ನಿನಗೆ ಬಹಳ ಕಡು ಕೋಪ
ಆ ಕೋಪದಲ್ಲು ನೀನು ಮಿನುಗುವ ದೀಪ
ಚಂದ ನಿನ್ನ ಲಾವಣ್ಯ,ರೂಪ
ಈ ಚೆಲುವು ಬಹಳ ಅಪರೂಪ
ಗುಣದಲ್ಲಿ ನೀನು ಅಚ್ಚರಿಯ ದ್ವೀಪ
ಆ ಗುಣವೆಂಬ ದ್ವೀಪ ಕಂಡು ಬೆರಗಾದ ಈ ಭೂಪ
ನೀನು ಗಂಧರ್ವ ಕನ್ಯೆ ಸ್ವರೂಪ
ನೀನು ಇಲ್ಲದೆ ಇಂದು ನನ್ನ ಸಮೀಪ
ಪ್ರತಿ ಕ್ಷಣವು ನನ್ನೆದೆಯಲ್ಲಿ ಭೂಕಂಪ.
ನಮ್ಮದೇಶದ ಬೆನ್ನೆಲುಬು ಇತ. ಸಕಲ ಜೀವ ರಾಶಿಗಳಿಗೆ ಅನ್ನ ನೀಡುತ. ಕೋಟಿ ಕೋಟಿ ಕೈ ಇಡಿದ ಯೋಗಿ ಇತ.
ಹಗಲಿರುಳು ಎನ್ನದೆ ದುಡಿಯುವಾತ. ಪ್ರೀತಿಯಿಂದ ಎಲ್ಲರ ಹೂಟ್ಟೆ ತುಂಬಿಸುವಾತ ಅವನೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಅನ್ನದಾತ ರೈತ.......,.
ನಾವು ನಕ್ಕೆವು ಅವಳು ನಕ್ಕಳು
ನಾವು ಅತ್ತೆವು ಅವಳು ಅತ್ತಳು
ಹಸಿವಾದಾಗ ಹಾಲುಣಿಸುತ್ತಿದ್ದಳು
ತನ್ನ ಕೈಯ ತುತ್ತ ತಿನಿಸುತ್ತಿದ್ದಳು..!
ಅವಳೇನು ಯಕ್ಷಿಣಿಯಲ್ಲ
ಅವಳೇನು ಸಂಗೀತ ಕಲಿತಿಲ್ಲ
ಸ್ವರ ಸಂಗತಿಗಳಂತೂ ಗೊತ್ತಿಲ್ಲ
ಆದರೂ ಹಾಡುತ್ತಿದ್ದಳು..!
ನಮಗಾಗಿ ಹಾಡುತ್ತಿದ್ದಳು, ಲಾಲಿಸಿ
ಚಂದಮಾಮನ ತೋರಿಸಿದಳು..!
ಹಾಗೇ ತಲೆಯ ನೆವರಿಸಿ ಹುಚ್ಚಿಯಂತೆ
ತಾರೆಗಳೊಂದಿಗೆ ಮಾತಾಡುತ್ತಿದ್ದಳು..!
ನಮಗಾಗಿ ಕೇವಲ ನಮಗಾಗಿ..!
ಅವಳು ಅಂಬಾನಿಯ ಮಗಳಲ್ಲ
ಟಾಟಾರ ಸಂಬಂಧಿಯೂ ಅಲ್ಲ
ಬಡತನದಲ್ಲೇ ಮಿಂದೆದ್ದವಳು
ಆದರೂ.. ನಾವು ಕೇಳಿದ್ದು
ಎಂದಿಗೂ ಇಲ್ಲ ಎನ್ನುತ್ತಿದ್ದಿಲ್ಲ
ಕಾಸಿಗೆ ಕಾಸು ಕೂಡಿಡುತ್ತಿದ್ದಳು
ತನಗಾಗಿ ಅಲ್ಲ ನಮ್ಮೆಳಿಗೆಗಾಗಿ
ನಮಗಾಗಿ ಕೇವಲ ನಮಗಾಗಿ..!
ಅವಳು ಯಾವ ವಿದ್ಯಾಲಯದಲ್ಲೂ
ಓದಿಲ್ಲ ಹಾಗೇ ಪಧವಿಯೂ ಪಡೆದಿಲ್ಲ
ಆದರೆ ಅಕ್ಷರಭ್ಯಾಸ ಮಾಡಿಸುತ್ತಿದ್ದಳು
ನಮಗೆ ಬೇಕು ಬೇಡ ಹೇಳುತ್ತಿದ್ದಳು
ಪ್ರೀತಿಯ ಮೌಲ್ಯವನು ಹೇಳುತ್ತಿದ್ದಳು
ಮೊದಲ ಗುರುವಾಗಿ ನಿಂತಿದ್ದಳು
ನಮಗಾಗಿ ಕೇವಲ ನಮಗಾಗಿ..!
ಅವಳೇ ಇಡೀ ಜಗದ ಉಸಿರು
ಅವಳಿಗೆ ಅಮ್ಮ ಎಂದು ಹೆಸರು..!
~ ಸಿದ್ದು ಗುಂಡ
ನನ್ನ ಮನದ ಅರಮನೆಯ ಸೂರ್ಯ ಕಣ್ಮರೆಯಲ್ಲಿ ಇರುವಾಗ
ಹೃದಯದ ಒಲವಿ ನ ಬಯಕೆ ಸಾಗಿ ಬೇಸತ್ತು ಕಂಬನಿ ಯೂ ಪುತಿದಾಗ ಹಬ್ಬಿದ ಹನಿಗಳ ನೋವ ನಾ ಯಾರಿಗೆ ಹೇಳಲಿ ಈಗ ಮಮತೆಯ ಮುದ್ದಿನ ಯೋಗ ನನಗೆ ಇಲ್ಲದಿರುವಾಗ ಅಣ್ಣ ನಿಮ್ಮ ನೋಡಬೇಕೆಂಬ ತವಕ ಪ್ರತಿದಿನವೂ ನನ್ನೊಳಗೆ ಸೃಷ್ಟಿಸುತ್ತಿದೆ ಮರೆಯಲಾಗದ ದುಃಖದ ಕಂದಕ ನಿಮ್ಮ ತಂಗಿಯ ಹೃದಯದ ಭಾರ
ನಿಮ್ಮ ಕರುಳ ಶಾಖ ದೀ ಕರಗಿ ನಿಶ್ಚಿಂತೆಯ ನಿದ್ರೆಯಲ್ಲಿ ದುಗುಡ ದ್ರವ್ಯ ರೂಪದಿ ಶ್ರವಿಸಿ
ನಿಮ್ಮ ಕೊರಳೊಳಗೆ ನಗುತಿರಲು ಆಹಾ ನನ್ನ ಮನವೆಲ್ಲ ಹಗುರ ಕಣ್ಮುಚ್ಚಿ ಕಣ್ ತೆರೆಯೇ ಎದುರಲ್ಲಿ ನೀವಿದ್ದರೆ ಆಗ ಹಸಿವು ಚಿಂತೆಯ ನೋವು ನನಗಿಲ್ಲ ನಿಮ್ಮ ನೋಡುವ ಸಂಭ್ರಮದ ಸಡಗರ ಶೀಘ್ರದಲ್ಲಿ ಸಿಗಲೆಂದು ನನಗೆ ಹಾರೈಸಿ ರಿ ಇಂದು
ಮತ್ತೆ ನಾಳೆ ಬಾ
ಆ ಬಿಂಕ ಬಿನ್ನಾಣಗಳ ನಡುವೆ
ಕಳೆದು ಹೋಗಬೇಡಾ
ಕಣ್ಣೀರಿನ ಪನ್ನಿರೀನಲ್ಲಿ
ಮೈತೊಳೆದು ಮಲಗಬೇಡ
ಮತ್ತೆ ನಾಳೆ ಬಾ
ನಿನಗಾಗಿ ಕಾಯುತ್ತಿರುವೆ
ಕ್ಷಣಕ್ಷಣಕ್ಕೂ ಸಾಯುತ್ತಿರುವೆ
ನಿನ್ನ ನೆನಪಿನಲ್ಲಿಯೇ ಆದರೆ
ಬಂದು ಹೀಗೆ ಕಾಡಬೇಡಾ.