Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾರು ನೀನು ನನಗೆ ?

ನಿನ್ನನ್ನು ದೇವರಂತೆ ಪೂಜಿಸುವೆ
ನಿನ್ನಲ್ಲಿ ಯಾವುದೇ ಬೇಡಿಕೆಯು ನನಗಿಲ್ಲ
ಮಗುವಿನಂತೆ ನಿನ್ನ ಪ್ರೀತಿಸುವೆ
ತಾಯಿ ನಾ ನಿನಗಲ್ಲ
ಹಿಂದೆ ಬಂದಾಗಲೆಲ್ಲ ಹೊರದೂಡಿದೆನಲ್ಲ
ನೀನಿಲ್ಲದ ಬದುಕು ಚಂದವೇನಲ್ಲ
ಅನಿಸುವುದು ಆಗಾಗ್ಗೆ ನೀನಿಲ್ಲದೆ ನನಗೆ ಬದುಕಿಲ್ಲ
ಆದರೂ ಬದುಕುವುದು ಅನಿವಾರ್ಯ ಬೇರೆ ದಾರಿಯಿಲ್ಲ!

- Dima

08 Apr 2020, 02:54 pm

ನೀನು ನಾನು

ಒಮ್ಮೊಮ್ಮೆ ಅನಿಸುವುದು
ನೀ ಕೃಷ್ಣ ನಾ ನಿನ್ನ ರಾಧ
ಅವರಂತೆಯೇ ನಮ್ಮ ನಡುವಿನ
ಅಂತರವೂ ಅಗಾಧ
ಸೇರಲಾರೆವೇನೋ ಇನ್ನೆಂದು ಹತ್ತಿರ
ನೀ ತಿರುಗಿ ನೋಡದೇ
ಹೋಗಿರುವೆ ಬಹುದೂರ!

- Dima

08 Apr 2020, 02:41 pm

ಸೋಲ್ ಮೇಟ್

ಕನಸಲ್ಲಿ ಕಂಡಿದ್ದು ಮನಸ್ಸಲ್ಲಿ ನೆನೆದಿದ್ದು
ಬಾಳಲ್ಲಿ ಸಿಕ್ಕಿದ್ದು ಜೂತೆಯಾಗಿ ಇದ್ದಿದ್ದು
ಬೆಲೆ ಕಟ್ಟಲಾಗದ ಮರೆಯಲಾಗದ
ನಮ್ಮಿಬ್ಬರ ಪ್ರೀತಿ....

ನಿನ್ನ ಪ್ರೀತಿಯಿಂದ ಜೀವನ ಎಷ್ಟು ಚೆಂದ
ಇದು ಬಿಡಿಸಲಾಗದ ಅನುಬಂಧ
ಸೂತ್ರವೇ ಇಲ್ಲದ ಬಾಳಿಗೆ ನೀ ನೀಡಿದೆ
ಮಾರ್ಗದರ್ಶನ ಅದೇ ಆಯಿತು
ನಮ್ಮಿಬ್ಬರ ಮಿಲನಕ್ಕೆ ಕಾರಣ....

- RoopaGowtham

08 Apr 2020, 01:52 pm

ವಿಪಯಾ೯ಸ.

ಪ್ರಾರಂಭದಲ್ಲಿ ನಾ ಬರೆಯುವ ಕವನದಲ್ಲಿತ್ತು ಅಟ್ಟಹಾಸ...!
ನೀ ಪರಿಚಯ ವಾದಾಗ ಅನಿಸಿತು,
ಈ ಕವನವೊಂದು ಸುಂದರ, ಸಮಂಜಸ...!
ನಿನ್ನಿಂದ ನನ್ನ ಕವನಗಳಿಗೆ ಬಂದಿತು ಮಂದಹಾಸ..!
ನಾ ಕೇಳುವೆ ನಿನಗೊಂದು ಏನಿದು
ವಿಪಯಾ೯ಸ...!


ಮೇಘಾ.. ✍❤

- Megha

08 Apr 2020, 12:14 pm

ಹೇ ಹೃದಯವೇ,

ಹೇ ಹೃದಯವೇ ಕೇಳು,
ನಿನ್ನ ಪ್ರೀತಿಗೆ ಜೊತೆಯಾಗ ಬಯಸುವ ಒಡತಿ
ನಾನು,
ಒಂದು ವೇಳೆ ಆ ಪ್ರೀತಿಗೆ ಕೊಟ್ಟರೆ ಸಮ್ಮತಿ,
ಆಗುವೆನು ನಿನ್ನ ಪ್ರೀತಿಗೆ ಆಹುತಿ...!
ಇರುವೆನು ನಿನ್ನ ಜೊತೆಗೆ ಜನ್ಮ ಪೂತಿ೯...!



ಮೇಘಾ.. ✍✍❤

- Megha

08 Apr 2020, 12:07 pm

ಮಾತನಾಡಲಿ

ಯಾರ ಜೊತೆಯಲ್ಲಿ ಮಾತನಾಡಲಿ
ಯಾರಿಗೂ ಕೇಳಿಸದ ದ್ವನಿ ನನ್ನದು
ಮನದ ಸುಳಿಗಾಳಿಯಲ್ಲಿ ಸಿಲುಕಿದೆ ನಾನು
ಯಾರ ಜೊತೆಯಲ್ಲಿ ಮಾತನಾಡಲಿ

- Karthik Sharma

08 Apr 2020, 10:53 am

ಸಂತೋಷ

ಬಾನಂಗಳದಿ ನಾ ಕುಳಿತಾಗ,
ನೆನಪಿನ ಅಲೆಯೊಂದು ಕೇಳಿತು,
ಏನನ್ನು ನೆನೆಯುತ್ತಿರುವೆ ಎಂದು,
ಬಾನಂಗಳದಿ ನಾ ಕುಳಿತಾಗ,
ನೆನಪಿನ ಅಲೆಯೊಂದು ಕೇಳಿತು,
ಏನನ್ನು ನೆನೆಯುತ್ತಿರುವೆ ಎಂದು,

ತುಸು ನಕ್ಕು ನಾನು ಉತ್ತರಿಸಿದೆ,
"*ಸಂತೋಷ"* ಎಂಬ ನಿಧಿ ಯನ್ನು
ಹುಡುಕುತ್ತಿರುವೆ ಎಂದು..

ಮೇಘಾ.. ✍✍

- Megha

08 Apr 2020, 10:19 am

ತುಟಿಯ ಅಂಚಲ್ಲಿ

ಎನ್ನನ್ನು ಹೇಳಲಿ ಎನ್ನೆದು ಹೇಳಲಿ
ನಗುವ ತುಟಿಯ ಅಂಚಲ್ಲಿ
ಯಾರಿಗು ಕಾಣದ ನೋವಿನ ಸುಳಿ ಇದೇ
ಕೂಗಿ ಹೇಳಿದರು ದೇವರೆ ನಿನಗೆ ಕೇಳಿಸಲ್ಲಿಲ್ಲವೆ
ಕೇಳಿಸಿದರು ಕೇಳಿಸದಂತ್ತೆ ಇರುವೆ
ಎನ್ನನ್ನು ಹೇಳಲಿ ಎನ್ನೆದು ಹೇಳಲಿ

- Karthik Sharma

08 Apr 2020, 08:25 am

ತಪ್ಪಿದ ಅನಾಹುತ

ಒಂದು ಸುಂದರ ಸಂಜೆ
ಬಂದನ ಮೀರಿ ಹೊರಟನು ಆಚೆ
ಸತಿ-ಸುತರ ಕೂಡಿ ಗಾಡಿಯ ಏರಿ
ಹೊರಟನು ವೇಗದ ಎಲ್ಲೆಯ ಮೀರಿ

ಉರಿದು-ಉರಿದು ದಣಿದ ನೇಸರ
ಸೇರುತಲಿದ್ದನು ಪಶ್ಚಿಮ ದಿಕ್ಕಿನ ಊರ
ಕಾಲನಂತೆ ಕೂಡಿದ ಮೋಡಗಳು
ಕಾರುತಲಿದ್ದವು ಮಳೆಹನಿಗಳು

ಇಹಲೋಕದ ಕಣ್ಣ
ತಪ್ಪಿಸುವ ತವಕದಲಿ
ಸಾಗುತಲಿದ್ದನು ಜಾಣ
ಅಂಕುಡೊಂಕಿನ ಹಾದಿಯಲಿ

ಸಣ್ಣನೆ ತಿರುವಿನಲಿ
ಗಾಡಿಯು ಜರ್ರನೆ ಜಾರುತಲಿ
ತಿರುಗಿತು ಚಕ್ರದ ರೀತಿಯಲಿ
ಬಿದ್ದವು ಮನಗಳು ಭೀತಿಯಲಿ

ದೂರದ ನೋವಿಗೆ ಮರುಗುವ ಜೀವ
ಅರಿಯದೆ ಹೋಯಿತು ಕಂದನ ನೋವ
ದಾರೀಹೋಕನು ದಾವಿಸಿ ಬಂದ
ನೋಂದ ಮನಕೆ ಧೈರ್ಯವ ತಂದ

ಅಂತು ತಂಪಿನ ಗಾಳಿಯು ಬೀಸಲು
ಮೋಡವು ಹಾರಿ ದೂರಕೆ ಜಾರಲು
ಮನೆಯನು ತಲುಪಿದ ಮನಗಳು
ಚಿಂತೆಯಲಿ ಮುಳುಗಿದವು.



ಶಾರದ

- ಶಕುಂತಲಾ

07 Apr 2020, 10:53 pm

ಸಂಗಾತಿ

ಜೀವನದ ಉದ್ದಕ್ಕು ಸುಖ ದುಃಖದಲ್ಲಿ
ನೋವು ನಲಿವಿನಲ್ಲಿ ಬೆರಳಿದು ನಡೆವ
ಜೀವ ಒಂದೇ ಬಾಳ ಸಂಗಾತಿ

ಜರಿವ ಜನರೆದುರಲ್ಲಿ ನನ್ನ ನೆರಳು ನೀನು
ಕೂರಗುವ ಮನಕೆ ಸಾತ್ವಂನ ನಿನ ಮಾತು
ಹೆದರುವ ಹೃದಯಕೆ ಧೈರ್ಯವೇ ನಿನ ಅಪ್ಪುಗೆ
ಹೇ ಸಂಗಾತಿ ನೀ ಇರು ನನ ಜೊತೆಗೆ ನಾ ಇರುವೆ ತೆಪ್ಪಗೆ ಇದಕಿದೆಯೆ ನಿನ್ನ ಒಪ್ಪಿಗೆ...

- RoopaGowtham

07 Apr 2020, 10:16 pm