Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೊರೋನ

ಜಗತ್ತು ಕಂಡಿರದ ರೋಗಕ್ಕೆ
ಔಷಧಿಯ ನೀಡುವರು ಯಾರು?
ಜನರು ಮಾಡಿರದ ಪಾಪಕ್ಕೆ
ಕ್ಷಮಯ ನೀಡುವರು ಯಾರು?

ಯಾರಯ್ಯ ಯಾರು ಇದಕ್ಕೆ
ಪರಿಹಾರ ನೀಡುವರು ಯಾರು?

- Yesukumar

24 Apr 2020, 07:03 pm

ಕನ್ನಡಿಗನ ಕಿರು ಮಾತು

ದೈವನ ಕಂಡವರು ಯಾರು
ಅಂದ್ರೆ
ಆ ದೈವನ ಪರಮಭಕ್ತನಾಗಿರುತ್ತಾನೆ.
ಲೋಕವ ಗೆದ್ದವರು ಯಾರು
ಅಂದ್ರೆ
ಆ ಲೋಕದ ವೀರವಿಜಯನಾಗಿರುತ್ತಾನೆ.
ರಕ್ತವ ನೀಡುವರು ಯಾರು
ಅಂದ್ರೆ
ಈ ಅಪ್ಪಟ ಕನ್ನಡಿಗನಾಗಿರುತ್ತಾನೆ.
ಏಕೆಂದರೆ,
ಕನ್ನಡಿಗನ ರಕ್ತದ ಕಣ-ಕಣಗಳಲ್ಲೂ ತಾಯಿಯ
"ಸತ್ಯ ಪ್ರೀತಿ ತ್ಯಾಗ" ಎನ್ನುವ ಗುಣಗಳು ಇರುತ್ತದೆ.

- Yesukumar

24 Apr 2020, 06:47 pm

ನೀನು-ಬೆಳಕು

ನಾನು ತಿಳಿದಿದ್ದದ್ದು
ನೀನು ನಿಲುಕದ
ಆಗಸ ನಕ್ಷತ್ರದ
ಬೆಳಕೆಂದಷ್ಟೆ ..?

ನೀನು ಅಂಗೈಯೊಳಗೆ
ದೀವಟಿಗೆಯಾಗಿ
ದಾರಿ ತೋರಿ
ನಕ್ಕು ಬಿಟ್ಟೆ...!

- ಶ್ರೀಕಾವ್ಯ

23 Apr 2020, 09:48 pm

ಕಣ್ಣು. ❤️

ದೇಹದ ಅಂಗವಾಗಿ...
ಮನಸಿನ ಸೇತುವೆಯಾಗಿ...
ಕಷ್ಟಕ್ಕೆ ನೀರಾಗಿ ಸುರಿಸಿ ...
ಸಂತಸಕ್ಕೆ ಹೂವಾಗಿ ಅರಳಿಸಿ..
ತೆರೆದಾಗ ಪ್ರಕೃತಿಯ ನೈಜ ಘಟನೆ ತಿಳಿಸಿ..
ಮುಚ್ಚಿದಾಗ ಕನಸುಗಳ ಜೋಕಾಲಿಯಲಿ ತೇಲಿಸಿ ....
ಮಾನವನ ಜತೆ ಸಾಯೋವರೆಗೆ ಇರುವ ನೀನು.....
ಬಿಳಿಯ ಕಡಲಿನ..... ಕತ್ತಲೆಯ ಸೂರ್ಯ...

- ಶಿವ...

- SHIV...

23 Apr 2020, 08:45 pm

ಅಗೋಚರದಲ್ಲಿ ಗೋಚರ

ಒಂದು ಅಗೋಚರ ಕ್ರಿಮಿ ಕರೋನ,
ಇಡೀ ಬ್ರಹ್ಮಾಂಡಲ್ಲಿ ಗೋಚರ,
ಮನುಜ ಕುಲವೇ ಅಲ್ಲೊಲ ಕಲ್ಲೊಲ.

ಅಹಂಕಾರಿ ಮನುಜನಿಗೆ ಬುದ್ಧಿ ಹೇಳಿತು,
ಕುಟುಂಬವಂದೇ ನಿಮ್ಮ ಪ್ರಪಂಚವೆಂದಿತು,
ಹೊಸ ಆವಿಷ್ಕಾರಗಳಿಗೆ ತಳಹದಿ ಆಯಿತು,
ಮಂದಿರ-ಮಸೀದಿ-ಚರ್ಚ ದೂರು ಮಾಡಿತು

ಶುಚಿತ್ವವೇ ಮಡಿಯಂದು ಹೇಳಿತು,
ಮನೆಯ ಊಟವೇ ಒಳಿತೆಂದಿತು,
ಜಗದ ಎಲ್ಲ ಜೀವಿಗಳ ಮಹತ್ವ ಅರುಹಿತು,
ಜಾತಿ-ಮತ ಭೇದವು ಬರಿ ಮಾನವರಿಗಂದಿತು.

#ವಾಜು

- WadirajKulkarni

23 Apr 2020, 02:04 pm

ದೇಶದ ಪರಿಸ್ಥಿತಿ

"ಎಲ್ಲಿರುವನಯ್ಯಾ ಎಲ್ಲಿರುವನು
ಭಕ್ತರ ಕಾಯೋ ದೈವನೆಲ್ಲಿರುವನು?".

ದೇಶಕ್ಕಾದ ನಷ್ಟವ
ಜನರಿಗಾದ ಕಷ್ಟವ
ಜೀವಿಗಳಿಗಾದ ನೋವಿಗೆ
ಪರಿಹಾರವೆಂಬ ಔಷಧಿಯ
ಹಚ್ಚುವವನು ದೈವನಾದೊಡೆ,
"ಎಲ್ಲಿರುವನಯ್ಯಾ ಎಲ್ಲಿರುವನು
ಭಕ್ತರ ಕಾಯೋ ಆ ದೈವನೆಲ್ಲಿರುವನು?.

- Yesukumar

23 Apr 2020, 11:55 am

ಪ್ರೇಯಸಿ ಕೊಟ್ಟ ಉಡುಗೊರೆ

ನಲ್ಲೆ ಅಂದು ನೀನಿಟ್ಟ ಮುತ್ತಿಗೆ
ನಾನಿಂದು ನೋವಿನ ಬಾಡಿಗೆ ಕಟ್ಟುತ್ತಿರುವೆ
ನನ್ನಿಂದ ನಗುವೆಲ್ಲೂ ದೂರಹೋಗಿದೆ
ಕಂಬನಿಯೊಂದೆ ನನಗೆ ಆಸರೆಯಾಗಿದೆ

- lakshman biradar

23 Apr 2020, 11:42 am

ನೆನಪು

ನಯನ ನವಿಲುಗಳ ಹಾಗೆ ನರ್ತಿಸುವಾಗ,
ಮುಂಗುರುಳು ಮೋಡಗಳ ಹಾಗೆ ಮಾತಾಡುವಾಗ,
ನಿನ್ನ ಮಾತೆ ಮುತ್ತಾಗಿ
ನನ್ನ ಮನ ತಣಿಸಿತು.
....✍️.ರಾಮ್

- ರಾಮ್

23 Apr 2020, 11:11 am

ಕುಡಿನೋಟ

ಕಣ್ಣಂಚಿನ ಮಿಂಚು
ನನ್ನೆದೆಯ ಬಡಿತ ನಿಲ್ಲಿಸಿದಾಗ
ನಿನ್ನ ಮುಗುಳುನಗೆ
ಮನ ತಣಿಸಿ ಮಾತನಾಡಿತು...
....✍️.ರಾಮ್

- ರಾಮ್

23 Apr 2020, 11:07 am

ಒಂದು ಮಾತು

ನನ್ನ ಜೀವನವು ಇನ್ನು
ದುಃಖದ ಕಡಲಲಿ ಮುಳುಗಿ
ಮನದ ಕೋಣೆಯಲೀ ತುಂಬ
ನೆನಪೆ ಆವರಿಸಿದೇನೋ
ನಿನ್ನೊಂದಿಗೆ ಕಳೆದಾ
ಆ ಸಮಯ ಇಂದಿಲ್ಲ
ನೋವಿನ ಬಲೆಯಲ್ಲಿ
ಸೀಳುಕಿದೇ ನಾನಲ್ಲಿ.

- azna

22 Apr 2020, 07:25 pm