Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸೆ

ಹಾಡೊಂದು ಹಾಡುವ ಆಸೆ
ದಯಮಾಡಿ ಕೇಳು ನೀ ಮನಸೆ
ಸಿಗುವುದು ಅಲ್ಲಲ್ಲಿ ಸೊಗಸೆ
ನಾ ಹೇಳುವುದು ಇಲ್ಲಿ ಕನಸೆ

✍️ವಿ.ಶಿವಾನಂದ

- Shivanand V Anandadavar

13 Apr 2020, 04:39 pm

ಕಣ್ನವಿಲು

ಮಳೆಬಿಲ್ಲ ಮಿಂಚನಿಕ್ಕಿ
ತೂಗತಿತ್ತ ರೆಪ್ಪೆಮುಗಿಲ ತೊಟ್ಟಿಲಲ್ಲಿ
ಕರಿಕಪ್ಪ ಮೋಡವಿಕ್ಕಿ
ಸುರಿದಿತ್ತ ಚಿಕ್ಕಿಗಳ ಹನಿ ಮಳೆಯಲ್ಲಿ

ಅಕ್ಷಿ ಕಮಲಾಗಿ ನಿಗಿನಿಗಿ
ಅಗ್ನಿಕುಂಡದ ದಳಗಳ ಕಾರತಿತ್ತ
ಮನಮಡಿ ಉಟ್ಟುಬಿಗಿ
ಎದೆಪ್ರೇಮಜ ಯಜ್ಞ ಕುಳಿತಿತ್ತ

ತ್ರೈಲೋಕ್ಯ ಚೆಲುವಿಕೆ
ಚಿತ್ರಪಟವೊಂದ ಭಾವಗಾಳಿಗೆ ತೇಲತಿತ್ತ
ನಿಗ್ರಹತಪ್ಪಿ ಇಂದ್ರಿಕೆಯೇ
ಕಣ್ಣುಕೋರೈಸ ಮಾಯೆಗೆ ಸೋತಿತ

ಕಣ್ಣಕಾವಲ ರೆಪ್ಪೆಭಟ
ಮೋಹಜಾಲವೂಡಿ ಕಣ್ಣಧೋಣಿಯಲೆ ನಿಂತು
ಮತ್ಸ್ಯಕನ್ನಿಕೆಯ ದಿಟ
ಬಂಧಿಸಿಹನ ಎಣೆದಿಕ್ಕಿ ಒಲವತಂತು

- samna

13 Apr 2020, 02:10 pm

ಸ್ವಾರ್ಥಿಗಳು ಎಲ್ಲರೂ

ಬದುಕಿದ್ದಾಗ ತಿರುಗಿ ನೋಡದ ಸಂಬಂಧಿಕರು
ಕಷ್ಟಕ್ಕೆ ಕೈ ಜೋಡಿಸದ ಸ್ನೇಹಿತರು
ನಮ್ಮ ಪರಿಸ್ಥಿತಿ ನೋಡಿ ಗೇಲಿ
ಮಾಡುವ ಹೊರಗಿನವರು
ಸತ್ತಾಗ ಮಾತ್ರ ನಾನಿದ್ದೆ ನನ್ನತ್ರ
ಹೇಳಿದ್ರೆ ಏನಾದ್ರು ಮಾಡಬಹುದಿತ್ತು ಎಂದು ಹೇಳಿ
ಬೀಗುವರು.
ಜೀವವಿದ್ದಾಗ ಸಿಗದ ಬೆಲೆ
ಸತ್ತಾಗ ಕರುಣೆ ಮೂಲಕ ತೋರುವರು.
ಬದುಕ್ಕಿದ್ದಾಗಲೆ ಬೆನ್ನೆಲುಬಾಗಿ
ನಿಂತಿದ್ದರೆ ಜೀವವಾದರು
ಉಳಿಯುತ್ತಿತ್ತು.
ಆ ಜೀವ ಮುಂದೆ ಅದೆಷ್ಟು ಜನರ
ನೆರವುಗಾಗುತ್ತೋ ಏನೋ?

✍️ಕನಸುಗಾರ

- varu

13 Apr 2020, 10:35 am

ಸಾರಥಿ ಸಾರಥಿ

ತಾರೆಗಳ ಸಮೂಹದಲ್ಲಿ ಮಿನುಗುತಾರೆ ನೀನು
ಹೂಗುಚ್ಚದಲ್ಲಿನ ಸಿಹಿ ಜೇನು ನೀನು
ಸೂರ್ಯ ಚಂದ್ರರ ಹೂಳೆಯುವ ಕಾಂತಿ ನಿನ್ನದು
ರೆಂಬೆ ಊರ್ವಶಿಯರ ಮೈ ಮಾಟ ನಿನ್ನದು

ಕತ್ತಲೆಯಲ್ಲು ಬೆಳಕು ತರುವ ಹೂಳಪು ನೀ
ವ್ಯಸನದಲು ಮುದ ನೀಡುವ ಪ್ರೀತಿ ನಿನ್ನದು
ಕಣ್ಣೀರು ಒರೆಸಿ ಸಾಂತ್ವನ ಹೇಳುವ ಮನಸ್ಸು ನಿನ್ನದು ಅದಕೆ ನಾ ನಿನ್ನ ಪ್ರೀತಿಸುವೆ ಎಂದಿಗೂ..

ಕೋಪದಲಿ ರಾವಣನೂ ಮೀರುವ ರಾಕ್ಷಸಿ
ಕರುಣೆಯಲಿ ರಾಮನ ಅನುಯಾಯಿ
ಪ್ರೀತಿಯಲ್ಲಿ ನಿನಗೆ ನೀನೆ ಸಾಟಿ ನಿನಗಿಲ್ಲ ಪೈ ಪೋಟಿ ನೀ ನನ್ನ ಸಾರಥಿ....

- RoopaGowtham

13 Apr 2020, 08:08 am

ಯಾವ ತೀರದಲ್ಲಿ...!!!

ಅಂತರಂಗದೊಳು ಇಣುಕಿ ಕಂಡೆ ನನ್ನದೇ ಪ್ರತಿಬಿಂಬ
ಒಳ ಹೊಕ್ಕು ನೋಡಲು ವಿವರಿಸಲಾಗದು ಅನುಭವ
ಕಂಡದ್ದು ನೋಡಿದ್ದೆಲ್ಲವೂ ನನ್ನದಾಗಲಿ ಎಂದೆ ನಾನು
ಅರಿಯದಾದೆ ಆ ನಾನು ಈ ದೇಹದೊಳು ಎಲ್ಲಿರುವನು

ಪ್ರೀತಿಯಿಂದ ಕರೆದರೆ ಮುಖ ಕಮಲ ಅರಳುವುದು
ದ್ವೇಷದಿಂದ ಕರೆದರೆ ಮುಖ ಕೆಂಪೇರಿ ಉರಿವುದು
ತನ್ನವರ ಬಿಗಿದಪ್ಪಿ, ಪರರ ಕಂಡೊಡನೆ ದೂರ ಸರಿದು
ಒಂದೇ ದೇಹದೊಳು ಹಲವು ಮುಖಭಾವ ಇಹುದು

ಮೂಳೆ, ಮಾಂಸ, ನರ, ರಕ್ತಗಳಿಂದ ತುಂಬಿದ ದೇಹ
ಅದೇಕೋ ಹೆಣ್ಣು,ಹೊನ್ನು,ಮಣ್ಣಿಗಾಗಿ ತೀರದ ದಾಹ
ಕ್ಷಣಿಕ ಈ ಬದುಕು ಹೊತ್ತು ಸಾಗುವ ಸಮಯ ಪ್ರವಾಹ
ಸುಳಿಗೆ ಸಿಕ್ಕಿ ಈಜಲು ಆಗದವನಿಗೂ ಏನೋ ಮೋಹ

ನಾನು,ನನ್ನದು,ನನ್ನವರೆಂಬ ಹುಚ್ಚು ಭ್ರಮೆ ಇಲ್ಲಿ
ಮೊದಲು ನೀನು ಯಾರೆಂಬ ನಿಜವನು ನೀ ತಿಳಿ
ಕ್ಷಣಿಕ ಸುಖಃಕ್ಕಾಗಿ ಕೊಡಬೇಡ ಬದುಕನ್ನು ಬಲಿ
ಬಲಿಯಾದರೆ ಜೀವ ಸೇರುವುದು ಯಾವ ತೀರದಲ್ಲಿ..?

- Tribhuvan

13 Apr 2020, 03:05 am

ನಕ್ಷತ್ರ, ಸಿಡಿಲು

ಮೋಡ ಸರಿದಾಗ ಕಂಡಿತು
ಮಿನುಗುವ ನಕ್ಷತ್ರ ...
ಮೋಡ ಸರಿದಾಗ ಕಂಡಿತು
ಮಿನುಗುವ ನಕ್ಷತ್ರ

ಮೋಡ ಮುಸುಕಿದಾಗ ಕಂಡಿತು
ಮಿಂಚಿದ ಸಿಡಿಲಿನ ಆಕ್ರೋಶದ ಹೊಡೆತ. ....

( ಚುಟುಕು ಸಾಹಿತ್ಯ )

- Vishal Hiremath

12 Apr 2020, 10:11 pm

ಕನಸಿನ ರಾಣಿ

ಮಲ್ಲಿಗೆ ಮುಖದ ರಾಜಕುಮಾರಿ...
ನಿನ್ನ ನಗೆಯು ಶೃಂಗಾರ ಸಿರಿ...
ಬೊಂಬೆ ಮಾತಿನ ಚೇಲುವೆ ನೀ,ಸಿಂಗಾರಿ...
ಕೇಳಿ ಮರೆತಿರುವೆ ನಾ ಮನೆಯ ದಾರಿ...

- BasavarajKannur

12 Apr 2020, 06:13 pm

ಅನಂತ ನಮನ ಜ್ಯೆ ಭೀಮ

ನಿನ್ನ ಜೀವನ
ನಮಗೆ ಸ್ಪೂರ್ತಿ ಯು
ನಿನ್ನ ಮಾತುಗಳೇ ದಾರಿ ದೀಪವು.,
ಸ್ವಾಭಿಮಾನದಿ ಬದುಕ ಕಲಿಸಿದ
ಭೀಮ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ....
ವಿದ್ಯೆ ಕಲಿಯಲು ಹೋದ ನಿನ್ನ
ಒದ್ದು ಮೂಲೆಯಲಿ ಕುಳಿಸಿದರು
ಬಾಯಾರಿಕೆಗೆ ನೀರು ಕುಡಿಯಲು
ಹೋದ ನಿನ್ನ ತಳ್ಳಿ ದರು
ಬಿಡದೇ ನಿನ್ನ ಸ್ವಾಭಿಮಾನವ
ತೋರಿಕೊಟ್ಟೆ ದಾರಿ ದೀಪವ
ದಿಟ್ಟ ಹೆಜ್ಜೆ ಯನಿಟ್ಟು
ಆನೆಯಂತೆ‌ ನುಗ್ಗಿ ನೀ
ನಮ್ಮ ಹಾದಿಯ ಮಾಡಿದೆ ಸುಗಮ
ಸ್ವಾಭಿಮಾನದೀ ಬದುಕ ಕಲಿಸಿದ
ಭೀಮ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ
ಅಸಮಾನತೆ ಯೆಂಬ ಹೀನ ಧಗೆಯಲಿ
ನೊಂದು ಬೆಂದವರಿಗೆ ಆಸರೆಯಾಗಿ
ಭರತ ಖಂಡದ ಎಲ್ಲಾ ಹೆಣ್ಣು ಮಕ್ಕಳಿಗೆ
ಗೌರವಾನ್ವಿತ ಬದುಕ ತೋರಿದೆ
ಸಂವಿಧಾನದೀ ಅದನು‌ ಹೇಳಿದೆ.
ನೀ ಬಂಧು...! ದೀನ ದಲಿತರಿಗೆ
ನೀ ಅಣ್ಣ...! ಭರತ ಮಾತೆಯ ಹಂಗಳೆಯರಿಗೆ
ನೀ ಸ್ಫೂರ್ತಿ...! ದೇಶ ಕಟ್ಟುವ‌ ಛಲವಂತರಿಗೆ.
ನೀ ಬೆಳಕು..! ಎಲ್ಲಾ ನೊಂದ ದಲಿತ ಕುಲಕೆ.
ನಮ್ಮ ಬಾಳಿಗೊಂದು ಅರ್ಥ ಕೊಟ್ಟೆ
ನಾವೂ ಮನುಜರೆಂದು ತಿಳಿಸಿಕೊಟ್ಟೆ..
ಅನಂತ ನಮನ ನಿನಗೆ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ
ದೇಶವೆಂದರೇ ಅಖಂಡ ಭಾರತ
ಪ್ರಜೆಗಳೆಂದರೇ ಪ್ರಭುಗಳು
ನಮ್ಮನ್ನಾಳುವವರ ನಾವೇ ಆರಿಸಲು
ದಾರಿ ತೋರಿಸಿದ ದಿವ್ಯ ಚೇತನ
ಆಧುನಿಕ ಭಾರತದ ಓ ಪಿತಾಮಹಾ.....!
ಸಂವಿಧಾನದಿ ಎಲ್ಲವ ಕೊಟ್ಟೆ
ಸಮಾನತೆಯ ಮಂತ್ರವ ಸಾರಿದೆ
ಭೀಮ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ
ನಿನಗೆ ನಮ್ಮ ಅನಂತ ನಮನ

- Shrinivas

12 Apr 2020, 01:26 pm

ದೀಪ

ಹುಡುಗಿ ನೀ ಸಣ್ಣಾಕಿ
ಸ್ವಲ್ಪ ಇತ್ತ ತಿಳಿವಳಿಕಿ
ಕಿಡಿಕ್ಯಾಗ ನಿಂತ ಸೊನ್ನಿ ಮಾಡಿ
ಕನ್ನಡ ಶಾಲೆಗೆ ಹೋಗಾಕಿ
ಹೋಗುವಾಗ ಸೋಗನೋಡಿ
ನವಿಲಿಗಿ ಬಂದಂಗ ನಾಚಿಕಿ. ......

- Vishal Hiremath

12 Apr 2020, 01:01 pm

ಮೌನಿ...

ಭಾವನೆಗಳೊಂದಿಗೆ ಬೆರೆತ
ಆ ಮಾತುಗಳು ಇಂದು ಬರೀ
ಹಾಳೆಯ ಮಾತಾಗಿರುವಾಗ
ಸಂಬಂದಕ್ಕೆಲ್ಲಿ ಬೆಲೆ.....
✍️.ರಾಮ್...

- ರಾಮ್

12 Apr 2020, 10:29 am