Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾ ಆಡುತಿರಲು
ಹಕ್ಕಿ ಪಕ್ಷಿಗಳು
ಮೌನವಾಗಿ ಕುಳಿತಿವೆ
ನೀ ಕೇಳು ನಲ್ಲೆ
ಮನದ ನೋವು
ಹಾಗೆ ಮಲಗಿ
ನಿನ್ನ ರೂಪ ಕಾಡಿದೆ
ಬಾರೆ ನನ್ನ ಹೃದಯ ಕಾಂತೆ
ನಾಕೆ ದಿನದ
ನಿನ್ನ ಪ್ರೀತಿ
ನನಗೆ ನೀತಿ ಹೇಳಿ
ನನಗೆ ಏನೂ ನೀಡಿದೆ
ಸುಂದರ ಹೂವಿಗೆ
ನರಕ ಏಕೆ ಬಾಲೆ
ಬಾ ಬಾರೆ ನನ್ನ ಬಾಲೆ
ನೀ ಸೇರುಬಾ ನಲ್ಲೆ
- LachamannaM
14 Apr 2020, 01:24 pm
ಹೂವು ಮುಳ್ಳುಗಳ ದಾರಿಯೇ
ಪ್ರೀತಿ ಮಾಡಲು ಆಸೆಯೇ
ಸ್ನೇಹದಲ್ಲಿ ನಿರಾಸೆಯೇ
ಹೋದೆಯ ನೀ ಬಾರದೆಯೇ
✍️ವಿ.ಶಿವಾನಂದ
- Shivanand V Anandadavar
14 Apr 2020, 01:21 pm
ಏನೆಂದು ಹೇಳಲಿ ಇಲ್ಲಿ
ನಿನ್ನ ನೋಟ ಕಂಡಲ್ಲಿ
ಮರೆತುಹೋಯಿತು ಮಾತಲ್ಲಿ
ನೀ ಸೆರೆ ಅನಿಸಿದೆ ನನಗಿಲ್ಲಿ
- Shivanand V Anandadavar
14 Apr 2020, 01:19 pm
ನಾನು ಎನ್ನುವುದು, ನನ್ನದೇ ಅಥವಾ
ನೀನು ಎನ್ನುವುದು, ನನ್ನದೇ?
ನಾನು - ನೀನು ಅನುವ ಮದ್ಯೆ
ನಮ್ಮ ಜೀವನದ ಸಮಯ ಸವಿದಿದೆ.
#Rameshjackson
- #Rameshjackson
14 Apr 2020, 01:06 pm
ನನ್ನ ಕನಸು ನನ್ನ ಆಸೆ
ನನ್ನ ಪ್ರೀತಿಯ ತಂಗಿ ನನ್ನ ಅಸೇನಿನು
ನಿನಿದಲೆ ನನ್ನ ಕನಸು ನನಸು
ನಿನಿದಲೇ ಈ ಜೀವನ
ಈ ಜೀವನವೇ ನಿನಗೆ
- Praveen Kirsur
14 Apr 2020, 11:28 am
ಮರಳಿ ಬಾರೆಯ
ದೇವ ಮಾನವ
ದೇಶ ಎತ್ತಲೋ ಸಾಗುತಿಹುದು
ಮರಳಿ ಕತ್ತಲಾಗುತಿಹುದು
ಬಡವ ಬಡವನಾಗೆ ಇರುವನು
ಲಕ್ಷ್ಮಿ ಸಿರಿವಂತನಿಗೆ ಒಲಿದಿಹಳು
ಕಿತ್ತು ತಿನ್ನುವ ಬಡತನದಲ್ಲಿ
ಬಡವನಿಗೆಲ್ಲಿ ಸರಸ್ವತಿ ಸಿಗುವಳು
ಯಾರಿಗಾಗಿ ನೀ ಹೋರಾಡಿದೆಯೋ
ಅವರು ಅಲ್ಲೇ ಇದ್ದಾರೆ
ದೇಶಕ್ಕಾಗಿ ನೀ ಬರೆದಿದ್ದನ್ನ
ತಿದ್ದಲು ಸಂಚು ರೂಪಿಸಿದ್ದಾರೆ
ಮರಳಿ ಬಂದುಬಿಡು ದೇವಾ
ರಕ್ಷಿಸಲು ಕೋಟಿ ಬಡಜನರ ಜೀವಾ
ಸತೀಶ್ ಕಳುವರಹಳ್ಳಿ(ಜೈ ಭೀಮ್ )
- ಸತೀಶ್ ಕುಮಾರ್ ಕಳುವರಹಳ್ಳಿ
13 Apr 2020, 11:21 pm
ನನ್ನ ಪ್ರೀತಿಯ ನಾಯಿ ರಾಮು
ನನಗೆ ಜೀವನ ಹೇಳಿದ ರಾಮು
ಪ್ರೀತಿ ಹೇಳಿಕೊಟ್ಟ ರಾಮು
ತಾನು ವುರಿದು ಬೇರೆಯವರಿಗೆ ಕುಶಿ ಕೊಡುವ ಪ್ರಣಿ ನನ್ನ ರಾಮು
- Praveen Kirsur
13 Apr 2020, 09:35 pm
ಮನೆಯ ಮಹಡಿಯ ಮೇಲೆ ನಿಂತು
ಹೇಳಿದಳು ಗೆಳತಿ ಪೋನಿನಲ್ಲಿ
ಕರೋನ ಬಂದಿದೆ ಗೆಳೆಯ
ರಸ್ತೆಯ ಮೇಲೆ ಅಲೆಯಬೇಡವೆಂದು
ರಸ್ತೆಯ ಮಧ್ಯ ನಿಂತು
ಹೇಳಿದನು ಗೆಳಯ
ಅಲೆದಾಡಿ ಬರುವೆನು
ನಿನ್ನ ಬಳಿ ಅಲ್ಲೇ ಇರು ಎಂದು
ಓಡೋಡಿ ಬಾಗಿಲ ಹಾಕಿ
ಹೇಳಿದಳು ಗೆಳತಿ
ಕರೋನ ಹೋಗುವರೆಗು
ಮನೆಗೆ ಬರಬೇಡವೆಂದು
ಗೆಳೆಯ ಕೇಳಿದನು ಕೋಪದಲ್ಲಿ
ನಮ್ಮಿಬ್ಬರ ಪ್ರೀತಿ ಇಷ್ಟೇನಾ ಎಂದು
ಅರ್ಥ ಮಾಡಿಕೋ ಕೋತಿ
ಕರೋನಕ್ಕೆ ಪ್ರೀತಿ ಗೊತ್ತಿಲ್ಲ ಎಂದು.
- lakshman
13 Apr 2020, 08:17 pm
ಕೊರೋನಾ ಕವಿತೆ
ಕಿರೀಟ ಧರಿಸಿ
ರಾಜರ ಹಾಗೆ - ಬಂದಿದ್ದಿ
ಗಡಿ ದಾಟಿ, ಸಮುದ್ರ ಉಲ್ಲಂಘಿಸಿ
ಸದ್ದಿಲ್ಲದೇ ನುಗ್ಗಿದ್ದಿ
ರಾಜರುಗಳ ಹಾಗೆ ಪಾಲಿಸುವುದನ್ನು ಮರೆತು,
ದೇಶ ಧರ್ಮ ಜಾತಿ ನೀತಿ ಸಿರಿತನ ಬಡತನಗಳ ಲೆಕ್ಕಿಸದೆ.
ಪೀಡಿಸುವುದೇ ನಿನ್ನ ಧರ್ಮ
ಅಂತ ನಿರ್ದಾಕ್ಷಿಣ್ಯವಾಗಿ ಸಾರಿದ್ದಿ.
ಈಗ ಎಲ್ಲೆಲ್ಲೂ ಇದೊಂದೇ ಸುದ್ದಿ-
ಹತ್ತೊಂಭತ್ತರ "ಕೋವಿದ"
ಇಪ್ಪತ್ತಕ್ಕೂ ಕೈಕಾಲು ಚಾಚಿದ್ದಿ
ಬಾಚಿದ್ದಿ ಜೀವಗಳ ರಾಶಿ ರಾಶಿ.
ನುಗ್ಗಿ ಬರುವಾಗ ಪೌರತ್ವದ ಹಂಗಿಲ್ಲ
ನಿನಗೆ - ಪ್ರತಿಭಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ
ಊರಿಂದೂರಿಗೆ ಹೋಗುವಂತಿಲ್ಲ ಬೇರಾರೂ
ದೂರ ದೂರ ಸರಿಸಿಬಿಟ್ಟಿದ್ದಿ .
ಸ್ವಕೀಯ- ಪರಕೀಯದ ಭೇದವಿಲ್ಲದೇ
ಸಲೀಸಾಗಿ ಜನರನ್ನು - ತಬ್ಬುವ ಬದಲಾಗಿ ದಬ್ಬುವುದೇ
ಕ್ಷೇಮ ಮೂಗು ಮುಚ್ಚಿಕೊಂಡು - ಅಂತ ಸಾರಿದ್ದಿ.
ಅಹಂಕಾರದ ಅಡಿಪಾಯಕ್ಕೆ ಅಪಾಯದ
ಬಿಸಿ ಮುಟ್ಟಿಸಿದ್ದಿ
ಯುವಾನ್ ಯೂರೋ ಡಾಲರ್ ಮತ್ತೆಲ್ಲಾ
ದುಡ್ಡುಗಳ ಠೇಂಕಾರದ ಘರ್ಜನೆಗಳೆಲ್ಲಾ
ಅದೆಷ್ಟು ಟೊಳ್ಳಂದು ತೋರಿದ್ದಿ- ಮುಲಾಜಿಲ್ಲದೇ.
ದಿನ ಕಳೆದಂತೆ ಖಂಡದಿಂದ ಖಂಡಕ್ಕೆ ಜಿಗಿಯುತ್ತಾ
ಬಲಶಾಲಿಗಳ ಬತ್ತಳಿಕೆಯ ಖಂಡಾಂತರ ಕ್ಷಿಪಣಿ
ಭಂಡಾರಗಳು ನಾಚಿ ನೀರಾಗುವಂತೆ ಮಾಡಿದ್ದಿ.
ಪ್ರಣಾಳದಲ್ಲಿಯೇ ಜೀನು, ಡಿ.ನ್.ಎ ಗಳ ಬೆರೆಸಿ
‘ಜೀವ' ನಿರ್ಮಿಸಿ ಸೃಷ್ಟಿಕರ್ತನಿಗೆ ಸರಿಸಾಟಿಯೆಂಬಂತೆ
ಬೀಗಿದವರು ಇಂದು ತಮ್ಮ ಕೈಗಂಟಿದೆಯೋ ಸಾವಿನ
ಬೀಜ ಎಂಬಂತೆ ಉಜ್ಜಿ ಉಜ್ಜಿ ಕೈ ತೊಳೆದುಕೊಳ್ಳುತ್ತಾ
ಅವರದ್ದೇ ಒಂದು ಕೈ ಇನ್ನೊಂದಕ್ಕೆ ತಗುಲಿದರೆ ಎಲ್ಲಿ
ರೋಗ ಬಂದೀತೆಂದು ಅಂಜಿ ಅಂಜಿ ನೀರಾಗುವಂತೆ ಮಾಡಿದ್ದಿ.
ದಿನ ರಾತ್ರಿ ಎನ್ನದೆ ಚೆಲ್ಲಾಪಿಲ್ಲಿಯಾಗಿರುತ್ತಿದ್ದ ಮನೆ
ಮಂದಿ ಆಹಾ ಅದೆಷ್ಟು 'ಸುಭಗ'ರಾಗಿಬಿಟ್ಟಿದ್ದಾರೆ.
ಅಪ್ಪ ಅಮ್ಮ ಅಜ್ಜ ಅಜ್ಜಿ ಅಣ್ಣ ತಂಗಿ ಎಲ್ಲಾ
ಏಕಕಾಲದಲ್ಲಿ ಒಂದೇ ಸೂರಿನಡಿ -
ಅದೆಷ್ಟು ಮಜಾ -'ಕೂಡಿ ಉಣ್ಣುವ
- ಕೂಡಿ ಆಡುವ' ಹಳೆಗಾಲದ
ಮೌಲ್ಯಗಳಿಗೆ ಮರುಜೀವ !
ಆಹಾ ಮಧುರ ಕ್ಷಣಗಳು ಸುಮಧುರ ನೆನಪುಗಳು !
ಅಟ್ಟ ಸೇರಿದ್ದ ಅಲ್ಲಾವುದ್ದಿನನ ದೀಪ
ಹಣತೆಗಳಿಗೆಲ್ಲ ಗಂಟೆ ಜಾಗಟೆಗಳ
ಸಂಭ್ರಮದ ಹಿಮ್ಮೇಳ
ಅಜ್ಜಿಕಾಲದ ಗಂಟುಮೂಟೆಯ ಹಳೆಯ
ನಾರು ಬೇರುಗಳಿಗೆಲ್ಲಾ ಕಷಾಯವಾಗುವ ಪುಣ್ಯಕಾಲ.
ಕಲಿತು ಮರೆತಿದ್ದ ಸ್ತೋತ್ರ ಮಂತ್ರಗಳು ನೂರಾರು
ವಾಟ್ಸಾಪಿನ ಬೋಧನೆ ಸಂಶೋಧನೆಗಳು-
ಓ ಅದೆಷ್ಟು ಉಪಯುಕ್ತ- ಬಲವಂತ
“ಹೊರಬೀಗದ" ಪರ್ವಕಾಲದಲ್ಲಿ ಕಾಲಕ್ಷೇಪದ
ಅನನ್ಯ ಸಾಧನ ನಿಕ್ಷೇಪ.
ಎಲ್ಲವನ್ನೂ ಎಲ್ಲರನ್ನೂ ನೆಟ್ಟಗಾಗಿಸಿ ಬಿಟ್ಟಿದ್ದೇನೆ
ಅಂತ ಅಹಂ ಇರಬಹುದು ನಿನಗೆ- ಹೇಳುತ್ತಿದ್ದೇನೆ
ಬುದ್ಧಿ ಕಲಿಸಿದೆ ಇವರಿಗೆ ಅಂತ ಬೀಗುತ್ತಾ
ಇಂದಲ್ಲ ನಾಳೆ ನೀನು ಹೊರಟು ಹೋಗುತ್ತಿ
ಕಾಲ ನಿಲ್ಲುವುದಿಲ್ಲ. ಉಳಿದ ನಾವೆಲ್ಲ ನಿನಗೆ
ಬಲಿಯಾದವರಿಗೆ ಸುಂದರ ಸ್ಮಾರಕ ನಿರ್ಮಿಸಿ
ಅಮೃತಶಿಲೆಗಳ ಮೇಲೆ ಶೋಕಶಾಸನ ಬರೆಸಿ
ಅಶ್ರುಭರಿತ ಭಾಷಣಗಳ ದಿನಾಚರಣೆ ಮಾಡುತ್ತೇವೆ.
ಮತ್ತು
ಮೊದಲಿನಂತೆ ಆಗಿಬಿಡುತ್ತೇವೆ- ಬೀಗಮುಕ್ತ.
ನಲಿಯುತ್ತೇವೆ ನಲಿಕಾಮುಕ್ತ
ಶುನಕ ಪುಚ್ಛದ ಹಾಗೆ ಎಗ್ಗಿಲ್ಲದೇ ಮತ್ತೆ.
ರಮೇಶ್ ಚಿಪಳೂಣಕರ್
- ramesh
13 Apr 2020, 07:42 pm
ಅರ್ಥವಿಲ್ಲಾ ಬದುಕಿಗೆ
ಸ್ವಾರ್ಥವಿಲ್ಲಾ ಮನಸ್ಸಿಗೆ
ಕತ್ತಲು ಬೇಕು ಕನಸಿಗೆ
ಯೋಚನೆ ಬೇಕು ಕವಿಗೆ
✍️ವಿ.ಶಿವಾನಂದ
- Shivanand V Anandadavar
13 Apr 2020, 04:44 pm