ಜೀವನದ ಉಪಟಳದಲ್ಲಿ ಹುಚ್ಚೆದ್ದ ಮನಸ್ಸೆ!
ನೋವಿನ ಅಂತರಾಳದಲ್ಲಿ ಕೋಪಗೊಂಡ ಮನಸ್ಸೆ!
ಹಾದಿ ಕಾಣದೆ ನುಚ್ಚುನೂರಾದ ಕನಸ್ಸೆ!
ಅರಿವೇ ಇಲ್ಲದೆ ಸಮಯ ವ್ಯರ್ಥ ಮಾಡಿದ ವಯಸ್ಸೆ!
ಯಾವ ಕಾರ್ಯದಲ್ಲೂ ಕಾಣದ ಯಶಸ್ಸೆ!
ಜೀವನದುದ್ದಕ್ಕೂ ಕಂಡಿದ್ದು ನಿರಾಸೆ!
ಬೀಡದೆ ಕಾಡತೊಡಗಿದೆ ನೋವಿನ ಹತಾಸೆ!
ಜೀವನದ ಅರಿವು ಬರುವಷ್ಟರಲ್ಲಿ ಮುಗಿಯುವುದು ವಯಸ್ಸೆ!
ಭಗವಂತ ಈ ಆಟವಿದು ನಿನಗೆ ಸೊಗಸ್ಸೆ!
ನಾವಿರೊದು ಭೂಮಿಲಿ
ಇಲ್ಲಿ ನಡೆಯೊದು ಎಲ್ಲ ದುಡ್ಡಲ್ಲಿ
ಬೆಳಿತ ಬೆಳಿತ ಬರೊದೊ ಗಾಂಚಲಿ
ಎದುರಾದವು ಎಲ್ಲ ಕಾಲಾಡಿಲಿ
ಇರುವರೆಗೆ ಮೇರಿತ ಇರಬೇಕು ಇಲ್ಲಿ
ಸತ್ತ ಮೇಲೆ ಶಾಂತಿಯಾಗಿ ಸೇರಬೇಕು ಮಣ್ಣಲ್ಲಿ
ಧಾರಿಯಲಿ ಚೆಲುವೆಯನ್ನು ಕಂಡೆನಾ
ಕಂಡಾಗ ಗೊತ್ತಾಯಿತು ಅಪ್ಸರೆ ಎಂದರೆ ಇವಳೇನಾ
ವರ್ಣಿಸಿತಿ ಮನಸ್ಸು ಅವಳ ಅಂದವನ್ನ
ಹೋಲಿಸಿತು ಮನಸ್ಸು ಅವಳ ಮೂಗು ಗಿಳಿಯನ್ನ
ಹೋಲಿಸಿತು ಮನಸ್ಸು ಅವಳ ತುಟಿ ತೊಂಡೆ ಹಣ್ಣನ್ನ
ಹೋಲಿಸಿತು ಮನಸ್ಸು ಅವಳ ಹಲ್ಲು ದಾಳಿಂಬೆಯನ್ನ
ಹೋಲಿಸಿತು ಮನಸ್ಸು ಅವಳ ಕೆನ್ನೆ ಕೆನೆ ಹಾಲನ್ನ
ಊಹಿಸಲಾಗದ ಸುಂದರಿ ಇವಳೇನಾ
ಎಚ್ಚರವಾದಾಗ ಗೊತ್ತಾಯಿತು ನಾ ಕಂಡಿದ್ದು ಕನಸನ್ನ
ನೀವು ನನ್ನ ನೆಚ್ಚಿನ ಶಿಕ್ಷಕಿ. ವಿದ್ಯೆ ನೀಡಿ ರಕ್ಷಿಸುವ ರಕ್ಷಿಕಿ. ಶಿಸ್ತು ಬದ್ದವಾಗಿ ನಡೆಸುವ ಅರಕ್ಷಕಿ. ದೇವರ ಹೆಸರನ್ನು ಇಟ್ಟುಕೊಂಡಿರುವ. ಕನ್ನಡದ ಯುವಕಿ.
ಇದು ನನ್ನ ನೆಚ್ಚಿನ ಶಿಕ್ಷಕಿ ಬಗ್ಗೆ ಇರುವ ಕಿರು ಸಾಲಿನ ಹಸ್ತಪ್ರತಿ.............
ನನ್ನವಳ ಪ್ರೀತಿಯಲಿ..
ಒಲವಿದೆ ಚೆಲುವಿದೆ
ನೋವು ನಲಿವಿನ ಸಮಬಾಳಿದೆ...
ಕನಸಿದೆ ಮನಸಿದೆ
ಆಗಾಗ ಹುಸಿ ಮುನಿಸಿದೆ...
ಮರೆಯದ ಮಧುರ ನೆನಪಿದೆ
ಕಣ್ಣಿಗೆ ಕಟ್ಟಿದ ಅವಳ ಒನಪಿದೆ...
ಬೆಡಗಿದೆ ಸಿಟ್ಟು ಸೆಡಗಿದೆ
ಕರುಣೆ ಅವಳೆದೆ ಗೂಡಲೇ ಅಡಗಿದೆ..
ಇದೆ ನನ್ನವಳ ಪ್ರೀತಿ ತುಂಬಾ ಇದೆ
ಎಲ್ಲದಕ್ಕೂ ಮೀರಿ...
ಅವಳ ಅಧರಗಳಲಿ ಸವಿ ಜೇನಿದೆ...!!
- ಸಿದ್ದು ಕನ್ನಡಿಗ