Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜುಳು ಜುಳು ನಿನಾದದೊಂದಿಗೆ ಸಾಗಿದ್ದಳು ತುಂಗೆ
ಕಲರವದೊಂದಿಗೆ ಮರಳುತಿದ್ದವು ಹಕ್ಕಿಗಳು ಗೂಡಿಗೆ
ಕೇದಗೆಯ ಕಂಪಿನೊಂದಿಗೆ ಬೀಸಿತ್ತು ತಂಗಾಳಿ
ಮುಸ್ಸಂಜೆಯಾಗಿತ್ತು ರವಿ ಜಾರಿರಲು ಬಾನಂಚಿನಲ್ಲಿ

ವಿರಮಿಸಿರಲು ನಾ ಮರಳ ದಂಡೆಯಲ್ಲಿ
ನೀ ಕಂಡೆ ದೃಷ್ಟಿಗೆ ಅನತಿ ದೂರದಲ್ಲಿ
ಎತ್ತಲೋ ನೋಡುತಾ ಮುಗ್ಗರಿಸುತ್ತಿದ್ದೆ ನೀನು
ಕಂಡೆನೆಂತಹ ಚೆಲುವು ಬಳಿ ಧಾವಿಸಲು ನಾನು

insta:- unique_abhyaa

- abhi.s.j

10 Oct 2025, 08:15 pm

ನನ್ನ ಪರಿಚಯ ಹೇಳುತ್ತಿದೆ ಆ ನಿನ್ನ ಕಣ್ಣುಗಳು ಹೃದಯದಲ್ಲಿ ಸುಡುತಿಹುದು ನಿನ್ನ ನೆನಪಿನ ಬೆಂಕಿಯಲ್ಲಿ

ನಿನ್ನ ಮೌನವು ನೂರು ಮಾತು ಹೇಳಿ ಹೇಳುತ್ತಿದೆನಗೆ ಯಾರ ಮಾತು ಕೇಳಿ ನನ್ನಿಂದ ಹೀಗೆ ದೂರವಾಗಿಯೇ ನೀ ನಿಂದು

ಇಲ್ಲಿ ಮರುಗುತ್ತಿದೆ ಮನಸ್ಸು ಮರೆತ ನಿನ್ನ ನೆನೆದು ಹೇಳುತ್ತಿದೆ ನಿನ್ನ ಕಣ್ಣೀರು ಅಲ್ಲಿ ಕೂಡ ಹೀಗೆ ನಿಂದು

ಒಡಲೊಳು ತುಂಬಿ ಅದು ಅಳಿಸಲಾಗದೆ ಪ್ರೇಮವು ತೋರದೆ ಬಚ್ಚಿಡುವ ನನ್ನಲ್ಲಿ ಏಕೆ ನಿನಗಿಂದು

ಮರೆಯ ಬಹುದೇ ನಿನ್ನ ನಾ ನನ್ನನೇ ಮರೆತು ಹೋದರು ಉಸಿರಾಟವನ್ನು ನಾವಿಲ್ಲಿ ಮರೆಯುವ ಮುನ್ನ ನೆನಪನ್ನು ಬಂದು ಬೇಗ ಸೇರೆ ನೀನು ನನ್ನನ್ನು

ನೀ ನನ್ನ ಮರೆತ ಮೇಲೆ

insta:- unique_abhyaa

- abhi.s.j

10 Oct 2025, 08:13 pm

ಓ ನನ್ನ ಮನದನ್ನೆ
ನೀ ಮಾಡಿದ್ದಕ್ಕೆ ಕಣ್ಸನ್ನೆ
ಟೆಸ್ಟಲ್ಲಿ ನಾ ತೆಗೆದದ್ದು
ಎರಡು ಸೊನ್ನೆ

insta:- unique_abhyaa

- abhi.s.j

10 Oct 2025, 08:10 pm

ಇವಳು ನನ್ನ ಸಕಿಯಲ್ಲಾ
ಮನಸಿಗೆ ತುಂಬಾ ಹತ್ತಿರ ಆದವಳಲ್ಲ
ನಿರಂತರವಾಗಿ ಸುಮ್ಮನೆ ಕಾಡಿ
ನನ್ನನೆ ಸೆಳೆದುಬಿಡುವಳಾ....?
ಮನಸಿನ ಪ್ರೀತಿಯಾ ಕಡಲಲ್ಲಿ
ಪ್ರೀತಿಯ ಹೊತ್ತು ಈಜುತಾ ಬಂದಳಲ್ಲ
ಒಲವಿನಾದಿಯಲ್ಲಿ ನನ್ನ ಮನಸನ್ನೆ
ದೋಚಿ ಬಿಡುವಳಾ....?
ಪ್ರೀತಿಯಾ ಮಾಯೆಯಲ್ಲಿ ನನ್ನ ಸಿಲುಕಿಸಿ
ಮನಸಾರೆ ಒಂದಾಗಿ ಸೇರಿಕೊಂಡು
ಮರೆಯಲಾಗದ ನೋವುಗಳಾ ಮರೆಸಿ
ಕಾಣದ ನೆಮ್ಮದಿ ನೀಡುವಳಾ....?
ಒಲವಿನಿಂದ ದಿಟ್ಟಿಸಿ
ಎಷ್ಟೇ ಮೋಡಿ ಮಾಡಿ
ಕಣ್ಣಂಚಲೆ ಕರೆದರೂ ಸೋಲದಂತೆ
ಇರುವ ಮುಗ್ದ ಹೃದಯವನ್ನು
ಹೇಳದೆ ಕೇಳದೆ ಗೆದ್ದುಬಿಡುವಳಾ....?
ತನ್ನ ತಾನೆ ಸೋಲುತ
ಕ್ಷಣಾರ್ಧದಲ್ಲಿ ಸನಿಹದಲ್ಲಿ ನಿಂತು
ಮನಸ್ಸಿನಾ ಮನಸ್ಸನೆ ಆವರಿಸಿ
ಪ್ರೀತಿಸುತಾ ಮನಸ್ಸನು ಮನಸಾರೆ
ಜಾರಿಸಿಕೊಳ್ಳುವಳಾ....?
ಪ್ರೀತಿಯೂ ಕಾಣದೆ ಇದ್ದ ಮನವೇ
ಅವಳಲಿ ಅರಳಿದ ಪ್ರೀತಿಗೆ
ಕರಗಿ ಹರಿದು ಸೇರಿಬಿಡುವುದೇ ಹೃದಯ
ಏನನೂ ತಿಳಿಯದಾಗಿದೆ ....
ಹಾಗೆ ಕಲ್ಪನೆಯಲಿ ಅರಳಿದ
ಕವನ ಕುಸುಮ

insta:- unique_abhyaa

- abhi.s.j

10 Oct 2025, 08:07 pm

ರಾತ್ರಿ ದೇವರನ್ನು ನೆನೆಯಲು
ಬರುವೆ ಕನಸಿನಲ್ಲಿ ದಿನಾಲು
ಕೇಳಿದೆ ಮನಸ್ಸನ್ನು ಯಾರೆಂದು
ಹೇಳಿತು ನನ್ನ ಕನಸಿನ ರಾಣಿಯೆಂದು.

ನಂಬು ನನ್ನಯ ಮಾತನ
ಕಾಣಲು ನಿನ್ನನ್ನು, ಮನ
ಬಿಗಿ ಹಿಡಿದಿದೆ ಉಸಿರನ
ತೋರಿಸು ನಿನ್ನಯ ವದನ

ಹೇಳು ಚೆಲುವೆ, ನೀ ಎಲ್ಲಿ ಅವಿತೆ
ನೀನಿಲ್ಲದೆ ಕಳೆದೆ ಅದೆಷ್ಟೋ ಹಗಲಿರುಳು
ಮರುಕಳಿಸುವವು ನಿನ್ನ ನೆನಪುಗಳು
ಆಗಾಗ ತುಂಬುವುದು ನನ್ನ ಕಣ್ಣುಗಳು
ಬಾ ಚೆಲುವೆ ಕನಸಿನಲ್ಲಿ ದಿನಾಗಲು

INSTA || unique_abhyaa

- abhi.s.j

09 Oct 2025, 07:49 pm

ಬಾ ಮಲ್ಲಿಗೆ

ಬಾ ಮಲ್ಲಿಗೆ ಬಾ ಮೆಲ್ಲಗೆ
ನನ್ನೆದೆ ಮೆಲ್ವಾಸಿಗೆ
ಇಳೆಗಿಳಿದಿದೆ ಬೆಳುದಿಂಗಳು
ನಮ್ಮೊಲುಮೆಯ ಕರೆಗೆ ।।

ಚೆಲುವಾಗಿದೆ ಬನವೆಲ್ಲವೂ
ಗೆಲುವಾಗಿದೆ ಮನವು
ಉಸಿರುಸಿರಿಗು ತಂಪೆರಚಿದೆ
ನಿನ್ನೆದೆ ಪರಿಮಳವು ।।

ತಿಂಗಳ ತನಿ ಬೆಳಕಲಿ
ಮೈದೊಳೆದಿಹ ಮನದನ್ನೆ
ಮಂಗಳವೀ ಮನೆಯಂಗಳ
ಚೆಂಗಲವೆಯ ಚೆನ್ನೆ ಬಾ ಮಲ್ಲಿಗೆ

ಹಿತವಾಗಿದೆ ಮೆಲ್ಲಲರುಲಿ
ಮಿತವಾಗಿದೆ ಮೌನ
ಜತೆಗೂಡುತ ಮಾತಾಡಿವೆ
ಅರೆ ನಿದ್ರೆಯೊಳೇನ ।।

ಲೋಕದ ಮೈ ನೋವಿಗೆ
ಶ್ರೀಗಂಧದ ತನಿಲೇಪ
ಆಕಾಶದ ಗುಡಿಯಿಂದಲಿ
ಹೊರಸೂಸಿದ ಧೂಪ ಬಾ ಮಲ್ಲಿಗೆ

ಒಳಿತೆಲ್ಲವೂ ಬೆಳಕಾಯಿತು
ಬಾನ್ಗರೆಯಿತು ಜೇನು
ಆನಂದದ ಕಡಲಾಳದಿ
ನಾವಾದೆವೆ ಮೀನು ।।

ಎವೆಯಿಕ್ಕದೆ ಮಿನುಗುತ್ತಿದೆ
ಚಿಕ್ಕೆಯ ಹನಿ ದೀಪ
ತಮ್ಮಷ್ಟಕ್ಕೆ **ಧ್ಯಾನಿಸುತ್ತಿವೆ
ಯಾವುದು ಸವಿನೆನಪ ಬಾ ಮಲ್ಲಿಗೆ

INSTA || unique_abhyaa

- abhi.s.j

09 Oct 2025, 07:48 pm

ಗಿಳಿರಾಯ

ಒಬ್ಬಳು ಹುಡುಗಿ ಗಿಳಿ ತಗೊಬೇಕು ಅಂತ ಅಂಗಡಿಗೆ ಹೋಗಿ Owner ನ ಕೇಳ್ತಾಳೆ

ಹುಡುಗಿ - ಸರ್ ಈ ಗಿಳಿಯ ವಿಶೇಷತೆ ಏನು

Owner - ಈ ಗಿಳಿ ಮಾತಾಡುತ್ತೆ

ಹುಡುಗಿ - ಓ.. ಹೌದಾ? ನಾನ್ ಮಾತಾಡ್ಸಲಾ?

Owner - ಸರಿ ಮಾತಾಡ್ಸಮ್ಮ

ಹುಡುಗಿ - ಹಾಯ್ ಗಿಳಿ ನಾನ್ ನೊಡೊಕೆ ಹೇಗ್ ಕಾಣಸ್ತಿನಿ?

ಗಿಳಿ - ಡಗಾರ್ ತರ ಕಾಣಸ್ತಿಯಾ!!

ಹುಡುಗಿ - (ಸಿಟ್ಟಿನಿಂದ) ಏನ್ರಿ Owner ಈ ಗಿಳಿ ಇಷ್ಟು ಕೆಟ್ಟದಾಗಿ ಮಾತಾಡುತ್ತೆ?

ಆಗ Owner ಆ ಗಿಳಿನ ನೀರಿನಲ್ಲಿ ಹಾಕಿ, ಇನ್ನೊಂದ್ಸಲ ಹೀಗೆ ಮಾತಾಡಿದ್ರೆ ಈ ಬಕೆಟಲ್ಲಿ ಮುಳಗ್ಸಿ ಸಾಯ್ಸಿತಿನಿ..

Owner - ಈಗ ಕೇಳಮ್ಮ

ಹುಡುಗಿ - ಅಕಸ್ಮಾತ್ ನಾನ್ ಮನೆಗೆ ಒಬ್ಬ ಹುಡುಗನ ಕರಕೊಂಡು ಬಂದ್ರೆ ನಿ ಏನ್ ತಿಳ್ಕೊತಿಯಾ?

ಗಿಳಿ - ನಿನ್ ಗಂಡ ಅಂತ..

ಹುಡುಗಿ - ಇಬ್ಬರು ಬಂದ್ರೆ?

ಗಿಳಿ - ನಿನ್ನ ಗಂಡ ಮತ್ತು ಫ್ರೆಂಡ್ ಅಂತ..

ಹುಡುಗಿ - ಮೂರು ಜನ ಹುಡುಗ್ರ ಜೊತೆ ಬಂದ್ರೆ?

ಗಿಳಿ - ನಿನ್ನ ಗಂಡ, ಗಂಡನ ಫ್ರೆಂಡ್, ಮತ್ತೆ ಅವ್ನ ಫ್ರೆಂಡ್...

ಹುಡುಗಿ - 4 ಜನ ಹುಡುಗರು ಬಂದ್ರೆ?

ಗಿಳಿ Owner ಕಡೆ ತಿರ್ಗಿ ಇವಳೌವನ್ ನಾನ್ ಆಗಲೆ ಹೇಳಿಲ್ವಾ ಇವಳು ದೊಡ್ಡ ಡಗಾರ್ ಅಂತ... ನನ್ನ ಕರ್ಮ ಆ ಬಕೆಟ್ ತಗೊಂಡು ಬಾ ಗುರು ನಾನೇ ಬಿದ್ದು ಸಾಯ್ತಿನಿ.. ??

INSTA || unique_abhyaa

- abhi.s.j

09 Oct 2025, 07:47 pm

ಅಪ್ಪ

ಮರೆಯಬೇಡ ಅಪ್ಪನ "ಋಣಭಾರವ” |

ನಿನ್ನ ಸುಖಸಂತೋಷಕ್ಕಾಗಿ "ಸಾಲಗಾರನಾದನವ” ||

ತನಗಾಗಿ ಎಂದಿಗೂ ಏನನ್ನು "ಬಯಸದವ" |

ಜೀವಮಾನವೆಲ್ಲಾ ನಿನಗಾಗಿ "ದುಡಿದವ" ||

ನೀನೆಷ್ಟೇ ಜನ್ಮವೆತ್ತಿದರು ತೀರಿಸಲಾಗುವುದಿಲ್ಲ ಅವನ "ಋಣವ" |

ಶರಣಾಗಿಬಿಡು ನಿನಗೆ ಸಲ್ಲುವುದು "ಗೌರವ" ||

- "ಅ"ಪರಿಚಿತೆ

08 Oct 2025, 06:55 pm

ದಿನವೆಲ್ಲಾ ಸಾಲದು ನನಗೆ

ದಿನವೆಲ್ಲಾ ಸಾಲದು ನನಗೆ ನಿನ್ನ ಬಣ್ಣಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಪೂಜಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ವರ್ಣಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಆರಾಧಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಅಲಂಕರಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಪ್ರಾರ್ಥಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಧ್ಯಾನಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಭಜಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಗೌರವಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಉಪಾಸನೆ ಮಾಡಲು...

ದಿನವೆಲ್ಲಾ ಸಾಲದು ನನಗೆ ನಿನ್ನ ಸ್ಮರಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಕೀರ್ತಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಶರಣಾಗಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಮಹಿಮೆ ಹಾಡಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಪ್ರೀತಿ ಸ್ವೀಕರಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ದಯೆ ಹೊಂದಲು...
ದಿನವೆಲ್ಲಾ ಸಾಲದು ನನಗೆ ನಿನ್ನ ರೂಪ ಕಾಣಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಶಕ್ತಿ ಅರಿಯಲು...

ಆದರೂ ದಿನವೆಲ್ಲಾ ಬಣ್ಣಿಸಲು, ಪೂಜಿಸಲು, ವರ್ಣಿಸಲು, ಆರಾಧಿಸಲು, ಅಲಂಕರಿಸಲು, ಪ್ರಾರ್ಥಿಸಲು, ಧ್ಯಾನಿಸಲು, ಭಜಿಸಲು, ಗೌರವಿಸಲು, ಉಪಾಸನೆ ಮಾಡಲು, ಸ್ಮರಿಸಲು, ಕೀರ್ತಿಸಲು, ಶರಣಾಗಲು, ಮಹಿಮೆ ಹಾಡಲು, ಪ್ರೀತಿ ಸ್ವೀಕರಿಸಲು, ದಯೆ ಹೊಂದಲು, ರೂಪ ಕಾಣಲು, ಶಕ್ತಿ ಅರಿಯಲು ಒಂದೇ ಕ್ಷಣಮಾತ್ರದಲ್ಲಿ ನೀ ಭಕ್ತಿಗೆ ಒಲಿಯುವ ಕರುಣಾಮಯಿ ಕನ್ನಡಾಂಬೆ...

ವಸಂತ ಕಾವ್ಯ

- Kavya Mari

02 Oct 2025, 04:37 pm

???? ಸತ್ಯ????

ಊತು ಹಾಕಿದ್ದೇನೆ ಸತ್ಯ"ವನ್ನು
ಸುಳ್ಳಿನ ಬೂದಿಯಲಿ

- ಪುರುಷೋತ್ತಮ್ ಈ

02 Oct 2025, 03:56 pm