Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರಕೃತಿ ಮಾತೆ......

ಓ‌ ಪ್ರಕೃತಿ ಮಾತೆಯೆ...
ಕ್ಷಮಿಸಿ ಬಿಡು ನಮ್ಮ,
ಇದು ನಾವು ಮಾಡಿದಾ ಕರ್ಮ,
ಅರಿಯದಾದೆವು ನಾವು,
ಈ ಜಗದಿ‌ ಏಲ್ಲಾ ಜೀವಿಗೂ ಉಂಟು ಸ್ವಾತಂತ್ರ್ಯ,
ಎಲ್ಲಾ ಪ್ರಾಣಿ ಪಕ್ಷಿಗಳ ಕಟ್ಟಿ ಹಾಕಿ ಮಾಡಿದೆವು ಕುತಂತ್ರ,
ಅದಕಾಗಿ ನೀ ಮಾಡಿದೆ ನಮ್ಮ ಬಾಳು ಅತಂತ್ರ ಅತಂತ್ರ....
ಇನ್ನಾದರೂ ತಿಳಿಸಿಯಬೇಕಿದೆ ಜಗವು,
ಜಗದೊಡತಿಯು ಮಾತೆ ಪ್ರಕೃತಿಯು,
ಆಕೆಯೊಲುಮೆ ಇಲ್ಲದಿರೆ,
ಜಗವೆಲ್ಲಾ ವಿಕೃತಿಯು......
........ತಿಪ್ಪೇಸ್ವಾಮಿ......

- tippu

27 Mar 2020, 07:52 pm

ಅಣ್ಣಾ

ನಮ್ಮ ಅಣ್ಣಾ ನ ಪ್ರೀತಿ ಅನ್ನೋದು ಅಮ್ಮನ ಮಡಿಲು ಇದ್ದಾಗೆ.
ಅಕ್ಕರೆಯ ಅರಸ ಅವನು
ಗುಣದಲ್ಲಿ ಚಿನ್ನ-ಬಂಗಾರ ಅವನು
ನನ್ನ ಶಕ್ತಿ ಅವನು.
ಏನೆ ಆಗಲಿ ಎನೆ ಬರಲಿ ನಿನ್ನ ಜೊತೆ ನಾನ ಇದೀನಿ ಅನ್ನುವ ದೈರ್ಯ ಅವನು
ನಡಿಗೆಯಲ್ಲಿ ವಿರತನ ಶುರತನ ವನ್ನೂ ಮೀರಿಸಿದಾತಾನು ಅವನು.
✍️ ಅಣ್ಣಾ ನಿನಗೆ ನನ್ನ ಕೋಟಿ ಕೋಟಿ ನಮನಗಳು

- Iramma Iramma

27 Mar 2020, 04:01 pm

ನೋವುವಿನ ರಾತ್ರಿ

ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬಿಕ್ಕಿ ಬಿಕ್ಕಿ ಅತ್ತ ರಾತ್ರಿ
ನೆನಪುಗಳ ಜೊತೆಗೆ ಜೀವನ ಮಾಡುತ್ತಿದೆ ಈ ನನ್ನ ಹೃದಯ
ರಾತ್ರಿ ಬಾನಿನ ನಲ್ಲಿ ಹುಟ್ಟುವ ಚುಕ್ಕಿ ಚಂದಿರ ನಿಗು ಗೊತ್ತು ಈ ನನ್ನ ನೋವು.
ನಿನಗೇಕೆ ಅರ್ಥವಾಗುತ್ತಿಲ್ಲ ಈ ನನ್ನ ಮನದ ನೋವು.
ಛೇ ಎಂತಹ ಪರಸ್ಥಿತಿ ನನ್ನದು ಸಾಕ ಎನಿಸಿದೆ ಈ ಜೀವನ . ✍️

- Iramma Iramma

27 Mar 2020, 03:44 pm

ಕಣ್ಮನ

ಹಚ್ಚ ಹಸಿರಾದ ಕಾನನ
ಹಕ್ಕಿಗಳ ಕಲರವ
ಮುಚ್ಚು ಮರೆ ಇಲ್ಲದ ಆಕಾಶ
ಹಾರುತಿಹ ಹಕ್ಕಿಗಳು
ಝುಳು ಝುಳು ಹರಿವ ನದಿ
ಹರಿಣಿ ಜಲಧಾರೆ
ಬಣ್ಣ ಬಣ್ಣದ ಹೂದೋಟ
ಕಣ್ಮನಕೆ ಸವಿಯೂಟ
ಕಂಪನ ತರಿಸಿದ ತಂಗಾಳಿ
ಬೆಸೆದ ಎದೆಗಳು
ಮುಳುಗತಿಹ ಹೊನ್ನ ಸೂರ್ಯ
ಶಶೋದಯಕೆ ತೆರೆದುಕೊಳ್ಳುವ
ಸವಿ ಸವಿ ಕನಸಗಳು

- samna

27 Mar 2020, 07:19 am

ಮರೆಯಲಾಗದ ನಿನ್ನ ನೆನಪು

ಹೇ ಕೇಳ ನನ್ನ ಒಡೆಯ..ನಿನ್ನ ನೆನಪು ನನ್ನ ಬೀಡ ದಂಗ ಕಾಡ್ತಾ ಇದೇ ವಶಿ ನನ್ನ ಸಂಗಡ ಕುಂತು ಕಷ್ಟ ಸುಖ ಮಾತಾಡ್ಬೇಕು ಅಂತ ನಿಂಗ ತಿಳೀತಾ ಇಲ್ವಾ ಹೇಳ ನನ್ನ ದೇವ್ರು.
ನಿನ್ನ ನೆನಪು ನನ್ನ ಬೀಡ ದಾಂಗ ಕಾಡ್ತಾ ಇದೆ ಒಮ್ಮ್ಯರ ನನ್ನ ಬೆಟ್ಟಿ ಆಗು .ಅಟ್ಟಿ ಮೇಲೆ ಕುಂತು ಕಷ್ಟ ಸುಖ ಮಾತಾಡವುನು .
✍️ಮರೆಯಲಾಗದ ನಿನ್ನ ನೆನಪು.

- Iramma Iramma

26 Mar 2020, 04:14 pm

...ಮೌನವಾಗಿತ್ತು ನನ್ನ ಮನ...

ನಾ ಬರೆಯುವ ಆಸೆ
ಸುಂದರವಾದ ಪುಟ್ಟ ಕವನ
ಅದಕ್ಕೆ ನಾ ಹೋದೇನು
ಏಕಾಂತವಿರುವ ಪುಟ್ಟ ವನ....

ಜೋರಾಗಿ ಬೀಸಿತು
ತಂಪಾದ ತಂಗಾಳಿ
ವಿರಳಗೊಂಡಿತು ನನ್ನ
ಸುಂದರವಾದ ತನುಮನ....

ಕೇಳದಂತಹ ಸುಗಮಧುರ
ಶಬ್ದದ ಗೀತೆಗಳ ಸಂಗೀತ
ಪುಟ್ಟ ಗಿಡ-ಮರಗಳಲ್ಲಿ
ಸುಂದರವಾದ ಸ್ವರಗಳ ಕಲರವ.....

ನಾ ಬರೆಯಲು ಬಂದ
ಪುಟ್ಟ ಕವನ
ನನ್ನನ್ನೇ ನಾ ಮರೆತು ಹೋದೆನು
ಮೌನವಾಗಿತ್ತು ನನ್ನ ಮನ......

- Ajay

25 Mar 2020, 06:21 pm

ಬಂತು ನೋಡು ಯುಗಾದಿ

ಯುಗ ಯುಗದ ಆದಿ
ನವ ಯುಗಕೆ ಹಾದಿ
ಬಂತು ನೋಡು ಯುಗಾದಿ!!
ನವ ಉಲ್ಲಾಸದಿಂದ
ನವ ಉತ್ಸಾಹದಿಂದ
ಬಂತು ನೋಡು ಯುಗಾದಿ!!

ಚೈತ್ರ ಶುದ್ಧ ಪಾಡ್ಯ ದಿನ
ಈ ಸೃಷ್ಠಿಯ ಮೊದಲ ದಿನ
ಬಂತು ನೋಡು ಯುಗಾದಿ!!
ನಭ ಚುಕ್ಕಿ ಗ್ರಹಗಳ ಕೂಟ
ಬದಲಾದ ಚಲನಾ ನೋಟ
ಬಂತು ನೋಡು ಯುಗಾದಿ!!

ನವ ಪರ್ವಕಿದೋ
ಚಿರ ಚೇತನವ ತುಂಬಿ
ಬಂತು ನೋಡು ಯುಗಾದಿ!!
ಸಂತಸದಿ ನಿಂದು
ಸಂಭ್ರಮದಿ ಮಿಂದು
ಬಂತು ನೋಡು ಯುಗಾದಿ!!

ಗೆಲುವನ್ನು ಭರಿಸಿ
ಸೋಲನ್ನು ಮರೆಸಿ
ಬಂತು ನೋಡು ಯುಗಾದಿ!!
ಸಿಹಿ ಕಹಿಯು ಬೆರೆತು
ಬದುಕನ್ನು ಅರಿತು
ಬಂತು ನೋಡು ಯುಗಾದಿ!!

ಹೊಂಬೆಳಕ ತಂದ
ನೇಸರನ‌ ಚೆಂದ
ಬಂತು ನೋಡು ಯುಗಾದಿ!!
ಚಿಗುರೆಲೆಯ ಸ್ಪರ್ಷ
ವನಸಿರಿಗೆ ಹರ್ಷ
ಬಂತು ನೋಡು ಯುಗಾದಿ!!

ಭೂರಮೆಯ ಚೆಲುವು
ಅರಳಿರುವ ಸುಮವು
ಬಂತು ನೋಡು ಯುಗಾದಿ!!
ದುಂಬಿಗಳ ಬಂಧ
ಹೂ ಬನದ ತುಂಬ
ಬಂತು ನೋಡು ಯುಗಾದಿ!!

ಹೊಸ ವರ್ಷದ ಆರಂಭ
ಎಲ್ಲೆಲ್ಲೂ ಪ್ರಾರಂಭ
ಬಂತು ನೋಡು ಯುಗಾದಿ!!
ಬೇವು ಬೆಲ್ಲ ಹಂಚಿರೆಲ್ಲ
ಸುಖ ದುಃಖ ಮರೆಸಿರೆಲ್ಲ
ಬಂತು ನೋಡು ಯುಗಾದಿ!!

- ಪಿ.ಜಿ.ಜ್ಯೋತಿ

25 Mar 2020, 02:12 pm

ಯುಗಾದಿ ಹಬ್ಬದ ಶುಭಾಶಯಗಳು

ಬೇವು ಬೆಲ್ಲವನ್ನು ಸವಿದು
ಸಿಹಿ ಕಹಿಯನ್ನು ಸಮನಾಗಿ ಹಂಚಿಕೊಂಡು
ಏಳು ಬೀಳುಗಳನ್ನು ಲೆಕ್ಕಿಸದೆ ನಲಿದು
ನಮ್ಮೆಲ್ಲರನ್ನು ಸಮಾನ ಮನಸ್ಸಿನಿಂದ ಮುನ್ನಡೆಸಲು ಮರಳಿ ಬಂದಿದೆ ಹೊಸ ಸಂವತ್ಸರ.
ಬಂಧೂ - ಮಿತ್ರರು ಒಟ್ಟುಗೂಡಿ ಒಂದೆಡೆಗೆ ಸೇರಿ.
ರಂಗವಲ್ಲಿ, ಮನೆಯನ್ನು ತೋರಣಗಳಿಂದ ಸಿಂಗರಿಸೋಣ ಬನ್ನಿ.
ಎಣ್ಣೆಯ ಜಳಕವನ್ನು ಮಾಡಿ.
ದೇವರಿಗೆ ಪೂಜೆಯನ್ನು ವಿಧಿ -ವಿಧಾನಗಳಿಂದ ಪೂರ್ಣಗೊಳಿಸಿ.
ಬೇವು ಬೆಲ್ಲವನ್ನು ಸೇವಿಸಿ, ಮನೆ ಮಂದಿಗೆಲ್ಲ ಮತ್ತು ಮಿತ್ರರಿಗಲ್ಲ ಹಂಚಿ ಯುಗಾದಿ ಹಬ್ಬ ಆಚರಿಸಿ
ಎಲ್ಲರಿಗೂ ಒಳ್ಳೆದಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ .
ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

- Iramma Iramma

24 Mar 2020, 11:11 pm

# ಬಾ ಅತಿಥಿ

ಹೃದಯ ಪಡಸ್ಯಾಲೆ ಮ್ಯಾಗಾ
ನೆನಪ ಚಿತ್ರದಚಾಪೆಯ ನೆಲಕ ಹಾಸಿ
ಬಣ್ಣಕನಸ ಹರಡಿ ಬೆಳಗೀಗಾ
ಒಲವೆಂಬ ಅತಿಥಿಯ ಕರೆದು ಕುಳ್ಳಿರಿಸಿ

ಗೋಡೆಮೇಲಿನ ಚಿತ್ರಪಟ
ಕಸೂತಿಯ ಗುಂಡಿಗಾಜಿನ ಬಿಳಿಮೊಲ
ಇಳಿದು ಕೆಳಗೆ ಮೌನದಲಿ
ಆಡುತಿದೆ ಎದೆಹಕ್ಕೆಯ ತುಂಬ ಕಿಲಕಿಲ

ನೆತ್ತರ ಕಣದ ಅನುರಕ್ತ
ಬೆಳಕದೆ ಕಂಭದ ಮ್ಯಾಲೆ ಅಚ್ಚಿಟ್ಟ ದೀಪದಾ
ಬೆಳಕಬಳ್ಳಿ ತಾಳಿರೂಪ
ನೃತ್ತಿಸತಿದೆ ಕಪ್ಪುಶಿಲೆಯಂತ ನೆರಳಬಿಂಬದಾ

ಮಾಳಿಗೆಗೆ ಕರಲ ತುಂಬಿ
ಬಿದ್ದಮಳೆನೀರ ದಾಟಿಸಿ ಜಂತಿ ಸೋರದಂತೆ
ನೆಲೆಗಟ್ಟ ರೆಕ್ಕೆಯ ನಂಬಿ
ಹಾರಿಬಿಟ್ಟಿದೆ ಎದೆಹಕ್ಕಿಯ ನಭಹೊಕ್ಕಂತೆ

ಈಚಲದ ತೊಲೆ ಸಂದಿನಲಿ
ಮೆತ್ತಿದ್ದ ಸೆಗಣಿಧೂಳಕಸ ಸ್ವಚ್ಛಗೊಂಡು
ಬಣ್ಣ ತಳೆದಿದೆ ಬಿಳಿಹಾಲಿನಲಿ
ಕತ್ತಲೆಕರಗಿ  ದೀಪಉರಿ ಹೆಚ್ಚುಗೊಂಡು

ಹೊದಿಸಿದ್ದ ಹೆಂಚು ಹಾರಿ
ಛಾವಣಿ ಗೀಗ ರವುದೆಯೆ ಹೊತ್ತಿದೆ ನೆರಳ
ಹಾವುಗುಬ್ಬಿಗೂ ನೆಲೆತೋರಿ
ಬದುಕು ಪ್ರೀತಿ ಕಣ್ಣರಳಿಸಿ ಬೆಸೆದಿದೆ ಕರುಳ

ಮನದ ಮನೆಗೆ ಬಾ ಗೆಳತಿಯೇ
ಅಂಗಳ ಸಾರಿಸಿ ಚಿಕ್ಕಿರಂಗೋಲಿ ಬಣ್ಣಬರೆದು
ಚಂದಪ್ಪನೂಟ ಕೂತು ಉಣ್ಣಾಕ
ಅಂದವ ಹೊದ್ದು ಬೇರಬಿಡು ಕಣ್ಣಕೊರೆದು

- samna

24 Mar 2020, 05:29 pm

ಬೆಂಗಳೂರಿಗರ ಪರಿಸ್ಥಿತಿ

ಹಳ್ಳಿಗಳಿಗೆ ಬರಲಾಗದ ಜನ...!
ಬೆಂಗಳೂರಲ್ಲಿ ಇರಲೊಪ್ಪದ ಮನ..!
ಕೆಲಸವಿಲ್ಲದೆ ಕೂತರೆ ಸಿಗುವುದೆ ಅನ್ನ..!
ಇನ್ನೇಗೆ ನಡೆಸುವುದು ಜೀವನ...!
ಅಟ್ಟಹಾಸ ಮಾಡುತ್ತಿದೆ ಕರೋನಾ...!
ಹೀಗೆ ಮುಂದುವರೆದರೆ ಆ ದೇವರೆ
ಕಾಪಾಡ ಬೇಕು ನಮನ್ನ.....!!

- Harish Gowda

23 Mar 2020, 09:57 pm