ಹೇ ಹೃದಯದರಸಿ,
ಬರುವೆ ನಿನ್ನ ಪ್ರೀತಿಯ ಬಯಸಿ,
ಯಾಕೆ ಹೀಗೆ ಕಾಡುತ್ತಿರುವೆ ನನ್ನ ಕಾಯಿಸಿ,
ಬರುವೆಯಾ ಒಂದು ಬಾರಿ ಕಣ್ಣ ಮುಂದೆ ನಗು ಎಂಬ ಹೂವನ್ನು ಹಾಸಿ..!
ತಿಳಿಯದು ನನಗೆ ಎಲ್ಲಿಹುದು ನನ್ನ ಗಮನ,
ನಾನಾಡುವ ಮಾತೇ ನೀನಾ?
ಆ ಮಾತಿನಲ್ಲಿರುವ ಮೌನವೇ ನೀನಾ?
ನಾ ನೆನಪಿಸಿಕೊಳ್ಳುವ ನೆನಪುಗಳೇ ನೀನಾ?
ಆ ನೆನಪಿನಲ್ಲೆ ನೀನಾ?
ಏನೆಂದು ಕರೆಯಲಿ ಈ ಅನುಭವಕೆ,
ಆಕರ್ಷಣೆನಾ? ಆರಾಧನೆ ನಾ?
ಬಂದು ಬಿಡು ಕಣ್ಣೆದುರಿಗೊಂದು ಬಾರಿ,
ಹೃದಯ ದಿಂದ ಹೇಳಿ ಬಿಡುವೆನು ಪ್ರೀತಿಯ ಲಹರಿ,
ನೀ ಸಿಕ್ಕರೆ ನಾನಾಗುವೆನು ನಿನ್ನ ಪತಿ,
ನೀ ಸಿಕ್ಕ ದಿದ್ದರೆ ಜನ್ಮ ಪೂತಿ೯ ನಿನ್ನ ನೆನಪೇ ನನಗೆ
ಆಹುತಿ...!
ಎಳೆಯ ಗರುಕೆಯು ಸುತ್ತ ಮುತ್ತ ನೋಡುತ್ತಿದೆ....
ರವಿಯು ಮೆಲ್ಲಗೆ ಬಂದುಅದಕ್ಕೆ ಮುತ್ತಿಟ್ಟು ಆಲಂಗಿಸುತ್ತಿರುವನು ....
ಮೋಡವು ಬೆಳಕು ಹರಿಸಿದಾಗ,ಗರುಕೆಯು ನಾಚಿ ತಲೆ ತಗ್ಗಿಸಿದೆ....
ರವಿಯು ಸಂಜೆ ಬಂದು ಮುತ್ತಿಟ್ಟು ಹೋಗುತ್ತೇನೆಂದು ಗರುಕೆಗೆ ಪ್ರಮಾಣ ಮಾಡಿ ಮೇಲೇರುತ್ತಿರುವನು......
Shiv..