Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಏ ಕೋರೋನಾ ನೀ ಮರೋನಾ

ಎ ಕೋರೋನಾ ನೀ ಮರೋನಾ.

ವಾಹ ಕೋರೋನಾ ಏನು ನಿನ್ನ ಶಕ್ತಿ.
ಕಣ್ಣಿಗೆ ಕಾಣದೆ ಮಾಡುತ್ತಿ ಯುಕ್ತಿ.
ಜಾತಿ ಮತ ನೋಡದೆ ಕಾಡುತ್ತಿ.
ದುಡ್ಡೇ ದೊಡ್ಡದು ಎಂದವರಿಗೆ ಮಾಡಿದೆ ಫಜೀತಿ.

ಎ ಕೋರೋನಾ ನೀ ಮರೋನಾ.

ಭಕ್ತರನ್ನು ವಂಚಿಸಿ ಕಟ್ಟಿದ ಮಠ ಮಂದಿರದಲ್ಲಿ ಕಸ ಗುಡಿಸುವವರಿಲ್ದಂತೆ ಮಾಡಿದೆ.
ಜನರು ಧಾರ್ಮಿಕ ಕೇಂದ್ರ ಗಳಿಗೆ ತಿರುಗಿ ನೋಡದಂತೆ ಮಾಡಿದೆ.
ದೇವರುಗಳನ್ನು ಕತ್ತಲಲ್ಲಿಯೇ ಕೂಡಿಸಿದೆ.
ದೇಶ ದ್ರೋಹಿಗಳ ಮತಾಂದರ ನೀಚ ಬುದ್ಧಿ ಬಯಲಿಗೆಳೆದೆ.

ಎ ಕೋರೋನಾ ನೀ ಮರೋನಾ.
ನೀ ಮರೋನಾ.

ಪ್ರಚಾರವಿಲ್ದೆ ಜಗತ್ತನ್ನು ಆವರಿಸಿದೆ.
ವೈದ್ಯಕೀಯ ಲೋಕಕ್ಕೆ ನೀ ಆಗಂತುಕನಾದೆ.
ಸಿರಿ ಗರ ಬಿಡಿಸಿ ಪಾಪದ ಹಣ ಹೊರಗೆ ಬರುವಂತೆ ಮಾಡಿದೆ.
ಸಂಸ್ಕೃತಿ ಮರೆತವರಿಗೆ ಕೈ ಮುಗಿಯುವಂತೆ ಬೋಧಿಸಿದೆ.

ಎ ಕೋರೋನಾ ನೀ ಮರೋನಾ.
ನೀ ಮರೋನಾ.

ದಿನವೆಲ್ಲ ನಿನ್ನ ಭಯದಲ್ಲಿರುವಂತೆ ಮಾಡಿದೆ.
ನಗರ ವಿದೇಶಕ್ಕೆ ಹೋದವರಿಗೆ ಹುಟ್ಟೂರು ನೆನಪಿಸಿದೆ.
ಜಗತ್ತನ್ನು ಲಾಕ್ ಡೌನ್ ಮಾಡಿಸಿ ಕತ್ತಲು ಕೂಪಕ್ಕೆ ತಳ್ಳಿದೆ.
ಶತಮಾನಗಳ ಇತಿಹಾಸದಲ್ಲಿ ನೀ ಅಜರಾಮರವಾದೆ.

ಎ ಕೋರೋನಾ ನೀ ಮರೋನಾ
ನೀ ಮರೋನಾ.

ಸುಮಾರು ವರ್ಷಗಳಿಂದ ಎರಡು ಕಾಲಿನ ವೈರಸ್‌ಗಳನ್ನು ಎದುರಿಸಿ ಗಟ್ಟಿಯಾಗಿರುವ ಭಾರತೀಯರನ್ನು ತಿಳಿದು ಕೊಳ್ಳದೆ ನೀ ಮೋಸ ಹೋದೆ.
ಭಾರತಾಂಬೆಯ ಪಾದದಡಿಯಲ್ಲಿ ನಿನಗೆ ಜಾಗವಿಲ್ಲವೆಂದು ತಿಳಿಯದೆ ನೀ ಎಡವಿದೆ.
ವೈದ್ಯರು, ಆರೋಗ್ಯ ಸಹಾಯಕರು, ಪೌರ ಕಾರ್ಮಿಕರು,ಪೋಲಿಸ್ ಸಿಬ್ಬಂದಿಗಳು ಕಾಯಕ ನಿಷ್ಠೆ ಮೆರೆಯಲು ನೀ ಕಾರಣನಾದೆ.
ಭಾರತಾಂಬೆಯ ಅಜಾತ ಪುತ್ರನೆದುರು ನಿನ್ನ ಜೀವ ಉಳಿಸಿಕೊಳ್ಳಲು ನೀ ಮಂಡಿಯೂರಿದೆ.

ಎ ಕೋರೋನಾ ನೀ ಮರ್ಗಯಾರೆ.
ತೂ ಮರ್ಗಯಾರೆ.

-ಶಿವಪುತ್ರಪ್ಪ. ಡಿ. ಪಾಟೀಲ.
ಈ. ಕ. ರ. ಸಾ. ಸಂಸ್ಥೆ. ಬೀದರ ವಿಭಾಗ
( ಒಂದು ಸಣ್ಣ ಪ್ರಯತ್ನ )

- Sonakshi P

22 Apr 2020, 03:39 pm

ಹುಡುಕಿ ಕೊಡು ನನ್ನವ್ವನ

ಯಾರೋ ಮಾಡಿದ ತಪ್ಪಿಗೆ
ನಮಗೇಕೆ ಶಿಕ್ಷೆ
ತಿನ್ನಲು ಒಪ್ಪತ್ತಿನ ತುತ್ತಿಗೆ
ಬೇಡುವಂತಾಗಿದೆ ಭಿಕ್ಷೆ

ಅಮ್ಮನ ಕಂಡಿಲ್ಲ
ಅಪ್ಪನ ಭುಜವಿಲ್ಲ
ಅಕ್ಕನ ಅಕ್ಕರೆಯಿಲ್ಲ
ಅಜ್ಜಿಯ ಕಥೆಯಿಲ್ಲ
ಬೇಡಿಕೆಯೊಂದೇ ನಮ್ಮಲ್ಲಿ
ಕರುಣೆಯೇ ಇಲ್ಲವೇ ನಿನ್ನಲ್ಲಿ

ಹಣವಂತರು ಸಮವಿಲ್ಲದೆ
ಹಾಕುವರು ಅಮ್ಮನನ್ನ ಆಶ್ರಮಕ್ಕೆ
ದುಡಿದು ಕೊಡುವೆ ನಿನಗೆ ದೇವರೇ
ಬೇಕಾದಷ್ಟು ಹಣವ
ಹುಡುಕಿ ಕೊಡುವೆಯ ಕಾಣೆಯಾದ
ನನ್ನವ್ವನನ್ನ?

- ಸತೀಶ್ ಕುಮಾರ್ ಕಳುವರಹಳ್ಳಿ

22 Apr 2020, 03:05 pm

ನಮ್ಮ ಧರೆ.

ಧರೆಯೊಳಗಿನ ಸುಂದರತೆ,
ಇದರೊಳಗಿನ ಅಂದ, ಸುಗಂಧ ಮತ್ತು ರೌದ್ರತೆಯ ಗೌಪ್ಯತೆ,
ಇದನ್ನು ಅರ್ಥೈಸಿಕೊಳ್ಳುವ ವೈಚಾರಿಕತೆ,
ಮನುಕುಲಕ್ಕೆಂದು ಅರ್ಥವಾಗದ ಸತ್ಯಾನು ಸತ್ಯತೆ,
ಪರಿಸರ ಉಳಿಸಿದರೆ ಧರೆಯಾಗುವುದು ನಾವೀನ್ಯತೆ,
ಇದನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ.

- Guruprasad P

22 Apr 2020, 02:55 pm

ಕಾಣದ ಭಾವನೆ

ನನ್ನ ಮನಸಿನ ಕೋಣೆಯಲಿ
ಮಾತು ಮೌನವಾಗಿದೆ
ಹೃದಯ ಪ್ರತಿ ನಿಮಿಷವು
ನಿನಗಾಗಿ ಚಡಪಡಿಸಿದೆ
ಒಮ್ಮೆ ತಿರುಗಿ ಬರಬಾರದೇ
ಹೋದ ದಾರಿಯಲಿ
ಅತ್ತು ಕರೆದರು ಬರಲಾರೆ
ಮರಳಿ ಎಂದೆಂದೂ


ಕಾದು ಕಾದು ಬೇಸತ್ತು
ಇರುವ ಸಮಯವು ಇಂದು
ಮುಂದೆಯೂ ಸಾಗಲೂ ಆಗದೆ
ಹಿಂದೆಯೇ ಕುಳಿತಿದೆ ಬೆಪ್ಪಾಗಿ

ಜೀವನ ಇಲ್ಲಿಗೆ ಮುಗಿದ
ಆಗಿದೆ ನೀನ್ ಇಲ್ಲದೆ
ಇರುವ ದಿವಸವು ನನ್ನನ್ನು
ಹಿಂಬಾಲಿಸಿ ಕೊಲ್ಲುತಿದೆ
ಕಾರಣವಿಲ್ಲದೆ ನಿ ಹೋದೆ
ನನ್ನ ಬಿಟ್ಟು ಅಂದು
ಯಾರ ಮಾತಿಗೆ ಭಯಬಿದ್ದು
ಕಾಣೆಯಾದೆ ನೀ

ಕಳೆದ ಸಮಯವು ನಿನ್ನಲ್ಲಿ
ಮತ್ತೆ ಮತ್ತೆ ಕಾಡುತಿದೆ
ನೆನಪು ಅಳಿಸಲು ಆಗದಾಗೆ
ಬರೆದು ಹೋದೆ ನೀನು
ಇನ್ನಾದರು ದಿನವನು ನಾ
ಕಣ್ಣೀರಲಿ ಕಳೆಯದಂತೆ
ಎಲ್ಲವನ್ನು ಒಂದು ಕನಸೆಂದು
ಮರೆಯಲು ಪ್ರಯತ್ನಿಸುವೆನು.

- azna

22 Apr 2020, 09:33 am

ನಾ ಕಂಡ ಕನಸು ನಿನೆನಾ.

ಮನಸಲ್ಲಿ ಕಂಡೆ ಕನಸೊಂದನಾ
ಅದನ್ನು ಪೂರ್ತಿಗೋಳಿಸಿದವಳು ನೀನೆನಾ!

ಅರ್ಧಂಬರ್ದ ಬೆಯ್ದ ರೊಟ್ಟಿಯನ್ನು
ಪ್ರೀತಿ ಹಂಚಿ ಊನಬಡಿಸಿದವಳು ನೀನೆನಾ!

ನಿದ್ರೆ ಬಾರದ ರಾತ್ರಿಯಲಿ
ನಿದ್ರಾದೇವತೆಯ ರೂಪದಲ್ಲಿ ಆವರಿಸಿದಳು ನೀನೆನಾ!

ಮೌನ ಆವರಿಸಿದ ಮೂಗನಿಗೆ
ಮಾತಿನ ಮಲ್ಲನೆಂದು ಕರೆದವಳು ನೀನೆನಾ!

ನನ್ನ ನಾನು ಮರೆತಾಗ
ಪ್ರಪಂಚಕ್ಕೆ ಪರಿಚಯಿಸಿದವಳು ನೀನೆನಾ!

ನನ್ನ ನಗುವ ಮಾರೆತಾಗ
ಹಾಸ್ಯ ಚಟಾಕಿ ಸಿಡಿಸಿದವಳು ನೀನೆನಾ!

ಕದ ಮುಚ್ಚಿದ ಹೃದಯದಲಿ
ಮೆಲ್ಲನೆಯ ಹೆಜ್ಜೆ ಹಾಕಿ ಬಾಗಿಲು ತೆರೆದವಳು ನೀನೆನಾ!

ನಾನಿದ್ದೆ ಏಕಾಂಗಿಯಂತೆ
ನೀ ಬಂದೆ ದೇವಿಗೆಯಂತೆ
ನಾನರಿಯೆ ನಿನೆನ್ನ ಗೆಳತಿಯೊ,ಸಂಗಾತಿಯೊ
ಅಥವಾ ಸಿಹಿ ಅಪ್ಪುಗೆಯ ಅರ್ಧಾಂಗಿಯೊ

ಪ್ರೀತಿಯ ಪ್ರತಿರೂಪದಂತಿರುವ. ತಾಜಮಹಲನ ಒಡೆಯ ನಾನಲ್ಲನಾದರು
ನೀನಾದೆ ಈ ಹೃದಯ ಮಂದಿರದ ದೇವತೆ.

- kempayya

21 Apr 2020, 11:07 pm

ನಾ ಕಂಡ ತಾಯಿ

ಮೊದಲು ನನ್ನ ನೋಡಿ ನಕ್ಕಳು ನನ್ನವ್ವ
ಆ ಕ್ಷಣದಲ್ಲಿ ಮರೆತಳು ತನ್ನ ೯ ತಿಂಗಳ ನೋವ
ಉಣಿಸಿದಳು ತನ್ನ ಎದೆಯ ಹಾಲು
ಧಾರೆಯೇಳೆದಳು ತನ್ನ ಉಳಿದ ಜೀವನವ
ಆದಳು ಇ ಜನ್ಮಕ್ಕೆ ನನ್ನ ಹಡದವ್ವ
ಏಳು ಜನ್ಮವ ಎತ್ತಿದರು ತಿರಿಸಲೊಲ್ಲೆ ಇ ತಾಯಿಯ ಋಣವ.....

- kempayya

21 Apr 2020, 10:43 pm

ಆನಂದಮಯ

ಆಂತರಂಗದಲ್ಲಡಗಿಹ ಆನಂದವೆಂಬ
ಜ್ಯೋತಿರ್ಮಯ ಭಾವಕೆ ಪರದೆಯ
ಹಾಕಿಕೊಳ್ಳಲೇಕೆ !

ಮತಧರ್ಮವ ಪ್ರತಿಪಾದಿಸುತ ಸ್ವಾರ್ಥ
ಲಾಲಸೆಯಲಿ ತಮದತ್ತ ಎಲ್ಲರ ತಳ್ಳುತಾ
ನೀ ಮಾತ್ರ ಸಂತಸ ಹೊಂದಬೇಕೆ !

ಅವಿದ್ಯಾವಂತರೆಂಬ ಮುಖೇಡಿನವೋ
ದರ್ಪಕ್ಕೆ ಹೆದರಿದ ಸೊಗಲಾಡಿತನವೋ ನಿನಗೆಲ್ಲರೂ ಸೇವಕರಂತಿಹರು !

‌‌‌ನಾಯಿಗಳಿಗೆ ಮೂಳೆಯೆಸೆದಂತೆ ಕಾಲಬು
ಡದಲಿರುವ ಅವರೊಂದು ದಿನ‌ ‌ಎಚ್ಚರ
ವಾದರೆ ನಿನಗೆಂದೂ ಬಾಗಲಾರರು !

ವಿದ್ಯೆಯೊಂದು ಸ್ವಾಭಿಮಾನದ ಮೆರುಗ
ಹೊದಿಸುವುದು ಎಂದೂ ತಲೆತಗ್ಗಿಸದಂತೆ
ನಡೆಯುವರವರು !!
ಶಕುಂತಲಾಮೂರ್ತಿ
"""""""""""""""""""""""""""

- Shaku Thanks Amma Shaku

21 Apr 2020, 06:42 pm

ಆಕೆ

ಆಕೆಯ ಬೆರಳುಗಳಿಗೂ ಉಗುರುಗಳಿಗೂ ನಿಮಿಷಕ್ಕೊಮ್ಮೆ ಅದೆಂತಹ ಜಗಳ.
ಅದು ಅವಳ ಕಿವಿಯ ಮೇಲೆ ಕುಡುವುದಿಲ್ಲ.
ಅದನೆತ್ತಿ ಅಲ್ಲಿ ಕುಡಿಸುವತನ ಆಕೆ ಬಿಡುವುದಿಲ್ಲ.
ಇದನ್ನು ನೋಡಿದ ಮೇಲೆ ನನ್ನ ಮನಸ್ಸು ನನ್ನ ಬಳಿ ಉಳಿಯುವುದಿಲ್ಲ...

- smiley

21 Apr 2020, 05:54 pm

...ಮುದ್ದಿನ ಸೊಸೆ...

ನಿನ್ನ ಒಂದು ನೋಟ ಸಾಕು
ನನ್ನೇನೇ ನಾ ಕಳೆದು ಹೋಗಲ್ಲು
ನಿನ್ನ ಆ ನಗು ಸಾಕು
ಇಡೀ ಜಗತ್ತನ್ನೇ ನಾ ಮರೆಯಲು

ನಿನ್ನ ಒಂದು ಹೆಸರು
ಸಾಕು ನಾ ಉಸಿರಾಡಲು
ನಿನ್ನ ಮುದ್ದಾದ ಮಾತುಗಳು
ಸಾಕು ನಾ ಬದುಕಲು...

ನಿನ್ನ ಒಂದು ಸ್ವರ್ಶ ಸಾಕು
ಈ ಜನುಮ ಕಲಿಯಲು
ನಿನ್ನ ಒಂದು ಅಣತಿ
ಸಾಕು ನನ್ನನೆ ನಾ ಅಡಿಯಲು.....

ಹೇ ಮನಸ್ಸೇ ನಾ ಏನೇ
ಮಾಡಿದ್ರು ನಿನ್ನ ಪ್ರೀತಿಗಾಗಿಯೇ
ಹೇ ಪುಟ್ಟ ಮನಸ್ಸೇ ನನ್ನ ಮನಸ್ಸನ
ನೀ ಬೇಗ ಬಂದು ಸೇರುವಿಯಾ....

ಈ ಬದುಕು ನಿನ್ನಗಾಗಿ
ಬವಣೆ ನಿನ್ನಗಾಗಿ
ನನ್ನ ಪ್ರೀತಿ ಸುಳ್ಳಾದರೆ
ಈ ಜಗತ್ತೇ ಸುಳ್ಳು ಅಲ್ಲವೇ.....

ನನ್ನ ಅಮ್ಮನ ಮುದ್ದಿನ ಸೊಸೆಯೇ
ನಂದಾದೀಪವೇ ನೀ ಬಂದು ಬೆಳಗುವೆಯಾ
ನನ್ನ ಅರಮನೆಯ ದೀಪವಾ
ನೀ ಬರುವೆಂದು ನಾ ಎದುರು ನೋಡುವೆ....

- Ajay

21 Apr 2020, 04:34 pm

ನೆನಪು

ಹೇ ನೆನಪೇ,
ದರಿದ್ರವಾದ ದಟ್ಟಡವಿಯಲ್ಲಿ,
ಏಕಾಂಗಿಯಾಗಿ ಅಲೆದಾಡುವಾಗ,
ಬೆನ್ನಟ್ಟಿದ ಬೇತಾಳ ದಂತೆ ಹಿಂಬಾಲಿಸುತ್ತಿರುವೆ,
ನಾ ಎಲ್ಲಿ ಹೋದರೂ, ಎಲ್ಲಿ ಬಂದರೂ,
ಕಣ್ಮರೆಯಾಗಿಬಿಡು ಒಂದು ಬಾರಿ
ನನಗೂ ಹೇಳದೆ,
ಮರೆಯಾಗಿಬಿಡು ಯಾರಿಗೂ ಕಾಣದೆ..!

- Megha

21 Apr 2020, 12:25 pm