Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಏನು ಇಲ್ಲ ❌❌

ನಾನು ನನ್ನದೇನು ಇಲ್ಲ
ದೇಹ ಆತ್ಮ ನನ್ನದಲ್ಲ
ನಾನು ಎನ್ನುವ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ

ತಂದೆ ತಾಯಿ ಕೊಟ್ಟ ಜನ್ಮ
ಹೆಸರು ಯಾರೋ ಇಟ್ಟರಣ್ಣ
ಕಲಿತ ವಿದ್ಯೆ ಅರಿತ ಕಸುಬು
ಯಾವುದು ನನ್ನದಲ್ಲ
ನಾನು ಎನ್ನುವ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ

ಸತ್ತ ಮೇಲೆ ದೇಹ ಆತ್ಮ
ಎರಡು ಬೇರೆ ಆಗುವಂತೆ
ಮೂರು ದಿನ ದುಃಖವಂತೆ
ಮತ್ತೆ ಅವರಿಗವರದೇ ಚಿಂತೆ
ನನ್ನವರು ಯಾರು ಇಲ್ಲ
ನನ್ನದೆಂದು ಏನು ಇಲ್ಲ


ಇಂತಿ ನಿಮ್ಮ ಸ್ನೇಹಿತ :

ಡಿ ಜೆ ವಿಶಾಲ

- Vishal Hiremath

09 Apr 2020, 12:20 pm

ನನ್ನವನು

ಆ ದಿನ ನನಗನಿಸಿತು,
ನೀನು ಯಾವತ್ತಿಗೂ ನನ್ನವನೇ ಎಂದು,
ಆ ದಿನ ನನಗನಿಸಿತು,
ನೀನು ಯಾವತ್ತಿಗೂ ನನ್ನವನೇ ಎಂದು,

ಆದರೆ,
ಇವತ್ತು ತಿಳಿಯಿತು ನಿನ್ನ ಹೃದಯ
ಬೇರೆಯವರಿಗೆ ಮೀಸಲು ಎಂದು..

- Megha

09 Apr 2020, 10:04 am

ಶೃಂಗಾರ

ದೇವರ ಗುಡಿಗೆ ಶಿಲೆಯ ಶೃಂಗಾರ
ಕೋಗಿಲೆಗೆ ತನ್ನ ಕಂಠವೆ ಶೃಂಗಾರ
ನವಿಲಿಗೆ ಅದರ ರೆಕ್ಕೆಯೆ ಶೃಂಗಾರ
ಹೆಣ್ಣಿಗೆ ಅವಳ ಅಂದವೆ ಶೃಂಗಾರ
ಹೂ ವಿಗೆ ಅದರ ಪರಿಮಳವೆ ಶೃಂಗಾರ
ಹಾಗೆ ನನ್ನ ನಿನ್ನ ಬಾಳಿನಲ್ಲಿ ಪ್ರೀತಿಯೆ ಶೃಂಗಾರ.....

- ಲಿಖಿತ್. M......

- likith

09 Apr 2020, 09:56 am

ಪ್ರೀತಿ

ಪ್ರೀತಿಯೆಂಬ ಸೆರೆಯಂಚಿನಲ್ಲಿ,
ಬಂಧಿಯಾದ ಪುಟ್ಟ ಹೃದಯ ನನ್ನದು,

ಆ ಬಂಧನದ ಕಣಂಚಿನಲ್ಲಿ,
ಸೆರೆ ಹಿಡಿದ ವಿಶಾಲ ಹೃದಯ ನಿನ್ನದು..!



M...!

- Megha

09 Apr 2020, 09:20 am

ನನ್ನ ಅನಿಸಿಕೆ

ಜೀವನದಲ್ಲಿ ಜಿಗುಪ್ಸೆಗೊಳಗಾದಾಗ,
ಕಣ್ಣ ಮುಂದೆ ಬರುವುದು ಎರಡು ಅಂಶಗಳು ಮಾತ್ರ,,,
ಒಂದು ನಮ್ಮ ವರೆಂದು ತಿಳಿದು ಅತಿಯಾಗಿ ನಂಬಿ
ಮೋಸ ಹೋದಾಗ,
ಇನ್ನೊಂದು ಬದುಕಿನಲ್ಲಿ ಅತಿಯಾದ
ಕನಸುಗಳನ್ನು ಇಟ್ಟು ಕೊಂಡಾಗ
ನನಸಾಗದೇ ಉಳಿದಾಗ...!


ಮೇಘಾ✍

- Megha

09 Apr 2020, 08:50 am

ನನ್ನ ಪ್ರೀತಿಯ ತಾಯಿ....

ನವಮಾಸ ನನ್ನನು ಗರ್ಭದಲ್ಲಿ ರಕ್ಷಿಸಿದವಳು ಬೆಳದಿಂಗಳ ತೋರಿಸಿ ಊಟ ಮಾಡಿಸಿದವಳು.....
ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದವಳು
ನನ್ನ ಸಾಧನೆಗೆ ಗುರಿ ತೋರಿದವಳು.....
ಕಷ್ಟವನ್ನೆಲ ತನಾಗಿತುಕೊಂಡು ಸುಖವನೆಲ್ಲ ನನಗೆ ಕೊಟ್ಟವಳು
ಇವಳ ಬಗ್ಗೆ ಹೇಳಲು ಸಾಲದು ಕೋಟಿ ಪದಗಳು.....

ಇವಳೇ ನನ್ನ ಪ್ರೀತಿಯ ತಾಯಿ.............


- ಲಿಖಿತ್.ಎಂ...

- likith

09 Apr 2020, 07:13 am

ನಾ ಬರೆದ ಕವನ

ನಾ ಬರೆದ ಮೊದಲ ಕವನ
ನಿನ್ನನು ಕಂಡ ನಾನೇ ಪಾವನ.....
ತಕ್ಷಣವೇ ಬರೀಬೇಕೇನಿಸಿತು ಒಂದು ಕವನ
ನೀ ತೆರೆದೆ ನನ್ನ ಮನದ ಬಾಗಿಲಿನ.....
ಹೇಳು ನೀ ನನಗೆ ಪ್ರೀತಿ ಎಂದರೆ ಇದೇನಾ
ನಿನ್ನೆ ಸ್ಮರಿಸುತಿರುವೆ ಸದಾ ನಾ.....

ಅದಕಾಗಿ ನಾ ಬರೆದೆ ಈ ಮೊದಲ ಕವನ............


ಲಿಖಿತ್.ಮ್..

- likith

09 Apr 2020, 06:54 am

ನಗು

ಒಂದು ಸುಂದರ ಸಲುಗೆಯೇ
ಕವಿತೆಯ ನಿಯಮ
ಅಂದವನ್ನು ಅಳೆಯುವ
ನವಿರಾದ ಆಯಾಮ
ನಗುವೊಂದೇ ಮುಖದ
ಉತ್ತಮ ವ್ಯಾಯಾಮ..❤
....... always smiling...
ಗಂಗಾಧರ್....

- Gangadhar Gangu

08 Apr 2020, 07:00 pm

ಪ್ರೀತಿಯ ಕಾಣಿಕೆ

ಪರಿಶುದ್ಧ ವಾದ ಪ್ರೀತಿ ನಿನ್ನದು,
ಎಂದು ತಿಳಿದು ಮಾಡಿದ ನನ್ನ
ಹುಚ್ಚು ಹೃದಯಕ್ಕೆ,

ಕರುಣಿಸಿದೆ ನೀ ನನಗೆ ಕಣ್ಣೀರಿನ ಕಾಣಿಕೆ...!



✍✍Megha..

- Megha

08 Apr 2020, 04:34 pm

ಚೂರಾದ ಹೃದಯ

ನನ್ನ ಕನಸಿನ ಕನ್ನಡಿಯ
ನೀ ಚೂರು ಮಾಡಿ ಹೋದೆಯಲ್ಲೇ
ನನ್ನ ಹೃದಯದ ಅರಮನೆಯ
ರಾಜಕುಮಾರಿಯೇ.
ಚಿದ್ರವಾದ ಕನ್ನಡಿಯನ್ನ ಚೂರುಗಳನ್ನಾ
ಜೋಡಿಸಲಾಗುತ್ತಿಲ್ಲಾ.
ನೀನಿಲ್ಲಾದಾ ಬದುಕಿಗೆ
ಅರ್ಥವಿಲ್ಲಾ.
ನನ್ನ ಮೂಖ ರೋಧನೆಯ
ಕೇಳುವವರಾರಿಲ್ಲಾ.
ಎತ್ತ ನೋಡಿದರು ನೀನೆ
ಕಾಣುತಿಹೆಯಲ್ಲಾ.
ಮನದ ಕಣ್ಣೀರ ಜೊತೆಗೆ
ಬಿಂಬವೇ ಮಾಯವಗುತಿಹುದಲ್ಲಾ.
ನಾ ಮರೆಯೋ ಮುನ್ನ
ನೀ ಬಂದು ಸೇರು ನನ್ನಾ.

✍️ಕನಸುಗಾರ

- varu

08 Apr 2020, 03:46 pm