Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹಣೆ ಬರಹದ ನತಾದೃಷ್ಟ
ಬಗೆದು ಕೊಂಡರು
ಹೂರಬರದ ರಕ್ತ
ಹಿಂಡಿ ಹಿಪ್ಪೆಯಾದ ದೇಹ
ಬಡಕಲು ಬದುಕು
ಬೆಲೆಯಿರದ ಬಾಳು
ಕಾಣದಾದ ಬೆಳಕು
ಬರಿ ಅಂಧಕಾರ
ಜಗದ ನಿರುತ್ತರ
ಪಡೆಯಲಾಗದ ಪ್ರೀತಿ
ನಿಸ್ಸಂದೇಹವಾಗಿ ನಾ
ಜಗಕೆ ಬೇಡದವ....
- suresh veera
21 Apr 2020, 11:35 am
ಕನ್ನಡ ನಾಡಿನ ವೀರರೇ
ಕರಿಮುಗಿಲ ಶೂರರೇ
ಕರೆತನ್ನಿ ಕನ್ನಡವ
ಕಂಗೊಳಿಸಿ ಕರ್ನಾಟಕವ
- Naveen r Mogaveera
21 Apr 2020, 11:06 am
ಕನ್ನಡದ ಕಂದ
ನೀನೆಂದು ಚೆಂದ
ನೀ ನಗುತಿರಲು
ನನಗಾನಂದ
ಕಲ್ಕಟ್ಟೆ
- Naveen r Mogaveera
21 Apr 2020, 10:55 am
ಜಗದಾಗ ಎಂತಹ ರೋಗ ಬಂತು ನೋಡಿರಣ್ಣ..
ಮುಗ್ಧ ಜನರ ಪ್ರಾಣವ ಹೀರುತಿಹುದಣ್ಣ.
ರೋಗಕ ಬಡವ ಶ್ರೀಮಂತರೆನ್ನುವ ಭೇದವಿಲ್ಲ ನೋಡಿರಣ್ಣ.
ಇನ್ನಾದರು ತಿಳಿದುಕೋ ಆ ದೇವರ ಮುಂದ ಯಾವುದು ದೊಡ್ಡದಲ್ಲ ಎಂಬುದನ್ನ...
- smiley
21 Apr 2020, 09:51 am
ಮೊಳಕಿತು ಪ್ರೇಮ ಮೊದಲ ನೋಟದಿ
ಮಿಡಿಯುತ್ತಿದೆ ನಿನ್ನ ಗೆಜ್ಜೆನಾದ ಹೃದಯದಲಿ
ಯಾರಿಗೆ ಹೇಳಲಿ ನನ್ನ ಪ್ರೇಮ ನಾದವ
ಓ ಚೆಲುವೇ!
- kempayya
20 Apr 2020, 07:48 pm
ಮೋಡಗಳಿಂದ ಮರೆಯಾಗಿರುವ ಚಂದಿರನೆ
ಬೇಗನೆ ಚೆಲ್ಲು ನಿನ್ನ ಹೂಳಪನ್ನು
ಹುಣ್ಣಿಮೆ ಚಂದಿರನು ಯಾರು ತಾರೆ ಕಾಣರು
ಅದು ತಾರಾವ್ಯೂಹದ ಹೂಯಳಪಿಗಿಂದ ಚೆಂದ
ಚಂದ್ರನ ಬೆಯತಳದಿಂಗಳಲ್ಲಿ ನಮ್ಮ ಅಮ್ಮನ
ಪ್ರೀತಿಯ ಕೈ ತುತ್ತು ಎಲ್ಲಕ್ಕಿಂತಲೂ ಶ್ರೇಷ್ಠ
ಅಣ್ಣ ತಮ್ಮರ ಆ ತರಳೆಗಳು ಸೋದರಿಯರ ಭಾವನೆಯು ಇದರೂಟ್ಟಿಗೆ ಅಜ್ಜಿಯ ಸಿಟ್ಟು
ಕದ್ದು ಮುಚ್ಚಿ ಮಾಡುವ ಆ ಬಾಲ್ಯದ ತುಂಟಾದ
ಎಷ್ಟು ಕೋಟಿ ಕೂಟ್ಟರು ಸಿಗದು ಅಲ್ಲವೇ...
- RoopaGowtham
20 Apr 2020, 07:42 pm
ನಗುಮುಗದ ರಾಜ
ಕೋಪವಂದಿಷ್ಟು ಇಲ್ಲ
ಎಂದುಕೊಂಡರೆ ಕೋಪದೊಳಗೆ
ಬಿದ್ದು ವರಳಾಡುವಷ್ಟು ದೀರ......
ಕನಸುಗಳೆ ಇಲ್ಲದ ಚೋರ
ಅಂದು ಕೊಂಡರೆ ಗಂಟು ಕಟ್ಟಿ
ಅಟ್ಟದ ಮೇಲೆ ಆಸೆಗಳ
ಮುಟೆಗಳನ್ನೆ ಇಟ್ಟಿದ ಅರಸ.....
ಪೀತಿಯೆ ಇಲ್ಲ ವೆಂದು
ಮೌನವಾಗಿದ್ದರೆ
ಪ್ರೀತಿಯ ಕಡಲೋಳಗೆ
ದಿನವು ಸಾಗುತಿರುವ ಮುದ್ದು ಚೋರ......
- ರಾಗಸಿರಿ....
20 Apr 2020, 03:28 pm
ಬಿಟ್ಟು ಬಿಡದ
ಹುಟ್ಟು ಸಾವಿನ ನಂಟ
ತಿಳಿದರೂ, ಇಲ್ಲದಿದ್ದರೂ
ಈ ಜಗಕೆ ನಾ ನೆಂಟ
ಮುಗಿದ ಮೇಲೆ
ಜೀವನದ ಆತಿಥ್ಯದೂಟ
ಬುವಿಯಿಂದ ಹೋಗಬೇಕು
ಕಳಚಿ ದೇಹದ ಗೂಟ
- ಶ್ರೀಕಾವ್ಯ
20 Apr 2020, 12:07 pm
ಸ್ನೇಹ ಅನ್ನೋದು ಗುಡಿ ಮಾಡಿ
ಪ್ರೀತಿ ಅನ್ನುವ ದೇವರ ಮಾಡಿ
ಸ್ನೇಹವೆಂಬ ಹಣತೆ ಇಟ್ಟು
ಪ್ರೀತಿಯೆಂಬ ಬತ್ತಿ ಇಟ್ಟು
ಸ್ನೇಹಿತರ ಜೊತೆ ನಾ ದೀಪ ಹಚ್ಚಿದೆ ಇಲ್ಲಿ ಮನಸಿಟ್ಟು
ಕಾಪಾಡ ಬೇಕು ಎಲರೂ ಮನಸಿಟ್ಟು
✍️ವಿ.ಶಿವಾನಂದ
- Shivanand V Anandadavar
20 Apr 2020, 12:39 am
ಪೃಥ್ವಿತಾಯಿ
ಚಿಗುರಿಡತ ಬ್ರಹ್ಮ ಹಸಿರ
ಜೀವಜಂತಿಗಿತ್ತೆನೀ ಉಸಿರ
ಲತೆವೃಕ್ಷ ಕಾಡ ಫಲಪುಷ್ಪ ಧಾನ್ಯತೂಗಿ
ಖಗಮೃಗ ಮನುಜ ಹಸಿವನೀಗಿ
ಸಲಹಿದ ಪೃಥ್ವಿಯೇ ನಿನಗೆ ಕೋಟಿವಂದನೆ
ಚಾಗಿಸದೆ ಜೀವ ಸಂಕುಲ
ನೋಯಿಸದೆ ದೇವಬಸಿರ
ನಗತಾರೋಗ್ಯದಿ ಮನುಕುಲ
ಶಾಂತಿಚೈತನ್ಯ ಬಾಳತಳಿರ
ತಳೆಸಿದ ಪೃಥ್ವಿಯೇ ನೀ ಎಮ್ಮ ಪ್ರಾಣದೈವ
ಜೀವಭಾವದ ಸೆಲೆ ನೀ
ಸಹನ ಸಹಿಷ್ಣತಗೆ ನೆಲೆ ನೀ
ಬ್ರಹ್ಮಶಕ್ತಿಯಿಂ ವೃದ್ಧಿಸಿ
ಕೋಟಿಜೀವ ಗರ್ಭಧರಿಸಿ
ನಿನಗಿದೋ ನಿನ್ನೊಡಲ ಮಕ್ಕಳ ವಂದನೆ
ಒಡಲಹಸಿವ ನೀಗಲು
ವಿಶ್ವದೆಲ್ಲ ಮಡಿಲ ಮಕ್ಕಳ
ಪಿಡಿದು ನಿಂತಿರ್ಪೆ ನೀ
ದೈವನ್ನಾದಿ ದ್ರವ್ಯಂಗಳ
ತುತ್ತಿಡುವ ತಾಯೇ ಬ್ರಹ್ಮಸುತೆಯೇ ವಂದನೆ
ಮಣ್ಣವ್ವೆ ನಿನ್ನ ಎದೆಯಿಂ
ಉದಿಸ ನದನದಿ ಜಲಧಾರೆ
ಮಣ್ಣಿಡಿಸಿ ಅಪ್ರಿಯಂ
ಯುಗ ತೊಯ್ಯಲಿ ಜೊನ್ನರೆ
ಬೆಳಗು ಪೃಥ್ವಿಯೇ ನಿನಗೆ ಕೋಟಿವಂದನೆ
ಎರ್ದೆಮನ ಶರೀರಗಳೊಳಿಟ್ಟು
ಸಂಸ್ಕಾರ ಪ್ರಕೃತಿಕ ಶುದ್ಧಿಯ
ಮನುಜ ರಕ್ತರಕ್ತದಲೆ ತಳೆಸಿಟ್ಟು
'ವಸುದೈವಕಂ'ಮಾತೃಬುದ್ದಿಯ
ಹೆತ್ತತಾಯ ಪೃಥ್ವಿಯೇ ನಿನಗೆ ಕೋಟಿವಂದನೆ
- samna
19 Apr 2020, 11:11 pm