ್ಲಿ ಮೌನ ಚಂದದ ಮುನಿಸ್ ಒಂದು ಮನದೊಳಗೆ ಚುಂಬಿಸುತ ಆಹ್ವಾನಿಸುವುದು ನಿಮ್ಮ ಪ್ರೀತಿಯ ಸಂಧಾನ ಎದೆಯೊಳಗೆ ಚಿಗುರೊಡೆಯಲಿ ಸಿಹಿ ಭಾವನೆಗಳ ಕಂಪನ ಬಾಂಧವ್ಯ ಬೆಸೆಯುವ ನಂಬಿಕೆಯು ಕರುಳಕುಡಿ ಯೊಳಗೆ ಬಿಡಿಸ ದಿರಲಿ ನಮ್ಮಿಬ್ಬರ ಪವಿತ್ರ ಸಂಬಂಧವನ್ನ ಕಷ್ಟದಲ್ಲಿ ಕೈ ಹಿಡಿದು ಸಂತಸದಿ ಜೊತೆಯಾಗಿ ಪ್ರತಿದಿನ ನನಗೆ ಶುಭವಾಗಲೆಂದು ಹಾರೈಸುವ ಮುಗ್ಧ ಮನ ನನ್ನ ತೆರೆದ ಹೃದಯದಿ ಎರಡು ಅಕ್ಷರಗಳ ಪದವು ನಕ್ಷತ್ರದಂತೆ ಹೊಳೆಯುತ್ತಿರುವುದು ಪ್ರತಿದಿನ ಸಿರಿಸಂಪತ್ತಿಗೆ ಹೆಸರಾಗಿ ವಿಶ್ವಾಸದ ಉಸಿರಾಗಿ ನನ್ನೊಳಗೆ ರಾರಾಜಿಸುತ್ತಿರುವ ವಿಶಾಲವಾದ ಹೃದಯವದು ಅಣ್ಣ ಈ ಅಣ್ಣನಿಗೆ ಪುಟ್ಟ ಕವನದಿಂದ ತಂಗಿಯ ಪ್ರೀತಿಯ ನಮನ

- nagamani Kanaka

21 Mar 2020, 09:04 pm

ಅಪ್ಪ...

ನನಗಾಗಿ ಎಲ್ಲ
ನೀನಗೆನು ಇಲ್ಲ
ಕಾಣುವ ತೀರ ನಾನು
ಕಾಣದಿಹ ಕಡಲು ನೀನು
ಸ್ವರಗಳೆ ಸಾಲುತಿಲ್ಲ ನಿನ್ನ ವರ್ಣನೆಗೆ
ಅಕ್ಷರಗಳ ಜೋಡಣೆ ಬಲು ಕಷ್ಟವಾಗುತಿದೆ
ಪುಟಗಳು ಕಣ್ಮಂದೆಯೆ ಮಾಯವಾಗುತಿವೆ
ಲೇಖನಿಗೂ ಕೂಡಾ ಹೆಮ್ಮೆ ನಿನ್ನ ಹೋಗಳಲು
ಪುಸ್ತಕಕ್ಕೂ ಗರ್ವ ನಿನಗಾಗಿ ಬರೆದ ಕವನಗಳನ್ನು ನಾ ಹೋತ್ತಿರುವೆ ಎಂದು
ನಿನ್ನ ಗಡುಸಾದ ಕೈಗಳು ನನ್ನ ತಲೆಯ ಸವರಿದಾಗ ಏನೋ ರೋಮಾಂಚನ
ಇವು ನನಗಾಗಿ ದುಡಿದ ಕೈಗಳೆಂದು
ನಿನ್ನ ಮುದ್ದು ಮುಖ ನನ್ನ ನೋಡಿ ನಕ್ಕಾಗ
ಏನೋ ಆಸೆ
ನನಗಾಗಿ ಏನೋ ತಂದಿರಬಹುದೆಂದು
ನೀ ದುಡಿದು ಸೋತು ಹೋದ ಕಾಲುಗಳ ಮೇಲೆ ನಾ ಮಲಗಿದಾಗ ಏನೋ ನೆಮ್ಮದಿ
ಇದು ನನಗಾಗಿ ಮೀಸಲಿರುವ ಜೋಳಿಗೆಯೆಂದು
ನನಗಾಗಿ ಮೀಸಲಿಟ್ಟ ನಿನ್ನ ಜೀವನಕ್ಕೆ
ನನ್ನುಸಿರ ಕೋನೆವರೆಗೂ ಹೆಸರ ತರುವೆ...

- Chaitra Kulkarni

21 Mar 2020, 08:06 pm

ಶಿಲ್ಪಬಾಲೆ

ಕಣ್ಣೆದುರಲ್ಲೆ ರೆಪ್ಪೆ ಮಿಟಕಿಸಿ
ಸಣ್ಣನಗೆ ನೀರ ಚೆಲ್ಲಿ ಮೊಗದ ಅಂಗಳಕಾ
ಕಣ್ಣತುಂಬ ಶಿಲ್ಪಬಾಲೆ ನೆಟ್ಟಿಸಿ
ಮನ ತಿಳಿಗೊಳಕೆ ಸ್ನಾನಕ್ಕಿಳಿದ ಹಂಸಿಕಾ

ನನ್ನೂರ ಬಿರಿದ ಸೇವಂತಿಗೆಯ
ಹೊನ್ನತೇರ ಕಂಪುಕಾರಿ ಕರೆದೆ ಗಿಣಿಕದಿರಾ
ಅಪ್ಪಿಗೆತೋಳ ವೀಣೆತಂತಿಗೆಯ
ಮಿಡಿತಲಿ ಕುಣಿದು ಕೊನರಿಟ್ಟ ಕಣರುದಿರಾ

ಉಬ್ಬು ತಗ್ಗಿನ ಹುಬ್ಬಿಮಳೆಯಲ್ಲಿ
ಮಬ್ಬಾವರಿಸಿ ಕಣ್ಣ ನಿಂತಿಹೆ ಅಡವಿಯೊಳಾ
ಕೊಚ್ಚದಿರು ಹರೆಯ ತೊರೆಯಲ್ಲಿ
ದಬ್ಬು ತೊಪ್ಪೆಯಾಗದಂತೆ ಮುಗಿಲೊಳಾ 

ಚಂದ್ರಗುದರಿ ಹತ್ತಿ ತಂಗಾಳಿಯೆ
ರೇಖುಹೆಣ್ಣ ಎದೆಬಾಂದಳಕ  ಇಳಿಸಿದ್ಯಾಕಾ?
ಬಿಂದಿಗೆ ಹೊತ್ತ ಕುಂದಣ ಮೀನೇ
ತುಳಕಿ ಹರೆಯ ನನ್ನ ಹಾಳಿಡತೀ ಯಾಕಾ?

- samna

21 Mar 2020, 06:07 pm

ಅವಳೆಂದಿಗೂ ನನ್ನ ಪಾಲಿಗೆ ನಿಲುಕದ ನಕ್ಷತ್ರ,,,,,

ನಿನಗೆ ಎಂದೋ ಹೇಳಿದ್ದೆ ನಾ,,,,,,ಪ್ರೀತಿಸುವ,,,,
ಮೊದಲು,,,,,ಒಮ್ಮೆ ಯೋಚಿಸೆಂದು,,,,,,

ಅಂದು ನನ್ನ ಮಾತು ಕೇಳಿದ್ದರೆ,,,,,
ಇಂದು ನಿನಗೆ,,,,,ಈ ನೋವು ಇರುತ್ತಿರಲಿಲ್ಲ,,,

ನಾ ಹೇಳಿದ್ದೇ ,,,ಅಲ್ಲವೇ!!! ನನ್ನ ಮನಸ್ಸೇ,,,,,,
ಅವಳೆಂದಿಗೂ ನಿನ್ನ ಪಾಲಿಗೆ,,,,,

ನಿಲುಕದ ನಕ್ಷತ್ರ ವೆಂದು,,,,,,,

ಒಂಟಿಯಾದೇ ನಿನ್ನ ನೆನಪಲ್ಲೇ,,,,,
ದೀಪವೀ,,,,

- ದೀಪವಿ

21 Mar 2020, 04:56 pm

ಹೃದಯ-ಕವನ ಸಂಕಲನ

ಹೃದಯವೆಂಬ ಕವನ ಸಂಕಲನಕ್ಕೆ
ಮೌನವೇ ಮುನ್ನುಡಿ
ಭಾವನೆಯೇ ಪರಿವಿಡಿ
ಜೀವನವೇ ಪುಟವಿಡಿ.....

-ಧನುಷ್. ಬಿ

- DHANUSH.B

21 Mar 2020, 12:58 pm