ಸುಖ ದುಃಖ ಬಿರುನುಡಿಗೆ ಹೆದರದೆ
ನವ ಮಾಸ ಹೊತ್ತು ಹೆತ್ತವಳು
ಕುಡಿಗೆ (ಮಗು) ಕೆಡುಕಾದರೆ
ಹಗಲಿರುಳು ಅತ್ತವಳು.
ನೋವು ನಲಿವು ಅನುಭವಿಸಿ
ನೀಡಿದಿ ನಮಗಾನಂದ...
ಕುಟುಂಬದ ಒಳತಿಗೆ ಬದುಕೇ ಮೀಸಲಿಟ್ಟು
ಸಂಸಾರದ ದೋಣಿ ಸಾಗಿಸುವುದೇ ಚಂದ.
ನಿನ್ನ ಪ್ರೀತಿ, ಸಹನೆ, ಸಹಕಾರ - ಸಂಸ್ಕಾರ
ಮೌಂಟ್ ಎವರೆಸ್ಟ್ಗಿಂತ ಎತ್ತರ
ನಿನ್ನ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವೇ? ನಮ್ಮಲಿ ಇಲ್ಲ ಉತ್ತರ.
...............................................
ಅಮ್ಮ ಎಂದರೆ ಎಂತ ಆನಂದ ಮನಸ್ಸಿಗೆ
ಕೊನೆಯಾಗುವುದು ಹಲವಾರು ನೋವುಗಳಿಗೆ
ನಾ ಕಂಡಿಲ್ಲ ನಿಜವಾದ ದೇವರನ್ನು
ಇವಳಂತೆ ಇರಬಹುದು ಅವನು
ನಾವು ನೋಡಿದ ಮೊದಲ ಪದ ಇವಳು
ನಮ್ಮನ್ನು ಹೆತ್ತು ಹೊತ್ತು ಸಲುವವಳು
ನಮ್ಮ ನಗುವಿನಲ್ಲಿ ನಗುವಾಗುವಳು
ನಮ್ಮ ಕಣ್ಣೀರಿನಲ್ಲಿ ಕಣ್ಣೀರಾಗುವಳು
ನನ್ನವ್ವ ಅಂಬಾನಿಯ ಮಗಳಲ್ಲ
ನನ್ನವ್ವ ಟಾಟಾರ ಸಂಬಂದಿಯೂ ಅಲ್ಲ
ನಾವು ಕೇಳಿದ್ದು ಎಂದಿಗೂ ಇಲ್ಲ ಎಂದವಳಲ್ಲ
ಅವಾ ನಿನ್ನ ಪ್ರೀತಿಗೆ ಸರಿಸಾಟಿ ಯಾವುದಿಲ್ಲ
ತನ್ನ ಕಷ್ಟವನ್ನು ನಮ್ಮ ನಗುವಿನಲ್ಲಿ ಮರೆತಳು
ನಮ್ಮ ಮೇಲೆ ನೂರಾರು ಕನಸು ಕಟ್ಟಿ ಇಟ್ಟಳು
ನಾವು ಗೆದ್ದಾಗ ಖುಷಿಯಾಗುವಳು ಸೋತಾಗ
ಬೆನ್ನುತಟ್ಟುವಳು,,,,,
ಜನ್ಮದಾತೆ ನನ್ನ ಪಾಲಿನ ದೇವರಿವಳು.
Written By :- MS ಯಾದವ್.
ಮೊದಲು ತಾಯಿ ಅಳ್ತಾಇದ್ದಳು. ಯಾಕೆ ಗೊತ್ತಾ ತನ್ನ ಮಗು. ಊಟ ಮಾಡ್ತಾ ಇಲ್ಲ ಅಂತ. ಇವಾಗಲು ತಾಯಿ ಅಳ್ತಾನೆ ಇದ್ದಾಳೆ ಯಾಕೆ ಗೊತ್ತಾ ತಾನು ಸಾಕಿದ ಮಗ. ಊಟ ಕೂಡ್ತಾ ಇಲ್ಲ ಅಂತ.
ಮತ್ತೆ ನಾಳೆ ಬಾ
ಆ ಬಿಂಕ ಬಿನ್ನಾಣಗಳ
ನಡುವೆ ಕಳೆದು ಹೋಗಬೇಡ
ಕಣ್ಣೀರಿನ ಪನೀರಿನಲ್ಲಿ
ಮೈತೊಳೆದು ಮಲಗಬೇಡಾ
ಮತ್ತೆ ನಾಳೆ ಬಾ
ನಿನಗಾಗಿ ಕಾಯುತ್ತಿರುವೆ
ಕ್ಷಣಕ್ಷಣಕ್ಕೂ ಸಾಯುತ್ತಿರುವೆ
ನಿನ್ನ ನೆನಪಿನಲ್ಲಿಯೇ
ಆದರೆ ಬಂದು ಹೀಗೆ
ಕಾಡಬೇಡ.
ಜಗತ್ತಿನಲ್ಲಿ ಪ್ರೀತಿ ಪ್ರೇಮ ಸಹಜ
ಆಕರ್ಷಣೆಎಂಬುದು ಪ್ರಕೃತಿ ಬಿತ್ತಿದ ಬೀಜ!
ಸೌಂದರ್ಯವೆಂಬುದು ಕಣಜ
ವರ್ಣಿಸಲು ಸಾಲದು ಪದ ಪುಂಜ!
ಬಣ್ಣಿಸಲು ಆಗುತ್ತಿಲ್ಲ ಸತ್ಯ ಅಸತ್ಯದ ನಿಜ
ಪ್ರೀತಿ ಪ್ರೇಮ ಎನ್ನುವುದು ಕೆಲವರಿಗೆ ಮಜ
ಪ್ರೀತಿ ಪ್ರೇಮ ಎನ್ನುವುದು ಕೆಲವರಿಗೆ ಸಜಾ
ಪ್ರೀತಿ ಪ್ರೇಮ ಎನ್ನುವುದು ಕೆಲವರಿಗೆ ನೈಜ
ನಾ ಕಾಣೆ ಇದರ ಸತ್ಯಂಸದ ನಿಜ!
ಇವುಗಳಿಗೆ ನೀಡಿದರೆ ನೀನು ರಜಾ
ನಿನ್ನ ಸುಂದರ ಬದುಕಿಗೆ ನೀನು ರಾಜ!