Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಾಣದ ಕಡಲೊಂದು ಬಡಿದಿದೆ ಮನದಲ್ಲಿ
ಕಡಲಿನ ರಭಸಕ್ಕೆ ಒದ್ದಾಡಿದೆ ಮನಸ್ಸು ಮೀನಿನಂತೆ
ದಡದಲ್ಲಿನ ಮೀನು ಹೇಗೆ ನೀರು ಸೇರಲು ಬಯಸುವುದೂ ಹಾಗೆ ನಾ ಕಾದಿರುವೆ ನಿನ್ನ ಸೇರಲು...
ಕಪ್ಪೆ ಚಿಪ್ಪಿನ ಒಳಗಿರುವ ಮುತ್ತಿನಂತೆ ಮನಸ್ಸು
ಒಡೆದರೆ ಚಿಪ್ಪು ಸಿಗಲಾರದು ಮುತ್ತು
ಮತ್ತಿನಿಂದ ಹೂರ ಹೋದ ಪ್ರೀತಿ ಮನಸ್ಸನ್ನು ಸೇರಲಾರದು ಎಂದಿಗೊ ಇದೇ ಮನಸಿನ ತಾಕತ್ತು
ಪ್ರೀತಿ ಮನಸಿಗೆ ಚಾರ್ಜರ್ ಇದ್ದಂತೆ
ಇನಿಯ ಮನಸಿನ ಸಿಮ್ ಕಾರ್ಡನಂತೆ
ಇದೆರಡು ಇದ್ದರೆ ಮನಸ್ಸು ಈಗಿನ
ಒಳ್ಳೆಯ ಸ್ಮಾರ್ಟ ಪೋನಿನಂತೆ..
ಬದುಕಲ್ಲಿನ ಸಂಬಂಧಗಳು ಪೋನಿನಲ್ಲಿನ ಆಪ್ ಗಳಂತೆ ಸೆಕ್ಯುರಿಟಿ ಹೊಂದಿಕೂಳ್ಳದೆ ಇದ್ದಲ್ಲಿ ಸಂಬಂಧಗಳು ಅನ್ ಇನ್ ಸ್ಠಾಲ್ ಆಗುತ್ತೆ ಮೊಬೈಲ್ ಆಪ್ ಗಳಂತೆ.....
ರೂಪಾಗೌತಮ್
- RoopaGowtham
06 Apr 2020, 05:01 pm
ಕಟ್ಟಿ ಕರೇವ
ಕಾಮಧೇನ ಕೊಟ್ಟಿಗೆ ತುಂಬಿ
ಕೈತೋಳಿಬೇಕ ನೀ ಹಾಲುತುಪ್ಪದೊಳಗಾ
ತಪ್ಪ ಬಾರದು ನೋಡಾ
ಹಾಲುಂಡ
ತನುವಲ್ಲಿ ಶಕ್ತಿಯೆ ತುಂಬಿ
ಎದೆ ತಳೆಬೇಕ ಅಮೃತಬಿಂದಾ
ಇಸ ಸುಳಿಕೂಡದು
ಕಂದ ನೀ ಕಾಣಾ
ಕಲ್ಲು ಕೊಣಚ
ಕೃಷ್ಣ ನಿರುವನ ಎಲ್ಲದಕಾ
ಕರ್ಮ ನೀ ಎಸಗು ಕಮಟು ಕರಗಿ
ಫಲಹೊತ್ತು ತರುವನಾ
ಶ್ರೀ ರಂಗನು
ತಡೆಗೋಡೆ
ಕೆಡವಿ ನುಗ್ಗು ಎಡರೇನೆ ಬರಲಿ
ಇಡದಿರು ನೆಲಕೆ ಮುಗ
ಮೈಬಗ್ಗಿಸಿ
ಕಾಯಕದೇವಗೆ ಶರಣಾಗು
ಹಸುವಾಗಿ ಪೊರೆವನಾ
ದೇವ ನಿನ್ನನು
- samna
06 Apr 2020, 04:29 pm
ಸಾಗುತಲಿಹ ಪಥವದು
ದುರ್ಗಮವಿಹುದು
ಸಾಧನೆಯ ಶಿಖರದೆಡೆಗೆ
ಸಾಗುತಲಿಹುದು
ಅಂಜಿಕೆಯೇಕೆ ಅಳುಕಿನ್ನೇಕೆ
ಕಾಲೆಳೆವವರ ತಳಮಳವೇಕೆ
ಕನಸೇ ಇರದ ಬದುಕಿನ್ನೇಕೆ
ಗುರಿ ತಲುಪಿದೊಡೆ ಹಾಕು ಕೇಕೆ
ಬೆದರಿ ಬಳಲಿ ಬಿಕ್ಕುತಲಿಹ
ಮನವದು ನೋವಲಿ ಬೇಯುವುದು
ಬಿರಿಯದ ಕುಗ್ಗದ ಒತ್ತಡಕ್ಕಳುಕದ
ಮನವದು ಜಯವನು ಕಾಣುವುದು
@ಕಂಪಾ
- KN PATIL
06 Apr 2020, 04:17 pm
ಕಳೆದು ಹೋದ ಕನಸುಗಳಷ್ಟು
ಮತ್ತೆ ಬಂದು ಕಾಡತೊಡಗಿವೆ
ಮರಳಿ ಯತ್ನವ ಮಾಡೆನುತ۔
ನಿನ್ನ ದಾರಿ ದೊಡ್ಡದಿದೆ ಮುಂದೆ
ತಲೆ ಎತ್ತಿ ನೋಡೆನುತ.
ಪ್ರಾರಂಭದಲ್ಲಿ ಎಡವಿದರ ಪರಿಣಾಮವಿದು
ಫಲವೇನು ಪರಿತಪಿಸಿ,
ಸಮಯ ಸಾಕಷ್ಟಿದೆ ಮುಂದೆ ,ಸಾಗಲು
ಸಮಸ್ಯೆಗಳ ಪರಿಹರಿಸಿ.
ಗುರಿತೋರಲು ನಮ್ಮಲ್ಲೇ ನೀನಿರುವೆ ಆತ್ಮಗುರು,
ನಿನಗಿಂತ ಮತ್ಯಾರಿರುವರು ಈ ಜಗದಲಿ ಪರಮಗುರು.
ಸಂತೈಸಲು ಸಮಾಧಾನದಿ ಜೊತೆಗಾರರಲ್ಲಿ
ಸರಿಯಾರು ?
- chidananda chida
06 Apr 2020, 01:03 pm
ಅಂದು.........
ಹೆಣ್ಣು ಸಮಾಜದ ಕಣ್ಣು
ಮಾನ ಮರ್ಯಾದೆ ಇರುವತನಕ
ಕೈ ಹಿಡಿದ ಗಂಡನ ಬಾಳು ಬೆಳಗುವ ದಕ
ಕಾಪಾಡಿಕೊಂಡು ಬಂದಿದ್ದರು ಕೊನೆತನಕ.
ಇಂದು.........ಮನವಿ
ದೇಶ ವಿದೇಶ ಸುತ್ತಿ ವೇಷ ಬದಲಿಸಿಕೊಂಡು
ಜೀನ್ಸ್ , ಚೂಡಿದಾರ್ ಪೈಜಾಮ ತೊಟ್ಟು
ಕಾಲಲ್ಲಿ ಶೂ ಇಟ್ಟು
ಬಾನತ್ತ ಕೈ ಬೀಸಿ ನಡಿಬೇಡ
ಓ ಹೆಣ್ಣೇ ಭಾರತದ ಸಂಸ್ಕೃತಿ ಮರಿಬೇಡ.
ಎಂದೆಂದಿಗೂ .......ಇರಲಿ
ಮೈತುಂಬ ಬಟ್ಟೆಯುಟ್ಟು
ಕೈಯಲ್ಲಿ ಬಳೆ.ಹಣೆಯಲ್ಲಿ ಕುಂಕುಮದ ಬೊಟ್ಟು
ಕೊರಳಲ್ಲಿ ಕರ್ಮಣಿಯ ತಾಳಿ ಇರಬೇಕು
ಓ ಹೆಣ್ಣೇ ಭಾರತಾಂಬೆಯೆ ಕೀರ್ತಿ ತರಬೇಕು.
ನೆನಪಿರಲಿ.......
ಭಾರತೀಯ ನಾರಿ
ವಿಶ್ವ ಸಂಸ್ಕೃತಿಗೆ ರೂವಾರಿ.
Download Kannada Kavana app : https://goo.gl/9ZnKGJ
- lakshman
06 Apr 2020, 01:02 pm
ಕಾಲಚಕ್ರ ತಿರುಗದೆ ಇರುವುದೇ
ಕಾಲವು ಕಲಿಸದೆ ಬಿಡುವುದೇ
ಮಾಡಿದ ಪಾಪ ಮರುಕಳಿಸದೇ
ನಿನ್ನ ತಪ್ಪು ನಿನಗೆ ಅರಿವಾಗುವುದೇ
- Simple Living
06 Apr 2020, 12:54 pm
ಜೀವನದಲ್ಲಿ ಎರಡು ರೀತಿಯ ನೋವುಗಳಿರುತ್ತವೆ
ಒಂದು ನಿಮ್ಮನ್ನು ನೊಯಿಸಿದರೆ
ಇನ್ನೊಂದು ನಿಮ್ಮನ್ನ ಬದಲಾಯಿಸುತ್ತದೆ.
ಇನ್ನೊಬ್ಬರ ಬದುಕನ್ನು
ಇಣುಕಿ ನೋಡುವುದನ್ನು
ಬಿಟ್ಟಾಗಲೆ ನಿಮ್ಮ ಬದುಕು
ಸುಂದರವಾಗಿ ಕಾಣಲು ಸಾಧ್ಯ....
ಯಾವತ್ತೂ ನಿನಗೆ ಶತ್ರುಗಳ ಸಂಖ್ಯೆ
ಹೆಚ್ಚುತ್ತ ಹೋಗುತ್ತದೊ...
ಅವತ್ತು
ನಿ ನಡೆದ ಹಾದಿ ಮತ್ತು ನಿನ್ನ
ಗುರಿ ನಿಖರವಾಗಿದೆ ಎಂದರ್ಥ....
ಪ್ರಯತ್ನ ಎಂಬುದು ಬೀಜದ ಹಾಗೆ
ಬಿತ್ತುತ್ತಲೇ ಇರಿ
ಚಿಗುರಿದರೆ ಮರವಾಗಲಿ
ಇಲ್ಲವೆಂದರೆ
ಮಣ್ಣಿಗೆ ಗೊಬ್ಬರವಾಗಲಿ.....
ಡಿ ಜೆ ವಿಶಾಲ ❤❤
- Vishal Hiremath
06 Apr 2020, 12:28 pm
ಬೆತ್ತಲೆ ದೇಹ ನೋಡಿ ಜೊಲ್ಲು ಸುರಿಸುವ
ಬದಲು
ಮುಚ್ಚಲು ಹೊದಿಕೆ ಕೊಡುವವನ ನಿಜವಾದ
ಗಂಡಸು
ಅರೆಬೆತ್ತಲೆ ಮೈಮಾಟ ಪ್ರದರ್ಶನ ಮಾಡದೇ
ಮೈತುಂಬಾ
ಬಟ್ಟೆ ಉಟ್ಟು ಸುಂದರವಾಗಿ ಕಾಣುವವಳೆ
ನಿಜವಾದ
ಹೆಣ್ಣು
N~RAJ
- Nagaraj Raj
06 Apr 2020, 10:15 am
ಪ್ರಕೃತಿಯು ಹೆಣ್ಣು ಭೂಮಾತೆಯು ಹೆಣ್ಣು
ಕನ್ನಾಂಡೆಯು ಹೆಣ್ಣು
ಅವರೆಲ್ಲ ನಮ್ಮ ತಾಯಿಯ ಸ್ಥಾನ ತುಂಬುತ್ತಾರೆ
ಹೆಣ್ಣು ಭೂಜ್ರೇಶು ಮಾತಾ ಎಂಬುದು ನಿಜ
ಹೆಂಡತಿ ಎಲ್ಲಾ ಸ್ಥಾನವನ್ನು ತುಂಬಿದರು ಸಹ
ಕೂನೆಗೆ ಅವಳು ಬರೀ ಹೆಣ್ಣು ಹೆಣ್ಣು...
ಮಣ್ಣು ಹೂನ್ನು ರತ್ನ ಎಲ್ಲಕ್ಕು ಇದೆ ಬೆಲೆ
ಆದರೆ ಹೆಣ್ಣಿನ ಮನಸ್ಸಿಗೆ ಮಾತ್ರ ಹೆಣದಿದೆ ಬಲೆ
- RoopaGowtham
06 Apr 2020, 09:25 am
ಹಾರಾಡಿದೆ ಕನಸು ಬಾನಾಡಿಯಾಗಿ,
ಕೊನೆ ಮೊದಲಿಲ್ಲದ ಆಕಾಶದಲ್ಲಿ
ಬಂಧಿಸುವ ಮನಸಾಗಿದೆ,
ಹೋಗಿ ಬಿಡು ದೂರ..
ಸಂಬಂಧಗಳ ಬೇಡಿಯ ತೊಡಿಸಿ,
ಹೇಗೆ ಸೆರೆ ಮಾಡಲಿ ನಿನ್ನ
ಆದರೂ ಕೊಲ್ಲುವ ಮನಸಾಗಿದೆ,
ಹೋಗಿ ಬಿಡು ದೂರ..
ಮುಖವಾಡದ ಜೀವನ,
ಸಾಕಿನ್ನು ಮೂರು ದಿನ
ಆಸೆಯ ರೆಕ್ಕೆ ಬಲಿಯುವ ಮುನ್ನ,
ಹೋಗಿ ಬಿಡು ದೂರ..
- deepu
06 Apr 2020, 03:05 am