Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಮ್ಮ ಕೈಯಲ್ಲಿ ಇಲ್ಲಾ

ಬಿಜಿ ಎಲ್ಲಾರೂ ಬಿಜಿ ಸೂರ್ಯ ಹುಟ್ಟುಕ್ಕೆ ಸೂರ್ಯ ಮುಳುಗೊಕ್ಕೆ ಮದ್ಯೆ ಇರೋದು 12 ಗಂಟೆ ಮಾತ್ರಾ ಅಬ್ಬಬ್ಬಾ ಅಂದ್ರೆ ಏನು ಆಗಬಹುದು ಆಗಿದೆ ಇರೋದು ಅನಕೊಳ್ಳೊದು ಅದುಕೋಡಿದು ಆಗಿದೆ ಇರೋದು ಎಲ್ಲಾ ನಮ್ಮ ಕೈಯಲ್ಲಿ ಇಲ್ಲಾ

✍ವಿ.ಶಿವಾನಂದ

- Shivanand V Anandadavar

15 Apr 2020, 08:14 pm

ಸಾಧಿಸುವೆ

ಸಾಧಿಸುವೆ ಸಾಯುವ ಮುನ್ನ
ದಿಟ್ಟತನದ ಛಲದಿಂದ
ನಾ ಕಾಣುವೆನೂ ಇಲ್ಲವೋ?
ತೋರಿಸುವೆ ನನ್ನ ಬಲವನ್ನ

ಕಾಯುತ್ತಿರುವೆ ನನ್ನ ಸಮಯ
ಬಂದೆ ಬರುವುದು ಅ ಸುದಿನ
ಬಿಡುವುದಿಲ್ಲ ನನ್ನ ಸಾಧನೆ
ತೋರಿಸುವೆ ನನ್ನ ಗೆಲುವನ್ನ

ಇರಲಿ ನಿನ್ನ ದೋರಣೆ ನಿನಗೆ
ಬರಲಿ ನನಗೂ ಸೈರಣೆ ನನಗೆ
ನೆನಪಿರಲಿ ಸದಾ ಕಾಲ ನಮಗೆ
ಗೆಲುವಿನ ಪರಿತಪಿಕಾಗಿ.

- suresh veera

15 Apr 2020, 04:38 pm

ನಾಟಕದ ಬದುಕು

ಹೇ ಮನವೆ ನೀ ಏಕೆ
ಅಳುತಿರುವೆ ಒಂಟಿಯಾಗಿ
ನಿನ್ನ ಒಂದು ಮುಗ್ದ ನಗುವ
ನೋಡಲು ಕಾದು ಕುಳಿತಿಹವು
ಅದೆಷ್ಟೋ ಕಣ್ಗಳು.
ಇನ್ನೊಬ್ಬರ ಖುಷಿಗಾಗಿ ನೀ
ನಗು
ನಿನ್ನೆಲ್ಲಾ ನೋವ ಮರೆತು.
ನಟನೆಯ ಜೀವನಕ್ಕೆ ಹೆಚ್ಚು ಬೆಲೆ
ವಾಸ್ತವ ಜೀವನದಲ್ಲಿ.
ನಿನ್ನ ಅಂತರಾಳದ ನೋವು ಕಷ್ಟಗಳಿಗೆ
ಇಲ್ಲಿ ಸಿಗುವುದಿಲ್ಲಾ ಬೆಲೆ.
ಎಷ್ಟೆಂದು ಕಳೆದುಕೊಳ್ಳುವೆ
ನಿನ್ನ ಕಣ್ಣೀರ ಹನಿಗಳನ್ನ.
ಹೇ ಮನವೆ ನೀ ನಕ್ಕುಬಿಡು
ಮತ್ಯಾರು ನಿನ್ನ ನಗು ಎಂದು
ಹೇಳದಂತೆ.
ನಿನ್ನ ನಗುವಿನಿಂದ ಅದೆಷ್ಟೋ
ನಿನ್ನ ನೋವುಗಳು ಕಣ್ಮರೆಯಾಗಿರಲಿ
ಯಾರಿಗೂ ತಿಳಿಯದಂತೆ

- varu

15 Apr 2020, 02:05 pm

ಸಾಧಿಸಿ ತೋರಿಸು

ಅರ್ಥವಾಗದ ಜೀವನ ನಮ್ಮದಲ್ಲ
ಬಯಸಿದ್ದೆಲ್ಲ ಇಲ್ಲಿ ಸಿಗುವುದಿಲ್ಲ
ಬಿಡಬೇಡ ನಿನ್ನ ಚಲ
ಸಾಧಿಸಿ ತೋರಿಸು ಬಾ ಒಂದು ಸಲ

✍️ವಿ.ಶಿವಾನಂದ

- Shivanand V Anandadavar

15 Apr 2020, 11:40 am

ಕವಿ ನಾನಲ್ಲ

ಕವಿ ನಾನಲ್ಲ ಎಂದೇ
ಕವನ ನಾವೊಂದು ಬರೆದೆ
ಬರೆಯುವ ಸಾಲಿನಲ್ಲಿ ನೀನೇ ಇದ್ದೆ
ಕಾಣದೇ ಹೀಗೇಕೆ ಮರೆಯಾದೆ

✍️ವಿ.ಶಿವಾನಂದ

- Shivanand V Anandadavar

15 Apr 2020, 11:39 am

ಅವಳು

ಅ ಅವಳೊಳಗಿನ ನನ್ನವಳು
ಆ ಅಂತರ್ಯವ ಕಂಡವಳು
ಇ ಇದ್ದರೂ ಇರದವಳು
ಈ ಈದಿನದ ಮುತ್ತಿವಳು
ಉ ಉದ್ಭವಿಸಿದ ಸುಂದರಿ
ಊ ಊರ್ವಶಿಯ ಸೋದರಿ
ಋ ಋಷಿಯಾದೆ ಅವಳ ನೋಟಕೆ
ಎ ಎದೆಯಾಳದ ಮೇನಕೆ
ಏ ಏದುಸಿರಿನ ಕನ್ನಿಕೆ
ಐ ಐಸಿರಿಯ ನನ್ನಾಕೆ
ಒ ಒಂದಾದ ಚಂದಕೆ
ಓ ಓ ಎನ್ನುವ ನಾಚಿಕೆ
ಔ ಔತಣವಿದೆ ನನ್ನ ಹೃದಯದಲ್ಲಿ
ಅಂ ಅಂಬರದಾಚಿನ ಊರಿನವಳೇ
ನಿನಗಿದೋ ಕರೆಯೋಲೆ

✒️ಸತೀಶ್ ಕಳುವರಹಳ್ಳಿ

- ಸತೀಶ್ ಕುಮಾರ್ ಕಳುವರಹಳ್ಳಿ

15 Apr 2020, 09:53 am

ಅಳಿಯಲಿ ಅಸಮಾನತೆ

ಜಾತಿ ಜಾತಿಗೆ ಒಂದೊಂದು ಬೀದಿ ಊರಿನಲಿ
ಗುಡಿ, ಮಠ, ಶ್ಮಶಾನಗಳು ಜಾತಿಗಳ ಹೆಸರಲಿ
ಮಡಿವಂತಿಕೆಯ ನೆಪದಲ್ಲಿ ಕಟ್ಟಿಹರು ಬೇಲಿ
ಕುರುಡು ನಂಬಿಕೆ ಸಾಕು ಶೋಷಣೆ ಅಂತ್ಯವಾಗಲಿ

ಮನುಷ್ಯ ಮನುಷ್ಯನ ನಡುವೆ ಏಕೆ ಅಂತರ
ಸಾಕು ಈ ಜಾತಿ, ಮತ, ಧರ್ಮಗಳ  ಅಬ್ಬರ
ಅಳಿದು ಹೋಗಲಿ ಅಸಮಾನತೆಯ ಕಂಧರ
ಕತ್ತಲೆ ಸರಿದು ಬೆಳಗಲಿ ಜಗವು ನಿತ್ಯ ನಿರಂತರ

ಮನಸ್ಸು ಮನಸ್ಸುಗಳಲ್ಲಿ ಭಾವೈಕ್ಯತೆ ಮೂಡಲಿ
ಮೇಲು, ಕೀಳೆಂಬ ಭೇದ ಭಾವವು ಅಳಿಯಲಿ
ಎಲ್ಲರೂ ಒಂದಾಗಿ ಮಾನವೀಯತೆ ಉಳಿಯಲಿ
ನಾವೆಲ್ಲರೂ ಒಂದೇ ಈ ಸೃಷ್ಟಿಯ ನಿಯಮದಲಿ

ಮಾತು ಮಾತಲ್ಲಿ ಜಾತಿ ವಿಷಕಾರುವವರು
ಸಮಾಜ ಒಡೆದು ಅಸ್ತಿತ್ವ ಉಳಿಸಿಕೊಳ್ಳುವರು
ಬೇಡ ಜಾತಿಗೊಂದು ಪಕ್ಷ, ಜಾತಿಗೊಬ್ಬನಾಯಕರು
ಒಂದೇ ಕುಲ, ಒಂದೇ ನೆಲ ಎಲ್ಲರೂ ಸಮಾನರು

- Tribhuvan

15 Apr 2020, 02:10 am

ಪ್ರಬುದ್ಧ ರಾಮ

ಶತಮಾನದ ಕಾಳಕತ್ತಲೆಯ ಹೆಣ ಉರುಳಿ
ಬೆಳಕದು ಬೆತ್ತಲಾದರು ನಿಲ್ಲತಿಲ್ಲ ನನ್ನ ಜನರ ಭ್ರಮೆ
ಹುಟ್ಟಿಲ್ಲದಾಗಿದೆ ನೆಡೆದ ಹಾದಿ ಸುತ್ತಿಸುರುಳಿ
ಮೈತೊಳೆದು ನಿಂತಿದ್ದಾನೆ ಈಗ ಸ್ವಚ್ಛಂದ ಬುದ್ಧ

ಕಡಲಾಚೆ ನೆಲ ಸುತ್ತಿ ಎದೆನೆತ್ತರ ಒಳಿತೆತ್ತಿ
ವಿಧಿಗಳೆಂಬ ಹೋರಿಯ ಕಟ್ಟಿ ಕಟ್ಟಳೆನೇಗಿಲ ಹರಿಸಿ
ಕೊರೆದೆ ತಮದ ಗರ್ಭ ಜ್ಞಾನಬುಗ್ಗೆ ಎತ್ತಿ
ಕರಡು ಸಂವಿಧಾನದಿ ಒಳದ್ವನಿಯಾಗಿಟ್ಟೆ ಮೊರೆಸಿ

ಶಿಲ್ಪಿ ನೀನಾದೆ ಕಲ್ಪಕಲ್ಪಗಳನೆ ಕಟೆದ ಅಪರಂಜಿ
ಬುದ್ಧಬಸವಪುಲೆ ಅಟೆಲ್ ಜೀ ಈಗ ಅಚ್ಚಿಗಿಟ್ಟ ಅಕ್ಷರ
ಸಮತೆ ಸ್ವತಂತ್ರ ಸೋದರತೆ ನೆಲದ ಕಾರಂಜಿ
ಇದೊ ನವ ಇನೋದಯ ಮೂಡಣದಿ ಗೋಚರ

ತೊಯ್ಯತಿಲ್ಲ ಕಿರಣ ಭರತ ಭುವಿತೇರ
ಕೇಳತಿಲ್ಲ ಸಮತೆಕೂಗು  ನಿಂತಿಲ್ಲ ಹಣದ ಸೋಗು
ಒಳಜಾಲದ ಸುಳಿಗತ್ತಲಲಿ ಗೋಳಿಡಿತ ಪೂರ
ಹತ್ತಿದೆ ನ್ಯಾಯದ ಬೇಲಿಗೆ ಗಾಢನಿದಿರೆ ತೂಗು

ಈಗಲು ಕಾಯುತ್ತಿದ್ದೇನೆ ಮೀರದೆ ನಿನ್ನದಾರಿ
ಪ್ರಬುದ್ಧರಾಮ ಹಚ್ಚಿಕೊಟ್ಟ  ಚಿಕ್ಕದೊಂದು ಹಣತೆ ಹಿಡಿದು
ಶಿಕ್ಷಣಸಂಘಟನೆ ಹೋರಾಟಗಳ ಅಸ್ತ್ರತೋರಿ
ಹಚ್ಚೇ ಹಚ್ಚುತ್ತೇನೆ ಸಮತೆಬೆಳಕ ಪಂಜ ಹಿಡಿದು

- samna

14 Apr 2020, 11:12 pm

ಕತ್ತಲೆ ಕೋಣೆ

ನಿನ್ನ ನೆನಪುಗಳು
ಮನದಲಿ ಇದ್ದರು
ಇಲ್ಲದಂತೆ ಕೂತಿರುವೆ
ನಿನ್ನಲ್ಲಿ ಮಾತನಾಡ
ಬೇಕೆಂದು ಹೃದಯ
ಚಡಪಡಿಸುಹುದು
ಆದರೆ ಮೆದುಳು ಬೇಡ
ಎಂದು ತಡೆಯುವುದು
ರಾತ್ರಿ ಮಲಗುವ ವೇಳೆ
ನಿನ್ನದೇ ನೆನಪು
ಮನಸು ಒಳಗೊಳಗೆ
ನೊಂದುಕೊಳ್ಳುತ್ತಿದೆ
ಮರೆಯುವ ಒಂದು
ಶಕ್ತಿ ನನ್ನಲ್ಲಿ ಇದ್ದಿದ್ದರೆ
ಯಾವುದೂ ಚಿಂತಿಸದೆ
ನನ್ನದೇ ಲೋಕದಲ್ಲಿ
ಮುಳುಗುತ್ತಿದ್ದೆ.

- azna

14 Apr 2020, 05:39 pm

ಹೇ ಮನಸೇ

ಹೇ ಮನಸೇ ತುಂಬಾ ಅಳುವೆ ಏಕೆ ..?
ನಿನ್ನ ದುಃಖ ನಿನಗೆ ಮಾತ್ರ ಕಾಣುವುದು.
ಹೇ ಮನಸೇ ಒಮ್ಮೆ ನಗು .ಅನೇಕ ಕಣ್ಣುಗಳು
ನಿನ್ನ ನಗುವಿಗಾಗಿ ಕಾದಿರುವುದು..!

- Stephan Sunil

14 Apr 2020, 03:47 pm