Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವಳು.

ಕೆನೆ ಹಾಲ ಮನದವಳಿಗೆ
ಅಕ್ಕರೆಯ ಸಕ್ಕರೆಯು
ತುಸು ಹೆಚ್ಚು ನನ್ನವಳಿಗೆ.

ನೇರಮಾತಿನ ಮಾಯಗಾತಿ
ಅವಳು,
ತುಟಿಯ ಕೊನೆಯಲಿ
ಮೌನ ಮುಡಿದವಳು.

ತಪ್ಪಿದಲ್ಲಿ ತಿದ್ದಿ ಹೇಳಿವ ತಾಯಿಯಂತ
ಮೃಧು ಸ್ವಭಾವದವಳು,
ಕತ್ತಲಿಗೆ ಅಂಜದವಳು ಬೆಳಗಿನ
ಜಾವಾದಿ ಬೆಳ್ಳಕ್ಕಿಯವಳು.

ಚಿನ್ನದ ಪಾದಕೆ ಬೆಳ್ಳಿ ಕಾಲ
ಗೆಜ್ಜೆ ತೊಟ್ಟು ನನ್ನೆದೆಯ
ಗುಡಿಯಲಿ ದೇವತೆಯಾದವಳು.

ನನ್ನವಳು ಅವಳು
ಮಾರುಮಾತನಾಡದೆ
ಎದೆಗಪ್ಪಿದ ಇರುಳು ಹಾಡುವ
ಲಾಲಿ ಹಾಡಿನಂತವಳು.

- ಚುಕ್ಕಿ

16 Apr 2020, 06:04 pm

ನನ್ನವಳ ನನ್ನವಳ

ಕಂಡೆ ಕಂಡೆ ನನ್ನವಳ
ಮುಗ್ಧ ಮುಖದವಳ
ಚಂಗನೆ ಹೃದಯಕ್ಕೆ ಜಿಗಿದವಳ
ಹೃದಯಂಗಳದಿ ಈಜಿದವಳ

ಜಿಂಕೆಯ ಕಣ್ಣವಳ
ಚಂದಿರ ವದನದವಳ
ಸಂಪಿಗೆ ಮೂಗಿನ
ಸುಗಂಧ ಸೂಸುವಳ

ಕರೆ ನೀಡುವ ನೋಟದವಳ
ಹುಸಿ ನಗೆಯ ಬೀರುವವಳ
ಗಾಂಭೀರ್ಯ ನಡೆಯವಳ
ಮೈ ಜುಂ ಅನಿಸುವವಳ

- suresh veera

16 Apr 2020, 06:02 pm

ಜಗಕೆ ಬೇಡದವ

ಹಣೆ ಬರಹದ ನತಾದೃಷ್ಟ
ಬಗೆದು ಕೊಂಡರು
ಹೂರಬರದ ರಕ್ತ
ಹಿಂಡಿ ಹಿಪ್ಪೆಯಾದ ದೇಹ
ಬಡಕಲು ಬದುಕು
ಬೆಲೆಯಿರದ ಬಾಳು
ಕಾಣದಾದ ಬೆಳಕು
ಬರಿ ಅಂಧಕಾರ
ಜಗದ ನಿರುತ್ತರ
ಪಡೆಯಲಾಗದ ಪ್ರೀತಿ
ನಿಸ್ಸಂದೇಹವಾಗಿ ನಾ
ಜಗಕೆ ಬೇಡದವ....

- suresh veera

16 Apr 2020, 05:47 pm

ನೀ ಸಾಯಬೇಡ

ನಿನ್ನ ಜೊತೆ ಯಾರಿಲ್ಲವೆಂದು ಬಾಳ ಬೇಡ
ನಿನ್ನ ಮನಸಿಗಾಗಿ ಬದುಕಬೇಕು ಮೋಡ
ಈ ಸ್ನೇಹಿತರ ಮನಸ್ಸು ಮುರಿಯ ಬೇಡ
ಪ್ರೀತಿ ಹೆಸರಿನಲ್ಲಿಲಿ ನೀ ಸಾಯಬೇಡ

✍️ವಿ.ಶಿವಾನಂದ

- Shivanand V Anandadavar

16 Apr 2020, 04:42 pm

ಕಾಣುವುದು ಹೇಗೆ

ಬಯಸಿ ಬಯಸಿ ಬಂದೆ ನಿನ್ನಾ
ಹುಡುಕುತ್ತಾ ಹೊರಟೆ ನಿನ್ನ ಮುಖವನ್ನಾ
ಕಾಣುವುದು ಹೇಗೆ ನಿನ್ನ ಚೆಲುವನ್ನಾ
ತೋರಬಾರದೇ ಆ ನಿನ್ನ ಮುದ್ದು ಮುಖವನ್ನಾ

✍️ವಿ.ಶಿವಾನಂದ

- Shivanand V Anandadavar

16 Apr 2020, 04:40 pm

ಕಾರಣವಿಲ್ಲದೆ ಪ್ರೀತಿಸುವೆ

ಕಾರಣವಿಲ್ಲದೆ ಪ್ರೀತಿಸುವೆ
ಅದಕೆ ಕಾರಣ ಬೇಕಿಲ್ಲ
ಹುಡುಕ ಬೇಡ
ಹೆಜ್ಜೆ ಗುರುತುಗಳನ್ನು
ಎಕೆಂದರೆ
ಹೃದಯಕ್ಕೆ ಪಾದವಿಲ್ಲ
ಬರಿ ಭಾವನೆಗಳ ಬಂಧಿ.

- suresh veera

16 Apr 2020, 04:07 pm

ಮತ್ತೆ ವಸಂತ.......

ಜಗವೆಲ್ಲ ಅಳುತಿಹುದು
ಮನಸೆಲ್ಲ ನರಳುತಿಹುದು
ತಾನೆ ದೊಡ್ಡವನೆಂದು ಮೆರೆದು
ಬದುಕುತಿದ್ದ ಮನುಜನ
ಅಹಂಕಾರವ ಮೆಟ್ಟಿನಿಂತು.....

ಮದದಿಂದ ಮೆರೆದಿರುವ
ಮನುಜನ ಅಂದಕಾರವ ತೊರೆದು
ನಿನ್ನಿಂದ ನಾನಲ್ಲ ನನ್ನಿಂದ ಜಗವು ಎಂದು
ಮತ್ತೆ ಮತ್ತೆ ಸಾರುತಿದೆ ಈ ಕಾಲ.....

ಮನುಜನ ಬುದ್ದಿವಂತಿಕೆ ಅತಿಯಾಗಿ
ಜಗವೆ ತಲ್ಲಣಗೊಂಡು ಅಳುಕುತಿರುವಾಗ
ಹೀಗೊಂದು ಒಣಗಿ ಬಿದ್ದ ಮರದೊಳಗೆ ಮತ್ತೆ ಚಿಗುರಿ ಅರಳಿದ ಹೂವೊಂದು ನುಡಿಯುತ್ತಿತ್ತು.....

ನಿನೆಷ್ಟೆ ಬೆಳೆದು ಮೆರೆದರು
ನನ್ನ ಮುಂದೆ ತಲೆ ಬಾಗಲೆಬೇಕು
ನನ್ನ ತನವನ್ನು ನಾನೆಂದು ಬಿಡೆನು
ನಾನು ಮತ್ತೆ ಮರಳಿ ಪಡೆದು ಕೊಳ್ಳುವೆ ತನ್ನ ತನವನ್ನು ಎಂದು ಪ್ರಕ್ರೃತಿ ನಗನಗುತ ಅರಳಿ ಮನುಜನ ಅಹಂಕಾರಕ್ಕೆ ಪೆಟ್ಟೊಂದು ಕೊಟ್ಟು ಬುದ್ದಿಮಾತನ್ನು ಹೇಳುತ್ತಿದೆ......‌‌‌‌...
ಈ ಪರಿಯ ಸೋಬಗು.......
ಜಗದ ಅಳುವಲ್ಲಿ ಜನರ ಕರ್ಮುಪಲವೆ ತುಂಬಿದೆ ಅರಿತು ಬಾಳು ನೀ ಓ ಮನುಜ........

- ರಾಗಸಿರಿ....

16 Apr 2020, 03:36 pm

ಸಾಧಿಸುವೆ

ಸಾಧಿಸುವೆ ಸಾಯುವ ಮುನ್ನ
ದಿಟ್ಟತನದ ಛಲದಿಂದ
ನಾ ಕಾಣುವೆನೂ ಇಲ್ಲವೋ?
ತೋರಿಸುವೆ ನನ್ನ ಬಲವನ್ನ

ಕಾಯುತ್ತಿರುವೆ ನನ್ನ ಸಮಯ
ಬಂದೆ ಬರುವುದು ಅ ಸುದಿನ
ಬಿಡುವುದಿಲ್ಲ ನನ್ನ ಸಾಧನೆ
ತೋರಿಸುವೆ ನನ್ನ ಗೆಲುವನ್ನ

ಇರಲಿ ನಿನ್ನ ದೋರಣೆ ನಿನಗೆ
ಬರಲಿ ನನ್ನ ಸೈರಣೆ ನನಗೆ
ನೆನಪಿರಲಿ ಸದಾ ಕಾಲ
ಗೆಲುವಿನ ಪರಿತಪಿಕಾಗಿ.

- suresh veera

16 Apr 2020, 02:28 pm

ಅಕ್ಕ

ಅಕ್ಕ ಎಂದರೆ ಮಾಯವಾಗುವುದು ದುಃಖ
ತಾಯಿಯಂತೆ ಸಲಹುವಳು ಅಕ್ಕ
ತಂದೆಯಂತೆ ಗದರಿಸುವಳು ಅಕ್ಕ
ಸ್ನೇಹಿತರಂತೆ ಕಾಡಿಸುವಳು ಅಕ್ಕ
ಜೀವನದ ಮೊದಲ ಸ್ನೇಹಿತೆ ಎರಡನೆ ತಾಯಿ ಅಕ್ಕ.

ತವರು ಮನೆಯ ಕೀರ್ತಿ ಗಂಡನ ಮನೆಯ ಸ್ಪೂರ್ತಿ
ಬಾಲ್ಯದಲ್ಲಿ ನಮಗೆ ಆಸರೆಯಾಗುವಳು ಪೂರ್ತಿ
ಸಹನೆಯ ಮೂರ್ತಿಯವಳು
ಬೆಳದಿಂಗಳ ಜ್ಯೋತಿಯವಳು
ಬೇರೆಯವರ ಕಷ್ಟಕ್ಕೆ ಸದಾ ಮಿಡಿಯುವವಳು
ಕರುಣೆಗೆ ಇನ್ನೊಂದು ಹೆಸರೆ ಇವಳು

ತನ್ನ ಪ್ರೀತಿಯಿಂದಲೇ ತುಂಬಿಸುವಳು ನಮ್ಮೆಲ್ಲರ ಹೊಟ್ಟೆ
ಅವಳ ಪ್ರೀತಿಗೆ ಅಡ್ಡ ಕಟ್ಟಬಾರದು ಕಟ್ಟೆ
ಅವಳೆ ಮನೆಯ ನಂದಾದೀಪ
ಅವಳಿಂದಲೇ ಕಳೆಯುವುದು ನಮ್ಮೆಲ್ಲರ ಪಾಪ
ನಿಮ್ಮ ಪ್ರೀತಿಯ ತಮ್ಮ:
M.S. ಯಾದವ್

- M S Yadav

16 Apr 2020, 10:31 am

ಪ್ರೀತಿ ಯಿಂದ ಹೊರಗೆ

ನೀನಿರದ ನೋಟಗಳು,

ನೊಂದಿಹವು ಕಣ್ಣುಗಳು,

ಬೇಸರವೆ ನಿದಿರೆ ಕನಸುಗಳು.

ಬದುಕು ಕನಸಾಗಿಸದೆ,

ಕನಸು ಬರಿದಾಗಿಸದೆ,

ಬಾರೆಯ ಎನ್ನ ಕಣ್ಣ ಮುಂದೆ ಬರಬೇಡ

- Dananjaya N Danu

16 Apr 2020, 08:19 am