Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಶಿವ್ನೆ ಅಂತ ದೇವರ ಗುಡಿಗೆ
ಕೈ ಮುಕ್ಕೊಂಡು ಹೋದೆ..!
ಕಣ್ಮಚ್ಕೊಂಡು ಧ್ಯಾನಕ್ಕುಂತ್ರು
ದೇವ್ರ ಬದ್ಲು ಅವಳ್ನೇ ನೋಡ್ದೆ..!
ತಪ್ಪಾಯ್ತಂತ ದೇವ್ರ ಮುಂದೆ
ಹಚ್ಚಿದೆ ತುಪ್ಪದ ದೀಪ..!
ಬೆಳಗೋ ದೀಪದ ಒಳಗೂ
ಕಾಣ್ತು, ನನ್ನವಳದೇ ರೂಪ..!
- ಸಿದ್ದು ಕನ್ನಡಿಗ
- - ಸಿದ್ದು ಕನ್ನಡಿಗ
12 Apr 2020, 09:25 am
ನೂರಕ್ಕೆ ಕರಗುವ ಮನಸ್ಸಲ್ಲ
ಸಾವಿರಕ್ಕೆ ಸಾಧನೆ ಬಿಡುವುದಿಲ್ಲ
ಲಕ್ಷಕ್ಕೆ ಮಾರಿಕೊಳ್ಳುವುದಿಲ್ಲ
ಕೋಟಿಗೆ ಬಾಳಲು ಇಲ್ಲಿ ಸಾಧ್ಯವಿಲ್ಲ
✍️ವಿ.ಶಿವಾನಂದ
- Shivanand V Anandadavar
11 Apr 2020, 11:48 pm
ಮನಕೆ ಜೋತು ಬಿದ್ದ ಭಾವ ಬಂಧಗಳು
ಆಗಾಗ ಅತ್ತು, ನಕ್ಕು, ನಟಿಸಿ, ಮುನಿಸಿ,
ಕೋಪಿಸಿ,ಚೀರಾಡಿ, ಮೌನವಾಗಿ, ಮಾತಾಗಿ...
ಮನವ ನಗಿಸಿ, ಅಳಿಸಿ, ಕೆರಳಿಸಿ,
ಸಂತೈಸಿ, ಅಪ್ಪಿ, ಮೈದಡವಿ, ಮುದ್ದಾಡಿ
ತಮ್ಮ ಇರುವಿಕೆಯ ತೋರುತ್ತಲೆ ಇರುತ್ತವೆ.
- ಶ್ರೀಕಾವ್ಯ
11 Apr 2020, 11:30 pm
ಕಾಡುವುದು ನೆನಪು ಗೆಳೆಯ
ಮರೆಯಲ್ಹೇಗೆ ನಿನ್ನ ನನ್ನಿನಿಯ
ಅಮಲೇರಿಸುತಿವೆ ನಿನ್ನ ನೆನಪುಗಳು
ಸುತ್ತಿಬರುತಲಿವೆ ಒಡನಾಡಿದ ಕ್ಷಣಗಳು
ಮರೆತಷ್ಟು ನೆನಪಾಗುತಿವೆ ನಿನ್ನ ನುಡಿಗಳು
ಮನ ಬಯಸುತಿದೆ ನಿನ್ನ ಸಾನಿಧ್ಯ
ಆದರೆ ಅದೆಲ್ಲಿ ಸಾಧ್ಯ!
- Dima
11 Apr 2020, 11:24 pm
ಕಡು ಗತ್ತಲ ನೀರವತೆಗೆ
ಗಡಿಯಾರದ ಹಾಡು ||
ಒಂಟಿಯಾದ ಓಣಿ ಇದೆ
ನಿಶ್ಚಬ್ದವೆ ಮಾತಾಡು ||
ಇರುಳಿಗಿನ್ನು ಯೌವ್ವನ
ಬಾ ಹೊಸದಾಗಿ ಪ್ರೀತಿ ಮಾಡು ||
ನಾರಾಯಣ ಮೂರ್ತಿ L
- Narayana Murthy
11 Apr 2020, 07:28 pm
ಹುಣ್ಣಿಮೆ ಚಂದ್ರನ ಬೆಳದಿಂಗಳ ಹೊಳಪು ನಿನ್ನದು,
ಕಾಮೋ೯ಡದ ಬಾನಂಚಿನಲ್ಲೂ ಕಾಣಸಿಗುವ
ಮೊಗ ನಿನ್ನದು,
ಕಲ್ಮಶವಿಲ್ಲದ ತಿಳಿಯಾದ ಮನಸ್ಸು ನಿನ್ನದು,
ನೀರಿನ ಅಲೆಯಲ್ಲೂ ಅಳಿಸಿ ಹೋಗದ ಗುಣ ನಿನ್ನದು,
ನಿನ್ನ ವಣಿ೯ಸಲು ಪದಗಳು ಸಾಲುತ್ತಿಲ್ಲ,
ನಿನ್ನ ಪ್ರೀತಿಗೆ ಕೊನೆಯೇ ಇಲ್ಲ...!
- Megha
11 Apr 2020, 05:28 pm
ಸುಂದರ ನೆನಪಿನ ಸಂಜೆ
ಮಳೆ ಯೊಡನೆ ಬಂದ ನೀ
ತಂಪು ಗಾಳಿಯ ತಂದೆ ರಾತ್ರಿಯಲ್ಲ
ನೆನೆದು ನೀರಾಗುವೆನು ಕೆಲವೊಮ್ಮೆ
ಈ ದಿನ ನಿನ್ನಿಲ್ಲ
ಅದರೂ
ನೆನೆದು ನೀರಾಗುವೆನು ಕೆಲವೊಮ್ಮೆ
- suresh veera
11 Apr 2020, 04:09 pm
ಇರುವಾಗ ಅಳುವರು
ಇಲ್ಲದಾಗ ನಗುವರು
ಎದುರು ಬಂದಾಗ
ಹುಚ್ಚು ಹುಚ್ಚುಾಟದವರು
ಚಿತ್ರ ವಿಚಿತ್ರ ದವರು
ದುರಾಸೆಯ ಹಿಮಾಲಯದವರು
ಅಸೂಯೆ ಕಸದವರು
ಹುಚ್ಚು ಹುಚ್ಚುಾಟದವರು
ಇರುವಾಗ ಓಲ್ಲೆಯನುವರು
ಇರದಿದ್ದಗ ಬೇಕೆನುವರು
ಅಥ೯ವಾಗದವರು
ಹುಚ್ಚು ಹುಚ್ಚುಾಟದವರು
ಅಗಾಗ ಕಿರುಚಾಡುವರು
ನಡುವೆ ನಗಾಡುವರು
ಅನಿಯಮಿತ ಅವಾತಾರದವರು
ಹುಚ್ಚು ಹುಚ್ಚುಾಟದವರು
ತುಂಬಾನೇ ಕೊಪದವರು
ಅದರೂ ಕೈಲಾಗದವರು
ಒಳಗೆ ಇರುವೆ ಬಿಟ್ಟುಕೂಂಡವರು
ಹುಚ್ಚು ಹುಚ್ಚುಾಟದವರು
ಹಿಂದೆ ಹತ್ತಾರು ವರುಷ
ಮುಂದೆ ಹತ್ತಾರು ವರುಷ
ಜೀವನ ತಲ್ಲಾಡುವರು
ಹುಚ್ಚು ಹುಚ್ಚುಾಟದವರು
ಬೇಡ ಹಿತ ದವರು
ಬೇಡದವರ ಹಿತ ಕಾಣುವರು
ಅಸಭ್ಯ ವಾದ ಮಾಡುವರು
ಹುಚ್ಚು ಹುಚ್ಚುಾಟದವರು
- suresh veera
11 Apr 2020, 03:37 pm
ಕೇಳಯ್ಯ ಓ ಮನುಜ ಹೇಳುವೆ ಕಥೆಯನೊಂದನು
ನೊಂದು ಬೆಂದ ಹೃದಯದಾ ವ್ಯಥೆಯನೊಂದನು
ಅಳಿಯುತಿಹುದು ಜೀವರಾಶಿ ನಿನ್ನ ನಿತ್ಯ ಕರ್ಮದಿ
ಮೆರೆಯುತಿಹುದು ನಿನ್ನ ಮನವು ರಾಗ ದ್ವೇಷದಿ
ಇರುವುದೆಲ್ಲ ನನಗೇ ಎಂಬ ಹಾಳು ಸ್ವಾರ್ಥದಿ
ಮೆರೆಯುತಿರುವೆ ಜಗಕೆ ನಾನೇ ಒಡೆಯನೆಂಬ ಭಾವದಿ
ಬಂದಿರುವೆ ಧರೆಗೆ ನೀನು ಬುದ್ಧಿವಂತ ಮೆದುಳಲಿ
ಬದುಕು ನೀನು ಜಗದಲಿ ಮನದ ತುಂಬಾ ಖುಷಿಯಲಿ
ಪರ ಜೀವಿಯೂ ಉಳಿಯಲಿ ನರಳದಿರಲಿ ನೋವಲಿ
ಅಮರನಲ್ಲ ಇಲ್ಲಿ ನೀ ಕರುಗುವೆ ಕೊನೆಗೆ ಕಲ್ಲು ಮಣ್ಣಲಿ
ಕಿವುಡನಾದೆ ಅನ್ಯ ಜೀವದಾರ್ತನಾದ ಕೇಳಲು
ವೇದನೆಯಲಿ ನರಳುತಿಹವು ತಮ್ಮನೋವ ಹೇಳಲು
ಅಂಕೆಯಿರದ ಮಂಕನಾದೆ ಪರರ ಮನದ ನೋವ ತಿಳಿಯಲು
ಹೊರಟೆ ನೀ ಭ್ರಮೆಯ ಹಿಂದೆ ಸುಖವನೊಂದ ಅರಸಲು
ಕ್ಷಣಿಕ ಅಣುವೋ ನೀನು ಒಡೆಯನಲ್ಲ ಈ ಜಗಕೆ
ಇದನು ಮರೆತು ಮೆರೆದರೆ ಬೀಳುವುದು ಕುಣಿಕೆ
ನಿಯಮ ಮೀರಿ ಬದುಕಿದರೆ ಸೇರುವೆ ನೀ ಮಸಣಕೆ
ಅಳಿವ ಮೊದಲೇ ಮರಳು ನೀ ಉಳಿವ ಮಾರ್ಗಕೆ
- KN PATIL
11 Apr 2020, 02:30 pm
ನಿನಗಾಗಿ ನಾನು ಮಾಡಿದ್ದೇನು ಇಲ್ಲ
ನನಗಾಗಿ ನೀನು ಮಾಡದೆ ಬಿಟ್ಟಿದ್ದೇನು ಇಲ್ಲ
ಗಾಳಿಪಟದ ಜೀವನ ಕಣೆ ನನ್ನದೂ ನೀನಿಲ್ಲದೆ
ಗಿಡುಗನ ಕೈ ಸಿಕ್ಕ ಗಿಣಿ ಕಣೆ ನಾನು ನೀನಿಲ್ಲದೆ
ನಾನು ನಿನ್ನಲ್ಲೇ ಇರುವೆ ಕೊನೆವರೆಗೂ
ನುಸುಳದಿರಲಿ ನಮ್ಮಲ್ಲಿ ವಿಫಲ ಪ್ರೇಮದ ಬೀಜ
ಪ್ರತಿ ಸಾಲಿನ ಮೊದಲನೇ ಅಕ್ಷರ
ನಿನಗಾಗಿ ನಾನು
- Kannada ratna B. N. R
11 Apr 2020, 12:09 pm