Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮೌನವಾಗಿದ್ದ ನನ್ನ ಮನಸ್ಸು ಮಾತನಾಡಲು ಪ್ರಾರಂಭಿಸಿದೆ
ನಿನ್ನ ಕಂಡ ಕ್ಷಣದಿಂದ ನಿನ್ನ ಅಂದವ ವರ್ಣಿಸಲು ನೀ ನನ್ನವಳೆಂದು ನಾನಿನ್ನ ಅವನೆಂದು ಆದರೂ ನೀ ಕೇಳದೆ ಹೋದೆ ನನ್ನ ಮನಸ್ಸಿನ ಮಾತುಗಳನ್ನು ಆಗಿನಿಂದ ನನ್ನ ಮನಸ್ಸು ಮತ್ತೆ ಮೌನವಾಗಿದೆ ಏನು ಮಾಡಲಿ ಹೇಳಿಬಿಡು ಗೆಳತಿ ನಿನ್ನ ಮರೆಯಲು
ಇತಿ ನಿಮ್ಮ
ಮನೋಜ್ ಎನ್ ಜೆ
- Manoj nj Manoj
29 Apr 2020, 11:39 pm
ಹುಟ್ಟು ದೋಷ,
ಸಾವು ದೋಷ,
ಇದರ ಮಧ್ಯೆ ಒಳ್ಳೆಯವರಂತೆ ನಟಿಸುವುದು ನಾವು ಹಾಕಿರುವ ಮಾರು ವೇಷ.
- Veena
29 Apr 2020, 09:12 pm
ಕನಸು ಕಣೋ ಹೊತ್ತಿಗೆ
ಹೃದಯ ಒಡೆದು ಚೂರಾಯಿತು,
ನನಗೆ ತಿಳಿಯದೆ ಹಾಗೆ ಕಣ್ಣಾ ಕಂಬನಿ
ಕೆನ್ನೆಯ ತಾಕಿತು,
ನನ್ನ ಹೃದಯದ ಗೋಡೆಯ ಮೇಲೆ
ನಿನ್ನದೇ ಹೆಸರಿದೆ,
ಹೆಸರಿಟ್ಟು ಕೂಗುವ ವೇಳೆಗೆ
ಮನಸೇ ಮುರಿದಿದೆ,
ಓ ನನ್ನ ಪ್ರೇಯಸಿ
ಯಾಕೆ ಹೋದೆ ನನ್ನ ಮನಸ್ಸ ನೋಯಿಸಿ,
ನನ್ನ ಕನಸುಗಳ ಸಾಯಿಸಿ,
ಈ ನನ್ನ ಅತಿಯಾದ ಪ್ರೀತಿಯು
ಆಯಿತೆ ನಿನಗೆ ಬೇಲಿಯು.
- Veena
29 Apr 2020, 08:48 pm
ಅವಳಿಗೆ ನನ್ನ ನಮನ
ಏಕೆಂದರೆ
ಸೆಳೆದಳು ಕವನಗಳತ್ತ ನನ್ನ ಗಮನ
- ಚೇತನ್ ಬಿ ಸಿ
29 Apr 2020, 08:35 pm
ನೋಡು ಬಾ ಗೆಳೆಯ ಕಣ್ಮನ ಸೆಳೆಯುವ ಪ್ರಕೃತಿ
ತಾಯೇ ಬೆಳಗುವೆನು ನೀನಗೆ ಕೃತಜ್ಞತೆಯ ಆರತಿ
ನೀನ್ನೊಡಲಲಿ ಆಡುತಿಹೆವು ನಾವು ತಾಯಿ ಭಾರತಿ
ಜಗದಲಿ ಹೆಚ್ಚಿದೆಯಮ್ಮ ಈ ನಿನ್ನ ಕೀರ್ತಿ
ಲೋಕದಲಿ ಶ್ರೇಷ್ಠವಾಗಿದೆ ಹಿಂಧೂಸ್ಥಾನ
ಪುಣ್ಯಪುರುಷರ ನಾಡಿದು ಈ ಜನ್ಮ ಪಾವನ
ಬೇಡಿಕೆಯಲಿ ಕೋರುವೆನು ದೇವರನ್ನ
ಪ್ರತಿ ಜನ್ಮವೂ ಇಲ್ಲೇ ಹುಟ್ಟಿಸು ನನ್ನ
....ಕನಸು(SCG)
- shambhug@mail.com
29 Apr 2020, 01:47 pm
ಉಡುಗೆ -ತೊಡುಗೆ ನೋಡಿ
ಅಳಿಯಬೇಡಾ ಮೂಢ,
ಬಹಿರಂಗದ ಆಡಂಬರಕ್ಕಿಂತ
ಅಂತರಂಗದ ಗುಣವನು ಒಮ್ಮೆ ತಿಳಿದು ನೋಡಾ,
ಬಡವನೆಂದು ದುಡಾಬೇಡಾ ಮೂಢ,
ಇದ್ದವರೇ ನಿಜವಾದ ಕಳ್ಳರು ಒಮ್ಮೆ ತಿಳಿದು ನೋಡಾ,
ಹಣ, ಆಸ್ತಿ, ಅಧಿಕಾರವಿದೆಯೆಂದು
ಮೆರೆಯಬೇಡ ಮೂಢ,
ಇದೆಲ್ಲ ಕ್ಷಣಿಕ ಸುಖ ಒಮ್ಮೆ ಅರಿತು ನೋಡಾ.
ರೈತನೆಂದು ಕೀಳಾಗಿ ನೋಡಬೇಡಾ ಮೂಢ,
ನೀ ತಿನ್ನುವ ಪ್ರತಿ ಅಗಳು ರೈತನ ಶ್ರಮದ ದುಡಿಮೆ ನೋಡಾ.
ಹುಟ್ಟಿದ ಊರನು ಎಂದು ತೊರೆಯಬೇಡಾ ಮೂಢ,
ಮರೆಯಬೇಡಾ ನೋಡಾ, ಅದುವೇ ಪ್ರೀತಿ ವಾತ್ಸಲ್ಯದ ಗೂಡ.
ಅಂದನೋಡಿ - ಅಂಧಕನಾಗಬೇಡಾ ಮೂಢ
ಕಣ್ತೆರೆದು ನೋಡು ಒಳ್ಳೆ ಗುಣ, ಮನಸಿರುವವರ,
ಪ್ರೀತಿ ಬಯಸಿ ಕುರುಡನಾಗ ಬೇಡಾ ಮೂಢ,
ಒಮ್ಮೆ ನೆನಪಿಸಿಕೋ ನಿನ್ನ ನಂಬಿದವರ ಪಾಡ
:-ವೀಣಾ ಲಿಂಗಣ್ಣ
(ರಾಯಚೂರು )
- Veena
29 Apr 2020, 01:24 pm
ನಾಳೆ ಇವತ್ತು ಆಗುತ್ತೆ , ಇವತ್ತು ನಿನ್ನೆ ಆಗುತ್ತೆ ಆದ್ರೆ ನಿನ್ನೆ ಯಾವತ್ತು ಇವತ್ತ್ ಆಗಲ್ಲ ಯಾಕಂದ್ರೆ ನಿನ್ನೆಯ ನೆನಪುಗಳಷ್ಟೇ ನಮ್ಮ ಜೊತೆ ಇರೋದು ನಿನ್ನೆ ಯಾವತ್ತೂ ನಮ್ಮ ಜೀವನದಲ್ಲಿ ಮತ್ತೆ ಬರೋದಿಲ್ಲ ಅದಕ್ಕೆ ನೆನಪೊಂದೇ ಶಾಶ್ವತ ಅನ್ನೋದು...
- MM
29 Apr 2020, 11:19 am
ಬೆಳಕಿನಲ್ಲಿ ಬೆಳಕಿಗೆ ಬೆಲೆ ಇಲ್ಲ ಭಯಂಕರ ಕತ್ತಲೆಯಲ್ಲಿ ಕಿರು ದೀಪದ ಬೆಳಕಿಗೂ ಬೆಲೆಯುಂಟು ನೂರಾರು ಸುಳ್ಳಿನ ಪ್ರೀತಿಗಿಂತ ಒಂದು ಸತ್ಯವಾದ ಪ್ರೀತಿಗೆ ಬೆಲೆ ಉಂಟು
- Muttu Ganeshi
29 Apr 2020, 10:49 am
ದೇಶದ ಬೆನ್ನೆಲುಬು ರೈತ
ಮಾನವ ಕುಲದ ಸ್ನೇಹಿತ
ಪ್ರತೀ ಮನದಲ್ಲೂ ಜೀವಂತ
ನಮ್ಮಈ ಅನ್ನದಾತ
- Chinmayi C S
29 Apr 2020, 08:35 am
ಓ ನನ್ನ ಗೆಳೆಯ
ನಿನ್ನ ಕಣ್ಣುಗಳಲ್ಲಿ ಕನಸಾಗುವ ಆಸೆ,
ನಿನ್ನ ಮೊಗದಲಿ ಮಂದಹಾಸ ಆಗುವ ಆಸೆ,
ಕೊನೆವರೆಗೂ ನಿನ್ನ ಒಳಿತನ್ನು ಬಯಸುವ ಆಸೆ.
- Veena
28 Apr 2020, 10:12 pm