Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚೆಲುವೆ

ಯಾರೇ ನೀನು ಚೆಲುವೆ
ನನ್ನ ನೋಡಿ ನೋಡಿ ನಗುವೆ
ನಿನ್ನ ಅಂದಕ್ಕೆ ನಾ ಯಂದೋ ಸೋತಿರುವೆ
ನಾ ಹತ್ತಿರ ಬಂದಂತ್ತೆ ನೀ ದೂರ ಹೋಗುವೆ


-ಲಿಖಿತ್. ಎo.....

- likith

10 Apr 2020, 07:57 am

ಬರಿಯಲು

ಕಂಗಳು ಕನಸು ಹುಡುಕಲು
ಬಯಸಿದ ಪ್ರೀತಿ ಉಳಿಸಲು
ಸ್ನೇಹದ ದಾರಿ ತಿಳಿಸಲು
ಮನಸ್ಸಿನ ಬಾಗಿಲು ತೆರೆಯಲು
ಇಲ್ಲಿ ಈ ಕವನ ಬರೆಯಲು

-:ವಿ.ಶಿವಾನಂದ:- ✍️

- Shivanand V Anandadavar

10 Apr 2020, 07:09 am

ಆ ವಿಷಯ

ಸಮಯ ಕಲಿಸಿತು ಹೊಸ ವಿಷಯ
ಮನುಜ ಅದನ್ನು ನೀನು ಅರ್ಹತೆಯ
ಕಾರಣವಿಲ್ಲದೆ ನೀ ದೂರಾದೆಯ
ಮರೆಯುವುದು ಹೇಗೆ ಆ ವಿಷಯ

✍️ವಿ.ಶಿವಾನಂದ

- Shivanand V Anandadavar

10 Apr 2020, 07:00 am

ಅಮ್ಮ ಅಮ್ಮ

ಬದುಕಿನ ಪಯಣದಲ್ಲಿ ಸಿಹಿ ಕಹಿನೆನಪುಗಳು
ಸಿಹಿ ಎಲ್ಲಾ ಒಂದೆಡೆಗೆ ಕಹಿ ಎಲ್ಲಾ ಒಂದೆಡೆಗೆ
ತಕ್ಕಡಿ ಮಾತ್ರ ಯಾಕೋ ವಾಲುವುದು ಕಹಿಯೆಡೆಗೆ
ಕಹಿಯ ತೂಕ ಸಿಹಿಗಿಂತಲೂ ಹೆಚ್ಚೇನೋ...

ನಮಗಿಷ್ಟ ಬಾಲ್ಯದ ಜೀವನ ಯಾಕೆ ಬರುತ್ತದೆ ಯೌವ್ವನ ಬೇಡೆಂದರು ಬರುತ್ತದೆ ವೃಧ್ಧಾಪ್ಯ
ಮಕ್ಕಳ ಮೊಮ್ಮಕ್ಕಳ ಕಯ್ಯ ಪಿಯ್ಯ ಇರಿಸು ಮುರಿಸು ಸಹಿಸುವ ಹೂತ್ತಿಗೆ ಜೀವನ ಸಾಕು ಸಾಕಯ್ಯ....

ಒಮ್ಮೆ ನಾ ಕೇಳಿದೆ ಮುಂದಿನ ಜನ್ಮವಿದ್ದರೆ ನೀ ಏನಾಗ ಬಯಸುವೆ ಎಂದು
ಅದಕೆಂದಳು ನನ್ನ ಗೆಳತಿ ನಾನಗುವೆ ಸುಂದರ ಪಕ್ಷಿ
ಮತ್ತೆ ಅವಳು ನನ್ನ ಕೇಳಿದಳು ನೀನು ಎಂದು ನಾನಂದೆ...ನಾನಗ ಬಯಸುವೆ ನನ್ನ ಅಮ್ಮನಿಗೆ ಅಮ್ಮ ಎಂದು....

ಅಮ್ಮ ಆದರೆ ತಿಳಿಯುತ್ತದೆ ಮಗುವಿನ ಎಲ್ಲಾ ಪ್ರಶ್ನೆಗೆ ಉತ್ತರ ನಮಗೆ ತಿಳಿಯದ ಎಲ್ಲಾ ಪ್ರಶ್ನೆಯ ಉತ್ತರ ಅಮ್ಮ ನೀ ನಮ್ಮ ಐ ಲವ್ ಯು ಅಮ್ಮ
ಜಗವು ನೋಡಿದ ಮೊದಲ ದೈವ
ಬದುಕು ಕಂಡ ಮೊದಲ ಜೀವ
ನನ್ನ ಸಲಹಿದ ಧೀರೆ ನೀನು ಧೈರ್ಯ ನೀಡಿದ ಮಾತೆ ನೀನು
ಕಥೆಯ ಹೇಳುವ ಕಥೆಗಾರೆ ಲಾಲಿ ಹಾಡುವ ಗಾಯಕಿ ನೀನೆ
ನಿನ್ ಬಿಟ್ರೆ ಯಾರು ಇಲ್ಲಮ್ಮ ನೀನೆ ನನಗಲ್ಲಮ


ಐ ಲವ್ ಯು ಮಾ....

- RoopaGowtham

10 Apr 2020, 12:17 am

ಸಣ್ಣ ಪ್ರೀತಿ ನದಿ ನಾ

ಸಣ್ಣ ಪ್ರೀತಿ ನದಿ ನಾ
ಹಿರಿದಾದ ನಿನ್ನ ಪ್ರೀತಿ ಕಡಲ ಸೇರಿ
ನನ್ನ ನಾ ಕಾಣದಾದೇ
ಹುಡುಕಿದರೂ ನನಗೆ ನಾನೇ ಸಿಗುತ್ತಿಲ್ಲ

ನಾ ಹಿಂಗಿದೇನ ಮೋಹದ ಕಡಲಲಿ
ಹುಡುಕುವ ಅಸೇ ಕವಲೊಡೆದವರ
ಬಾಲ್ಯದ ದಿನ ಹುಡುಕಲು
ಹುಡುಕಿದರೂ ನನಗೆ ನಾನೇ ಸಿಗುತ್ತಿಲ್ಲ

- suresh veera

09 Apr 2020, 11:01 pm

ಕನಸಿನ ಮಾತು ✒✒

ಅವಳು ಹೆಜ್ಜೆ ಇಟ್ಟಲೆಲ್ಲಾ
ಮೂಡಿದೆ ರಂಗು ರಂಗಿನ ಚಿತ್ತಾರ
ಕಣ್ಣು ರೆಪ್ಪೆ ಮುಚ್ಚಿದರೆ
ಸಾಕು ಹೃದಯಕ್ಕೆ ಗುರಿ
ಇಟ್ಟ ಬಾಣ ಬಿಡುತ್ತದೆ.
ಅವಳ ಚಿತ್ರಾಕರ್ಷಕ ವಯ್ಯಾರ ....!

ಹೇ ಕೊಮಲಾಂಗಿಯೆ
ನೀ ಹತ್ತಿರ ಬರುತ್ತಿದ್ದಂತೆ
ಏರುತ್ತಿವುದು ಮೈಗೆ ಕಾವು
ಬಳಿ ಬಂದರೂ ಮಾತನಾಡಿಸದೆ
ಹಾಗೆ ಹೋಗಿ ಕೊಡಬೇಡ
ಈ ಮನಸ್ಸಿಗೆ ನೋವು. .....!

ಇಂತಿ ನಿಮ್ಮ ಗೆಳೆಯ :

ಡಿ ಜೆ ವಿಶಾಲ

- Vishal Hiremath

09 Apr 2020, 10:29 pm

ಸುಖ ದುಃಖಗಳು

ಜೀವನವೆಂಬುದು ಬನಲ್ಲಿಬರೋ ಚಂದ್ರನಂತೆ
ಸುಖವು ತಿಂಗಳಿಗೊಮ್ಮೆ ಬರೋ ಹುಣ್ಣಿಮೆಯಂತ್ತೆ ದುಃಖವು ಮಾಸಕ್ಕೊಮೆ ಬರೋ ಅಮಾವಾಸ್ಯೆಯಂತ್ತೆ
ಸುಖ ಬಂದಾಗ ಹಿಗ್ಗದಂತ್ತೆ
ದುಃಖ ಬಂದಾಗ ಕುಗ್ಗದಂತ್ತೆ
ಬಾಳಿದರೆ ಬದುಕು ಸುಖಮಯವಂತ್ತೆ.......


✍️ಲಿಖಿತ್. ಎo.........

- likith

09 Apr 2020, 08:00 pm

ಉಳಿಸು

ಬೆಳಿಯ ಬೇಕು ಎಂದು ತುಳಿಯ ಬೇಡಾ
ತುಳಿಯ ಬೇಕು ಎಂದು ಬೆಳಿಯ ಬೇಡಾ
ಬೆಳಿಯುವರನು ನೋಡಿ ಕೋರಗ ಬೇಡಾ
ಕೋರಗಿ ಮರುಗಿ ಸಮಯ ಕಳಿಯ ಬೇಡಾ

✍️ವಿ.ಶಿವಾನಂದ

- Shivanand V Anandadavar

09 Apr 2020, 06:29 pm

○○○| ಎದೆರಾಣಿ ಮಂಜಿ |●●●

ಗಲ್ಲೆನ್ನ ಗೆಜ್ಜಿಯ ಸೊಲ್ಲೆತ್ತ ಗುಬ್ಬಿಯ
ಬೀಲ್ಲಿನ ಕಣ್ಣಾಗ ಬಿಟ್ಟೆ ನಲ್ಲಿನ ಬಾಣ
ನಲ್ಲನಗೂಡಿಗೆ ಪ್ರೀತಿ ಕಲ್ಲೊಡದೆ ಯಾಕ ಮಂಜಿ
ಮ್ಯಾಲ ಹರಿದು ಬಂದಾಂಗ ಕಲ್ಲರೋಣ

ಮಾಯದ ಮಂಜಿ ಹಾಯಿ ಮಂಜಿ
ಮರಡಿ ಹಾದ್ಯಾಗ ಇಣಕ ಸಂಪೀಗಿ
ಬೆಳ್ಳಿನಗೆಯ ಮಂಜಿ ನವಿಲಗಣ್ಣ ಮಂಜಿ
ಬೇಡೆಂದರ ಬಿಡದ ಕಂಪಿಟ್ಟ ಕೇದಗಿ   

ಹಸಿರಂತ ಮಂಜಿ ಉಸಿರಂತ ಮಂಜಿ
ಮುಸಿನಕ್ಕ ಮುತ್ತಿನ ಹೊನ್ನ ರಂಜಿ
ಹಾಲಂತ ಮಂಜಿ ಬೇಲೂರ ಬಾಲೆ ಮಂಜಿ
ಹಳೆಜನ್ಮದಾಗಿನ ಎದೆರಾಣಿ ಸಂಜಿ

ಕಂಜಾದ ಮ್ಯಾಲ ಹುಟ್ಟಿದ ಮಂಜಿ
ಮುಂಜಾನ ಮುತ್ತಾಗಿ ಹೊಳೆದೀ
ಸಂಜ್ಯಾದ ಮ್ಯಾಲ ಜೊನ್ನರೆಯಾಗ ಘನಿಸ
ಬಂಗಾರ ಗುಡಿಸಲಾಗ ಬೆಳೆದೀ

ಬೆಳ್ಳಾನ ಬೆಳಿಗ್ಗೆ ಬೆಳ್ಗುದರೆ ಮ್ಯಾಲೇರಿ
ಕುಳಿತು ಬರುವ ರಾಣಿ ಮಂಜಿ
ತಳ್ಳಿ ಎದೆ ಮದಿಲ ಒಳನುಗ್ಗಿದೆ ತೂರಿ
ಬಳ್ಳಿ ಬೇರತೊಟ್ಟ  ಜಾಜಿಮಂಜಿ

ನೆರಳಂತ ಮಂಜಿ ಬಿಸಿಲಂತ ಮಂಜಿ
ಬೆರಳಿಗೆ ಬೆರಳಚ್ಚಿ ಮುಂಗುರುಳ ಮುತ್ತಿಕ್ಕಿ
ಕೆರಳ ಬಿಸಿಲಾಗ  ಕರಗಿ ಹಸಿರಾದ ಮಂಜಿ
ತರಳೆ ಮಂಜಿ ತುಂತುರ ಮಂಜಿ

ಪುಟ್ಟ ಹಸುಳೆ ಮಂಜಿ ಬೆಟ್ಟಹರಿಣಿ ಮಂಜಿ
ಕುಪ್ಪಳಿಸಿ ಕುಣಿದಾಕೆ ಕಪ್ಪ ಬೇಡಿದಾಕೆ
ಹಸಿರ ಸಿಂಗಾರ ಇಬ್ಬನಿ ಮುತ್ತಿನರಳ ಮಂಜಿ
ಮಳೆಬಿಲ್ಲ ಬಣ್ಣ ಮೈಗುಟ್ಟು ಕಾಡಿದಾಕೆ

ಮುತ್ತಿಟ್ಟ ಮಂಜಿ ತುತ್ತಿಟ್ಟ ಮಂಜಿ
ಹೆಂಚಿನ ಮನೆಯಾಗ ಬಿಚ್ಚಿದ ಬಾಳಸಂಚಿ
ಬಿತ್ತಿ ಬೆಳೆಯೊ ಮಂಜಿ ಹತ್ತಿ ಹೂಮಂಜಿ
ಕಂಚೀನ ತಟ್ಟ್ಯಾಗ ಕೂಡಿ ಉಣ್ಣಾಕೆ ಹಂಚಿ

ಮಂಜಿ ಮಂಜಿ ನನ್ನ ಕಣ್ಣಂಚ ಮಂಜಿ
ಸಂಜೀವಿನಿ ತಂದಾಕಿ ಮರುಜೀವ ಹೊಯ್ದಾಕಿ
ಸಂಜೀಗಿ ನೆನಪಿಟ್ಟ ಗುಲಗಂಜಿ ಮಂಜಿ
ಗಂಜೀಯ ಬದಕಿಗ ಮಂಜ ಸುರಿದಾಕಿ

ಕಲ್ಲೀನ ಮಂಜೀ ಮುಳ್ಳಿನ ಮಂಜಿ
ತಲ್ಲಣಿಸ ತುಟಿಮುತ್ತ ಮುಂಗುರುಳ ಚುಚ್ಚಿ
ಎಲ್ಲಿ ಹೋದೆ ಮಂಜಿ ಮಲ್ಲೆ ಹೂ ಮಂಜಿ
ಕಲ್ಲಾಗ ಕೆತ್ತಿಸಿ ಹೆಸರ ಇಬ್ಬನಿಯ ಹನಿಮುಚ್ಚಿ


ಕ್ಷಾತ್ರಸನಾ     ಇಕ್ಷ್ವಾಕು

- samna

09 Apr 2020, 02:32 pm

ಕನಸು ಕನಸು

ಒಂದು ದಿನ ಮುಂಜಾವಿನಲಿ
ಮಂಜಿನ ಹನಿಗಳ ನಡುವೆ
ಯಾರೋ ಒಬ್ಬ ಸುಂದರ ತರುಣ
ಹೂ ಗುಚ್ಚಗಳ ಹಿಡಿದು ಬರುತ್ತಿದ್ಧ ನನ್ನತ್ತ
ಇನ್ನೇನು ತನ್ನ ಹೃದಯ ಸಂದೇಶವನ್ನು ಬಿಚ್ಚಿ
ಹೇಳುತ್ತಾನೇನೂ ಎನ್ನುವ ಹೂತ್ತಿಗೆ
ಹರಿದಿತ್ತು ನನ್ನ ಚಿತ್ತ ಬೇರತ್ತ
ಒಮ್ಮೆಲೆ ಎಂತಹ ಸುಂದರ ಚಿತ್ರಣ ಅಂದರೆ ಅಷ್ಟರಲ್ಲಿ ನನ್ನ ಗಡಿಯಾರ ಕೊಗಿತ್ತು
ಆಗ ತಿಳಿಯಿತು ಕನಸು ಇದಾಗಿತ್ತು.....

- RoopaGowtham

09 Apr 2020, 01:14 pm